Saturday 15 October 2011

ಆಣೆ ಮಾಬೇಕಾಗಿರುವುದು ಕಲ್ಲು ದೇವರ ಮುಂದಲ್ಲ ೬ಕೋಟಿ ಜೀವಂತ ದೇವೆರ ಮುಂದೆ

ಪ್ರಜಾಪ್ರಭುತ್ವದಲ್ಲಿ ಸಂವಿಧಾನಕ್ಕೆ ತನ್ನದೆಯಾದ ಮಹತ್ವವಿದೆ ಅದರ ಆಶಯಗಳಲ್ಲಿ ನಡೆಯಬೇಕಾಗಿದ್ದು ಪ್ರತಿಯೋಬ್ಬರ ಕರ್ತವ್ಯ ಅದರಲ್ಲಿಯೂ ಜವಬ್ದಾರಿಯುತ ಸ್ಥಾನದಲ್ಲಿದ್ದವರು ಅದಕ್ಕೆ ಧಕ್ಕೆಯಾಗದಂತೆ ಹೇಳಿಕೆ ನೀಡಬೇಕಾದುದ್ದು ಅವರ ಗುರುತರ ಹೊಣೆ. ಜವಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ನೀಡಿದ ಹೇಳಿಕೆ ನೋಡಿದರೆ ಹಾಸ್ಯಾಸ್ಪದವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳ ಮುಖವಾಡ ಕಳಚಲು ಹೋಗಿ ತನ್ನ ಮಾನವನ್ನೆ ಹರಾಜು ಹಾಕಿಕೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಅಪಮಾನ ಮಾಡಿದ್ದಾರೆ.
ವೈಯಕ್ತಿಕ ದ್ವೇಷವನ್ನು ಸಾರ್ವಜನಿಕಗೊಳಿಸಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಲು ಕಾರಣವಾಗಿದ್ದಾರೆ ತನ್ನ ಮೇಲೆ ಇರುವ ಹಗರಣಗಳಿಂದ ಮುಕ್ತನಾಗಲು ಹೋಗಿ ತಾನೇ ಮೋಕ್ಷ ಪಡೆದುಕೊಂಡಿದ್ದಾರೆ. ಈ ಯಡಿಯೂರಪ್ಪನ ಹಣೆಬರಹ, ಕುಮಾರಸ್ವಾಮಿಯವರ ಮೇಲೆ ಆರೋಪ ಸಾಭೀತು ಮಾಡಲು ಧರ್ಮಸ್ಥಳದ ಮಂಜುನಾಥನನ್ನು ಬಳಸಿಕೊಂಡು ದೇವರ ಹೆಸರಿನಲ್ಲಿ ಆಣೆ ಮಾಡಲು ಸವಾಲು ನೀಡಿದ್ದಾರೆ ಎಂದರೆ ಇವರ ದ್ವೇಷ ಎಷ್ಟಿದೆ ಎಂಬುವುದು ಅರ್ಥವಾಗುತ್ತದೆ. ಸಂವಿಧಾನ ಪ್ರಜಾಪ್ರಭುತ್ವ ಎಂಬ ಹೆಸರುಗಳು ಆಣೆ ಪ್ರಮಾಣದ ಮುಂದೆ ಗೌಣವಾಗಿ ಹೋಗಿವೆ. ಯಡಿಯೂರಪ್ಪನವರು ಮಠ ಮಂದಿರಗಳಿಗೆ ಹಣ ನೀಡುವುದರ ಮೂಲಕ ಧಾರ್ಮಿಕ ನಾಯಕರನ್ನು ತನ್ನ ಬೆಂಬಲಕ್ಕೆ ನಿಲ್ಲುವಂತೆ ಮಾಡಿ ಯಶಸ್ವಿಯಾಗಿದ್ದ ಮುಖ್ಯಮಂತ್ರಿ ಅದೇ ಜೋಶ್‌ನಲ್ಲಿ ಮಂಜುನಾಥನನ್ನು ಒಲಿಸಿಕೊಳ್ಳಲು ಸುಳ್ಳನ್ನು ಸತ್ಯವಾಗಿ ತೊರಿಸಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಂತಿದೆ ಆದರೆ...
ವೈಯಕ್ತಿಕ ಹಿತಾಸಕ್ತಿಗೆ ಧಾರ್ಮಿಕ ಕ್ಷೇತ್ರವೊಂದನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಪಾಪದ ಕೊಡ ಮಂಜುನಾಥನ ಮೇಲೆ ಹಾಕಲು ರೆಡಿಯಾದರೂ ನಾಡಿನ ಪ್ರಗತಿಪರರು ವಿಚಾರವಂತರು ಮಠಾಧೀಶರು ವಿರೋಧದಿಂದಾಗಿ ಯಡಿಯೂರಪ್ಪ ಧರ್ಮ ಸಂಕಟ ಅನುಭವಿಸುವಂತಾಯಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಅಭಿವೃದ್ಧಿಗಿಂತ ಹಗರಣದಲ್ಲಿಯೇ ಹೆಸರು ಮಾಡಿದ ಮುಖ್ಯಮಂತ್ರಿಯೆಂದರೆ ಯಡಿಯೂರಪ್ಪ ಒಂದು ಸರ್ಕಾರ ನಡೆಯುವುದು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಅಲ್ಲ ಸಂವಿಧಾನದ ಅಡಿಯಲ್ಲಿ ಇದು ಯಡಿಯೂರಪ್ಪನವರಿಗೂ ಗೊತ್ತು ಆದರೆ ಏನು ಮಾಡುವುದು ಎಲ್ಲವೂ ವಿಧಿಯಾಟ.
ರಾಜಕೀಯಕ್ಕೆ ದೇವರುಗಳು ಬೇಕಾ?
ಪ್ರಜಾಸತ್ತಾತ್ಮಕ ಸರ್ಕಾರದಲ್ಲಿ ಪ್ರಜೆಗಳಿಗೆ ತನ್ನದೆಯಾದ ಮಹತ್ವವಿದೆ ಅವರ ಹಿತಾಸಕ್ತಿಯೇ ಆಡಳಿತ ಪಕ್ಷದ ಹೊಣೆಯಾಗಿರುತ್ತದೆ ಇದು ಅವರ ಕರ್ತವ್ಯ ಕೂಡ ಹೌದು. ಆದರೆ ಆರೋಪ ಪ್ರತ್ಯಾರೋಪ ವಿಷಯ ಬಂದಾಗ ಇಡೀ ಮತದಾರರನ್ನು ಮರೆತು ವೈಯಕ್ತಿಕ ಪ್ರತಿಷ್ಠೆಗಾಗಿ ವೇದಿಕೆಯನ್ನು ಸಿದ್ಧಪಡಿಸಿಕೊಂಡು ತಾವು ಮಾಡಿದ ಕರ್ಮವನ್ನು ದೇವರ ಮೇಲೆ ಹಾಕಿ ಬಿಡುವುದು ಎಷ್ಟರ ಮಟ್ಟಿಗೆ ಸರಿ.
ತಮ್ಮ ಆರೋಪ ಹಗರಣವನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸಬೇಕು ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆ ನೀಡಬೇಕು ಅದು ಬಿಟ್ಟು ವಿನಾ ಕಾರಣ ವೈಯಕ್ತಿಕ ದ್ವೇಷಕ್ಕಾಗಿ ಧಾರ್ಮಿಕ ಸ್ಥಳವೊಂದರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ಅದರ ಮೇಲೆ ಆಣೆ ಪ್ರಮಾಣ ಸಾಭೀತು ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ.
ಆಣೆ ಮಾಡಬೇಕಾಗಿರುವುದು ದೇವರ ಮುಂದಲ್ಲ ೬ಕೋಟಿ ಕನ್ನಡಿಗರ ಮುಂದೆ
ಪ್ರಜಾಪ್ರಭುತ್ವ ಎಂದರೆ ಜನರಿಂದ ಜನರಿಗಾಗಿ ಜನರೆ ನಡೆಸುವ ಸರ್ಕಾರ ಆದರೆ ಅದನ್ನು ಮರೆತ ರಾಜಕೀಯ ನಾಯಕರು ದೇವರುಗಳನ್ನು ರಾಜಕೀಯದಲ್ಲಿ ವೈಭವಿಕರಿಸಲು ಹೊರಟಿದ್ದಾರೆ. ಹಾಲಿ ಮಾಜಿಗಳು ಪ್ರಮಾಣ ಮಾಡಬೇಕಾಗಿರುವುದು ಕಲ್ಲು ದೇವರ ಮುಂದೆ ಅಲ್ಲ ಜೀವಂತ ದೇವರುಗಳಾದ ೬ ಕೋಟಿ ಕನ್ನಡಿಗರ ಮುಂದೆ ಅವರು ನಿಮ್ಮ ಆಣೆ ಪ್ರಮಾಣಕ್ಕೆ ನಿರ್ಣಾಯಕ ಉತ್ತರ ಕೊಡುವ ಸಾಕ್ಷಾತ್ ದೇವರು. ಧಾರ್ಮಿಕ ಸ್ಥಳವೊಂದರಲ್ಲಿ ಪ್ರಮಾಣ ಮಾಡುವುದಾದರೆ ಮಂಜುನಾಥನ ಸನ್ನಿಧಿಯಲ್ಲಿ ಕುದಿಸಿದ ಎಣ್ಣೆಯಲ್ಲಿ ಕೈ ಎದ್ದಲಿ ನಿಮ್ಮ ಆಣೆ ಪ್ರಮಾಣ ನೈಜತೆ ಆತ್ಮ ಸಾಕ್ಷಿಗೊಂದು ಮೈಲಿಗಲ್ಲು ಇದನ್ನು ಕರ್ನಾಟಕದ ಸಮಸ್ತ ಜನತೆ  ಸ್ವಾಗತಿಸುತ್ತದೆ. ಹಾಲಿ ಮಾಜಿ ಮುಖ್ಯಮಂತ್ರಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಪರಸ್ಪರ ಕೆಸರೆರಚಾಟದಲ್ಲಿ ತಲ್ಲಿನರಾಗಿ ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡುವ ಮಟ್ಟಕ್ಕಿಳಿದಿರುವುದು ಪಾರದರ್ಶಕ ರಾಜಕೀಯಕ್ಕೆ ಅಪಚಾರವಾಗಿದೆ.
ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ನೀಡಿದ ಹೇಳಿಕೆ ಕನ್ನಡಿಗ ಮತದಾರರಿಗೆ ಮಾಡಿದ ಘೋರ ಅಪಮಾನವಾಗಿದೆ. ಈ ಪ್ರಮಾಣಕ್ಕೆ ಉಡುಪಿಯ ಪೇಜಾವರ ಸ್ವಾಮೀಜಿಗಳು ನೀಡಿರುವ ಹೇಳಿಕೆ ಗಮನಿಸಿದಾಗ ಆಣೆ ಬೇಡ ಆತ್ಮ ವಿಮರ್ಶೆ ಬೇಕು ಎಂಬುದು ಉತ್ತಮ ಸಲಹೆಯಾದರೂ ಇದನ್ನು ಎಷ್ಟರ ಮಟ್ಟಿಗೆ ಅಪ್ಪಿಕೊಂಡಾರು ಎನ್ನುವ ಪ್ರಶ್ನೆ ಕಾಡದೆ ಇರದು ಆತ್ಮ ಸಾಕ್ಷಿ ಇದ್ದವರಿಗೆ ಪೇಜಾವರ ಸ್ವಾಮೀಜಿಗಳ ಮಾತು ಅನ್ವಯಿಸುತ್ತದೆ. ಆದರೆ ಆತ್ಮ ವಿಮರ್ಶೆ ಎಂಬ ಪದವೇ ಗೊತ್ತಿರದ ಅಪ್ರಬುದ್ಧ ನಾಯಕರಿಗೆ ಬೋಧನೆ ಮಾಡಲು ಹೊರಟಂತಿದೆ.  ಆತ್ಮ ವಿಮರ್ಶೆಯ ವಿಚಾರ ಬಂದಾಗ ಪೇಜಾವರ ಸ್ವಾಮೀಜಿಗಳ ಬಗ್ಗೆ ಸಂಶಯ ಕಾಡದೆ ಇರದು ಮಠಕ್ಕೆ ದಲಿತರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಾಗ ಇವರ ಆತ್ಮ ವಿಮರ್ಶೆ ಎಲ್ಲಿ ಹೊಗಿತ್ತು. ಮುಖ್ಯಮಂತ್ರಿಯ ಅಧಿಕಾರ ಉಳಿಸುವುದಕ್ಕಾಗಿ ವೀರಶೈವ ಮಠಾಧೀಶರು ನಿರ್ಣಯ ಕೈಗೊಳ್ಳಲು ಮುಂದೆ ಬರುವ ಮಠಾಧೀಶರು ಯಡಿಯೂರಪ್ಪನವರ ತಪ್ಪನ್ನು ತಿದ್ದಿಕೊಳ್ಳುವಂತೆ ಏಕೆ ಸಲಹೆ ನೀಡಬಾರದು ಬಸವ ತತ್ವವೇ ನಮ್ಮ ಮೂಲ ಮಂತ್ರ ಎಂದು ಜಂಭ ಕೊಚ್ಚಿಕೊಳ್ಳುವ ಮಠಾಧೀಪತಿಗಳು ಆಣೆ ಮಾಡುವುದು ಯಾರ ತತ್ವ. ಆಣೆ ಮಾಡಿದ ಮಾತ್ರಕ್ಕೆ ಮೇಲಿರುವ ಆರೋಪಗಳು ಮುಕ್ತಿಯಾಗುತ್ತವೆಯೇ ರಾಜಕೀಯದಲ್ಲಿ ಆಣೆ ಪ್ರಮಾಣ ಎಷ್ಟರ ಮಟ್ಟಿಗೆ ನಿಜವಾಗುತ್ತವೆ ರಾಜಕೀಯ ಎಂಬುವುದೇ ಸುಳ್ಳರ ವಾಸಸ್ಥಾನ ಇಲ್ಲಿ ನಿಜ ಹೇಳಿದರು ನಂಬುವವರು ಯಾರು. ಹಾಗಂತ ಎಲ್ಲಾ ರಾಜಕೀಯ ನಾಯಕರು ಸುಳ್ಳರಂತಲ್ಲ ಏನೇ ಇರಲಿ. ಆಣೆ ಪ್ರಮಾಣದ ಸವಾಲನ್ನು ಮಾಜಿ ಮುಖ್ಯಮಂತ್ರಿಗಳು ಸ್ವಲ್ಪ ಸಮಧಾನ ಚಿತ್ತದಿಂದ ಯೋಚಿಸಬೇಕಾಗಿತ್ತೇನೋ ಸಂವಿಧಾನದ ಚೌಕಟ್ಟಿನಲ್ಲಿ ಮುಖ್ಯಮಂತ್ರಿಗಳ ಸವಾಲನ್ನು ಸ್ವೀಕರಿಸಲು ಸಿದ್ಧನೆಂದು ಹೇಳಿದರೆ ಕುಮಾರಸ್ವಾಮಿಯವರ ಘನತೆ ಹೆಚ್ಚುತ್ತಿತ್ತು ಆದರೆ ಆಸ್ತಿಕರು ಒಪ್ಪಬೇಕಲ್ಲ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾದ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆ ನೀಡಿದ ಮತ್ತು ಸ್ವೀಕರಿಸಿದ ಇಬ್ಬರು ಕನ್ನಡಿಗ ಮತದಾರರ ಕ್ಷೇಮೆ ಯಾಚಿಸಬೇಕು.

ಪ್ರವಾಸಿಗರ ಚಿತ್ತ ಬುದ್ಧ ವಿಹಾರದತ್ತ

ಸುಂದರವಾದ ಉದ್ಯಾನವನ ಒಳ ಹೊಕ್ಕರೆ ಹಚ್ಚ ಹಸುರಾದ ಹುಲ್ಲು ಹಾಸು, ಮರಗಿಡಗಳಿಂದ ಕೂಡಿದ ಅಹ್ಲಾದಕರ ವಾತಾವರಣ ಮಾನವ ನಿರ್ಮಿತ ಕಲಾಕೃತಿಗಳು ಸಹ ಅಲಲ್ಲಿ ಹರಡಿಕೊಂಡಿವೆ. ಅವುಗಳಲ್ಲಿ ಅತ್ಯಾಕರ್ಷಕ ಆಕಾರಗಳು ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿಸುತ್ತವೆ. ಇದೇನೋ ಜಲಪಾತದ ವರ್ಣನೆ ಎಂದು ಭಾವಿಸಿದ್ದಿರಾ? ಖಂಡಿತಾ ಇಲ್ಲ. ಇದು ಬಿಸಿಲೂರಿನಲ್ಲಿ ನೀರ್ಮಿಸಿರುವ ಬುದ್ದ ವಿಹಾರದ ರಮ ಣಿಯ ನೋಟ.ಕ್ರಿ ಪೂ ೬ನೇ ಶತಮಾನದಲ್ಲಿ ಮನುಕುಲದ ಬಾಳಿಗೆ ಅಹಿಂಸೆ ಎಂಬ ದಿವ್ಯ ದೀಪವನ್ನು ನೀಡಿದ ಗೌತಮ ಬುದ್ದ ವರ್ಣನೆಗೆ ನಿಲುಕದ ವ್ಯಕ್ತಿ. ಇಲ್ಲಿ ವ್ಯಕ್ತಿ ಶಕ್ತಿಯಾಗಿ ಬಿಸಿಲೂರಿನಲ್ಲಿ ವಿಶ್ವಕ್ಕೆ ಶಾಂತಿ ಸಂದೇಶ ಸಾರುವಂತೆ ಭಾಸವಾಗುತ್ತಿದೆ. ಈ iಹಾನ್ ತೇಜಸ್ಸು ಇಂದಿನ ಜಗತ್ತಿನೋದಿಗೆ ಸಮಾಗಮಾವಾಗಿ ಶಾಂತಿ ನೇಲೆಸುವಂತಾಗಲಿ ಎಂಬ ಮಹಾದಾಶೆಯೊಂದಿಗೆ ೧೯೫೬ ಅಕ್ಟೋಬರ್ ೧೪ರಂದು ನಾಗಪೂರದಲ್ಲಿ ಅಂಬೇಡ್ಕರ್‌ರವರು ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ದ ಧರ್ಮ ಸ್ವೀಕರಿಸುವ ಮೂಲಕ ಶಾಂತಿ ಮತ್ತು ಜಾತ್ಯತೀತ ಮಂತ್ರವನ್ನು ಸಾರಿ ಬೌದ್ದ ಧರ್ಮದ ಪನರ್ ಸ್ಥಾಪನೆಗೆ ಶ್ರಮಿಸಿದರು. ಇದಕ್ಕೆ ಕಾರಣಿಭೂತರಾದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ಸವಿನೆನಪಿಗಾಗಿ ಈ ವಿಹಾರವನ್ನು ವಿಶ್ವವಿದ್ಯಾಲಯ ಆವರಣದ ಹೊರ ವಲಯದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಬೌದ್ದ ವಿಹಾರವನ್ನು ನಿನರ್ಮಿಸಿದೆ. ಈ ವಿಹಾರದ ರೂವಾರಿ ಕರ್ನಾಟಕದ ಅಶೋಕ ಸಾಮ್ರಾಟ್‌ರೆಂದು ಖ್ಯಾತನಾಮರಾದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಹಾಗೂ ಸಿದ್ದಾರ್ಥ ವಿಹಾರ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಅಯುಷ್ಮಾನ ಮಲ್ಲಿಕಾರ್ಜುನ ಖರ್ಗೆಯವರು. ಇದೊಂದು ಅಂತರಾಷ್ಟ್ರಿಯ ಬೌದ್ದ ಅಧ್ಯಾಯನ ಕೇಂದ್ರವಾಗಬೆಕೆಂಬಮಹಾದಾಸೆ ಅವರದಾಗಿದೆ.
ಗುಲಬರ್ಗಾ ನಗರದಿಂದ ಸೇಡಂ ರಸ್ತೆಯ ಮೂಲಕ ಸುಮಾರು ೮ ಕೀ ಮಿ ದೂರ ಕ್ರಮಿಸಿದರೆ ವಿಶ್ವವಿದ್ಯಾಲಯದ ರಾಷ್ಟ್ರಕೂಟರ ಬಾಗಿಲು ಎದುರುಗೊಳ್ಳುತ್ತದೆ. ಅನತಿ ದೂರದಲ್ಲಿ ಮತ್ತೆ ಎರಡು ಮುಖ್ಯ ಸ್ವಾಗತ ಕಮಾನುಗಳು ಕಾಣುತ್ತವೆ. ಒಂದೊಂದು ಕಮಾನುಗಳು ವೈಶಿಷ್ಠ್ಯಗಳಿಂದ ಕೂಡಿದೆ. ಸುಮಾರು ೭೮ ಎಕರೆ ಪ್ರದೇಶದಲ್ಲಿ ೬೦ ಅಡಿ ಎತ್ತರದ ಬೆಟ್ಟದ ಮೇಲೆ ಈ ಭವ್ಯ ವಿಹಾರ ಅಮೃತ ಶಿಲೆಯಿಂದ ಕಂಗೊಳಿಸುತ್ತದೆ. ೩೨೪೮೦ ಚದರ ಅಡಿ ವಿಸ್ತಿರ್ಣದ ಈ ಕಟ್ಟಡವು ೧೭೦ ಕಂಬಗಳ ಆಧಾರದ ಮೇಲೆ ನಿರ್ಮಾಣಗೊಂಡಿದೆ.
ಅಜಂತಾ ಎಲ್ಲೋರಾದಲ್ಲಿನ ದೃಶ್ಯಗಳು ಹೈದ್ರಬಾದ ಕರ್ನಾಟಕದ ಕೇಂದ್ರ ಸ್ಥಾನವಾದ ಗುಲಬರ್ಗಾದಲ್ಲಿ ನಿರ್ಮಾಣಗೊಂಡಿವೆ. ಪ್ರಾರ್ಥನ ಮಂದಿರದ ಧ್ಯಾನ ಭಂಗಿಯಲ್ಲಿ ಕುಳಿತಿರುವ ಬುದ್ದ ವಿಗ್ರಹವು ಇಡೀ ವಿಹಾರಕ್ಕೆ ಆಧ್ಯಾತ್ಮಿಕ ಕಳೆ ಮತ್ತು ಸಾಂಸ್ಕ್ರತಿಕ ಸೊಬಗನ್ನು ತಂದು ಕೊಟ್ಟಿದೆ. ಆರು ಅಡಿ ಎತ್ತರದ ಕಪ್ಪು ಶಿಲೆಯ ಬುದ್ದ ವಿಗ್ರಹವು ಪ್ರಾಚೀನ ಬುದ್ದ ಪ್ರತಿಮೆಗಳಿಗಿಂತ ಭಿನ್ನವಾಗಿದೆ. ನೆಲಮಹಡಿ ಹಾಗೂ ಧ್ಯಾನಮಂದಿರಕ್ಕೆ ಮೂರು  ದಿಕ್ಕಿನಿಂದಲೂ ಪ್ರವೇಶ ದ್ವಾರವಿದ್ದು ಅದು ಬೌದ್ದ ಧರ್ಮದ ತತ್ವ ಭೋದನೆಗೆ ಸೂಕ್ತ ವಾತಾವರಣವಾಗಿದೆ. ನೆಲ ಮಹಡಿಯಲ್ಲಿ ಸ್ಥಾಪಿಸಿರುವ ಬುದ್ದ ವಿಗ್ರಹವು ೪೦೦ ಕೆಜಿ ತೂಕದ ಪಂಚಲೋಹದ ಬಂಗಾರ ಲೇಪಿತ ಬುದ್ದ ವಿಗ್ರಹವು ಥೈಲ್ಯಾಂಡ ದೇಶದ ಬ್ಯಾಂಕಾಂಗ್‌ನಲ್ಲಿ ನಿರ್ಮಾಣವಾಗಿದೆ. ಸಿಮೆಂಟಿನಿಂದ ಮಾಡಿದ ಮುರ್ತಿ ಶಿಲ್ಪಗಳಿಂದ ಪೂಜಾ ಕೊಠಡಿಯ ಮೇಲ್ಚಾವಣಿಯಲ್ಲಿ ಬುದ್ದನ ಜೀವನದ ಘಟನೆಗಳಿಗೆ ಸಂಭಂದಿಸಿದ ಅನೇಕ ವಿಗ್ರಹಗಳನ್ನು ಕಾಣಬಹುದು. ಅವುಗಳಲ್ಲಿ ಬುದ್ದನ ಕೊನೆಯ ದಿನಗಳು ಹಾಗೂ ಪ್ರಾಣಿಗಳ ಜೊತೆಗಿನ ವಿಗ್ರಹಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಪ್ರಾಚೀನ ಪರಂಪರೆಗೆ ಅಂಟಿಕೋಂಡಿರುವ ಮಹತ್ವದ ಸ್ಮಾರಕವೆಂದರೆ ಅಲ್ಲಿನ ಸ್ಥೂಪ ೩೦ ಅಡಿ ವ್ಯಾಸ ೨೦ ಅಡಿ ಅಗಲದ ಸ್ಥೂಪವು ವಿಹಾರದ iಹಾದ್ವಾರದಲ್ಲಿ ನಿರ್ಮಿತವಾಗಿದೆ. ಇದರ ಹೊರಭಾಗವನ್ನು ಇಟಾಲಿಯನ್ ಮಾರ್ಬಲ್‌ನಿಂದ ಶೃಂಗರಿಸಲಾಗಿದೆ. ವಿಹಾರದ ನಾಲ್ಕೂ ದಿಕ್ಕುಗಳಲ್ಲಿ ಅಶೋಕ ನಿರ್ಮಿಸಿದ ಮಾದರಿಯ ಸ್ತಂಭಗಳು ಕಟ್ಟಡಕ್ಕೆ ವಿಶೇಷ ಮೇರಗು ನಿಡುತ್ತವೆ. ಬೃಹತ್ತ ಆಕಾರದ ಆರು ದ್ವಾರಗಳು ಈ ವಿಹಾರ ಹೊಂದಿದ್ದು ಬುದ್ದ ವಿಹಾರದ ಪ್ರಮುಖ ಆಕರ್ಷಣಿ ವೃತ್ತಾಕಾರದ ಗೊಪುರ ಇದರ ಮೇಲೆ ಹತ್ತು ಅಡಿ ಎತ್ತರದ ಪಂಚಲೋಹದ ಕಳಸ ಕಣ್ಮನ ಸೆಳೆಯುತ್ತದೆ. ಅಂಬೇಡ್ಕರ್‌ರವರು ತಮ್ಮ ಅನುಯಾಯಿಗಳೊಂದಿಗೆ ಬೌದ್ದ ಮತ ಸ್ವೀಕರಿಸಲು ಹೊರಟಿರುವ ಅಮೃತಗಳಿಗೆಯನ್ನು ನೆನಪಿಸುವ ಕೃತಕ ಪ್ರತಿಮೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಬುದ್ದ ವಿಹಾರದಿಂದ ೫೦೦ ಅಡಿ ದೂರದಲ್ಲಿ ಮಹಾದ್ವಾರವಿದೆ ಇದು ಚೈತನ್ಯಕೃತಿಯಲ್ಲಿದೆ.
ಮಹಾದ್ವಾರದಿಂದ ಬೌದ್ದ ವಿಹಾರ ತಲುಪಲು ಮೂರು ಹಂತಗಳಿದ್ದು ಪ್ರತಿಯೊಂದು ಹಂತದ ಅಂತರ ೧೦೦ ಅಡಿಗಳಾಗಿವೆ. ಈ ಹಂತವು ಸಹ ಬೌದ್ದ ತತ್ವಕ್ಕನುಗುಣವಾಗಿವೆಯಂಬುದು ಉಲ್ಲೇಖನೀಯ.  ಈ ವಿಹಾರವು ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಾದ ನಳಂದ ಮತ್ತು ತಕ್ಷಶಿಲೆಯ ಮಾದರಿಯನ್ನು ನೆನಪಿಗೆ ತರುತ್ತದೆ ಪ್ರವಾಸಿಗರಿಗೆ ಯಾತ್ರಿಕರ ಕೊಠಡಿ ಸೂಕ್ತ ಕ್ಯಾಂಟಿನ್ ವ್ಯವಸ್ಥೆ ಗ್ರಂಥಾಲಯ ವಸ್ತು ಪ್ರದರ್ಶನಾಲಯ ಶಯನ ಮಂದಿರ ಊಟದ ಮನೆ ಮೋದಲಾದವುಗಳಳೂ ನೀರ್ಮಿಸಲಾಗಿದೆ. ವಿಶಾಲವಾದ ರಂಗ ಮಂದಿರವಿದ್ದು ಅದರಲ್ಲಿ ೨೫೦೦ ಜನರು ಕುಳಿತು ನೋಡಲು ವ್ಯವಸ್ಥೆ ಇದೆ. ಆಧುನಿಕತೆಯ ಭರಾಟೆಯಲ್ಲಿ ತಡಕಾಡುವ ನಾವು ಮಾನವ ಶಾಂತಿಗಾಗಿ ಬಯಸಿದಲ್ಲೆಲ್ಲಾ  ಸಂಚರಿಸುತ್ತೇವೆ.
ಬೇಸರ ದುಗುಡ ದೂರ ಮಾಡಲು ಮೋಜಿನತ್ತ ದಾರಿ ಹುಡುಕುತ್ತೆವೆ ಶಾಂತಿಗಾಗಿ ಹಂಬಲಿಸುವ ಜೀವಿಗಳಿಗೆ ಇದೊಂದು ಹೇಳಿ ಮಾಡಿಸಿದ ತಾಣ. ಸುಖ ಸಮೃದ್ದ ಬದುಕಿಗೆ ಶಾಂತಿ ಮಾರ್ಗ ತೋರುವ ಈ ತಾಣ ವೈಜ್ಞಾನಿಕವಾಗಿ ಆಧ್ಯಾತ್ಮಿಕ ಚಿಂತನೆಗೆ ಹಾಗೂ ಅಧ್ಯಯನಕ್ಕೆ ಕೇಂದ್ರವಾಗುವುದೇ?


