Tuesday 18 October 2011

ಸ್ನೇಹದ ಸುತ್ತ ಸಂಶಯ ಹುತ್ತ


ಸ್ನೇಹ ಎಂಬುವುದು ಮದುರ ಬಾಂಧವ್ಯ ಬಾಂಧವ್ಯ ಉಳಿಸಿ ಬೆಳಸಬೇಕಾದುದ್ದು ಇಬ್ಬರ ಕರ್ತವ್ಯ ಸಹ ಲಿಂಗವಾಗಿದ್ದರೆ ಸ್ನೇಹ ಮುಂದುವರಿಯುತ್ತದೆ ಆದರೆ ವಿರುದ್ಧ ಲಿಂಗದೊಂದಿಗೆ ಸ್ನೇಹ ಎಂಬ ಪದ   ಗೌಣವಾಗುತ್ತದೆ. ಮೊದಲು ಸ್ನೇಹಿತರಾಗಿ ಪರಿಚಯವಾಗುವ ಸಂಬಂಧ ಪ್ರೀತಿಯಾಗಿ ರೂಪಗೊಳ್ಳುತ್ತದೆ. ಪ್ರೀತಿ ಎಂಬ ವ್ಯಾಮೋಹಕ್ಕೆ ಬಿದ್ದಾಗಲೇ ಸ್ನೇಹ ಎಂಬ ಸೌಧ ಮಸಣದ ದಾರಿ ಹಿಡಿದಿರುತ್ತದೆ. ನಿಮಗೆ ಆಶ್ಚರ್ಯವಾಗಬಹುದು ಆದರೆ ವಾಸ್ತವತೆ ದೃಷ್ಟಿಯಿಂದ ಲೇಖನ ಅನಿವಾರ್ಯ ಅನಿಸ್ತು ಅದಕ್ಕೆ ಬರ್‍ದ್ದೀನಿ. ನಮಗೆ ಸ್ವತತಂತ್ರವಾಗಿ ಜೀವಿಸುವ ಹಕ್ಕು ಇದೆ ಸತ್ಯ, ನಮ್ಮ ಭಾವನೆ ಅನಿಸಿಕೆ, ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯವಿದೆ ಹಾಗೇಯೇ ನಿಮ್ಮನ್ನು ನಂಬಿದವರ ಸ್ವಾತಂತ್ರ್ಯಕ್ಕೆ ಚ್ಯೂತಿ ಅಥವಾ ಮರ್ಯಾದೆಗೆ ಭಂಗ ತರಬಾರದಲ್ಲವೇ? ಹಕ್ಕು ಯಾರಿಗೂ ಇಲ್ಲ. ಇದೆಲ್ಲ ಯಾಕೆ ಬರೆದೆ ಅಂದ್ರೆ ನಾನು ಈವರೆಗೆ ಎಷ್ಟೋ ಗೆಳೆಯ ಗೆಳತಿಯರನ್ನು ನೋಡಿದ್ದೇನೆ ನಿಜ ಆದರೆ ನಿಮ್ಮಂತಹ ಡೀಸೆಂಟ್ ವ್ಯಕ್ತಿಗಳ ಹಿಂದೆ ಇರುವ ಇನ್ನೊಂದು ಮುಖದ ದರ್ಶನ ಮಾಡಿದ್ದೆ ನೀನು. ನಾನು ಪ್ರಥಮ ಬಾರಿಗೆ ಆಫಿಸ್‌ಗೆ ಕಾಲಿಟ್ಟಾಗಲೆ ಶಾಖ್ ನೀಡಿದೆ ನಿನ್ನ ವರ್ತನೆ. ಬಹುಷ್ಯ ಇದಕ್ಕೆ ನಾನು ತಿಳಿದುಕೊಂಡ ತಪ್ಪು ಕೂಡ ಕಾರಣವಿರಬಹುದು. ಹಾಗಂತ ಪ್ರೀತಿಯ ಬಲೆಗೆ ಬೀಳದ ವ್ಯಕ್ತಿ ಸಮಾಜದಲ್ಲಿ ಇಲ್ಲ ಒಂದಿಲ್ಲೊಂದು ರೂಪದಲ್ಲಿ ಪ್ರೀತಿ ಎಂಬ ಮಾಯಾಲೋಕಕ್ಕೆ ಜಾರಿ ಹೋಗಿರುತ್ತಾರೆ. ಅದರಂತೆ ಮಾಯಾಲೋಕದ ಬಲೆಗೆ ಜಾರಿ ಹೋಗಿದ್ದೀಯಾ ಬೀಡು. ಆದರೂ ಮನಸ್ಸು ಒಪ್ಪುತ್ತಿಲ್ಲ. ನನ್ನ ನಿನ್ನ ಸಲುಗೆಯಿಂದ ಮಹಾನುಭಾವರು ಯಾವ ರೀತಿಯ ಸಂಬಂಧ ಕಲ್ಪಿಸಿದ್ದರು ಗೊತ್ತಾ ಗೆಳತಿ. ಮಹಾನುಭಾವರ ಕಿಟಲೆ ಕೊಟ್ಟವರ ಮೇಲೆ ರೋಷ ಇದೆ ಕೋಪ ಇದೆ ಆದ್ರೆ ಹೇಗಿದ್ದರು ನನ್ನ ಮೇಲೆ ಸಂಶಯಪಟ್ಟಿದ್ದಾರೆ ಎಂದು ನಿನ್ನ ಮೇಲೆ ವಕ್ರದೃಷ್ಟಿ ಬೀರಿ ಕೆಟ್ಟವನಾಗಬಹುದಾಗಿತ್ತಲ್ಲ ಘಾಸಿಫ್‌ಗಳಿಂದ ಬೆಸತ್ತು ಕೆಲಸ ಬಿಟ್ಟು ಹೋದರಾಯ್ತಪ್ಪ ಎಂದು ನಿರ್ಧರಿಸಿದೆ. ನೋಡೋಣ ಒಂದು ಮಾತು ನಿನಗೆ ಕೇಳೋಣ ಎಂದು ಅಂಜುತ್ತಾ ಕೇಳಿದೆ ನಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದ್ಭುತ ಉತ್ತರ ಕೊಟ್ಟು ಮನಸಂತೈಸಿದ ರೀತಿ ಮೆಚ್ಚಿಕೊಂಡೆ. ಹಾಂ ಈಗ ನನ್ನ ಪ್ರಾಮಾಣಿಕ ಉತ್ತರ ಕೇಳಿ ಎಂಟು ತಿಂಗಳ ಹಿಂದೆ ನೀವು ಪರಿಚಯವಾದಾಗ ನಿಮ್ಮ ನೇರ ನಡೆ, ಗಂಭೀರ ವ್ಯಕ್ತಿತ್ವ, ಹಿತಮಿತ ಮಾತು ನೋಡಿ ಬೇರೆಯವರಿಗಿಂತ ಬಿನ್ನವಾಗಿರುವ ಸೌಮ್ಯ ವ್ಯಕ್ತಿತ್ವ ಎಂದು ತಿಳಿದುಕೊಂಡಿದ್ದೆ. ಮಾತ್ರವಲ್ಲ ನನಗರಿವಿಲ್ಲದೆ ನಿಮ್ಮ ಸ್ನೇಹಕ್ಕಾಗಿ ಆಸೆ ಪಟ್ಟಿದ್ದು ಇದೆ. ಸೇಹ, ಪ್ರೀತಿ ಇವುಗಳಿಗೆ ತನ್ನದೆಯಾದ ಮಹತ್ವವಿದೇಯಲ್ಲೇ? ನನ್ನ ಭಾವನೆ ಸ್ನೇಹಕಿಂತಲೂ ಮಿಗಿಲು ನಿನ್ನ ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸಕ್ತಿ ಯಾಕೆಂದರೆ ಸ್ನೇಹ ಎಂಬ ಪದದ ಒಳಾರ್ಥವಾದಾಗಲೇ ಗಟ್ಟಿಯಾಗಿ ಉಳಿಯುತ್ತದೆ ಎಂದು ನಂಬಿದವನು ನಾನು. ಆದರೆ ಇವತ್ತಿಗೂ ನೀನು ಅರ್ಥವಾಗಿಲ್ಲ ಇದು ಪ್ರೀತಿಯ ವ್ಯಾಮೋಹ ಅಂತೂ ಖಂಡಿತಾ ಅಲ್ಲ. ಸ್ನೇಹ ಎಂಬ ಪವಿತ್ರ ಸಂಬಂಧದ ನಡುವೆ ಅಭಿಪ್ರಾಯಬೇಧ ಇರಬೇಕು ಆದರೆ ವಾದವಿರಬಾರದು ಸ್ನೇಹ ಎಂಬುದು ಪವಿತ್ರ ಸಂಬಂಧ ಅಲ್ಲಿನ ಪವಿತ್ರತೆಯೇ ದೇವರು ರೂಪವನ್ನು ಕಲ್ಪಿಸಿಕೊಟ್ಟ ಸ್ನೇಹದ ಗೋಪುರ ನೀನು. ಇಂಥಹ ಸ್ನೇಹಿತೆಯಾದ ನಿನ್ನ ಮೇಲೆ ನಾನೇಕೆ ಕೊಪಿಷ್ಟನಾದೆ ಎಂಬುವುದು ನಿನ್ನ ಆತ್ಮ ವಿಮರ್ಶೆಗೆ ಬಿಟ್ಟ ವಿಚಾರ. ಇಷ್ಟದ ವ್ಯಕ್ತಿಯನ್ನು ಆಡಿಕೊಂಡರೆ ನೋವಾಗುತ್ತದೆ ಫ್ರೆಂಡ್ ಖಂಡಿತ ನೋವು ನಾನು ಅನುಭವಿಸಿದ್ಧೆನೆ. ಮಾನಸಿಕ ಸಂಬಂಧವೇ ಪಾಪ ಎನ್ನುವ ಸಮಾಜದಲ್ಲಿ ನಿನ್ನ ವ್ಯಕ್ತಿತ್ವಕ್ಕೂ ನಮ್ಮ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸವಿರುವಾಗ ಯಾವ ಆಕರ್ಷಣೆಯಿಂದ ನಿನ್ನ ಹಿಂದೆ ಬೀಳಲಿ? ನಿಮಗೆ ಮಾತಿನ ಅರ್ಥವಾಗಿದ್ದರೆ ಪ್ರಾಮಾಣಿಕವಾಗಿ ನಿಮ್ಮ ಮನಸ್ಸನ್ನು ಕೇಳುವ ಪ್ರಯತ್ನ ಮಾಡ್ತೀಯಾ ಗೆಳತಿ.  ಒಬ್ಬ ವ್ಯಕ್ತಿ ನಡುವಳಿಕೆ ಬಗ್ಗೆ ಸಂಶಯ ಬಂದಾಗ ಮಾತು ಮುಂದುವರಿಯಿವುದಿಲ್ಲ ಸಂಶಯ ನಿಜವಾಗಿ, ನಂಬಿಕೆಯೇ ಬಿದ್ದು ಹೋಗಿದೆ ಆದ್ದರಿಂದ ಮುಖ ನೋಡಲು ಅಸಹ್ಯವೆನಿಸುತ್ತಿದೆ. ವಾಸ್ತವಿಕತೆ ಎದುರಿಸಲು ಧಯರ್ಯವಿಲ್ಲದೆ ಪಲಾಯನ ಮಾಡುವ ವ್ಯಕ್ತಿ ಸುಲಭದಲ್ಲಿ ತಾತ್ಕಾಲಿಕವಾಗಿಯಾದರೂ ಖುಷಿ ಪಡಬಹುದು ಆದರೆ ...
