Saturday 5 May 2012

ಅಮ್ಮಾ ನಿನಗೆ ಕೊಟ್ಟ ಕಷ್ಟಗಳೆಷ್ಟು

ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ, ಗೌರವವಿದೆ. ಪ್ರತಿ ದಿನಗಳು ಅಮ್ಮನನ್ನು ನೆನೆಯದ ಕ್ಷಣಗಳಿಲ್ಲ ಅವಳು ದಿವ್ಯ ವ್ಯಕ್ತಿ ವರ್ಣನೆಗೆ ಸಿಗದ ಶಕ್ತಿ.
ಪಾಶ್ಚಿಮಾತ್ಯ ರಾಷ್ಟ್ರಗಳು ವರ್ಷದಲ್ಲಿ ಒಂದು ಬಾರಿ ಅಮ್ಮನ ಹೆಸರಿನಲ್ಲಿ ಆಚರಣೆ ಮಾಡುತ್ತಾರೆ. ನಾವು ದಿನನಿತ್ಯವೂ ಪೂಜಿಸುತ್ತೇವೆ ಗೌರವಿಸಿಸುತ್ತೇವೆ ಆಧರಿಸುತ್ತೇವೆ ಆದರೂ ಅವರ ಆಚರಣೆಗೆ ನಾವು ತಲೆಬಾಗಿದ್ದೇವೆ ಎಂಬುದು ಅತಿಶೋಕ್ತಿಯ ವಿಷಯ. ತಲೆಬಾಗಿರುವುದು ಪಾಶ್ಚಿಮಾತ್ಯ ಸಂಸ್ಕೃತಿಗಲ್ಲ ತಾಯಿ ಎಂಬ ದಿವ್ಯ ಶಕ್ತಿಗೆ.
ಏನೇ ಇರಲಿ ಶಕ್ತಿಯ ಬಗ್ಗೆ ಒಂದೇ ದಿನದಲ್ಲಿ ಅವಳು ಮಾಡಿದ ಎಲ್ಲಾ ಋಣವನ್ನು ತಿರಿಸಲು ಹೇಗೆ  ಸಾಧ್ಯ ?
ಪ್ರಪಂಚದ ಅರಿವೆಯೇ ಇಲ್ಲದೆ ಅಂಧಕಾರದಲ್ಲಿದ್ದ ನಮಗೆ ಜನವಿತ್ತ ದೇವತೆ! ಒಂಬತ್ತು ತಿಂಗಳು ಹೊಟ್ಟೆಯೊಳಗಿಟ್ಟುಕೊಂಡು, ಅದೇ ಉಸಿರನ್ನಿತ್ತ ಅಮ್ಮನ ಬಗ್ಗೆ ಪದಗಳಲ್ಲಿ ಹಿಡಿದಿಡಲು ಹೋಗುತ್ತೇವೆ ಎಂದರೆ ನಮ್ಮಂಥ ಮೂರ್ಖರು ಯಾರು   ಇಲ್ಲವೆಂದು ಅರ್ಥ.