ಸಾಮಾಜಿಕ ಬಹಿಷ್ಕಾರಕ್ಕೆ ಅಂತ್ಯ ಯಾವಾಗ ?

ಕುಲಕಸುಬು ಧಿಕ್ಕರಿಸಿದ ದಲಿತರಿಗೆ ಬಹಿಷ್ಕಾರ ಕ್ಷೌರ ಮಾಡಿಸಿಕೊಳ್ಳಲು ಹೋದ ದಲಿತನಿಗೆ ಮೂಗಿಗೆ ಕತ್ತರಿ ಎಂಬ ಕನ್ನಡದ ಪ್ರಮುಖ ಪತ್ರಿಕೆಯೊಂದಲ್ಲಿ ಪ್ರಕಟವಾದ ಸುದ್ದಿ ಇದು  ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತ ವಿಚಾರವಾಗಿದೆ. ಸ್ವತಂತ್ರ ಭಾರತ ಆರು ದಶಕಳೇ ಕಳೆದರೂ ಸ್ವತಂತ್ರವಾಗಿ ಬದುಕಲು ಬೀಡದ ಹೇಯ ಮನಸ್ಸುಗಳು ಭಾರತ ಮಾತೆಯ ಮಡಿಲಲ್ಲಿ ಇದ್ದ್ದಾರೆ ಎಂಬುವುದು ದುರಂತದ ವಿಷಯವಾಗಿದೆ. ಶತಶತಮಾನಗಳಿಂದ ನಂಬಿ ಮಾಡಿಕೊಂಡು ಬಂದ ಕುಲ ಕಸಬುಗಳನ್ನು ಪ್ರಜ್ಞಾವಂತ ದಲಿತ ಯುವಕರಿಗೆ ಕೀಳರಿಮೆಯಾಗಿ ಕಾಣುವುದು ಸಹಜ. ಹಿರಿಯರು ಮಾಡಿಕೊಂಡು ಬಂದ ಈ ಕೇಲಸವು ಇಂದಿನ ಯುವಕರು ನಿರಾಕರಿಸುವ ಧೈರ್ಯ ತೋರಿದ್ದಕ್ಕೆ ಸಾಮಾಜೀಕ ಬಹಿಷ್ಕಾರಕ್ಕೆ ಒಳಗಾಗಬೇಕಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆರೆಗೋಡು ಗ್ರಾಮದವರು ಬಹಿಷ್ಕಾರಕ್ಕೆ ಒಳಗಾದ ನತದೃಷ್ಠ ಕುಟುಂಬಗಳು. ಸತ್ತ ದನಕರುಗಳನ್ನು ಸತ್ತಾಗ, ಮುಂಜಿವೆ,   ಉತ್ಸವಗಳ ಸಂದರ್ಭದಲ್ಲಿ ತಮಟೆ ಬಾರಿಸುವುದು ಗ್ರಾಮದ ನಾನಾ ಕೆಲಸಗಳನ್ನು ಮಾಡಲು ನೀರಾಕರಿಸದ ಏಳು ದಲಿತ  ಕುಟುಂಬUಳಿಗೆ ಸಾಮಾಜೀಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೆ ಒಳಗಾಗಿರುವವರ ಬಗ್ಗೆ ಸಾಮಾಜೀಕ ಕಳಕಳಿ ಹೊಂದಿದ ವ್ಯಕ್ತಿ ಇವರ ಪರ ಮಾತನಾಡಿದರೆ ಅವನ ಪರಿಸ್ಥಿತಿ ಇನ್ನೂ ನಿಕೃಷ್ಠ ಅಂತಹ ವ್ಯಕ್ತಿಗೆ ದಂಡವಿದಿಸಿದ್ದು ಉಂಟು ತಮ್ಮ ಸಮಾಜದ ದೃಷ್ಠಿಯಲ್ಲಿ ಅವನು ಕಳನಾಯಕ. ಈ ಬಹಿಷ್ಕಾರ ಎಂಬುದು ಕೇವಲ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಇಡಿ ದೇಶಕ್ಕೆ ಮಾರಕವಾದಂತ ಜ್ವಲಂತ ಸಮಸ್ಯೆಯಾಗಿದೆ. ಇಂತಹ ಘಟನೆಗಳು ಹಲವಾರು ನಡೆದರು ಮೇಲ್ವರ್ಗದ ಜನರಿಗೆ ಹೆದರಿ (ಅಂಜಿ) ಪ್ರಕರಣ ದಾಖಲಾಗದೆ, ದಾಖಲಾದರೂ ಅದಕ್ಕೆ ಯಾವುದೇ ಫಲಿತಾಂಶ ಸಿಗದೆ ರಾಜೀ ಮಾಡಿಕೊಂಡು ಬದುಕು ದುಡುವ ದಲಿತ ಕುಟುಂಬಗಳು ಸಾಕಷ್ಟಿವೆ. ಆಧುನಿಕ ಸಮಾಜ ಎಷ್ಟೆ ಮುಂದುವರಿದಿದೆ ಎಂದು ಜಂಬಕೊಚ್ಚಿಕೊಂಡರು ಅಸ್ಪೃಶ್ಯತೆ, ಜಾತಿಯತೆ ಎಂಬ ಭೂತ ನಮ್ಮ ಸಮಾಜದ ಜನರಿಂದ ದೂರವಾಗುತ್ತಿಲ್ಲ ಎಂದರೆ ನಮ್ಮ ಸಂಸ್ಕೃತಿ ಮಹಿಮೆಯೇ ಅಥವ ಸಂಸ್ಕೃತಿಯೇ ಜಾತಿಯತೆಯೇ ಎಂಬುವುದು ತೋಚದ ವಿಚಾರವಾಗಿದೆ. ಭಾರತಿಯ ಸಂಸ್ಕೃತಿಯ ಬಗ್ಗೆ ಘಂಟಾಗೋಷವಾಗಿ ಭಾಷಣ ಬೀಗಿಯುತ್ತಿರುವ ಜನತೆ ಭಾಷಣದಲ್ಲಿಯೇ ಸಂಸ್ಕೃತಿ ಉಳಿಸಿಕೊಂಡಿದ್ದಾರೆಯೆ ಹೋರತು ಕೃತಿಯಲ್ಲಿ ಅಲ್ಲ. ಸಂಸ್ಕೃತಿ ಎಂದರೆ ಸ್ತ್ರೀಯರಿಗೆ ಹಣಿಯಲ್ಲಿ ಕುಂಕುಮ, ಕಿವಿಯಲ್ಲಿ ಓಲೆ, ಕೈಯಲ್ಲಿ ಬಳೆ ಇಲಕಲ್ ಸೀರೆ ಉಟ್ಟು ಹಳ್ಳಿ ಗೌರಮ್ಮನಂತೆ ನಾಲ್ಕು ಗೋಡೆಗಳ ಮಧ್ಯೆದಲ್ಲಿ ಇರಬೇಕು ಎಂದು ಕಟ್ಟು ಪಡು ಹಾಕಿದ್ದೆ ಸಂಸ್ಕೃತಿ ಎಂದು ನಂಬಿದ್ದ ಹೇಯ ಮನಸ್ಸುಗಳಿಗೆ ಸಂಸ್ಕೃತಿಯ ಆಳ ಅರಿವಾದರೂ ಹೇಗೆ ಆದಿತು.  ಅಸ್ಪೃಶ್ಯತೆ ಹೋಗಲಾಡಿಸುವುದೇ ನನ್ನ ಗುರಿ ಎಂದು ಪಾದಯಾತ್ರೆ ಕೈಗೊಂಡ ಪೇಜಾವರ ಸ್ವಾಮಿಜೀಯನ್ನು ತುಂಬು ಹೃದಯದಿಂದ ಪಾದ ಪೂಜೆ ಮಾಡಿ ಸ್ವಾಗತಿಸಿದ ದಲಿತರು ಧನ್ಯರೊ ಅಥವ ಸಮಾಜದಿಂದ ಬಹಿಷ್ಕಾರ ಹಾಕಿ ಹೋರದೂಡಲ್ಪಟ್ಟ ಮೇಲ್ವರ್ಗ ಧನ್ಯವೋ ಎಂಬುವುದನ್ನು ಪ್ರಜ್ಞಾವಂತ ಧಾರ್ಮಿಕ ನಾಯಕರು ಹೇಳಬೇಕಾಗಿದೆ.
ನೀವು ಪಾದಯತ್ರೆ ಕೈಗೊಂಡು ಮೂರು ತಿಂಗಳಲ್ಲಿ ಫಲಶೃತಿ ಎಂಬಂತೆ ಮೇಲ್ವರ್ಗ ಕೊಟ್ಟ ದೊಡ್ಡ ಕಾಣಿಕೆ ? ಪಾದಯಾತ್ರಯಿಂದ ಅಸ್ಪೃಶ್ಯತೆ ಅಳಿಸಿ ಹಾಕುತ್ತೆವೆ ಎಂದು ನಂಬಿದ ಧಾರ್ಮಿಕ ನಾಯಕರಿಗೆ ಒಂದು ಮಾತನ್ನು ಹೇಳ ಬಯಸುವೆ ಅಸ್ಪೃಶ್ಯತೆ ಅಳಿಸಿ ಹಾಕುವುದಲ್ಲ ಅದರ ಬುಡ ಸಹ ನಡಿಗಿಸಲು ಸಾಧ್ಯವಿಲ್ಲ. ಹಿಂದೆ ಹಲವಾರು ಸಮಾಜ ಸುಧಾರಕರು ಮತ್ತು ಧಾರ್ಮಿಕ ನಾಯಕರು ಈ ಕೆಲಸಕ್ಕೆ ಕೈ ಹಾಕಿ ವಿಫಲರಾಗಿದ್ದೆ ಹೆಚ್ಚು..
ಸಮಾಜದಲ್ಲಿರುವ ಅಸ್ಪೃಶ್ಯತೆ , ಜಾತಿಯತೆ ಹೋಗಲಾಡಿಸಬೇಕಾದರೆ ಶಿಕ್ಷಣವೊಂದೆ ಪ್ರಮುಖ ಅಸ್ತ್ರ ಎಂದು ನಂಬಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಕನಸು ಇಂದು ಭಗ್ನವಾಗಿದೆ. ಸುಶಿಕ್ಷಿತ ನಾಗರಿಕರೆ ಇಂತಹ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂಬುವುದು ದುರದೃಷ್ಟಕರ ಸಂಗತಿಯಾಗಿದೆ ಜತೆಗೆ ಜಾತಿ ಸಂಘಟನೆ ಕಟ್ಟಿ ಬೇಳೆಸಲಾಗುತ್ತದೆ ಇದಕ್ಕೆ ಹಲವು ರಾಜಕೀಯ ನಾಯಕರು ಮತ್ತು ಧಾರ್ಮಿಕ ನಾಯಕರು ನೀರು ಹಾಕಿ ಪೋಸಿಸುತ್ತಿದ್ದಾರೆ.
ಹೀಗಾಗಿ ಶಿಕ್ಷಣದಿಂದ ನಾಶವಾಗಬೇಕಾಗಿದ್ದ ಅಸ್ಪೃಶ್ಯತೆ ಮರುಜೀವ ಪಡೆಯುತ್ತಿದೆ. ಅದರ ಬೇರು ಇನ್ನಷ್ಟು ಗಟ್ಟಿಯಾಗುತ್ತಿವೆಯೇ ಹೋರತು ಕೊಳೆಯುತ್ತಿಲ್ಲ. ಆಧುನಿಕ ಸಮಾಜದ ಮುಂದೆ ಇರುವ ಇನ್ನೊಂದು ಅಸ್ತ್ರ ಎಂದರೆ ಕಾನೂನು, ಈ ಖಡ್ಗದ ಮೂಲಕ ಅಸ್ಪೃಶ್ಯತೆ ಅಳಿಸಿ ಹಾಕಲು ಸಾಧ್ಯವಿದೆಯಾದರೂ ಅಂತಹ ಕಾನೂನುಗಳು ಸಂವಿಧಾನದಲ್ಲಿದ್ದರು ಜಾರಿ ಮಾಡುವವರು ಯಾರು? ಜಾರಿ ಮಾಡಿದ ಕಾನೂನುಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವವರು ಯಾರು?

