Tuesday 13 March 2012

ಪುಂಡ ವಕೀಳರ ವರ್ತನೆಗೆ ದಂಡನೆ ಇಲ್ಲವೇ?

ಗೂಂಡಾ ವಕೀಲರಿಂದ ಮಾಧ್ಯಮ ಮಿತ್ರರಿಗೆ ಥಳಿತ
ಪ್ರಜಾಪ್ರಭುತ್ವದ ಮೂರನೆ ಅಂಗ ಎಂದು ಕರೆಯಲಾಗುವ ನ್ಯಾಯಾಂಗಕ್ಕೆ ತನ್ನದೆಯಾದ ಮಹತ್ವದ ಸ್ಥಾನಮಾನವಿದೆ.  ವಕೀಲ ವೃತ್ತಿಯನ್ನು ಪವಿತ್ರ ಎಂದು ಕರೆಯಲು ಒಂದು ಪ್ರಬಲ ಕಾರಣವಿದೆ. ಪಾಶ್ಚಾತ್ಯ ಅದರಲ್ಲೂ ಇಂಗ್ಲೆಂಡ್ ಪ್ರಾನ್ಸ್ ಮುಂತಾದ ದೇಶಗಳಲ್ಲಿ ನ್ಯಾಯವಾದಿಗಳೆಂದರೆ ಹೆಚ್ಚಿನ     ಗೌರವಾದರದಿಂದ ಕಾಣಲಾಗುತ್ತದೆ. ಹಾಗೇಯೆ ಭಾರತದಲ್ಲಿಯೂ ನ್ಯಾಯ ವಾದಿಗಳನ್ನು ಕರಿಕಪನಿಯ ಸನ್ಯಾಸಿಗಳು, ಸಂಕಷ್ಟ ನಿವಾರಣೆಗಾಗಿ ಇರುವ ಸಾಕ್ಷಾತ ದೇವರು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಜನರ ದುಃಖವನ್ನೆ ಪರಿಹರಿಸುವ ಅವರಿಗೆ ಪರಿಹಾರ ಕೊಡಿಸುವುದರಲ್ಲೇ  ಜೀವನದ ಸಾರ್ಥಕತೆ ಕಾಣುವ ಪ್ರಬುದ್ಧ ಚಿಂತಕರು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಇಂದು ಕೆಲವು ನಾಲಾಯಕ್ ವಕೀಳರಿಂದ ಆ ಪವಿತ್ರ ವೃತ್ತಿಗೆ ಧಕ್ಕೆ ತರಲಾಗುತ್ತಿದೆ ಅಲ್ಲದೆ ಸಮಾಜದ ನೆಮ್ಮದಿಗೆ ಭಂಗ ಉಂಟು ಮಾಡಿ, ಆ ವೃತ್ತಿ ಸಮೂಹವನ್ನೆ  ತಾತ್ಸಾರ ಮನೋಭಾವದಿಂದ ನೋಡುವಂತಾಗಿದೆ. ಕಳೆದ ಜನೆವರಿ ೧೭ರಂದು ಮೈಸೂರು ಬ್ಯಾಂಕ್ ಆವರಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಮಾಡಿದ ವಕೀಲರ ವಿರುದ್ಧ ನಾಡಿನ ಎಲ್ಲಾ ಪತ್ರಿಕಾ ಮಾಧ್ಯಮಗಳು ವಕೀಳರ ವರ್ತನೆಯನ್ನು ಖಂಡಿಸಿದ್ದವು. ಕೇಲವು ಪತ್ರಿಕೆಗಳು ಸರಣಿ ಲೇಖನಗಳು ಪ್ರಕಟಿಸಿದ್ದವು ಇದರಿಂದ ಸಿಟ್ಟಾದ ಕೆಲವು ಗೂಂಡಾ ಲಾಯರ್‍ಗಳು ಸಿಟಿ ಸಿವಿಲ್ ಕೋರ್ಟ್‌ಗೆ ನೀವು ಹೇಗೆ ಬರುತ್ತಿರಿ ನಾವು ನೋಡಿಕೊಳ್ಳುತ್ತೇವೆ ಎಂದು ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಬಹಿರಂಗ ಸವಾಲು ಹಾಕಿದ್ದರು. ಆ ಸೇಡನ್ನು ತೀರಿಸಿಕೊಳ್ಳಲು ಪೂರ್ವ ಸಂಚು ರೂಪಿಸಿ ಕಾದು ಕುಳಿತ ಕೆಲವು ಬ್ಲ್ಯಾಕ್ ಟೆರೆರಿಸ್ಟ್‌ಗಳು ಮೊದಲೆ ಕಲ್ಲು ಇನ್ನಿತರ ವಸ್ತುಗಳನ್ನು ಸಿದ್ಧ ಮಾಡಿ ಇಟ್ಟಂತೆ ತೋರುತ್ತದೆ. ಮಾಧ್ಯಮ ಪ್ರತಿನಿಧಿಗಳು ಕೋರ್ಟ್ ಆವರಣಕ್ಕೆ ಹೋಗುತ್ತಿದ್ದಂತೆ ಏಕಾಏಕಿ ದಾಳಿ ಮಾಡಿದ್ದಾರೆ ಇದಕ್ಕೆ ಕಾರಣ ಮೊದಲ ಘಟನೆಯಿಂದ ಪಾಠ ಕಲಿಯದ ಮತ್ತು ಕಲಿಸದ ಸರ್ಕಾರದ ಮೃದು ಧೋರಣೆ ಅಲ್ಲದೆ ಮತ್ತೇನು? ವಕೀಲರ ದುಂಡಾವರ್ತನೆ ಮರೆಮಾಚುತ್ತಿದೆ ಎನ್ನುವ ಸಂದರ್ಭದಲ್ಲಿ ಮತ್ತೆ ತಮ್ಮ ಹೀನ ಕಾರ್ಯಕ್ಕೆ ಕೈಹಾಕಿದ ಮತ್ತು ವೃತ್ತಿ ಗೌರವ ಗೊತ್ತಿರದ ಇಂಥ ವಕೀಳರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ?  ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಅವರು ವಕೀಲರ ಕ್ರಮ ಸರಿಯಲ್ಲ ಎಂದು ಹೇಳಿಕೆ ನೀಡಿದ್ದ ಕಾರಣಕ್ಕೆ ಹಿಗ್ಗಾಮುಗಾ ಬಾಯಿಗೆ ಬಂದಂತೆ ಬೈಯ್ದು ಕೋರ್ಟ್ ಆವರಣಕ್ಕೆ ಕಾಲೀಡಿ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಪುಂಡ ವಕೀಲರ ಗುಂಪು ಬೇದರಿಕೆ ಹಾಕಿತ್ತು. ಈ ಬೇದರಿಕೆ ವಕೀಲರ ಸಂಘದ ಅಧ್ಯಕ್ಷರಿಗೆ ತಿಳಿದಿತ್ತು. ಎಲ್ಲಾ ಪತ್ರಿಕೆಗಳಲ್ಲಿ ಈ ಕುರಿತು ವರದಿ ಮಾಡಲಾಗಿತ್ತು ಆದರೂ ಈ ಸರ್ಕಾರ ಯಾಕೆ ಮೂಕ ಪ್ರೇಕ್ಷಕನಾಗಿ ಕೂಳಿತ್ತಿತ್ತು. ವಿಧಾನಸೌಧ ಪಕ್ಕದಲ್ಲೇ ರಕ್ಷಣೆಯಿಲ್ಲ ಎಂದರೆ  ಜನಸಾಮಾನ್ಯರ ರಕ್ಷಣೆ ಸಾಧ್ಯವೇ ಎಂಬ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.  ಇನ್ನೊಂದು ಕಡೆ ವಕೀಲರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ವಕೀಳರ ಪರವಾಗಿ ವಕಾಲತ್ತು ವಹಿಸುತ್ತಾರೆ ಇಲ್ಲಿ ಸರಿ ತಪ್ಪು ಮತ್ತು ಕಾನೂನು ಕೈಗೆತ್ತಿಕೊಂಡ ವಕೀಳರ ದುರ್ವರ್ತನೆ ಬಗ್ಗೆ ಮಾತನಾಡದೆ ಪೊಲೀಸ್ ವ್ಯವಸ್ಥೆ ಮತ್ತು ಆವರಣ ಪ್ರವೇಶಿಸಿದ್ದಾರೆ ಎಂಬುದು ಮಾತ್ರ ಇವರ ಕಣ್ಣಿಗೆ ರಾಚುತ್ತದೆ. ಆದರೆ ನಾಲಾಯಕ್ ವಕೀಲರ ವರ್ತನೆಯನ್ನು ಖಂಡಿಸಬೇಕಾದ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದು ಮಾತ್ರ ದುರಂತ. ಕಾನೂನು ರಕ್ಷಣೆ ಮಾಡಬೇಕಾದ ನ್ಯಾಯಾಂಗದ ವಕ್ತಾರರು ಭಕ್ಷಣೆಗೆ ಇಳಿದಿದ್ದಾರೆ ಇಂಥವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವರ್ತನೆಯಂತೆ ನಡೆದುಕೊಳ್ಳುತ್ತಿರುವ ಈ ಗುಂಡ ವಕೀಳರ ಪುಂಡ ವರ್ತನೆಗೆ ನಿಯಂತ್ರಣ ಸಾಧವಿಲ್ಲವೆ? ವಕೀಲರು ಎಂದರೆ ಪ್ರಶ್ನಾತೀತರೇ ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರೇ ಆದರೆ ಈ ವಕೀಲರು ನಡೆದುಕೊಳ್ಳುತ್ತಿರುವ ರೀತಿ, ಕಾನೂನು ಎಂದರೆ ತಮ್ಮ ಮನೆಯಲ್ಲಿ ಹುಟ್ಟಿದೆ ಎಂಬಂತೆ ವರ್ತಿಸಿದ್ದು ನೋಡಿದರೆ ಈಡೀ ನ್ಯಾಯಾಂಗ ವ್ಯವಸ್ಥೆಯನ್ನು ಸಂಶಯದ ದೃಷ್ಟಿಯಿಂದ ನೋಡುವಂತ ವಾತವರಣ ನಿರ್ಮಾಣವಾಗಿದೆ.
