Saturday 15 October 2011

ಪ್ರವಾಸಿಗರ ಚಿತ್ತ ಬುದ್ಧ ವಿಹಾರದತ್ತ

ಸುಂದರವಾದ ಉದ್ಯಾನವನ ಒಳ ಹೊಕ್ಕರೆ ಹಚ್ಚ ಹಸುರಾದ ಹುಲ್ಲು ಹಾಸು, ಮರಗಿಡಗಳಿಂದ ಕೂಡಿದ ಅಹ್ಲಾದಕರ ವಾತಾವರಣ ಮಾನವ ನಿರ್ಮಿತ ಕಲಾಕೃತಿಗಳು ಸಹ ಅಲಲ್ಲಿ ಹರಡಿಕೊಂಡಿವೆ. ಅವುಗಳಲ್ಲಿ ಅತ್ಯಾಕರ್ಷಕ ಆಕಾರಗಳು ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿಸುತ್ತವೆ. ಇದೇನೋ ಜಲಪಾತದ ವರ್ಣನೆ ಎಂದು ಭಾವಿಸಿದ್ದಿರಾ? ಖಂಡಿತಾ ಇಲ್ಲ. ಇದು ಬಿಸಿಲೂರಿನಲ್ಲಿ ನೀರ್ಮಿಸಿರುವ ಬುದ್ದ ವಿಹಾರದ ರಮ ಣಿಯ ನೋಟ.ಕ್ರಿ ಪೂ ೬ನೇ ಶತಮಾನದಲ್ಲಿ ಮನುಕುಲದ ಬಾಳಿಗೆ ಅಹಿಂಸೆ ಎಂಬ ದಿವ್ಯ ದೀಪವನ್ನು ನೀಡಿದ ಗೌತಮ ಬುದ್ದ ವರ್ಣನೆಗೆ ನಿಲುಕದ ವ್ಯಕ್ತಿ. ಇಲ್ಲಿ ವ್ಯಕ್ತಿ ಶಕ್ತಿಯಾಗಿ ಬಿಸಿಲೂರಿನಲ್ಲಿ ವಿಶ್ವಕ್ಕೆ ಶಾಂತಿ ಸಂದೇಶ ಸಾರುವಂತೆ ಭಾಸವಾಗುತ್ತಿದೆ. ಈ iಹಾನ್ ತೇಜಸ್ಸು ಇಂದಿನ ಜಗತ್ತಿನೋದಿಗೆ ಸಮಾಗಮಾವಾಗಿ ಶಾಂತಿ ನೇಲೆಸುವಂತಾಗಲಿ ಎಂಬ ಮಹಾದಾಶೆಯೊಂದಿಗೆ ೧೯೫೬ ಅಕ್ಟೋಬರ್ ೧೪ರಂದು ನಾಗಪೂರದಲ್ಲಿ ಅಂಬೇಡ್ಕರ್‌ರವರು ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ದ ಧರ್ಮ ಸ್ವೀಕರಿಸುವ ಮೂಲಕ ಶಾಂತಿ ಮತ್ತು ಜಾತ್ಯತೀತ ಮಂತ್ರವನ್ನು ಸಾರಿ ಬೌದ್ದ ಧರ್ಮದ ಪನರ್ ಸ್ಥಾಪನೆಗೆ ಶ್ರಮಿಸಿದರು. ಇದಕ್ಕೆ ಕಾರಣಿಭೂತರಾದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್‌ರವರ ಸವಿನೆನಪಿಗಾಗಿ ಈ ವಿಹಾರವನ್ನು ವಿಶ್ವವಿದ್ಯಾಲಯ ಆವರಣದ ಹೊರ ವಲಯದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಬೌದ್ದ ವಿಹಾರವನ್ನು ನಿನರ್ಮಿಸಿದೆ. ಈ ವಿಹಾರದ ರೂವಾರಿ ಕರ್ನಾಟಕದ ಅಶೋಕ ಸಾಮ್ರಾಟ್‌ರೆಂದು ಖ್ಯಾತನಾಮರಾದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಹಾಗೂ ಸಿದ್ದಾರ್ಥ ವಿಹಾರ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಅಯುಷ್ಮಾನ ಮಲ್ಲಿಕಾರ್ಜುನ ಖರ್ಗೆಯವರು. ಇದೊಂದು ಅಂತರಾಷ್ಟ್ರಿಯ ಬೌದ್ದ ಅಧ್ಯಾಯನ ಕೇಂದ್ರವಾಗಬೆಕೆಂಬಮಹಾದಾಸೆ ಅವರದಾಗಿದೆ.