ಭಗವದ್ಗೀತೆ ವಿರೋಧಿಸುವವರು ದೇಶ ಬಿಟ್ಟು ತೊಲಗಬೇಕೇ...?

ಭಗವದ್ಗೀತೆ ವಿರೋಧಿಸುವವರು ದೇಶ ಬಿಟ್ಟು ತೋಲಗಿ  ಎಂಬ ಶಿಕ್ಷಣ ಸಚಿವರ ಬೆಜಾವಬ್ದಾರಿ ಹೇಳಿಕೆ ನೋಡಿದರೆ ಆಶ್ಚರ್ಯವಾಗುತ್ತದೆ.  ಏಕೆಂದರೆ ಉದ್ದಟತನದ ಮಾತನಾಡಿರುವುದು ಅವರಿಗಿರುವ ದೇಶದ ಇತಿಹಾಸ ಪ್ರಜ್ಞೆ ಶೂನ್ಯತೆ ಎದ್ದು ಕಾಣುತ್ತದೆ ಇಂಥಹ ಬಾಲಿಶತನದ ಹೇಳಿಕೆಯಿಂದ ಕೋಮು ಮನೋಭಾವನೆಯ ಸಂಕುಚಿತ ಅಧಿಕಾರವನ್ನಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ ಅಖಂಡ ಭಾರತ ದೇಶದಲ್ಲಿ ಜಾತ್ಯತೀತ ಮನೋಭಾವನೆಯ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಿ ಶಿಕ್ಷಣದ ಪಾವಿತ್ರತೆಗೆ ಭಂಗ ಮಾಡುವುದು ಅರ್‌ಎಸ್‌ಎಸ್‌ನ ಒಪನ್ ಅಜೆಂಡಾವಾಗಿದೆ. ಭಗದ್ಗೀತೆ ವಿರೋಧಿಸುವವರು ರಾಷ್ಟ್ರೀಯತೆ ವಿರೋಧಿಸಿದಂತೆ ಎಂಬ ಹೇಳಿಕೆ ಒಪ್ಪುವುದಾದರೆ ಕುರಾನ್, ಬೈಬಲ್‌ನ್ನು ವಿರೋಧಿಸುವವರು ಈ ದೇಶದ ಸಂವಿಧಾನ ವಿರೋಧಿಸಿದಂತೆ ಎಂಬುವುದು ಅಷ್ಟೆ ಸತ್ಯವಾಗಿದೆ. ಜವಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಣ ಸಚಿವರು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ವಿಚಾರಿಸಿ ಪ್ರಸ್ತುತ ಸಂದರ್ಭಕ್ಕೆ ಅದು ಅವಶ್ಯವೇ ಎಂದು ಪರಿಶೀಲಿಸಬೇಕು ಈಗೀರುವ ಪಠ್ಯಪುಸ್ತಕಗಳಲ್ಲಿ ಆಗಿ ಹೋದ ಇತಿಹಾಸವನ್ನು ಬೋಧಿಸುತ್ತಲೇ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಇದೊಂದು ಗೊಡ್ಡು ಸಂಪ್ರದಾಯ ಹೆಚ್ಚಾಗಿ ಸೇರಿಸುತ್ತಿದ್ದಾರೆ. ಪೂರ್ವಾಗ್ರಹ ಪೀಡಿತರಾಗಿ ನಿರ್ಧಾರ ತೆಗೆದುಕೊಂಡು ಅದಕ್ಕೆ ಸಮರ್ಥನೆ ನೀಡುತ್ತಿರುವದು ಎಷ್ಟು ಸರಿ.
ಧರ್ಮ ಗ್ರಂಥಗಳನ್ನು ಬೋಧನೆ ಮಾಡುವುದಕ್ಕೆ ಸರ್ಕಾರಿ ಶಾಲೆಗಳೇ ಬೇಕೆ ಸೇವೆಯ ಹೆಸರಿನಲ್ಲಿ ಬೇಕಾದಷ್ಟು ಮಠ ಮಂದಿರಗಳನ್ನು ಸಾಕಿದ್ದೀರಲ್ಲ ಅಲ್ಲಿ ನಿಮ್ಮ ವಿಚಾರಗಳನ್ನು ತುಂಬಲು ಪ್ರಯತ್ನಿಸಿ ಮಠ ಮಂದಿರಗಳಿಗೆ ಕೆಲಸವಾದರೂ ಸಿಗುತ್ತೆ. ಭಾರತ ದೇಶ ಜಾತ್ಯಾತೀತ ರಾಷ್ಟ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮಂತ್ರವನ್ನು ಜಪಿಸುತ್ತಿರುವ ನಾವುಗಳು ಈ ತತ್ವಕ್ಕೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿಲ್ಲವೇ? ಭಾರತ ಸರ್ವ ಧರ್ಮಗಳ ತವರು ಸಾಮರಸ್ಯದ ನಾಡಿನಲ್ಲಿ ಧರ್ಮಕ್ಕೆ ಸಂಬಂಧಿಸಿದ ವಸ್ತು ವಿಷಯಗಳನ್ನು ಭೋಧನೆ ಮಾಡಲು ತಯಾರಿ ನಡೆಸಿದ್ದೀರಿ ಎಂದರೆ ಕೋಮು ದಳ್ಳುರಿಗೆ ಆಹ್ವಾನ ನೀಡಿದಂತೆ ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥ, ದೇಶದ ಸಂವಿಧಾನ ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವ ಮಹಾನ್  ಅಲ್ಬರ್‍ಟ್ ಐನ್‌ಸ್ಟನ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರೆ ಭಗವದ್ಗೀತಾ ಮಂತ್ರಗಳನ್ನು ದಿನಾಲೂ ಪಠಿಸುತ್ತಾರೆ ಅಂಥವರೇ ಒಪ್ಪಿಕೊಂಡಿರುವಾಗ ನೀವೇಕೆ ವಿರೋಧಿಸುತ್ತಿರಿ ಎಂಬ ಮಾತು ಕೇಳಿ ಬರುತ್ತಿದೆ ಭಗವದ್ಗೀತೆಯನ್ನು ಓದುವವರಿಗೆ ಮತ್ತು ಅನುಸರಿಸುವವರಿಗೆ ಅದು ಖಾಸಗಿ ವಿಚಾರ ಅದನ್ನು ಅವರು ವೈಯಕ್ತಿಕವಾಗಿ ಅನುಸರಿಸಬಹುದು ಹೊರತು ನಿವು ಪಠಿಸಿ ಎಂದು ಹೇಳಲು ಅವರು ಯಾರು.?
ಭಗವದ್ಗೀತೆಯ ಕೇಲವು ಮಂತ್ರಗಳು ಬ್ರಾಹ್ಮಣರೆ ಶ್ರೆಷ್ಠರೆಂದು ಹೇಳುವ ಮೂಲಕ ತಾರತಮ್ಯದಿಂದ ಕೂಡಿರುವ ಚಾತುರ್ವರ್ಣ ಪದ್ದತಿಯನ್ನು ಪೋಷಿಸುತ್ತದೆ ಪಾಳೆಗಾರಿ ಮತ್ತು ಗುಲಾಮಗಿರಿ ಸಂಸ್ಕೃತಿಯನ್ನು ಸಮರ್ಥಿಸುತ್ತವೆ  ರಾಜ್ಯ ಸರ್ಕಾರ ಭಗವದ್ಗೀತೆಯನ್ನು ಕಂಠಪಾಠ ಮಾಡಿಸುವುದರ ಮೂಲಕ ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸರ್ಕಾರವೇ ಬದ್ಧವಾಗಿ ನಿಂತಿದೆಯೇ? ನಿಮಗೆ ಬದ್ಧತೆ ಎನ್ನುವುದಿದ್ದರೆ ಈ ಸಮಾಜದಲ್ಲಿ ಜ್ವಲಂತವಾಗಿ ಕಾಡುತ್ತಿರುವ ಜಾತಿಯನ್ನು ಕಿತ್ತು ಹಾಕುತ್ತೇವೆ ಎಂದು ಪಣ ತೋಡಿ ಅದನ್ನು ಬುಡ ಸಮೇತ ಕಿತ್ತು ಹಾಕುವವರೆಗೂ ವಿಶ್ರಮಿಸಲಾರೆವು ಎಂದು ಅಭಿಯಾನ ಮಾಡಿ ಏಕೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ?
ಶಾಲೆ ಕಾಲೇಜುಗಳು ಯಾವುದೇ ಧರ್ಮದ ಪ್ರಚಾರ ಕೇಂದ್ರಗಳಲ್ಲ ಧರ್ಮದ ಪ್ರಚಾರಕ್ಕಾಗಿ ಕಟ್ಟಲಾದ ಧಾರ್ಮಿಕ ಸ್ಥಳವಂತು ಅಲ್ಲವೇ ಅಲ್ಲ ಶಾಲೆಗಳು ಎಂದರೆ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಪಿಸುವ ಸೌಹಾದ ಕೇಂದ್ರಗಳು ಅಂಥಹ ಕೇಂದ್ರಗಳಲ್ಲಿ ಧರ್ಮದ ಪ್ರಚಾರ ಮಾಡಿ ಸಂಕುಚಿತ ಮನೊಭಾವನೆಗೆ ತಳ್ಳುತ್ತಿಲ್ಲವೆ? ಇನ್ನಿತರ ಧರ್ಮ ಗ್ರಂಥಗಳಾದ ಕುರಾನ್ ಬೈಬಲ್ ತ್ರಿಪಿಟಕ ಮತ್ತು ಜೈನ ಧರ್ಮಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಪಠಿಸಲು ಅವಕಾಶ ಮಾಡಿಕೊಡಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಇಂದಿನ ವ್ಯವಸ್ಥೆಯ ಬಗ್ಗೆ ಯೋಚಿಸಿ ಪರಿಹಾರ ದೊರಕಿಸಿ ಕೊಡಬೇಕೆ ವಿನಹ ಧರ್ಮದ ಹೆಸರಿನಲ್ಲಿ ಮುಗ್ದ ಮಕ್ಕಳನ್ನು ಪ್ರಚೋದಿಸುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ. ವೈಜ್ಞಾನಿಕ, ಪ್ರಗತಿಪರ, ಜಾತ್ಯಾತೀತ ಮತ್ತು ಕೋಮು ಸೌಹಾರ್ಧತೆಯ ಬಗ್ಗೆ ಅರಿವು ಮೂಡಿಸುವ ಬದಲು ಧರ್ಮದ ಅಂಧಕಾರಕ್ಕೆ ತಳ್ಳುವ ಮತ್ತು ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವ ಮತ್ತು ಬೇರೆ ಧರ್ಮಗಳ ಬಗ್ಗೆ ತಾತ್ಸಾರ ವಾತಾವರಣ ಸೃಷ್ಠಿಸಲು ಮಠಾಧೀಶರ ಪ್ರಾಯೋಜಕತ್ವದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಿತೂರಿ ನಡೆಸಿ ತನ್ನ ಕೆಲಸವನ್ನು ಪರೋಕ್ಷವಾಗಿ ಮಾಡಿ ಮುಗಿಸಿದೆಯಲ್ಲ ಇದಕ್ಕೆ ಏನು ಹೇಳುತ್ತಿರಾ? ಈ ಅಭಿಯಾನ ವಿದ್ಯಾರ್ಥಿಗಳಲ್ಲಿ ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಿದೆ. ಸರ್ವ ಜನಾಂಗದ ಶಾಂತಿಯ ಕ್ಷೇತ್ರವಾದ ಕರ್ನಾಟಕದಲ್ಲಿ ವೈಜ್ಞಾನಿಕ ಪ್ರಗತಿಪರ ಶಿಕ್ಷಣ ಪದ್ದತಿಗೆ ವಿರುದ್ಧವಾಗಿ ಪುರೋಹಿತಶಾಹಿ ಪದ್ದತಿಯನ್ನು ಪ್ರತಿಷ್ಠಾಪಿಸಲು ಹೋರಟಿರುವುದನ್ನು ನೋಡಿದರೆ ಏನೋ ಹುನ್ನಾರು ಮಾಡಿದಂತಿದೆ. ಶಿಕ್ಷಣ ಮೌಲ್ಯವನ್ನು ಕೇಸರಿಕರಣಗೊಳಿಸುವ ಹುನ್ನಾರು ನಡೆಸಿದೆ. ಶಾಲಾ ಕಾಲೇಜುಗಳಲ್ಲಿ ಭಗವದ್ಗೀತಾ ಪಠಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರುತ್ತದೆ. ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಕೆಲಸ ಮಾಡುವ ಎಬಿವಿಪಿ ಈ ವಿಷಯ ಕುರಿತು ಒಂದು ಹೇಳಿಕೆ ನೀಡುತ್ತಿಲ್ಲ ಏಕೆ? ವಿದ್ಯಾರ್ಥಿ ಸಂಘಟನೆಗಳು ಕೂಡ ಒಂದು ಪಕ್ಷದ ಚೇಲಾಗಳಂತೆ ವರ್ತಿಸುತ್ತಿರುವುದು ನೋಡಿದರೆ ತಾಳಕ್ಕೆ ತಕ್ಕಂತೆ ಕುಣಿಯುವ ಕೋತಿಗಳಾಗಿದ್ದಾರೆ.