ವಕೀಳರ ಕೀಳತನ ಪ್ರದರ್ಶಿಸಿದ್ದು ಇದೆ ಮೊದಲೇನಲ್ಲ.
೨೦೦೯ರಲ್ಲಿ ಭೂಕಬಳಿಕೆ ಪ್ರಕರಣದ ಆರೋಪ ಎದುರಿಸುತ್ತಿದ್ದ ನ್ಯಾ. ಪಿ.ಡಿ ದಿನಕರನ್ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಬಾರದು ಎಂದು ವಕೀಲರ ಗುಂಪುಗಳ ನಡೆವೆಯೇ ಮಾರಾಮಾರಿ ನಡೆದು ನ್ಯಾ ಗೋಪಾಲಗೌಡ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಅವಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸಂಚಾರಿ ನಿಯಮ ಉಲಂಘನೆ ವಿಷಯಕ್ಕೆ ಸಂಬಂ ಧಿಸಿದಂತೆ ವಕೀಲರು ಮತ್ತು ಸಂಚಾರಿ ಪೊಲೀಸರ ನಡುವೆ ಪ್ರತಿನಿತ್ಯ ಒಂದಿಲ್ಲೊಂದು ಘಟನೆ ನಡೆಯುತ್ತಲೇ ಇರುತ್ತವೆ ಆದರೂ ಕಾನೂನು ಎಂದರೆ ಏನು ಎಂಬುದು ನಿಮ್ಮಿಂದ ಕಲಿಯಬೇಕಾಗಿಲ್ಲ ಎಂಬ ಪುಂಡ ಪ್ರವೃತ್ತಿ. ಎರಡು ತಿಂಗಳ ಹಿಂದೆ ಸಂಚಾರಿ ನಿಯಮ ಉಲಂಘಿಸಿದ ವಕೀಲರ ವಾಹನಕ್ಕೆ ಸಂಚಾರಿ ಪೊಲೀಸರು ಕ್ಯಾಪ್ ಹಾಕಿದ್ದರಿಂದ ಸಿಟ್ಟಾದ ವಕೀಲ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದ ಇವೆಲ್ಲ ಸಣ್ಣ ಪುಟ್ಟ ಘಟನೆಗಳಿಂದ ಬಚಾವಾದ   ವಕೀಲರು ದೊಡ್ಡ ತಪ್ಪುಗಳಿಗೆ ಕೈಹಾಕಿದ್ದಾರೆ. ಮೊದಲ ಗಲಭೆಯನ್ನು ಆಕಸ್ಮಿಕ ಎಂದು ಪರಿಗಣಿಸಿದ್ದ ಸರ್ಕಾರದ ಮೃದು ಧೊರಣೆಯೇ ಈ ಘಟನೆಗೆ ಕಾರಣ ಎಂದು ಬಿಡಿಸಿ ಹೇಳ ಬೇಕಾಗಿಲ್ಲ ಸರ್ಕಾರದ ಈ ಮೃದು ಧೋರಣಿ ಪೊಲೀಸ್ ವ್ಯವಸ್ಥೆಯ ಕೈಕಟ್ಟಿ ಹಾಕಿತು. ಇದರಿಂದ ಉತ್ತೇಜಿತರಾದ ಪುಂಡ ವಕೀಲರು ರೌದ್ರಾವತಾರ ತಾಳಿದರು. ಮಾಧ್ಯಮ ಮತ್ತು ಪೊಲೀಸರ  ಮೇಲೆ ಮಾರಾಣಾಂತಿಕ ಹಲ್ಲೆ   ನಡೆಸಿದರು. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿದ್ದ ಸರ್ಕಾದ ಕ್ರಮ ಸರಿಯೇ? ತನ್ನನ್ನೇ ಪದೇ ಪದೇ  ಟೀಕಿಸುತ್ತಿದ್ದ ಮಾಧ್ಯಮದವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಒಳಗೊಳಗೆ ಮುಗಳ್ನಗೆ ಬೀರಿತು. ಇಷ್ಟೆಲ್ಲ ನಡೆದರೂ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಹೇಳಿಕೆ ನೀಡಲಿಲ್ಲ ಗುಂಡಾವರ್ತನೆ ತೋರಿದವರನ್ನು ಬಂಧಿಸಬೇಕಾದ ಸರ್ಕಾರ ತನಿಖೆ ಎಂಬ ಅಸ್ತ್ರ ಪ್ರಯೋಗಿಸುವ ಮೂಲಕ ಕಣ್ಣೋರೆಸುವ ತಂತ್ರ ಅನುಸರಿಸಿದೆ. 
ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರಲಿದೆಯೇ?
ಇಡೀ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ ಇದಕ್ಕೆ ಮುಖ್ಯಸ್ಥರನ್ನಾಗಿ ನಿವೃತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಸರ್ಕಾರ ತನಿಖೆ ಎಂಬ ಅಸ್ತ್ರ ಪ್ರಯೋಗಿಸಿದರೆ ಸಾಲದು ನಿಜಾಂಶ ಹೊರಗೆ ಬರಬೇಕಾದರೆ ಸಿಬಿಐ ತನಿಖೆಯಾಗಬೇಕು. ಆ ತನಿಖೆಗೆ ಸರ್ಕಾರ ಒಪ್ಪಿಸಿದರೆ ಮಾತ್ರ ಘಟನೆಯಲ್ಲಿ ಹಲ್ಲೆಗೊಳಗಾದವರಿಗೆ ನ್ಯಾಯ ಸಿಗುತ್ತದೆ ಮತ್ತು ಪುಂಡ ವಕೀಲರು ಎಷ್ಟೇ ಪುಂಡರಾಗಿದ್ದರು ಕಾನೂನಿನಡಿಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖೆ ಮಾಡುವ ಮೊದಲು ಇದ್ದ ಆಧಾರಗಳನ್ನು ಪರಿಗಣಿಸಿ ಗೂಂಡಾ ವಕೀಲರನ್ನು ಬಂಧಿಸಬೇಕು ಸಮಾಜದಲ್ಲಿ ಯಾರೇ ಆಗಲಿ ವಿಶೇಷವಾಗಿ ಕರಿ ಕೋಟು ತೊಟ್ಟವರು ಮತ್ತು ಕಾನೂನನ್ನು ಪಾಲಿಸಬೇಕಾದವರು ಮುರಿದರೆ ಅವರಿಗೆ ಎಲ್ಲರಿಗಿಂತಲೂ ಹೆಚ್ಚಿನ ಶಿಕ್ಷೆಯಾಗಬೇಕು ನ್ಯಾಯ ನಿರ್ಣಯಿಸಬೇಕಾದ ವಕ್ತಾರರು ಕಾನೂನನ್ನು ಕೈಗೆತ್ತಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ರಕ್ತ ದೋಕುಳಿಯೇ ಉದಾಹರಣೆ.
 ಪೂರ್ವ ನಿಯೋಜಿತ ಸಂಚು: ಈ ವಕೀಲರಿಂದ ನಿರೀಕ್ಷಿಸಲಾಗದ ಕೇಲವು ಘಟನೆಗಳನ್ನು ನೋಡಿದರೆ ಇದು ಪೂರ್ವ ನಿಯೋಜನಾ ಕೃತ್ಯ  ಎಂಬ ಸಂಶಯ ಬರದೆ ಇರದು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಕಾನೂನು ಎಂಬ ಅಸ್ತ್ರ ಬಳಸಿ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶವನ್ನು ಈ ಕ್ರಿಮಿನಲ್ ಲಾಯರ್‌ಗಳು ತಮಗೆ ತೋಚಿದ  ರೀತಿಯಲ್ಲಿ ಬಳಸಿಕೊಂಡು ಇಡೀ ಪೊಲೀಸ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದು, ಇಷ್ಟೆಲ್ಲಾ ಸಂಚು ರೂಪಿಸಿ ಕಾಯುತ್ತ ಕುಳಿತಿದ್ದ ಪುಂಡ ವಕೀಲರ ಗುಂಪಿನ ಬಗ್ಗೆ ಗುಪ್ತಚರ ಸಂಸ್ಥೆಗೆ ಮಾಹಿತಿ ಇರಲಿಲ್ಲವೇ ಇದ್ದರು ವಿಫಲವಾಗಲೂ ಬಲವಾದ ಕಾರಣವೇನಾದರೂ ಇದೆಯೇ ಎಂಬುದಕ್ಕೆ ಸೂಕ್ತ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.