ವ್ಯಕ್ತಿತ್ವ ಹಾಳಾದರೆ ಯಾರಿಗೆ ಹಾನಿ ರಕ್ತದಲ್ಲಿ ಬಂದಿರುವ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲವಂತೆ ಮಾರ್ಪಾಡಾಗಿರುವ ವ್ಯಕ್ತಿತ್ವವನ್ನು ಸರಿಪಡಿಸಬಹುದಲ್ವೇ? ಒಬ್ಬ ವ್ಯಕ್ತಿಗೆ ಬೆಲೆ ಗೌರವ ಬರುವುದು ಆತನ ಉತ್ತಮ ವ್ಯಕ್ತಿತ್ವದಿಂದ ಆದರ್ಶ ಗುಣಗಳಿಂದ ಇವೆಲ್ಲ ನಾನು ಇಷ್ಟ ಪಡುವ ಗುಣ ಇವು ನಿಮ್ಮಲ್ಲಿ ಕಂಡಿದ್ದೇನೆ ಆದ್ದರಿಂದ ಇದರ ವಿರುದ್ಧ ಗುಂಪಿಗೆ ಸೇರದೆ ಇದ್ರೇ ನಿಮ್ಮ ಉಪಕಾರವನ್ನು ಸ್ಮರಿಸುತ್ತೇನೆ. ಇಷ್ಟೆಲ್ಲ ಹೇಳಲು ನೀನು ಯಾರು ಅಂದ್ರೆ ನಾನೇನು ಮಾಡಲಿ ಹೇಳು ಗೆಳತಿ. ನಿನ್ನ ಮೇಲೆ ಯಾವುದೇ ರೀತಿಯ ದ್ವೇಷ ಅಸೂಹೆ, ಕೋಪ ತಾಪ, ರೌದ್ರಾವತಾರ ಯಾವುದು ಇಲ್ಲ ಗೆಳತಿ ನಿಜ ಹೇಳಬೇಕೆಂದರೆ ನಿನ್ನನ್ನು  ಅರ್ಥ ಮಾಡಿಕೊಳ್ಳಲು ಹೋಗಿ ವ್ಯರ್ಥವಾಗುತ್ತೇನೆ ಎಂಬ ಭಯ.

Monday 17 October 2011

ಬಿಜೆಪಿಗೆ ಭೂಎಸ್ ವ್ಯೆ ಅನಿವಾರ್ಯವೇ?

ಭೂ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಾನು ಸಲ್ಲಿಸಿದ ನಿರೀಕ್ಷಣಾ ಜಾಮೀನು ಕೊರ್ಟ್ ತಿರಸ್ಕರಿಸಿದ ಮೇಲೆ ಅವರ ಬಂಧನ ಖಾತ್ರಿಯಾಗಿತ್ತು. ಆದರೆ ಯಡಿಯೂರಪ್ಪ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ತಪ್ಪಿಸಿಕೊಳ್ಳಲು ಹೊಂಚು ಹಾಕಿದರು. ನಾನು ಮಾಡುತ್ತಿರುವುದು ತಪ್ಪು ಎಂದು ತಿಳಿದರು. ಆ ತಪ್ಪನ್ನೆ ಮತ್ತೆ ಮಾಡಲು ಹೋದರು.
ಕೋರ್ಟ್‌ಗೆ ಸ್ವತಹ ಹಾಜರಾಗುವಂತೆ ಸೂಚಿಸಿದರೂ ಕೋರ್ಟ್ ಆದೇಶವನ್ನು ಕಡೆಗಣೆಸಿ, ಹಾಜರಾಗದಿದ್ದರೆ ಪ್ರಕರಣವನ್ನು ಮುದೂಡಬಹುದು ತಾತ್ಕಾ ಲಿಕವಾಗಿಯಾದರೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಯಡಿಯೂರಪ್ಪನವರ ಮನದಲ್ಲಿದ್ದಂತೆ ಕಾಣಿಸುತ್ತದೆ.