ಎಸ್ಎಫ್ಐ ನಿಂದನೆ ಜಾತ್ಯಾತೀತ ತತ್ವಕ್ಕೆ ತಿಲಾಂಜಲಿ ನೀಡುವ ಯತ್ನ

J¸ïJ¥sïL ¸ÀAWÀl£ÉUÉÆAzÀÄ §»gÀAUÀ ¥ÀvÀæ JA§ ²¶ðPÉAiÉÆA¢UÉ ¥ÀæPÀlªÁzÀ ¯ÉÃR£À N¢ D±ÀÑAiÀÄð ªÀÄvÀÄÛ £ÉÆêÀÅ KPÉAzÀgÉ ¥ÀæeÁ¥Àæ¨sÀÄvÀé gÁµÀÖçzÀ°è C©üªÀåQÛ ¸ÁévÀAvÀæöå J£ÀÄߪÀÅ¢zÉ JA§ÄzÀ£ÀÄß ¸ÉßûvÀ ªÀÄgÉvÀAvÉ PÁt¸ÀÄvÀÛzÉ.
ಭಾರತ ದೇಶ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಬದ್ದವಾಗಿ ಒಪ್ಪಿಕೊಂಡಿದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮಂತ್ರವನ್ನು ಜಪಿಸುತ್ತಿರುವ ನಾವುಗಳು ಈ ತತ್ವಕ್ಕೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿರುವ ಶಂಕೆ ನಾಡಿನ ಜಾತ್ಯಾತೀತ ಮನಸ್ಕರನ್ನು ಕಾಡುತ್ತಿದೆ. ಭಾರತ ಸರ್ವ ಧರ್ಮಗಳ ತವರು ಸಾಮರಸ್ಯದ ನಾಡಿನಲ್ಲಿ ಒಂದು ಧರ್ಮಕ್ಕೆ ಸಂಬಂಧಿಸಿದ ವಸ್ತು ವಿಷಯಗಳನ್ನು ಭೋಧನೆ ಮಾಡುವುದೆಂದರೆ ಕೋಮು ದಳ್ಳುರಿಗೆ ಆಹ್ವಾನ ನೀಡಿದಂತೆ ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥ, ದೇಶದ ಸಂವಿಧಾನ ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವ ಮಹಾನ್ ಗ್ರಂಥ ಭಗವದ್ಗೀತೆ ಒಳ್ಳೆಯ ಅಂಶಗಳನ್ನು ಬೇರೆ ಯಾವುದೇ ಧರ್ಮಗ್ರಂಥಗಳಲ್ಲಿ ಕಾಣಲು ಸಾಧ್ಯವಿಲ್ಲ ಆಚಾರ ವಿಚಾರ ಜೀವನ ಶೈಲಿಗಳು ಗೀತೆಯಲ್ಲಿ ಅಡಕವಾಗಿವೆ ಎಂಬ ಅಂಶವನ್ನು ಪ್ರಸ್ಥಾಪಿಸಿದ್ದಾರೆ ಜಾತಿಯತೆ, ಮೂಡನಂಬಿಕೆ, ಮೇಲು ಕೀಳು ಉಚ್ಚ ನಿಚ ಬಡವ ಬಲ್ಲಿದ ಎಂಬ ಪದಗಳು ಯಾವ ಧರ್ಮದ ಆಚರಣೆಗಳು ಎಂಬುದನ್ನು ಕಣ್ಣಾಡಿಸಲಿ ಹಾಗಂತ ಎಲ್ಲಾ ಧರ್ಮಗಳು ಶ್ರೇಷ್ಠ ಎಂದು ಅಲ್ಲ. ಬುದ್ದನ ಪರಮ ತತ್ವವಾದ ಸತ್ಯ ಧರ್ಮಗಳನ್ನು ಅರಿತು ನಡೆಯುತ್ತಾನೋ ಅವನೇ ಜಾತ ಎಂದು ನಂಬಿ ನಡೆಯುವ ಬುದ್ದಾಭಿಮಾನಿಗಳ ಮನಸನ್ನು ನೋಯಿಸಿ ಬುದ್ದನನ್ನು ಹಿಂದೂ ಧರ್ಮದ ಹನ್ನೊಂದನೇ ಅವತಾರ ಪುರುಷ ಎಂದು ಪೂಜಿಸಿದ್ದು ನೀವು?  ಅಲ್ಲದೆ ಬುದ್ದ ಈ ನಾಡಿನ ಮೂಲ ನಿವಾಸಿ ಅವನ ತತ್ವ ಸಿದ್ದಾಂತಗಳನ್ನು ಒಪ್ಪಿಕೊಳ್ಳದ ಹೇಯ ಮನಸುಗಳು ಬೌದ್ಧ ಧರ್ಮವನ್ನೆ ಈ ನಾಡಿನಿಂದ ಅವಸಾನವಾಗಲು ಹಿಂದೂ ಧರ್ಮದ ಕೊಡುಗೆ ಇದೆ ಎಂಬುದನ್ನು ಮರೆತಂತೆ ಕಾಣಿಸುತ್ತದೆ.
ಅಲ್ಬರ್‍ಟ್ ಐನ್‌ಸ್ಟನ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರೆ ಭಗವದೀತಾ ಮಂತ್ರಗಳನ್ನು ದಿನಾಲೂ ಪಠಿಸುತ್ತಾರೆ  ಅಂಥವರೇ ಒಪ್ಪಿಕೊಂಡಿರುವಾಗ ನೀವೇಕೆ ವಿರೋಧಿಸುತ್ತಿರಿ ಎಂಬ ಮಾತು ಕೇಳಿ ಬರುತ್ತಿದೆ ಭಗವದ್ಗೀತೆಯನ್ನು ಓದುವವರಿಗೆ ಮತ್ತು ಅನುಸರಿಸುವವರಿಗೆ ಅದು ಖಾಸಗಿ ವಿಚಾರ ಅದನ್ನು ಅವರು ವೈಯಕ್ತಿಕವಾಗಿ ಅನುಸರಿಸಬಹುದು. ಭಗವದ್ಗೀತೆಯ ಕೇಲವು ಮಂತ್ರಗಳು ಬ್ರಾಹ್ಮಣರೆ ಶ್ರೆಷ್ಠರೆಂದು ಹೇಳುವ ಮೂಲಕ ತಾರತಮ್ಯದಿಂದ ಕೂಡಿರುವ ಚಾತುರ್ವರ್ಣ ಪದ್ದತಿಯನ್ನು ಪೋಷಿಸುತ್ತದೆ ಪಾಳೇಗಾರಿ ಮತ್ತು ಗುಲಾಮಗಿರಿ ಸಂಸ್ಕೃತಿಯನ್ನು ಸಮರ್ಥಿಸುತ್ತದೆ ರಾಜ್ಯ ಸರ್ಕಾರ ಭಗವದ್ಗೀತೆಯನ್ನು ಕಂಠಪಾಠ ಮಾಡಿಸುವುದರ ಮೂಲಕ ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸರ್ಕಾರವೇ ಬದ್ಧವಾಗಿ ನಿಂತಿದೆ. ನಿಮಗೆ ಬದ್ಧತೆ ಎನ್ನುವುದಿದ್ದರೆ ಈ ಸಮಾಜದಲ್ಲಿ ಜ್ವಲಂತವಾಗಿ ಕಾಡುತ್ತಿರುವ ಜಾತಿಯನ್ನು ಕಿತ್ತು ಹಾಕುತ್ತೇವೆ ಎಂದು ಪಣ ತೋಡಿ ಅದನ್ನು ಬುಡ ಸಮೇತ ಕಿತ್ತು ಹಾಕುವವರೆಗೂ ವಿಶ್ರಮಿಸಲಾರೆವು ಎಂದು ಅಭಿಯಾನ ಮಾಡಿ ಏಕೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ? ಮಠ ಮಂದಿರಗಳಿಗೆ ಹಣ ನೀಡುವ ಸರ್ಕಾರಗಳು ಜನರ ಶ್ರೇಯೋಭಿವೃದ್ಧಿಗಾಗಿ ಖರ್ಚು ಮಾಡಬಹುದಲ್ಲ ಅಥವ ಈ ಮಠಗಳ ಮೂಲಕವೇ ಭಗವದ್ಗೀತೆ ಪಠಣ ಮಾಡಿಸಬಹುದಲ್ಲ ಸರ್ಕಾರಿ ಶಾಲೆಗಳೇ ಬೇಕೆ? ಶಾಲೆ ಕಾಲೇಜುಗಳು ಯಾವುದೇ ಧರ್ಮದ ಪ್ರಚಾರ ಕೇಂದ್ರಗಳಲ್ಲ ಧರ್ಮದ ಪ್ರಚಾರಕ್ಕಾಗಿ ಶಾಲೆಗಳನ್ನು ಕಟ್ಟಲಾಗಿಲ್ಲ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಪಿಸುವ ಸೌಹಾರ್ಧ ಕೇಂದ್ರಗಳು ಅಂಥಹ ಕೇಂದ್ರಗಳಲಿ ಧರ್ಮದ ಪ್ರಚಾರ ಕೈಗೊಳ್ಳಲು ಸನ್ನದ್ಧವಾಗುತಿರುವಂತಿದೆ. ಸರ್ಕಾರ ಶಿರಸಿಯ ಸೋಂಧ ಸ್ವರ್ಣವಲ್ಲಿ ಮಠಕ್ಕೆ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಂತೆ ಇನ್ನಿತರ ಧರ್ಮ ಗ್ರಂಥಗಳಾದ ಕುರಾನ್ ಬೈಬಲ್ ತ್ರಿಪಿಟಕ ಮತ್ತು ಜೈನ ಧರ್ಮಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಪಠಿಸಲು ಅವಕಾಶ ಮಾಡಿಕೊಡಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಇಂದಿನ ವ್ಯವಸ್ಥೆಯ ಬಗ್ಗೆ ಯೋಚಿಸಿ ಪರಿಹಾರ ದೊರಕಿಸಿ ಕೊಡಬೇಕೆ ವಿನಹ ಧರ್ಮದ ಹೆಸರಿನಲ್ಲಿ ಮುಗ್ದ ಮಕ್ಕಳನ್ನು ಪ್ರಚೋದಿಸುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ.
ವೈಜ್ಞಾನಿಕ, ಪ್ರಗತಿಪರ, ಜಾತ್ಯಾತೀತ ಮತ್ತು ಕೋಮು ಸೌಹಾರ್ಧತೆಯ ಬಗ್ಗೆ ಅರಿವು ಮೂಡಿಸುವ ಬದಲು ಧರ್ಮದ ಅಂಧಕಾರಕ್ಕೆ ತಳ್ಳುವ ಮತ್ತು ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವ ಮತ್ತು ಬೇರೆ ಧರ್ಮಗಳ ಬಗ್ಗೆ ತಾತ್ಸಾರ ವಾತಾವರಣ ಸೃಷ್ಠಿಸಲು ಮಠಾಧೀಶರ ಪ್ರಾಯೋಜಕತ್ವದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಿತೂರಿ ನಡೆಸಿ ತನ್ನ ಕೆಲಸವನ್ನು ಪರೋಕ್ಷವಾಗಿ ಮಾಡಿ ಮುಗಿಸಿದೆಯಲ್ಲ ಇದಕ್ಕೆ ಏನು ಹೇಳುತ್ತಿರಾ?  ಈ ಅಭಿಯಾನ ವಿದ್ಯಾರ್ಥಿಗಳಲ್ಲಿ ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಿದೆ. ಸರ್ವ ಜನಾಂಗದ ಶಾಂತಿಯ ಕ್ಷೇತ್ರವಾದ ಕರ್ನಾಟಕದಲ್ಲಿ ವೈಜ್ಞಾನಿಕ ಪ್ರಗತಿಪರ ಶಿಕ್ಷಣ ಪದ್ದತಿಗೆ ವಿರುದ್ಧವಾಗಿ ಪುರೋಹಿತಶಾಹಿ ಪದ್ದತಿಯನ್ನು ಪ್ರತಿಷ್ಠಾಪಿಸಲು ಹೋರಟಿರುವುದನ್ನು ನೋಡಿದರೆ ಏನೋ ಹುನ್ನಾರು ಮಾಡಿದಂತಿದೆ. ಶಿಕ್ಷಣ ಮೌಲ್ಯವನ್ನು ಕೇಸರಿಕರಣಗೊಳಿಸುವ ಹುನ್ನಾರು ನಡೆಸಿದೆ. ಶಾಲಾ ಕಾಲೇಜುಗಳಲ್ಲಿ ಭಗವದ್ಗೀತಾ ಪಠಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರುತ್ತದೆ.

