Monday 19 September 2011

ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿರಬೇಕು

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿರಬೇಕು ಆ ಬದ್ದತೆಯೇ ಸರ್ಕಾರದ ಆದ್ಯ ಕರ್ತವ್ಯ ಕೂಡ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಬೇಕಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ರೀತಿಯಲ್ಲಿ ಕರ್ತವ್ಯ ನೀರ್ವಹಿಸುತ್ತಿವೆ. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ ಭರವಸೆ ಇಡೇರಿಸುವಲ್ಲಿಯೂ ವಿಫಲವಾಗಿವೆ ಗಗನಕ್ಕೇರುತ್ತಿರುವ ಬೆಲೆಗೆ ರೈತ ತತ್ತರಿಸಿ ಹೋಗಿದ್ದಾನೆ ತನಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಾರದಂತಹ ಅಸಹಾಯಕ ಸ್ಥಿತಿಗೆ ಬಂದು ನಿಂತಿದ್ದಾನೆ. ತಾನು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದೆ ಕುಸಿದು ಹೊಗಿದ್ದಾನೆ. ಆದರೆ ಸರ್ಕಾರ ರೈತರ ಹೆಸರಿನಲ್ಲಿ ಪ್ರಮಾಣ ಮಾಡುತ್ತ ರೈತರನ್ನು ನರಕದ ಕೂಪಕ್ಕೆ ತಳ್ಳುತ್ತಿರುವುದು ಒಂದು ಕಡೆಯಾದರೆ ಬೆಂಬಲ ಬೆಲೆ ಸಿಗದೆ ನರಳುತ್ತಿರುವುದು ಇನ್ನೊಂದು ಕಡೆ ಇವೇಲ್ಲ ಕಾರಣಗಳಿಗೆ ಪರಿಹಾರ ರೈತನ ಬದುಕು ಉತ್ತಮವಾಗಬೇಕಾದರೆ ಸಕಾಲಕ್ಕೆ  ಬೀಜಗಳ ಪೊರೈಕೆ, ವಿವಿಧಉನ್ನತ ತಳೀಯ ಬೀಜಗಳ ಅಭಿವೃದ್ಧಿ ವೈಜ್ಞಾನಿಕ ಕೃಷಿ ಅಳವಡಿಕೆಗೆ ಸಹಕಾರ ಸರಕಾರ ನೀಡಿದರೆ ರೈತನ ಬದುಕು ಬಂಗಾರವಾಗಬಲ್ಲದು ಆದರೆ ಬಿತ್ತನೆ ಬೀಜಕ್ಕಾಗಿ ಅಗಲು ರಾತ್ರಿ ಧರಣಿ ನಡೆಯುತ್ತಿರುವದು ನೋಡಿದರೆ ಸರ್ಕಾರ ಎಷ್ಟರ ಮಟ್ಟಿಗೆ ಇವರ ಬಗ್ಗೆ ಕಳಕಳಿ ಇದೆ ಎನ್ನುವುದು ಗೊತ್ತಾಗುತ್ತದೆ.
ಮೈಸೂರಿನಲ್ಲಿ ರೈತರು ಹತ್ತಿ ಬೀಜ ವಿತರಣೆ ಮಾಡದ ಹಿನ್ನಲೆಯಲ್ಲಿ ರೊಚ್ಚಿಗೆದ್ದಿದ್ದಾರೆ ಸರ್ಕಾರ ಮೊದಲೆ ಸಿದ್ದತೆ ಮಾಡಿಕೊಂಡಿದ್ದರೆ ರೈತರು ಸರ್ಕಾರಕ್ಕೆ ಶಾಪ ಹಾಕುವ ಪ್ರಮೆಯವೇ ಬರುತ್ತಿರಲ್ಲ ಜಿಲ್ಲಾಡಳಿತ ಕೃಷಿ ಇಲಾಖೆ ಇದರ ಬಗ್ಗೆ ಎಚ್ಚತ್ತು ತೊಂದರೆಯಾಗದ ನಿಟ್ಟಿನಲ್ಲಿ ಕ್ರಮವಹಿಸಬೇಕು ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಇರುವುದರಿಂದ ಬೆಳೆದ ಫಸಲಿಗೆ ನಿರೀಕ್ಷಿತ ಲಾಭ ಕಾಣದೆ ಇದ್ದಾಗ ರೈತ ತನ್ನ ಅಸಹಾಯಕತೆಯನ್ನು ತೊಡಿಕೊಳ್ಳಲು ಬೆಳೆದ ಫಸಲನ್ನು ರಸ್ತೆಗೆ ಸುರಿದು ಪ್ರತಿಭಟಿಸುವಂತ ವಾತವರಣ ನಿರ್ಮಾಣವಾಗಿದ್ದು ದುರಂತದ ವಿಷಯವಾಗಿದೆ.
ಒಂದು ಚಿಲ ಸರ್ಕಾರಿ ಗೊಬ್ಬರ ರೈತ ಕೊಂಡರೆ ಐದುನೂರರಿಂದ ಸಾವಿರ ರೂಪಾಯಿ ಕೊಡಬೇಕಾದ ಪರಿಸ್ಥಿತಿ ಇದೆ ಆದರೆ ಅದೇ ರೈತ ತಾನು ಬೆಳೆದ ಫಸಲನ್ನು ಮಾರುಕಟ್ಟೆಗೆ ತಂದಾಗ ಸೂಕ್ತ ಬೆಲೆ ಸಿಗದೆ ಮಾಡಿದ ಸಾಲ ತಿರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ರೈತರಗೊಳಾದರೆ ದೇಶದ ಅಸಂಘಟಿತ ಕಾರ್ಮಿಕರ ಬದುಕು ಇದಕ್ಕಿಂತ ಭಿನ್ನವಾಗಿರದು ತಮ್ಮ ಹಕ್ಕನ್ನು ಪಡೆಯಬೇಕಾದರೆ ಶಿಕ್ಷಣವಂತರಾಗುವುದು ಅವಶ್ಯವಾಗಿದೆ. ಕಾರ್ಮಿಕರು ತಾವು ದುಡಿದ ಹಣದಲ್ಲಿ ಜೀವನ ನಡೆಸುವುದು ಕಷ್ಟ ಒಂದಡೆಯಾದರೆ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿರುವುದು ಇನ್ನೊಂದು ಕಡೆ ಇವೆರಡರ ಮಧ್ಯ ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಆಸೆ ಇದ್ದರು ಕೂಡ ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವುದರಿಂದ ಕಾರ್ಮಿಕರ ಮಕ್ಕಳು ಅದೇ ವೃತ್ತಿಯನ್ನು ಆಯ್ದುಕೊಳ್ಳುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತಿದೆ.  ಕಾಮಿಕರ ಹಿತರಕ್ಷಣೆ ಮತ್ತು ಅವರ ಶಿಕ್ಷಣಕ್ಕಾಗಿ ಸರ್ಕಾರ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ ಕಾರ್ಮಿಕರ ದಿನಾಚರಣೆಯ ಈ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಸಾರ್ವಜನಿಕ ರಜೆ ಘೋಷಿಸಿದರೆ ಸಾಲದು ಉತ್ತಮ ಜೀವನ ನಡೆಸಲು ಅನುವಾಗುವಂತೆ ಯೋಜನೆ ಜಾರಿಗೆ ತರಲಿ ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ಮಾರಕ  ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಿಗೆ ತನ್ನ ಕಬಂಧ ಬಾಹು ವಿಸ್ತರಿಸಿಕೊಂಡಿದೆ. ಭ್ರಷ್ಟಾಚಾರವನ್ನು ಬುಡ ಸಹಿತ ಕಿತ್ತು ಹಾಕಬೇಕಾದರೆ ಒಬ್ಬ ಅಣ್ಣಾ ಹಜಾರೆಯವರಿಂದ ಮಾತ್ರ ಸಾಧ್ಯವಾಗಲಾರದು ಇದರ ವಿರುದ್ಧ ಲಕ್ಷಾಂತರ ಹಜಾರೆಗಳು ಸಿಡಿದು ನಿಲ್ಲಬೇಕಾಗಿದೆ. ಇದನ್ನು ಕಿತ್ತು ಹಾಕಬೇಕಾದರೆ ಕೇವಲ ಮಸೂದೆಯಿಂದ ಮಾತ್ರ ಸಾಧ್ಯವಿಲ್ಲ ಎನ್ನುವುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಆಂದೋಲನ ಪ್ರಗತಿಪರ ವಿಚಾರವಂತರ ವೇದಿಕೆ ಆಗದೆ ದೇಶದ ಪ್ರತಿಯೊಬ್ಬ ಯುವಕನನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಹೋರಾಟ ನಡೆಯಬೇಕಾಗಿದೆ . ರಾಷ್ಟ್ರ ವ್ಯಾಪಿ ಭ್ರಷ್ಟಾಚಾರದ ವಿರುದ್ಧ ದೊಡ್ಡ ಕ್ರಾಂತಿ ಆಗಬೇಕಾಗಿದೆ ಸಾಮಾನ್ಯ ಜನರಿಗೆ ಇದರ ಅರಿವು ಮೂಡಿಸುವುದರ ಮೂಲಕ ಅವರನ್ನು ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಲ್ಲುವಂತೆ ತಯಾರು ಮಾಡಬೆಕಾಗಿದೆ. ಲಂಚ ಕೊಡುವ ಮತ್ತು ತೆಗೆದುಕೊಳ್ಳುವವರು ಆತ್ಮ ವಿಮರ್ಶೆ ಮಾಡಿಕೊಂಡರೆ ಖಂಡಿತ ಸ್ವಲ್ಪ ಮಟ್ಟಿಗಾದರೂ ಪ್ರತಿಫಲ ದೊರಕಬಹುದು ಆದರೆ ಮನಸ್ಥಿತಿ ಬದಲಾಗಬೇಕಾಗಿದೆ.