ಲೋಕಾಯುಕ್ತ ಕೋರ್ಟ್ ಆದೇಶದಿಂದ ಪಾರಾಗುತ್ತೇನೆ ಎಂದು ನಂಬಿದ್ದ ಯಡಿಯೂರಪ್ಪಗೆ ಅಘಾತವೇ ಕಾದಿತ್ತು. ಪ್ರತಿಯೊಂದಕ್ಕು ದೇವರು ಮತ್ತು ಮಠಾಧೀಶರನ್ನು ನೆನೆದು ಹೆಜ್ಜೆ ಮುಂದಿಡುವ ಯಡಿಯುರಪ್ಪನ ಬೆಂಬಲಕ್ಕೆ ಯಾವ ಮಠಾಧೀಶರು ಬರಲಿಲ್ಲ ದೇವರು ಕಣ್ಣು ತೆರೆಯಲಿಲ್ಲ ಅವರ ಪಾಲಿಗೆ ಕರಾಳ ಶನಿವಾರವಾಗಿ ಗೋಚರಿಸಿತು.
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತಂದ ಯಡ್ಡಿ ಅಷ್ಟೆ ವೇಗವಾಗಿ ಜೈಲು ಸೇರುವುದರ ಮೂಲಕ ರಾಜ್ಯದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು  ಜೈಲು ಕಂಬಿ ಎಣಿಸಲು ಹೊರಟಿದ್ದು ದುರ್ದೈದ ಸಂಗತಿ. ಸಾಮಾನ್ಯ ಕಾರ್ಯಕರ್ತನಾಗಿ ತಾಲುಕಾ ಅಧ್ಯಕ್ಷನಾಗಿ, ಪುರಸಭೆ ಅದ್ಯಕ್ಷನಾಗಿ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಾರೆ ಎಂದು ಯಾರು ಊಹಿಸಿರಲಿಲ್ಲ.
೧೯೭೦ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ಯಡಿಯೂರಪ್ಪ ಸೋಲಿಗೆ ಕುಗ್ಗದೆ ಮರಳಿ ಯತ್ನವ ಮಾಡು ಎಂಬ ನಾಣ್ನುಡಿಯಂತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಭೆ ಪ್ರವೇಶಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸೋಲು ಎಂಬ ಪದವೇ ಅವರ ಹತ್ತಿರ ಸುಳಿಯಲಿಲ್ಲ ಯಡಿಯೂರಪ್ಪ ಮಾಡಿದ್ದೆ ಮಾರ್ಗವಾಯಿತು ಅವರ ದಕ್ಷ ನಾಯಕತ್ವದಿಂದ ಪಕ್ಷದ ವರ್ಚಸು ದಿನದಿಂದ ದಿನ್ಕೆ ಹೆಚ್ಚುತ್ತಾ ಹೊಯಿತು.
ಅಂದಿನಿಂದ ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಅನಿವಾರ್ಯವಾದರು ಕೇವಲ ಎಳೆಂಟು ಸ್ಥಾನಗಳನ್ನು ಗಳಿಸಲು ಸಾಮಾರ್ಥ್ಯವಿಲ್ಲದ ಪಕ್ಷ ಇವರ ನಾಯಕತ್ವದಿಂದ ೨೫ರಿಂದ ೩೦ಶಾಸಕರನ್ನು ಆಯ್ಕೆ ಮಾಡಲು ಸಾಧ್ಯವಾಯಿತು ಎಂದರೆ ಯಡಿಯೂರಪ್ಪನ ಪಕ್ಷ ನಿಷ್ಠೆ ಅರ್ಥವಾಗುತ್ತದೆ.
ರಾಜ್ಯದಲ್ಲಿ ಪಕ್ಷದ ಅಸ್ಥಿತ್ವವೇ ಇಲ್ಲದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಚುಕ್ಕಣೆ ಹಿಡಿದು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಿದ ಕಟ್ಟಾಳು ಅವರ ಶ್ರಮದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂತು ಮೊದಲು ಉಪ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪನವರ ಮೇಲೆ ಪ್ರತಿಯೊಬ್ಬ ನಾಗರಿಕ ಭರವಸೆಯ ನಾಯಕ ಆಡಿದ್ದನ್ನು ಮಾಡಿ ತೋರಿಸಬಹುದು ಎಂದು ನಂಬಿದ್ದರು.