ಶಿಕ್ಷಣದಲ್ಲಿ ಕೇಸರಿಕರಣ ವಿದ್ಯಾರ್ಥಿಗಳಿಗೆ ಮಂತ್ರ ಪಠಣ ....

ಶಾಲೆ ಕಾಲೇಜುಗಳು ಯಾವುದೇ ಧರ್ಮದ ಪ್ರಚಾರ ಕೇಂದ್ರಗಳಲ್ಲ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಪಿಸುವ ಸೌಹಾರ್ಧ ಕೇಂದ್ರಗಳು. ನೈತಿಕ ಮೌಲ್ಯಗಳಿಗೆ ಗೌರವ ಪರಸ್ಪರರಿಗೆ ಸಹಕಾರ ಸಾರಯುತ ಸಮಾಜದ ನಿರ್ಮಾಣ ನೀತಿವಂತ ಯುವಜನತೆ ನಿರ್ಮಾಣ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಆದರೆ ಈ ಬುನಾದಿಯಲ್ಲಿಯೇ ಕೇಸರಿಕರಣದ ಅಜೆಂಡಾ ಗಟ್ಟಿಗೊಳಿಸಲು ಹೊರಟಿದ್ದಾರೆಯೇ? ಯಾವುದೇ ಒಂದು ಸುತ್ತೋಲೆ ಜಾರಿಗೆ ತರಬೇಕಾದರೆ ಸರ್ಕಾರ ಕೂಲಂಕುಶವಾಗಿ ಯೋಚಿಸಬೇಕು, ಮತ್ತು ಜಾರಿಗೆ ತರುವ ಸುತ್ತೋಲೆ ಜನರಿಗೆ ಯಾವ ರೀತಿ ಪರಿಣಾಮ ಬಿರಬಹುದು ಸಮಾಜದ ಹಿತ ಅಡಗಿರುವ ಮತ್ತು ಯಾರ ಭಾವನೆಗಳಿಗೂ ತೊಂದರೆಯಾಗದ ಹಾಗೇ ಸರ್ಕಾರ ಆದೇಶಗಳನ್ನು ಜಾರಿಗೆ ತರಬೇಕು ಇದು ಅದರ ಕರ್ತವ್ಯ. ಭಾರತ ದೇಶ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಬದ್ದವಾಗಿ ಒಪ್ಪಿಕೊಂಡೊದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ ವಿವಿಧತೆಯಲ್ಲಿ ಏಕತೆ ಎನ್ನುವ ಮಂತ್ರವೇ ದೇಶವನ್ನು ಒಟ್ಟಾಗಿ ಹಿಡಿದಿಟ್ಟುಕೊಂಡಿದೆ. ಈ ಉದಾತ್ ತತ್ವಕ್ಕೆ ಧಕ್ಕೆಯಾಗುವಂತೆ ಬಿಜೆಪಿ ಸರ್ಕಾರ ಶಿರಸಿಯ ಸೋಂಧ ಸ್ವರ್ಣವಲ್ಲಿ ಮಠಕ್ಕೆ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸಂವಿಧಾನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ.
ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ಪ್ರಗತಿಪರ, ಜಾತ್ಯಾತೀತ ಮತ್ತು ದೇಶದ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಬದಲು ಧರ್ಮದ ಅಂಧಕಾರಕ್ಕೆ ತಳ್ಳುವ ಮತ್ತು ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವ ಮತ್ತು ಬೇರೆ ಧರ್ಮಗಳ ಬಗ್ಗೆ ತಾತ್ಸಾರ ವಾತಾವರಣ ಸೃಷ್ಠಿಸಲು ಮಠಾಧೀಶರ ಪ್ರಾಯೋಜಕತ್ವದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಿತೂರಿ ನಡೆಸಿ ತನ್ನ ಕೆಲಸವನ್ನು ಪರೋಕ್ಷವಾಗಿ ಮಾಡಿ ಮುಗಿಸಿದೆ. ಈ ಅಭಿಯಾನಕ್ಕೆ ೪೦ಕೋಟಿ ರೂಪಾಯಿ ಬಿಡುಗಡೆ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಭಗವದ್ಗೀತೆ ಬೋಧಿಸುವುದು ತಪ್ಪಲ್ಲ ಧಾರ್ಮಿಕ ಗ್ರಂಥಗಳು ಎಂದ ಕೂಡಲೆ ಪ್ರಶ್ನಾತೀತ ಎಂದು ಅರ್ಥಮಾಡಿಕೊಳ್ಳಬೇಕಾಗಿಲ್ಲ ಭಗವದ್ಗೀತೆಯು ಅನಿಷ್ಠ ಜಾತಿ ವ್ಯವಸ್ಥೆಯನ್ನು ಸಮರ್ಥಿಸುತ್ತದೆ. ಮೌಡ್ಯತೆ ಪುನರ್‌ಜನ್ಮ ಪಾಪ ಪುಣ್ಯಗಳನ್ನು ಬೋಧಿಸುವ ಈ ಪಠಣ ಅಭಿಯಾನಕ್ಕೆ ೪೦ಕೋಟಿ ಬೇಕೆ?

ಇದನ್ನು ಯಾಕೆ ವಿರೋಧಿಸಬೇಕು

ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥ ಇರಬಹುದು ಆದರೆ ಆ ಧರ್ಮದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಎಲ್ಲ ಧರ್ಮದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಠಿಸಬೇಕು ಎಂಬ ಸುತ್ತೋಲೆ ಒಂದು ಕಡೆಯಾದರೆ ಇದರ ಆಳಕ್ಕೆ ಇಳಿದಾಗ ಭಗವದ್ಗೀತೆ ಪಾಳೇಗಾರಿ ಮತ್ತು ಗುಲಾಮಗಿರಿ ಸಂಸ್ಕೃತಿಯನ್ನು ಸಮರ್ಥಿಸುತ್ತದೆ. ಭಗವದ್ಗೀತೆಯ ೧೪ಮತ್ತು ೧೫ನೇ ಅಧ್ಯಾಯಗಳು ಬ್ರಾಹ್ಮಣರೆ ಶ್ರೆಷ್ಠರೆಂದು ಹೇಳುವ ಮೂಲಕ ತಾರತಮ್ಯದಿಂದ ಕೂಡಿರುವ ಚಾತುರ್ವರ್ಣ ಪದ್ದತಿಯನ್ನು ಪೋಷಿಸುತ್ತದೆ. ಹೀಗೆ ಭಗವದ್ಗೀತೆ ಕುರಿತು ಟೀಕೆಗಳಿವೆ ಭಗವದ್ಗೀತೆಯನ್ನು ಓದುವವರಿಗೆ ಮತ್ತು ಅನುಸರಿಸುವವರಿಗೆ ಅದು ಖಾಸಗಿ ವಿಚಾರ ಅದನ್ನು ಅವರು ವೈಯಕ್ತಿಕವಾಗಿ ಅನುಸರಿಸಬಹುದು ಬದಲಾಗಿ ರಾಜ್ಯ ಸರ್ಕಾರ ಭಗವದ್ಗೀತೆಯನ್ನು ಕಂಠಪಾಠ ಮಾಡಿಸುವುದಕ್ಕೆ ಶಾಲೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಯಾಕೆ?

ಈ ಭಗವದ್ಗೀತೆ ಕಂಠಪಾಠ ಅಭಿಯಾನ ವಿದ್ಯಾರ್ಥಿಗಳಲ್ಲಿ ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಿದೆ. ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ವೈಜ್ಞಾನಿಕ ಪ್ರಗತಿಪರ ಶಿಕ್ಷಣ ಪದ್ದತಿಗೆ ವಿರುದ್ಧವಾಗಿ ಪುರೋಹಿತಶಾಹಿ ಪದ್ದತಿಯನ್ನು ಪ್ರತಿಷ್ಠಾಪಿಸಲು ಹೋರಟಿರುವುದನ್ನು ನೋಡಿದರೆ ಏನೋ ಹುನ್ನಾರು ಮಾಡಿದಂತಿದೆ.ಶಿಕ್ಷಣ ಮೌಲ್ಯವನ್ನು ಕೇಸರಿಕರಣಗೊಳಿಸುವ ಹುನ್ನಾರು ನಡೆಸಿದೆ. ಶಾಲಾ ಕಾಲೇಜುಗಳಲ್ಲಿ ಭಗವದ್ಗೀತಾ ಪಠಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ಧ ಹಾಳು ಮಾಡಲು ಹೊರಟಿದೆ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಹಾಗೂ ಇಂದಿನ ವ್ಯವಸ್ಥೆಯ ಬಗ್ಗೆ ಯೋಚಿಸಿ ಪರಿಹಾರ ದೊರಕಿಸಿ ಕೊಡುವ ಬದಲು ಧರ್ಮದ ಹೆಸರಿನಲ್ಲಿ ಮುಗ್ದ ಮಕ್ಕಳನ್ನು ಪ್ರಚೋದಿಸುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೊರಿಸುತ್ತದೆ. ಭಾರತ ಸಂವಿಧಾನದಲ್ಲಿ ಧರ್ಮ ನಿರಪೇಕ್ಷೆತೆಯ ಪ್ರತಿನಿದಿಸುತ್ತಿದ್ದೆವೆಂದು ತಿಳಿದಿರುವ ಸಂಘದ ಬಳಗವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಘರ್ಷಣೆ ಹಿಂಸಾಚಾರಕ್ಕಿಳಿಯುವುದು ದೇಶಕ್ಕೆ ಒಳ್ಳೆಯದಲ್ಲ ಜನರ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಅವರಿಗೆ ಬೇಕಾದ ಧರ್ಮವನ್ನು ಅನುಸರಿಸಲು ಸ್ವತಂತ್ರರು ಅವರ ಧಾರ್ಮಿಕ ವಿಷಯಗಳಲ್ಲಿ ಜನತೆ ಕೆರಳದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ಅದಕ್ಕಾಗಿ, ನಮ್ಮ ಸರ್ಕಾರಗಳು ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸರಿಸದೆ. ಧರ್ಮದೊಳಗಿನ ಅಸಮಾನತೆಗಳನ್ನು ತೊಡೆದು ಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸುವತ್ತ ಗಮನಹರಿಸಬೇಕು ಧಾರ್ಮಿಕ ನಂಬಿಕೆಗಳನ್ನು ಬಲವಂತವಾಗಿ  ಹೆರುವ ಬದಲು  ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸಲು ಮತ್ತು ಪೂಜಿಸಲು ಅವನಿಗೆ ಸಂಪೂರ್ಣ ಅಧಿಕಾರವಿದೆ.ಸಂವಿಧಾನವು ಇದನ್ನೆ ಹೇಳುತ್ತದೆ.
ಆಳುವ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಅಜೆಂಡಾವನ್ನು ಒತ್ತಾಯವಾಗಿ ಹೆರುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಹೋಮ ಹವನ ವೈಯಕ್ತಿಕ ವಿಷಯಕ್ಕೆ ಸಂಬಂಧಪಟ್ಟ ಮತ್ತು ನಂಬಿಕೆಗಳ ಆಧಾರದ ಮೇಲೆ ನಿರ್ಧರಿತವಾಗುವ ವಿಷಯಗಳು ಆದರೆ ಸರ್ಕಾರ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಬೋಧಿಸಲು ಹೋರಟಿರುವುದು ನೋಡಿದರೆ ಕೇವಲ ಹಿಂದೂಗಳೆ ಇದ್ದೇವೆ ಎನ್ನುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ.
ದೇಶದಲ್ಲಿ ಜಾತಿಯೆಂಬ ಭೂತ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿ ಆಧುನಿಕ ಸಮಾಜದಲ್ಲಿಯು ಕೂಡ ತನ್ನ ಕಬಂಧ ಬಾಹು ವಿಸ್ತರಿಸಿಕೊಂಡು ಹೊಸ ರೂಪ ಪಡೆಯುತ್ತಿದೆ ಇದರ ವಿರುದ್ಧ ಜಾಗೃತಿ ಅಭಿಯಾನ ಯಾಕೆ ಹಮ್ಮಿಕೊಳ್ಳುತ್ತಿಲ್ಲ? ಇದು ಸರ್ಕಾರಗಳಿಗೆ ಕಾಣಿಸುವುದಿಲ್ಲವೇ ಕೇವಲ ಭಗವದ್ಗೀತೆ ಮಾತ್ರ ಬೋಧಿಸಬೇಕು ಎಂಬ ಚಪಲ ಇವರಲ್ಲೇಕೆ ಬಂತು. ಉತ್ತಮ ಶಿಕ್ಷಣವನ್ನು ನೀಡಿ ವೈಜ್ಞಾನಿಕ ತಳಹದಿಯ ಮೇಲೆ ಕರೆದೊಯ್ಯಬೇಕಾದ ಯುವ ಜನಾಂಗವನ್ನು  ಧಾರ್ಮಿಕ ಮಂತ್ರಗಳನ್ನು ಪಠಣ ಮಾಡಿಸುವುದರ ಮೂಲಕ ಅಂಧಕಾರದ ಸ್ಥಿತಿಯಲ್ಲಿ ಇರುವಂತೆ ಮಾಡುತ್ತಿಲ್ಲವೇ? ಧರ್ಮ ಮತ್ತು ವಿಜ್ಞಾನಕ್ಕೆ ತಾತ್ವಿಕ ಸಂಬಂಧ ಇದ್ದರು  ಕೂಡ ಭಗವದ್ಗೀತೆ ಎಂದು ವಿಜ್ಞಾನವಾಗಲಾರದು ಅದು ಮೂಡನಂಬಿಕೆಯ ಮತ್ತು ಅನೇಕ ಕಟ್ಟುಪಾಡುಗಳನ್ನು ವಿಧಿಸುವ ಗಡಿರೇಖೆಯೇ ಹೊರತು ಅದರಿಂದ ಕಲಿತಕ್ಕಂತ ವಿಷಯ ಮತ್ತು ಇಂದಿನ ಸಮಾಜಕ್ಕೆ ಅದರ ಉಪಯೋಗವೇನು ಇಲ್ಲ ಅದು ತಂತ್ರಜ್ಞಾನವು ಅಲ್ಲ ಶಿಕ್ಷಣದಲ್ಲಿ ಭಗವದ್ಗೀತಾ ಬೋಧನೆ ಮಾಡುವುದರಿಂದ ಧಾರ್ಮಿಕ ಮತ್ತು ಸಾಮಾಜಿಕ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಮೊದಲೇ ಇಲ್ಲ?
ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆಯಾಗಬೇಕು ವಿನಹ ಮಂತ್ರ ಪಠಣ ಅಲ್ಲ ಸ್ವಾರ್ಥ ಮತ್ತು ಆ ಕ್ಷಣದ ಲಾಭವನ್ನಷ್ಟೇ ಗುರಿಯಾಗಿಟ್ಟುಕೊಂಡು ಸಾಗುವ ನಮ್ಮ ರಾಜಕೀಯ ಪಕ್ಷಗಳಿಂದ ಆದರ್ಶದ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ?
ರಾಜ್ಯದ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿದ್ದು ಶಿಕ್ಷಕರು ಪಠ್ಯ ಪುಸ್ತಕಗಳು ಗ್ರಂಥಾಲಯ ಕೊಠಡಿ ಕುಡಿಯುವ ನೀರು ಶೌಚಾಲಯ ಆಟದ ಮೈದಾನಗಳಿಲ್ಲದೆ ವಿದ್ಯಾರ್ಥಿಗಳು  ಕ್ರಿಯಾಶಿಲವಾಗಿ ಬೇಳವಣಿಗೆಯಾಗುತ್ತಿಲ್ಲ ವಿಪರಿತ ಶುಲ್ಕ ಏರಿಕೆ ಡೋನೇಶನ್ ಹಾವಳಿ ಶಿಕ್ಷಣದ ವ್ಯಾಪಾರಿಕರಣದಂತಹ ಸಮಸ್ಯೆಗಳು ಉಲ್ಬಣಗೊಂಡಿರುವಾಗ ಇವುಗಳನ್ನು ಬಗೆಹರಿಸಲು ಕಿಂಚಿತ್ತೂ ಗಮನ ನಿಡದ ರಾಜ್ಯ ಬಿಜೆಪಿ ಸರ್ಕಾರ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಮಾಡಲು ಅಭಿಯಾನಕ್ಕೆ ಅವಕಾಶ ಕಲ್ಪಿಸಿಕೊಡುವ ಮೂಲಕ ಕ್ಷೇತ್ರವನ್ನು ಸಂಪೂರ್ಣವಾಗಿ ಕೋಮುವಾದಿಕರಣಗೊಳಿಸಲು ಹೊರಟಿದೆಯಲ್ಲವೇ?