ಮೂಢನಂಬಿಕೆಗಳಿಗೆ ಕಾನೂನಿನ ಕಡಿವಾಣ ಅಗತ್ಯ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಪರಮಶ್ರೇಷ್ಠ. ಸಂವಿಧಾನದ ಆಶಯಗಳ ಮುಂದೆ ಪುರಾತನ ಮತ್ತು ಅರ್ಥಹೀನ ಆಚರಣೆಗಳು ಮೌಲ್ಯ ಕಳೆದುಕೊಳ್ಳುತ್ತವೆ. ಆದರೆ, ಪ್ರಸ್ತುತ ದಿನಗಳಲ್ಲಿ ಅಮಾನವೀಯ ಆಚರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸವಾರಿ ಮಾಡುತ್ತಿವೆ. ಇಂಥ ಆಚರಣೆಗಳನ್ನು ಸಮರ್ಥಿಸಿಕೊಳ್ಳಲು ಹುಟ್ಟಿ ಕೊಂಡಿರುವ ಕೆಲವು ದುಷ್ಠ ಶಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ದೇವರ  ಹೆಸರಿನಲ್ಲಿ ನಡೆಯುತ್ತಿರುವ ಮಡೆಸ್ನಾನ ಮತ್ತು ಪಂಕ್ತಿಭೇದ ದೇವದಾಸಿ ಪದ್ದತಿ ನಿಷೇಧವಾಗಬೇಕುಈ ಅನಿಷ್ಠ ಪದ್ದತಿಗಳು ನಿಷೇಧವಾಗಬೇಕಾದರೆ ವಿದ್ಯಾರ್ಥಿ ದಿಸೆಯಲ್ಲಿಯೇ ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಪ್ರಾಥಮಿಕ ಹಂತದಿಂದ ಸ್ನಾತಕೊತ್ತರ ಶಿಕ್ಷಣದವರೆಗಿನ ಪಠ್ಯಕ್ರಮದಲ್ಲಿ ವಿಷಯ ಅಳವಡಿಸಬೇಕು ಎಂಬ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇತ್ತಿಚೇಗೆ ಪ್ರಗತಿಪರ ಮಠಾಧೀಶರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನಾ ಧರಣಿಗೆ ಸರ್ಕಾರದ ಉತ್ತಮ ಸ್ಪಂದನೆ ಸಿಕ್ಕಿದೆ. ಸಿಎಂ ಸದಾನಂದಗೌಡರು ಎರಡು ತಿಂಗಳಲ್ಲಿ ಅನಿಷ್ಠ ಪದ್ಧತಿಗಳನ್ನು ನಿಷೇಧ ಮಾಡಲು ಪರ ಮತ್ತು ವಿರೋಧ ವ್ಯಕ್ತಪಡಿಸುವ ಎಲ್ಲಾ ಮಠಾಧೀಶರನ್ನು ಒಂದುಗೂಡಿಸಿ  ಕಾನೂನು ರೂಪಿಸುವ ಭರವಸೆ ನೀಡಿದ್ದಾರೆ. ಇದು ಪ್ರಗತಿಪರ ಮಠಾಧೀಶರಿಗೆ ಸಿಕ್ಕ ಗೆಲವು ಎಂದು ಭಾವಿಸಿಕೊಂಡರು ತಪ್ಪಾಗಲಾರದು ಆದರೆ ಮೇಲಿನ ಎಲ್ಲಾ ಅನಿಷ್ಠ ಪದ್ಧತಿಗಳನ್ನು ನಿಷೇಧಿಸಲು ಸರ್ಕಾರ ಮುಂದಾದರೆ  ಜೇನುಗೂಡಿಗೆ ಕೈಹಾಕಿದಂತೆ !
ಒಂದು ಕಡೆ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇನ್ನೊಂದು ಕಡೆ ವ್ಯಕ್ತಿಯ ವೈಯಕ್ತಿಕ ನಂಬಿಕೆಯ ಮೇಲೆ ಕಾನೂನು ಎಂಬ ಅಸ್ತ್ರ ಎಂಬ ಝಳಪಿಸಿದ್ದಂತಾಗುತ್ತದೆ ಇದು ಭಕ್ತಾದಿಗಳ ಕೆಂಗಣ್ಣೆಗೆ ಗುರಿಯಾಗಬೇಕಾಗುತ್ತದೆ. ಭಕ್ತರ ಹಿತಕಾಯಲು ಸರ್ಕಾರ ಮುಂದಾದರೆ ಅರ್ಥವಿಲ್ಲದ ಆಚರಣೆಗಳು ವಿಜೃಂಭಿಸುತ್ತವೆ. ಸಂವಿಧಾನದ ಮೇಲೆ ಸಂಪ್ರಾದಾಯಗಳ ಸವಾರಿ ಹೆಚ್ಚುತ್ತದೆ. ಧರ್ಮಗಳ ಸಾಂಪ್ರದಾಯಿಕ ಶಕ್ತಿಗಳ ಅಟ್ಟಹಾಸ ಮೆರೆಮಿರುತ್ತದೆ. ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸ ಮುಂದುವರಿಯುತ್ತದೆ. ಬೆಳಕಿನ ಸಂಕೇತವಾದ ದೇವಸ್ಥಾನಗಳು ಕತ್ತಲ ಕೇಂದ್ರವಾಗುತ್ತವೆ.
