Saturday 7 July 2012

ಜಾತಿರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ

ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿರುವ ನಮ್ಮ ಜನಪ್ರತಿನಿಧಿಗಳಿಗೆ ಏನ್ನನ್ನಬೇಕೋ ಗೊತ್ತಾಗುತ್ತಿಲ್ಲ. ಇವರ ರಾಜಕೀಯ ಹೈಡ್ರಾ ಮದಿಂದ ಜನರು ರೋಸಿ ಹೋಗಿದ್ದಾರೆ. ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದ ಜನರಿಗೆ ಭ್ರಮನಿರಸವಾಗಿದೆ. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ತಮ್ಮ ಕೈ ತಾವೇ ಹಿಸುಕಿಕೊಳ್ಳುತ್ತಿದ್ದಾರೆ. ಹಾದಿ ಬೀದಿಯ ಬಸವಣ್ಣರಾಗಿರುವ ನಮ್ಮ ರಾಜ ಕಾರಣಿಗಳನ್ನು ಮನಸ್ಸಿಗೆ ಬಂದಂತೆ ಬೈಯ್ದು ತಮ್ಮ ಕೆಲಸದಲ್ಲಿ ಮಗ್ನರಾಗಿ ಬಿಡುತ್ತಾರೆ. ಯಾರು ಬಂದರೇನು ನಮ್ಮ ಕಷ್ಟಗಳೇನು ಪರಿಹರಿಸುತ್ತಾರಾ ಎಂಬ ಉದಾಸೀನ ಭಾವನೆಯೂ ಕೂಡ ಇದಕ್ಕೆ ಕಾರಣವಾಗಿರಬಹುದು. ಪ್ರಸ್ತುತ ರಾಜಕೀಯದ ಬಗ್ಗೆ ರಾಜಕಾರಣಿಗಳನ್ನು ಏಕೆ ಟೀಕಿಸಬೇಕು? ಈ ಸ್ಥಿತಿಗೆ ನಾವೆಲ್ಲಾ ಹೊಣೆಗಾರರು ಎನ್ನುವುದನ್ನು ಕೂಡ ಒಪ್ಪಿಕೊಳ್ಳಲೇಬೇಕು? ಒಪ್ಪಿಕೊಂಡರೆ ಸಾಲದು ಬದಲಾವಣೆಗೆ ಮುಂದಾಗಬೇಕು. ರಾಜಕೀಯ ಕುಲಗೆಟ್ಟು ಹೋಗಿದೆ ಎಂದು ಕೈಕಟ್ಟಿ ಕುಳಿತರೆ ಏನೂ ಸರಿ ಹೋಗದು.