ವಿಭಿನ್ನ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸ್ವಲ್ಪ ದಿನಗಳಲ್ಲೆ ಜನರ ನಿರೀಕ್ಷೆ ಹುಸಿ ಮಾಡಿದರು ಜನರಿಗೆ ವಿರುದ್ಧವಾದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡರು. ನಾನು ಅಧಿಕಾರಕ್ಕೆ ಬಂದಿರುವುದು ಈ ನಾಡಿನ ಮಠಾಧೀಶರಿಂದ ಎಂಬ ಭಾವನೆ ಅವರಲ್ಲಿ ಗಟ್ಟಿಯಾಗಿ ನೆಲೆಯೂರಿತು. ಅಭಿವೃದ್ಧಿಯನ್ನು ಕಡೆಗಣೆಸಿ ಮಠಗಳಿಗೆ ಕೋಟಿಗಟ್ಟಲೆ ಸರ್ಕಾರದಿಂದ ಅನುಧಾನ ಬೀಡುಗಡೆ ಮಾಡಲು ಪ್ರಾರಂಭಿಸಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಇದರ ವಿರುದ್ಧ ಮಾತನಾಡಿದರೆ ಮಠಗಳು ಸಮಾಜ ಸೇವೆಯಲ್ಲಿ ತೊಡಗಿವೆ ಸರ್ಕಾರದಿಂದ ಅನುದಾನ ನೀಡಿದರೆ ತಪ್ಪೇನು ಎಂದು ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದರು.
ಇಷ್ಟಕ್ಕೆ ನಿಲ್ಲಲಿಲ್ಲ ಯಡಿಯೂರಪ್ಪನ ಅಭಿವೃದ್ಧಿಯ ಹೆಸರಿನ ಕಾರ್ಯ ಅದು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಯಡಿಯೂರಪ್ಪ ಅವರನ್ನೆ ಮಣ್ಣು ಪಾಲು ಮಾಡಲು ಹೊರಟರು ಹೋರಾಟ ನಿರತ ರೈತರ ಮೇಲೆ ಗುಂಡು ಹಾರಿಸುವುದರ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದರು. ಇದರ ವಿರುದ್ಧ ಹೋರಾಟ ಮಾಡಿದವರನ್ನು ಲಾಠಿ ಎಂಬ ಎಟಿನಿಂದ ಬಗ್ಗು ಬಡಿಸಿದರು ಇವೆಲ್ಲ ಕಾರಗಳಿಂದ ರೈತರಿಗೆ ಯಡಿಯೂರಪ್ಪ ದುಸ್ವಪ್ನವಾಗಿ ಕಂಡರು. ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಿದ ಯಡಿಯೂರಪ್ಪ ಅಧಿಕಾರದ ಅಮಲಿನಲ್ಲಿ ಎನು ಮಾಡಿದರೂ ನಡೆಯುತ್ತದೆ ಎಂಬಂತೆ ವರ್ತಿಸಿದರು ಈ ವರ್ತನೆಯಿಂದ ರಾಜ್ಯದ ಜನತೆಗೆ ಮತ್ತು ಬೂಜೆಪಿ ಪಕ್ಷದ ಅಭಿಮಾನಿಗಳಿಗೆ ಅಘಾತವಾಯಿತು. ಸರ್ಕಾರವನ್ನು ಭದ್ರ ಪಡಿಸಿಕೊಳ್ಳುವಲ್ಲಿಯೇ ಮೂರು ವರ್ಷ ಕಾಲ ಹರಣ ಮಾಡಿದ ಯಡಿಯೂರಪ್ಪ ಆಂತರಿಕ ಕಲಹಗಳನ್ನು ಮೆಟ್ಟಿ ನಿಂತು ಅಧಿಕಾರ ನಡೆಸುವಷ್ಟರಲ್ಲಿಯೆ ಲೋಕಾಯುಕ್ತ ವರದಿಯ ಬಿರುಗಾಳಿ ಅವರ ಪಾಲಿಗೆ ಕಂಟಕವಾಗಿ ಪರಿಣಮಿಸಿತು ಇದರ ಫಲವಾಗಿ ಅಧಿಕಾರದಿಂದ ಕೇಳಗಿಳಿಯಬೇಕಾಯಿತು ಆದರೂ ಅವರ ಬೆನ್ನಿಗೆ ಅಂಟಿದ ಕಳಂಕದ ಫಲವೇ ಪರಪ್ಪನ ಅಗ್ರಹಾರಕ್ಕೆ ಹೋಗಬೇಕಾಯಿತು.