ಮಾನವ ವಿಕಸನದ ನಂತರ ಅನೇಕ ಪದ್ದತಿ ಮತ್ತು ಸಂಪ್ರದಾಯಗಳು ಸೃಷ್ಟಿಯಾಗಿವೆ, ಅದು ಬದಲಾವಣೆಯ ಕಾಲಘಟ್ಟವಾಗಿತ್ತು. ಸಂದರ್ಭಕ್ಕೆ ಅದನ್ನು ರೂಪಿಸಿಕೊಂಡಿದ್ದಾರೆ ಎಂದು ಮುಂದುವರಿಸಿಕೊಂಡು ಹೋಗಬೇಕು ಎಂದೇನೂ ಇಲ್ಲ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಬದಲಾವಣೆ ವಿಕಸನದ ಸಂಕೇತ ಆದರೆ ಪ್ರಶ್ನೆ ಅದೂ ಅಲ್ಲ ಹಿರಿಯರು ಮಾಡಿದ್ದಾರೆ ಎಂದು ಅನುಸರಿಸಿಕೊಂಡು ಬರುವುದು ಮಹಾ ತಪ್ಪು. ಎಲ್ಲವೂ ಮೂಢನಂಬಿಕೆ ಎಂದು ಜರಿಯುವುದು ಕೂಡ ತಪ್ಪಾಗಬಹದು ನಂಬಿಕೆ ಹುಟ್ಟಿಕೊಳ್ಳಬೇಕಾದರೆ ಒಂದಿ ಲ್ಲೊಂದು ಆಧಾರ ಇರಬಹುದು. ಸಂದರ್ಭಕ್ಕೆ ಅವೂ ನಿಜವೂ ಆಗಿರಬಹದು ಆದರೆ ಪ್ರತಿಯೊಂದು ಸಂಪ್ರದಾಯಗಳನ್ನು ಆಚರಿಸುವಾಗ ಅದರ ಹಿನ್ನಲೆ ಮತ್ತು ಈಗಿನ ಸಂದರ್ಭಕ್ಕೆ ಅದು ಸೂಕ್ತವೇ ಎಂದು ನಿರ್ಧರಿಸುವ ಜಾಣ್ಮೆ ನಮ್ಮದಾಗಬೇಕು ಅದು ಆಗುತ್ತಿಲ್ಲ ನಮ್ಮ ಹಿರಿಯರು ಆಚರಿಸುತ್ತಿದ್ದರು ಎಂದು ಅದನ್ನೆ ನಾವೂ   ಪಾಲನೆ ಮಾಡುತ್ತಿದ್ದೇವೆ.
ಹಿರಿಯರು ಹಾಕಿದ ಸಂಪ್ರದಾಯಗಳನ್ನು ಮುರಿಯಲು ಸಮಾಜ ಸರ್ವತ್ರ ಒಪ್ಪಲಾರದು ಹಾಗಂತ ಅಜ್ಜ ಹಾಕಿದ ಆಲದ ಮರಕ್ಕೆ ಶರಣಾಗಬಾರದು ನಮಗೆ ಹಿನ್ನಲೆ ಮತ್ತು ಉಪಯೋಗ ತಿಳಿಸದೆ, ಸಂಪ್ರದಾಯಗಳನ್ನು ಬೋಧಿಸಿದ ಅವರಿಗೆ ಇಂದಿನವರೂ ಗುಲಾಮರಾಗುತ್ತಿದ್ದದ್ದು ಮಾತ್ರ ವಿಪರ್ಯಾಸ. ಅರ್ಥವಿಲ್ಲದ ಆಚರಣೆಗಳಿಗೆ ಹೇಗೆ ಹುಟ್ಟಿಕೊಂಡವು ಎಂಬುದಕ್ಕೆ ಹಲವಾರು ದೃಷ್ಟಾಂತಗಳನ್ನು ಕೊಡಬಹುದು ಸುಬ್ರಮಣ್ಯ ಮಲೆ ಕುಡಿಯರ ದೇವರು ಕೆಳವರ್ಗದವರಿಗೆ ಕೊಡಲಾಗುತ್ತಿದ್ದ ಶಿಕ್ಷೆಯ ಸಂದರ್ಭ ಅವರು ಉರುಳಾಡುತ್ತಿದ್ದರು. ಶಿಕ್ಷೆಯನ್ನು ಆಚರಣೆ ನಂಬಿಕೆಯ ಹೆಸರಿನಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ ಕೆಲವೂ ವಿತಂಡವಾದಿಗಳು ನಂಬಿಕೆ ಲೇಪನ ಕೊಟ್ಟು ಮುಂದುವರಿಸುತ್ತಿದ್ದಾರೆ. ದೇವರ ಹೆಸರಿನಲ್ಲಿ ಮಾಡುವ ಅನೇಕ ಆಚರಣೆಗಳು ಸಿಡಿ ಉತ್ಸವ ಮಾರಿ ಹಬ್ಬ ಎಲ್ಲವೂ ಕೆಳವರ್ಗದ ಜನರಿಗೆ ಕೊಡುತ್ತಿದ್ದ ಶಿಕ್ಷೆಯ ರೂಪಗಳು. ಆದರೆ ಅವುಗಳನ್ನು ಪ್ರಶ್ನಿಸದಂತೆ ನಂಬಿಕೆ ರೂಪಕೊಟ್ಟು ಮುಂದುವರಿಸಿದ್ದಾರೆ.