ಪ್ರಜಾಪ್ರಭುತ್ವದ ತಳಹದಿ ದುರ್ಭಲಗೊಳಿಸುವ ನಿರ್ಣಯ

ರಾಜಕೀಯ ಮತ್ತು ಧರ್ಮ ಮೊದಲಿನಂದ ನಡೆದು ಬಂದ ಪರಂಪರೆ ಅಧಿಕಾರದಲ್ಲಿದ್ದವರು ಅಧಿಕಾರಕ್ಕಾಗಿ ಯಾರು ಕಾಲನ್ನಾದರೂ  ಹಿಡಿಯುತ್ತಾರೆ   ಸಿದ್ದರಿರುತ್ತಾರೆ ಎಂಬುವುದಕ್ಕೆ ಹಲವು ಉದಾ ಹಣೆಗಳನ್ನು ಕೊಡಬಹುದಾಗಿದೆ. ಕಾಲು ಹಿಡಿದ ಮಾತ್ರಕ್ಕೆ ಆಶೀರ್ವ ದಿಸಬೇಕೆ ವಿನಹ ಬೆಂಬಲಕ್ಕೆ ನಿಲ್ಲಬೆಕೆಂದಿಲ್ಲ ಅದು ಅವರ ಕರ್ತವ್ಯವು ಅಲ್ಲ. ಮತ್ತು ಧರ್ಮ ಮೊದಲಿನಂದ ನಡೆದು ಬಂದ ಪರಂಪರೆ ಅಧಿಕಾ ರದಲ್ಲಿದ್ದವರು ಅಧಿಕಾರಕ್ಕಾಗಿ ಯಾರು ಕಾಲನ್ನಾದರೂ  ಹಡಿಯುತ್ತಾರೆ.  ಸಿದ್ದರಿರುತ್ತಾರೆ ಎಂಬುವುದಕ್ಕೆ ಹಲವು ಉದಾಹಣೆಗಳನ್ನು ಕೊಡಬಹುದಾಗಿದೆ. ಕಾಲು ಹಿಡಿದ ಮಾತ್ರಕ್ಕೆ ಆಶೀರ್ವದಿಸಬೇಕೆ ವಿನಹ ಬೆಂಬಲಕ್ಕೆ ನಿಲ್ಲಬೆಕೆಂದಿಲ್ಲ ಅದು ಅವರ ಕರ್ತವ್ಯವು ಅಲ್ಲ. iiವುದೇ ಧರ್ಮಗುರುಗಳು ಒಂದು ಜಾತಿ ಸಮುದಾಯಕ್ಕೆ ಸಿಮೀತವಾಗದೆ ಇಡಿ ಮಾನವ ಕುಲಕೋಟೆಗೆ ಗುರುಗಳಾಗಿ ಸೇವೆ ಮಾಡುತ್ತಿದ್ದರೆ ಅವರನ್ನು ಸಮಾಜ ಗೌರವಿಸುತ್ತದೆ ಆಧರಿಸುತ್ತದೆ ಸತ್ಕರಿಸುತ್ತದೆ. ಆದರೆ ತಮ್ಮ ಮೂಲ ಕರ್ತವ್ಯವನ್ನು ಮರೆತ ಕೆಲವು ಮಠಾಧೀಶರು ಕೇವಲ ಪ್ರಚಾರಕ್ಕಾಗಿ ಮಿಂಚುತ್ತಿದ್ದಾರೆ. ರಾಜಕೀಯ ನಾಯಕರನ್ನು ಕಟ್ಟಿಕೊಂಡು ತಮ್ಮ ಮಠಗಳಿಗೆ ಸರ್ಕಾರದಿಂದ ಅನುದಾನ ಪಡೆದುಕೊಂಡು ಐಷಾರಮಿ ಜೀವನ ನಡೆಸುತ್ತಿದ್ದಾರೆ. ಮಠಾಧೀಶರಿಗೆ ಈ ಭೋಗಪೂರಿತ ಸನ್ಯಾಸ ಬೇಕೆ? ಭ್ರಷ್ಟಾಚಾರ ರಾಜಕೀಯ ನಾಯಕರು ಆಶೀರ್ವಾದದ ನೆಪದಲ್ಲಿ ತಮ್ಮ ಪರ ನಿಲ್ಲುವಂತೆ ಈ ಸ್ವಾಮಿಗಳನ್ನು ಕೇಳಿ ಕೊಳ್ಳುತ್ತಾರೆಯೇ ಅಥವಾ ಇವರೊಂದಿಗೆ ಕಾಣಿಸಿಕೊಳ್ಳಬೇಕೆಂಬ ಚಪಲವಿರುತ್ತದೆಯೇ ಎನ್ನುವುದು ತಾರ್ಕಿಕವಾದ ವಿಷಯವಾಗಿದೆ.
ಇತ್ತೀಚಿಗೆ ಸುತ್ತೂರಿನಲ್ಲಿ ನಡೆದ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದ ಕೆಲವು ಮಠಾಧೀಶರು ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನೆ ದುರ್ಬಲಗೊಳಿಸುವ ನಿಲುವುಗಳಿಗೆ ಕೈಹಾಕಿದ್ದಾರೆ. ನಾಡು ಕಂಡ ಅತ್ಯಂತ ಭ್ರಷ್ಟ ಸ್ವಜನಪಕ್ಷಪಾತ ಮುಖ್ಯಮಂತ್ರಿ ಯಡಿಯುರಪ್ಪ ಸ್ವತಃ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದಲ್ಲದೆ, ಆತ್ಮಸಾಕ್ಷಿಯಾಗಿ ಭೂಹಗರಣವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ. ಹಿಂದಿನ ಎಲ್ಲಾ ಸರ್ಕಾರಗಳು ಮಾಡಿದ್ದೆ ನಾನು ಮಾಡಿದ್ದೇನೆ ಎಂದು ಪ್ರಜ್ಞಾವಂತ ನಾಗರಿಕರನ್ನು ನಾಚಿಸುವಂತೆ ಮಾತನಾಡಿದ್ದಾರೆ. ಇದೆಲ್ಲವನ್ನು ಮರೆತು ಹಗರಣ ವಿರೋಧಿಸಬೇಕಾದ ಧರ್ಮಗುರುಗಳು, ಮುಖ್ಯಮಂತ್ರಿ ಪರ ನಿರ್ಣಯ ಕೈಗೊಂಡು  ಪರೋಕ್ಷವಾಗಿ ಭ್ರಷ್ಟಾಚಾರ ಬೆಂಬಲಿಸಿದ್ದು ನೋಡಿದರೆ ಮಠಾಧೀಶರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸಂಶಯ ಕಾಡದೆ ಇರಲಾರದು.
ಆಧುನಿಕ ಭಾರತದ ಅಭಿವೃದ್ಧಿಗೆ ಮಾರಕವಾಗಿ ಕಾಡುತ್ತಿರುವ ಮೂಡನಂಬಿಕೆ, ಜಾತೀಯತೆ ಸ್ತ್ರೀ ಶೋಷಣೆ, ಬಡತನ, ನಿರುದ್ಯೋಗ, ಅಂಧಾನುಕರುಣೆ, ಸಾಮಾಜಿಕ ಬಹಿಷ್ಕಾರದಂಥಹ ಪಿಡುಗನ್ನು ಕಿತ್ತು ಹಾಕಲು ಇಂಥಹ ಮಹಾಸಮಾವೇಶಗಳಲ್ಲಿ ಸ್ವಾಮಿಗಳು ಏಕೆ ನಿರ್ಣಯ ಕೈಗೊಳ್ಳಬಾರದು? ಇವೆಲ್ಲ ಸಮಸ್ಯೆಗಳಿಗಿಂತ ಮುಖ್ಯಮಂತ್ರಿಯ ಅಧಿಕಾರ ಉಳಿಸುವ ನಿರ್ಣಯವೇ ಮುಖ್ಯವಾಯಿತೆ?
ಸಮಾಜದ ಸರ್ವತೋಮುಖ ಏಳಿಗೆಯನ್ನು ಬಯಸುವವರು ಮಠಾಧೀಶರು, ಕೇವಲ ಲಿಂಗಾಯಿತ ಸಮಾಜವನ್ನು ಗುತ್ತಿಗೆ ಪಡೆದವರಂತೆ ಒಂದು ಪಕ್ಷದ ವ್ಯಕ್ತಿಯ ಪರ ನಿರ್ಣಯ ಕೈಗೊಂಡಿರುವುದು ಪ್ರಜಾಪ್ರಭುತ್ವ ವಿರೋಧಿಯಲ್ಲದೆ ಮತ್ತೇನು? ಸಂವಿಧಾನ ವಿರೋಧಿಯಲ್ಲವೆ? ಜಾತ್ಯಾತೀತ ಭಾರತದಲ್ಲಿ ಜಾತಿಯ ವಿಷಬೀಜ ಬಿತ್ತಲು ಹೊರಟಿರುವ ಈ ಮಠಾಧೀಶರು ಭಾವೈಕ್ಯತೆಗೆ ಭಂಗ ಉಂಟು ಮಾಡುತ್ತಿಲ್ಲವೇ? ಸಮಾಜಕ್ಕೆ ಸಾಮರಸ್ಯದ, ಕೋಮು ಸೌಹಾರ್ದತೆಯ ಬಿಜ ಬಿತ್ತಬೇಕಾದ ಇವರು ಜಾತಿಯ ಸಮಾವೇಶಗಳನ್ನು ಮಾಡಿ ಸಂಕುಚಿತ ಮನೋಭಾವನೆಗೆ ತಳ್ಳುತ್ತಿಲ್ಲವೇ? ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಇವರಿಂದ ನಿರೀಕ್ಷಿಸಬಹುದು. ಜವಬ್ದಾರಿಯುತ ಸ್ಥಾನದಲ್ಲಿದ್ದವರೆ ಜಾತಿ ಸಮಾವೇಶಗಳಿಗೆ ಅಂಟಿಕೊಂಡರೆ ಭವ್ಯ ಭಾರತದ ಯುವ ಪೀಳಿಗೆ ಅದನ್ನು ಪೋಷಿಸುತ್ತದೆ ಅದೇ ಆದರ್ಶ ಮಾರ್ಗವಾಗಿ ಕಾಣಿಸುತ್ತದೆ. ಈಗಾಗಲೇ ಹಲವು ಸಮುದಾಯದ ಆದರ್ಶವಾದಿಗಳ ಜಯಂತಿಯ ಹೆಸರಿನಲ್ಲಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ರಾಜಕೀಯ ಫಲ ನೀಡಿದರೂ ಇದು ದೊಡ್ಡ ಸಮುದಾಯಗಳಿಗೆ ಸಿಮೀತವಾಗಿವೆ ಹೊರತು ಸಣ್ಣ ಸಮುದಾಯದಲ್ಲಿ ಇದ್ದುಕೊಂಡು ತೆರೆಮೆರೆಯಲ್ಲಿ ಸಮಾಜ ಸೇವೆ ಮಾಡಿದವರು ಅದೆಷ್ಟು ಜನದ್ದಾದ್ದರೋ ಅವರನ್ನು ಗುರಿತಿಸಬೇಕು. ಆದರೆ ಕೇವಲ ರಾಜ್ಯದಲ್ಲಿ ವೋಟ್ ಬ್ಯಾಂಕ್ ಹೆಚ್ಚು ಇದ್ದವರಿಗೆ ಪ್ರಾತಿನಿಧ್ಯ ನೀಡುತ್ತಿವೆ.
ಸಂವಿಧಾನದ ತತ್ವಗಳಿಗೆ ಬದ್ದನಾಗಿ ಆಡಳಿತ ನಡೆಸುತ್ತೇನೆ ಎಂದು ಪ್ರಮಾಣ ಮಾಡಿದ ಮುಖ್ಯಮಂತ್ರಿ, ಮೊದಲಿನಿಂದಲು ವಿರುದ್ಧವಾಗಿಯೇ ನಡೆದುಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡುವ ಪೂರ್ವದಲ್ಲಿ ವಿಧಾನ ಸೌಧದಲ್ಲಿ ಹೋಮ, ಹವನ, ಹಿಂದೂ ಧರ್ಮದ ವಿಧಿವಿಧಾನ ಮಾಡುವುದರ ಮೂಲಕ ಜಾತ್ಯಾತೀತ ತತ್ವಕ್ಕೆ ತಿಲಾಂಜಲಿ ಇಟ್ಟರು. ಸಂವಿಧಾನದ ಆಶಯಗಳಲ್ಲಿ ನಡೆಯುತ್ತೇನೆ ಎಂದು ವಿರೋಧಿ ನೀತಿ ಅನುಸರಿಸುತ್ತ ಬಂದರು. ಸೂತೂರಿನಲ್ಲಿ ವಿರಶೈವ ಮಹಾಧೀವೇಶನದಲ್ಲಿ ಮಠಾಧೀಶರ ಮಾರ್ಗದರ್ಶನದಂತೆ ನಡೆಯುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ ಹಾಗಾದರೆ ಸಾರ್ವತ್ರಿಕ ಚುನಾವಣಿಯಾದರೂ ಯಾಕೆಬೇಕು? ಅವರ ಮಾರ್ಗದರ್ಶನದಂತೆ ಅವರ ಸೇವೆ ಮಾಡುತ್ತ ಮಠದಲ್ಲಿ ಮರಿ ಸ್ವಾಮಿಯಾಗಿ ಕುಳಿತುಕೊಳ್ಳಬಹುದಲ್ಲವೆ?
ಅನೀತಿ ಕೆಲಸ ಮಾಡಿದಾಗ ಅವರ ಕಿವಿ ಹಿಂಡಬೇಕಾದ ಕರ್ತವ್ಯ ಧರ್ಮಗುರುಗಳದು, ತಾವು ಮಾಡಬೇಕಾದ ಕೆಲಸವನ್ನು ಬಿಟ್ಟು ಭ್ರಷ್ಟಾಚಾರ ಹೊತ್ತ ಮುಖ್ಯಮಂತ್ರಿಯನ್ನು ಬೆಂಬಲಿಸಿದ್ದು ನೋಡಿದರೆ ನಡೆದಾಡುವ ದೇವರೆ ಎಡವಿ ಬಿದ್ದಾಗ ಉಳಿದವರು ಏನು ಮಾಡಲು ಸಾಧ್ಯ? ಮೇಲ್ಜಾತಿಯ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಹಿಂದುತ್ವ, ಜಾತಿಗಾಗಿ ಅಧಿಕಾರ ಹಾಗೂ ಅಧಿಕಾರಕ್ಕಾಗಿ ಜಾತಿ ಎಂಬ ಅಪಾಯಕಾರಿ ವಾತಾವರಣ ಸೃಷ್ಟಿಸುವ ಕೆಟ್ಟ ಪ್ರಯತ್ನದಲ್ಲಿ ನಿರತವಾಗಿದೆಯೇ ಎನ್ನುವ ಆತಂಕ ಕಾಡುತ್ತಿದೆ. ಇಂತಹ ಪ್ರಯತ್ನಕ್ಕೆ ಕೈಹಾಕದೆ ಸರ್ವಜನ ಸುಖಿನೊ ಭವಂತು ಮಂತ್ರಕ್ಕೆ ಹೆಚ್ಚಿನ ಒತ್ತು ನೀಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ತತ್ವದ ಆಧಾರದ ಮೇಲೆ ನಡೆಯಬೇಕಾದ ರಾಜ್ಯದ ಮುಖ್ಯಮಂತ್ರಿಯ ಅಧಿಕಾರವು ತಮ್ಮ ಮರ್ಜಿಗೊಳಪಟ್ಟಿದೆ ಎನ್ನುವಂತೆ ಮಠಾಧಿಶರು ನಡೆದುಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ರಾಜ್ಯದ ಜನರ ಮುಖ್ಯಮಂತ್ರಿ ಎನ್ನುವುದನ್ನು ಕಡೆಗಣೆಸಿ ಲಿಂಗಾಯಿತ ಮಠಾಧೀಶರ ಆಜ್ಞಾಧಾರಕನಂತೆ ವರ್ತಿಸುತ್ತಿರುವುದು ಖಂಡನಾರ್ಹವಾಗಿz. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯದಂತೆ ಇರಬೇಕೆ ಹೊರತು ಸ್ವಾಮಿಗಳ ಪರವಾಗಿ ಅಲ್ಲ ಮುಖ್ಯಮಂತ್ರಿಯನ್ನು ಕೇವಲ ಲಿಂಗಾಯಿತ ಸಮುದಾಯಕ್ಕೆ ಸಿಮೀತ ಮಾಡುತ್ತಿರುವುದು ಸ್ವಾಮಿಗಳಿಗೆ ತಕ್ಕುದಲ್ಲ ಅವರನ್ನು ಆಯ್ಕೆ ಮಾಡಿರುವುದು ಮತದಾರರ ವರ್ಗ ಇದನ್ನು ಯಡಿಯೂರಪ್ಪ ಮರೆತ್ತಿದ್ದಾರೆ. ಚುನಾವಣಿಯಲ್ಲಿ ಮತದಾರರೆ ನನ್ನ ದೇವರು ಎಂದು ಬಾಯಿ ಬಿಡುತ್ತಿದ್ದ ಯಡಿಯೂರಪ್ಪ, ಮತದಾರರ ಆಶೀರ್ವಾದ ಇರುವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ವಿರೋಧಪಕ್ಷಗಳಿಗೆ ಟಿಕಿಸುತ್ತಿದ್ದ ಇವರು ಅದೆಲ್ಲವನ್ನು ಮರೆತು ಅಧಿಕಾರದಲ್ಲಿರುವುದೇ ಸ್ವಾಮಿಗಳ ಆಶೀರ್ವಾದದಿಂದ ಎನ್ನುವಂತೆ ನಂಬಿದ್ದಾರೆ. ಜನರ ಆಸೆ, ನಿರೀಕ್ಷೆ ಎಲ್ಲವನ್ನು ಭಂಗಗೊಳಿಸಿ ಇವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ಸಂವಿಧಾನ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ಬೆಳವಣೆಗೆಯನ್ನು ಪ್ರಜ್ಞಾವಂತ ಜನತೆ ಹಾಗೂ ಬಸವ ತತ್ವದಲ್ಲಿ ನಂಬಿಕೆ ಹೊಂದಿರುವ ಪ್ರಗತಿಪರ ವಿಚಾರವಂತ ಲಿಂಗಾಯಿತರು ವಿರೋಧಿಸಬೇಕಾಗಿದೆ.