Sunday 16 October 2011

ಕನಸಿನ ಮಹಲಿನಲ್ಲಿ ನೀನೆ ರಾಣಿ

ಮುಂಜಾನೆಯ ಕನಸಲ್ಲಿ ಕಣ್ರೆಪ್ಪೆಗಳ ನಡುವೆ ನಿನ್ನ ಬಿಗಿಯಾಗಿ ಬಂಧಿಸಿದ್ದೇನೆ. ಯಾಕೋ ಭಯ ಕಣ್ಣು ತೆರೆದರೆ ಅದೆಲ್ಲಿ ಜಾರಿ ಹೋಗುತ್ತಿಯೋ ಎಂದು. ಪ್ರತಿ ಕ್ಷಣದ ನಿನ್ನ ನೆನಪಲ್ಲಿ ಆ ಸಮ್ಮೋಹಕ ನಗುವನ್ನು ನೆನೆದು ಮತ್ತಷ್ಟು ದುರ್ಬಲನಾಗುತ್ತೇನೆ. ಯಾಕೆ ಗೊತ್ತೆ ? ನಿನ್ನ ನಗುವಲ್ಲಿನ ಮಾಂತ್ರಿಕ ಶಕ್ತಿ ನನ್ನ ಕಠಿಣ ನಿರ್ಧಾರವನ್ನು, ನೋವನ್ನು ತೇಲಿಸಿ ಬೀಡುತ್ತದೆ. ನಿನ್ನ ನಗುವಿನ ಚಮತ್ಕಾರಕ್ಕೆ ನಾನು ಸೋತಿದ್ದೇನೆ. ನನ್ನ ಬೊಗಸೆಯೊಳಗೆ ನಿನ್ನ ಪ್ರೀತಿಯನ್ನು ಬೆಚ್ಚಗೆ ಕಾಯ್ದುಕೊಳ್ಳುವ ಬಯಕೆ. ಪ್ರತಿ ತಂಗಾಳಿ ಬೀಸಿ ಹೋದಾಗ ನೀನೆ ಹಾದು ಹೋದ ಅನುಭವ. ನಿನ್ನನ್ಯಾಕೆ ನಾ ಹಿಡಿದು ನಿಲ್ಲಿಸಲಿಲ್ಲ ಎನ್ನುವ ಚಡಪಡಿಕೆ. ಗೆಳತಿ ನೀನಲ್ಲದೆ ಯಾವ ಹುಡುಗಿಗೂ ನನ್ನ ಕನವರಿಕೆಯಲ್ಲಿ ಜಾಗ ಇಲ್ಲ ಕಣೆ. ಈಗೀಗ ವರ್ಷವಿಡಿ ಮಳೆ ಬರುತ್ತಲೆ ಇರಬೇಕು ಎಂದನಿಸುತ್ತದೆ. ನಮ್ಮ ಗಾಡ ಪ್ರೀತಿಯ ಬುನಾದಿ ಈ ಮುಂಗಾರು ಮಳೆ ಎಂದರೆ ನೀನು ಒಪ್ಪುತ್ತೀಯಾ? ಮುಂಗಾರು ಮಳೆಯ ಜತೆ ಒಂದೇ ಕೊಡೆಯಡಿ  ಹೆಜ್ಜೆ ಇಟ್ಟಾಗ ನೀನು ನೆಗಡಿಯಾಗುತ್ತೆ ಎನ್ನುತ್ತಿದ್ದೆ. ನೀರಿಗೆ ಕಾಲಿಳಿಸಿ ನಿನ್ನ ಮೈಮೇಲೆ ನೀರು ಚಿಮ್ಮಿಸಬೇಕು,  ಕೈಗೆ ಕೈ ಬೆಸೆದು ನಿನ್ನೆದೆಗೆ ಒರಗಿದಾಗ ನೀನು ನನ್ನ ತಲೆ ಸವರಿ ಸಾಂತ್ವನಿಸಬೇಕು, ಮಗುವಾಗಿ ನಿನ್ನ ಮಡಿಲಲ್ಲಿ ಮಲಗಿ ಕನಸುಗಳ ಸೌಧ ಕಟ್ಟಬೇಕು. ಆ ಕನಸಿನ ಸೌಧದೊಳಗೆ ನನ್ನ-ನಿನ್ನ ಜೋಡಿ ಪಯಣ ಸಾಗಬೇಕು ... ಅದೆಷ್ಟು ಆಸೆಗಳು ಹುಚ್ಚು ಹುಡುಗ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಆದರೂ ನಿನ್ನೆಡೆಗೆ ಮೋಹ ಬಿಡದು. ಹುಡುಗಿ ನಿನ್ನ ಕ್ಷಣ ನೋಟವನ್ನು ಎದುರಿಸಲಾರದೆ ಸೋತಿದ್ದೇನೆ ಕಣೇ, ನನ್ನ ಜೀವನ ಸಂಗಾತಿ ನೀನಾದರೆ ಬದುಕು ಅದೆಷ್ಟು ಚೆನ್ನಾಗಿರುತ್ತದೆ. ನನ್ನ ನಲಿವು ನೋವುಗಳಿಗೆ ಭರವಸೆಯಾಗಿ ನೀನಿರುತ್ತೀಯಾ ಎಂಬ ಕಲ್ಪನೆಯೇ ಸುಖ ತರುವಂತಹದ್ದು. ನನ್ನ ಪ್ರತಿ ಗೆಲುವಿಗೂ ಸಂತೋಷಕ್ಕೂ ಸಾಧನೆಗೂ ನೀನೆ ಮನ ತುಂಬಿ ಹಾರೈಸಬೇಕು... ನಿನ್ನ ಭಾವನೆಗಳ ಜೊತೆ ನನ್ನ ಪಾಲು ಇರಬೇಕು ನಿನ್ನ ಭಾವನೆಯಲ್ಲಿ ನಾನು ಪ್ರತಿಕ್ಷಣ ಮಿಂದೆಳಬೇಕು ನೋವುಗಳನ್ನೆಲ್ಲ ನಿನ್ನ ಮುಂದೆ ಹರವಿಟ್ಟು ಅದನ್ನು ಸಂತಸದಿಂದ ಆಲಿಸಬೇಕು.
ಓಹ್ ಅದೆಷ್ಟು ಕನವರಿಕೆಗಳು ಗೆಳತಿ ನೀನೇ ನನ್ನ ಬದುಕಿನ ಒಡತಿ. ಈಗ ಪ್ರೀತಿಯ ನೋವು ಅನುಭವಿಸುತ್ತಿದ್ದೇನೆ. ಈ ನೋವಿಗೆ ನಿನ್ನ ಪ್ರೀತಿಯೇ ಔಷಧಿ. ಒಂದು ಬಾರಿ ನನ್ನ ಕೈಹಿಡಿದು ನಿನ್ನ ಪ್ರೀತಿಯನ್ನು ಅರಹುಬಾರದೇ? ನಿನ್ನ ಬಿಸಿಯುಸಿರನ್ನು ನನ್ನೋಳಗೆ ಜೋಪಾನವಾಗಿ ಇಟ್ಟುಕೊಂಡು ಅದನ್ನೆ ನನ್ನುಸಿರನ್ನಾಗಿಸುವಾಸೆ ಜತೆಯಾಗುವೇಯಾ ಓ ನನ್ನ ಜೀವವೆ.