ಸಂಪ್ರದಾಯಗಳು ಕಾಲಾನುಕ್ರಮೇಣ ನಶಿಸಬೇಕಾಗಿತ್ತು ಆದರೆ ಹೊಸ ರೂಪ ಪಡೆಯುತ್ತಿವೆ. ನಮ್ಮ ಕಲ್ಪನೆಯಲ್ಲಿ ಇಲ್ಲದಷ್ಟು, ನಂಬಿಕೆಗಳು ಇಂದು ಮೆಳೈಸಿಬಿಟ್ಟವೆ. ಹಿರಿಯರ ವಿರುದ್ಧ ಮಾತನಾಡಿದರೆ ಅವುಗಳನ್ನು ಸಮರ್ಥನೆ ಮಾಡಿಕೊಳ್ಳಲು ಅವುಗಳಿಗೆ ಹೊಂದಿಕೆಯಾಗುವ ಹಾಗೆ ಕತೆಗಳನ್ನು ಕಟ್ಟಿದ್ದಾರೆ. ಪ್ರಶ್ನೆ ಮಾಡಿದರೆ ನಮ್ಮ ಹಿರಿಯರಿಗೆ ಮಾಡುವ ಅವಮಾನ ಅಂತ ಭಾವಿಸಿ ಸುಮ್ಮನೆ ಅದನ್ನು ಕಾಟಚಾರಕ್ಕಾಗಿ ಆಚರಿಸುತ್ತಿದ್ದೆವೆಅದಕ್ಕೆ ಸಂಸ್ಕೃತಿ ಅಂತ ಹೆಸರು ಬೇರೆ ಕೊಟ್ಟಿದ್ದಿವೆ. ಸಂಸ್ಕೃತಿಯಲ್ಲಿ ಮೆಳೈಸಿರುವ ಪದ್ದತಿಗಳನ್ನು ಕಾನೂನುಗಳ ಮೂಲಕ ನಿಷೇಧ ಮಾಡಲು ಸಾಧ್ಯವೆ? ದೇಶದಲ್ಲಿ ಪ್ರತಿಯೊಂದನ್ನು ನಿಷೇಧವಾಗಬೇಕಾದರೆ ಕಾನೂನನ್ನೆ ರೂಪಿಸಬೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಬವಾಗುತ್ತದೆ ಇಷ್ಟಕ್ಕೂ ಜಾರಿಗೆ ತಂದಿರುವ ಕಾನೂನುಗಳಿಂದ ಸಮಾಜದಲ್ಲಿರುವ ಪದ್ದತಿಗಳು ನಿಯಂತ್ರಣಕ್ಕೆ ಬಂದಿವೆಯೇ? ಎಂಬ ಪ್ರಶ್ನೆ ಮುಂದಿಡುತ್ತಾರೆ. ಎಲ್ಲಾ ಪ್ರಶ್ನೆಗಳು ಕೂಡ ಉತ್ತರವಾಗಲಾರವು. ಮಡೆಸ್ನಾನ ನಿಷೇಧಗೊಳ್ಳಬೇಕು ಎನ್ನುವುದು ಎಲ್ಲಾ ಮಠಾಧೀಶರ ಅಭಿಪ್ರಾಯವಾದರೂ ಇದು ಅನಾದಿ ಕಾಲದಿಂದ ಬಂದ ಆಚರಣೆ, ಎಂಜಲಲೆ ಮೇಲೆ ಉರುಳುವವರು ಉರುಳಲಿ ಅದು ಅವರವರ ನಂಬಿಕೆ ಎಂದು ಸಮರ್ಥಿಸಿಕೊಳ್ಳುತ್ತಾರೆಯೇ ವಿನಹ ನಿಷೇಧಿಸಿಬೇಕು ಎಂದು ಯಾವ ಧರ್ಮಗುರುಗಳು ಹೇಳುವುದಿಲ್ಲ ಯಾಕೆಂದರೆ ನಾವೆಲ್ಲ ಸಂಪ್ರದಾಯ ಮತ್ತು ಆಚಣೆಗಳ ದಾಸರಾಗಿದ್ದೇವೆ. ಬುದ್ದಿವಂತರು ಮತ್ತು ವಿದ್ಯಾವಂತರೂ ಎನಿಸಿಕೊಂಡಿರುವ ಸಮುದಾಯಗಳಲ್ಲಿಯೇ ಮೂಢನಂಬಿಕೆಗಳು ಹೆಚ್ಚು ಪ್ರಚಲಿತದಲ್ಲಿರುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಂಶಯ ಮೂಡದೆ ಇರದು. ದೇವರು ಧರ್ಮ ಮತ್ತು ನಶಿಸಿ ಹೋಗಿರುವ ರಾಜರ ಇತಿಹಾಸವನ್ನು ವೈಭವಿಕರಿಸಿ ಬೋಧಿಸುತ್ತಿರುವುದರಿಂದ ಇಂದಿನ ಶಿಕ್ಷಣ, ನಿರುದ್ಯೋಗಿಗಳನ್ನು ಉತ್ಪಾದಿಸುವ ಕೇಂದ್ರಗಳಾಗಿ ಮಾರ್ಪಾಟ್ಟಿವೆ  ಹೊರತು ಸ್ವಾವಲಂಬಿಯಾಗುವ ಶಿಕ್ಷಣ ಮರಿಚಿಕೆಯಾಗುತ್ತಿದೆ. ಇಂಥ ಶಿಕ್ಷಣ ಪಡೆದ ವಿದ್ಯಾವಂತರು ಸ್ವಾವಲಂಬಿಯಾಗದೆ ತನ್ನನ್ನು ತಾನು ನಂಬದೆ ಎಲ್ಲಾ ಭಾರವನ್ನು ದೇವರ ಮೇಲೆ ಹಾಕಿ ಕೂರುತ್ತಾನೆ. ಅದರಲ್ಲಿ ನೈತಿಕ ಶಿಕ್ಷಣ ಎನ್ನುವುದು ಕೇವಲ ಭಾಷಣದಲ್ಲಿ ಮಾತ್ರ ಕೇಳುತ್ತಿದ್ದೇವೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಶಿಕ್ಷಣ ವ್ಯವಸ್ಥೆ ಅಮೂಲಾಗ್ರ ಬದಲಾವಣೆಗೆ ನಿಡುಮಾಮಿಡಿ ಚನ್ನಮಲ್ಲಸ್ವಾಮಿಜಿ ನೇತೃತ್ವದ ಪ್ರಗತಿಶೀಲ ಮಠಾಧೀಶರು ಒತ್ತಾಯಿಸಿರುವುದು ಮೆಚ್ಚಲೇಬೇಕಾದ ವಿಷಯ. ಅನಿಷ್ಠ ಪದ್ಧತಿಗಳನ್ನು ಕಿತ್ತೊಗೆಯಲು ಪ್ರಜ್ಞಾವಂತರೆಲ್ಲರೂ ಒಂದಾಗಬೇಕಾಗಿದೆ. ಜಾತಿ, ಮತ, ಧರ್ಮಗಳನ್ನು ಲೆಕ್ಕಿಸದೇ ಮೂಢನಂಬಿಕೆಗಳ ವಿರುದ್ಧ ಬಂಡಾಯವೇಳುವುದನ್ನು ಕಲಿಯಬೇಕಿದೆ. ರಾಜ್ಯ ಸರ್ಕಾರದ ಮಂತ್ರಿ ಮಹೋದಯರೇ   ಹೋಮ ಹವನ ಎಂಬ ಅರ್ಥವಿಲ್ಲದ ಆಚರಣೆ ಮಾಡುತ್ತಿರುವಾಗ ಇವರಿಂದ ನಿರೀಕ್ಷೆ ಮಾಡುವುದೇನಿದೆ. ಇದರ ವಿರುದ್ಧ ಪ್ರತಿಯೊಬ್ಬ ನಾಗರಿಕನು ತಿರುಗಿ ಬೆಳಬೇಕಾಗಿದೆ ಸರ್ಕಾರಕ್ಕೆ ತಿದ್ದಿ ಹೇಳಬೇಕಾಗಿದೆ.