ಗುಲಬರ್ಗಾ ನಗರದಿಂದ ಸೇಡಂ ರಸ್ತೆಯ ಮೂಲಕ ಸುಮಾರು ೮ ಕೀ ಮಿ ದೂರ ಕ್ರಮಿಸಿದರೆ ವಿಶ್ವವಿದ್ಯಾಲಯದ ರಾಷ್ಟ್ರಕೂಟರ ಬಾಗಿಲು ಎದುರುಗೊಳ್ಳುತ್ತದೆ. ಅನತಿ ದೂರದಲ್ಲಿ ಮತ್ತೆ ಎರಡು ಮುಖ್ಯ ಸ್ವಾಗತ ಕಮಾನುಗಳು ಕಾಣುತ್ತವೆ. ಒಂದೊಂದು ಕಮಾನುಗಳು ವೈಶಿಷ್ಠ್ಯಗಳಿಂದ ಕೂಡಿದೆ. ಸುಮಾರು ೭೮ ಎಕರೆ ಪ್ರದೇಶದಲ್ಲಿ ೬೦ ಅಡಿ ಎತ್ತರದ ಬೆಟ್ಟದ ಮೇಲೆ ಈ ಭವ್ಯ ವಿಹಾರ ಅಮೃತ ಶಿಲೆಯಿಂದ ಕಂಗೊಳಿಸುತ್ತದೆ. ೩೨೪೮೦ ಚದರ ಅಡಿ ವಿಸ್ತಿರ್ಣದ ಈ ಕಟ್ಟಡವು ೧೭೦ ಕಂಬಗಳ ಆಧಾರದ ಮೇಲೆ ನಿರ್ಮಾಣಗೊಂಡಿದೆ.
ಅಜಂತಾ ಎಲ್ಲೋರಾದಲ್ಲಿನ ದೃಶ್ಯಗಳು ಹೈದ್ರಬಾದ ಕರ್ನಾಟಕದ ಕೇಂದ್ರ ಸ್ಥಾನವಾದ ಗುಲಬರ್ಗಾದಲ್ಲಿ ನಿರ್ಮಾಣಗೊಂಡಿವೆ. ಪ್ರಾರ್ಥನ ಮಂದಿರದ ಧ್ಯಾನ ಭಂಗಿಯಲ್ಲಿ ಕುಳಿತಿರುವ ಬುದ್ದ ವಿಗ್ರಹವು ಇಡೀ ವಿಹಾರಕ್ಕೆ ಆಧ್ಯಾತ್ಮಿಕ ಕಳೆ ಮತ್ತು ಸಾಂಸ್ಕ್ರತಿಕ ಸೊಬಗನ್ನು ತಂದು ಕೊಟ್ಟಿದೆ. ಆರು ಅಡಿ ಎತ್ತರದ ಕಪ್ಪು ಶಿಲೆಯ ಬುದ್ದ ವಿಗ್ರಹವು ಪ್ರಾಚೀನ ಬುದ್ದ ಪ್ರತಿಮೆಗಳಿಗಿಂತ ಭಿನ್ನವಾಗಿದೆ. ನೆಲಮಹಡಿ ಹಾಗೂ ಧ್ಯಾನಮಂದಿರಕ್ಕೆ ಮೂರು  ದಿಕ್ಕಿನಿಂದಲೂ ಪ್ರವೇಶ ದ್ವಾರವಿದ್ದು ಅದು ಬೌದ್ದ ಧರ್ಮದ ತತ್ವ ಭೋದನೆಗೆ ಸೂಕ್ತ ವಾತಾವರಣವಾಗಿದೆ. ನೆಲ ಮಹಡಿಯಲ್ಲಿ ಸ್ಥಾಪಿಸಿರುವ ಬುದ್ದ ವಿಗ್ರಹವು ೪೦೦ ಕೆಜಿ ತೂಕದ ಪಂಚಲೋಹದ ಬಂಗಾರ ಲೇಪಿತ ಬುದ್ದ ವಿಗ್ರಹವು ಥೈಲ್ಯಾಂಡ ದೇಶದ ಬ್ಯಾಂಕಾಂಗ್‌ನಲ್ಲಿ ನಿರ್ಮಾಣವಾಗಿದೆ. ಸಿಮೆಂಟಿನಿಂದ ಮಾಡಿದ ಮುರ್ತಿ ಶಿಲ್ಪಗಳಿಂದ ಪೂಜಾ ಕೊಠಡಿಯ ಮೇಲ್ಚಾವಣಿಯಲ್ಲಿ ಬುದ್ದನ ಜೀವನದ ಘಟನೆಗಳಿಗೆ ಸಂಭಂದಿಸಿದ ಅನೇಕ ವಿಗ್ರಹಗಳನ್ನು ಕಾಣಬಹುದು. ಅವುಗಳಲ್ಲಿ ಬುದ್ದನ ಕೊನೆಯ ದಿನಗಳು ಹಾಗೂ ಪ್ರಾಣಿಗಳ ಜೊತೆಗಿನ ವಿಗ್ರಹಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಪ್ರಾಚೀನ ಪರಂಪರೆಗೆ ಅಂಟಿಕೋಂಡಿರುವ ಮಹತ್ವದ ಸ್ಮಾರಕವೆಂದರೆ ಅಲ್ಲಿನ ಸ್ಥೂಪ ೩೦ ಅಡಿ ವ್ಯಾಸ ೨೦ ಅಡಿ ಅಗಲದ ಸ್ಥೂಪವು ವಿಹಾರದ iಹಾದ್ವಾರದಲ್ಲಿ ನಿರ್ಮಿತವಾಗಿದೆ. ಇದರ ಹೊರಭಾಗವನ್ನು ಇಟಾಲಿಯನ್ ಮಾರ್ಬಲ್‌ನಿಂದ ಶೃಂಗರಿಸಲಾಗಿದೆ. ವಿಹಾರದ ನಾಲ್ಕೂ ದಿಕ್ಕುಗಳಲ್ಲಿ ಅಶೋಕ ನಿರ್ಮಿಸಿದ ಮಾದರಿಯ ಸ್ತಂಭಗಳು ಕಟ್ಟಡಕ್ಕೆ ವಿಶೇಷ ಮೇರಗು ನಿಡುತ್ತವೆ. ಬೃಹತ್ತ ಆಕಾರದ ಆರು ದ್ವಾರಗಳು ಈ ವಿಹಾರ ಹೊಂದಿದ್ದು ಬುದ್ದ ವಿಹಾರದ ಪ್ರಮುಖ ಆಕರ್ಷಣಿ ವೃತ್ತಾಕಾರದ ಗೊಪುರ ಇದರ ಮೇಲೆ ಹತ್ತು ಅಡಿ ಎತ್ತರದ ಪಂಚಲೋಹದ ಕಳಸ ಕಣ್ಮನ ಸೆಳೆಯುತ್ತದೆ. ಅಂಬೇಡ್ಕರ್‌ರವರು ತಮ್ಮ ಅನುಯಾಯಿಗಳೊಂದಿಗೆ ಬೌದ್ದ ಮತ ಸ್ವೀಕರಿಸಲು ಹೊರಟಿರುವ ಅಮೃತಗಳಿಗೆಯನ್ನು ನೆನಪಿಸುವ ಕೃತಕ ಪ್ರತಿಮೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಬುದ್ದ ವಿಹಾರದಿಂದ ೫೦೦ ಅಡಿ ದೂರದಲ್ಲಿ ಮಹಾದ್ವಾರವಿದೆ ಇದು ಚೈತನ್ಯಕೃತಿಯಲ್ಲಿದೆ.
ಮಹಾದ್ವಾರದಿಂದ ಬೌದ್ದ ವಿಹಾರ ತಲುಪಲು ಮೂರು ಹಂತಗಳಿದ್ದು ಪ್ರತಿಯೊಂದು ಹಂತದ ಅಂತರ ೧೦೦ ಅಡಿಗಳಾಗಿವೆ. ಈ ಹಂತವು ಸಹ ಬೌದ್ದ ತತ್ವಕ್ಕನುಗುಣವಾಗಿವೆಯಂಬುದು ಉಲ್ಲೇಖನೀಯ.  ಈ ವಿಹಾರವು ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಾದ ನಳಂದ ಮತ್ತು ತಕ್ಷಶಿಲೆಯ ಮಾದರಿಯನ್ನು ನೆನಪಿಗೆ ತರುತ್ತದೆ ಪ್ರವಾಸಿಗರಿಗೆ ಯಾತ್ರಿಕರ ಕೊಠಡಿ ಸೂಕ್ತ ಕ್ಯಾಂಟಿನ್ ವ್ಯವಸ್ಥೆ ಗ್ರಂಥಾಲಯ ವಸ್ತು ಪ್ರದರ್ಶನಾಲಯ ಶಯನ ಮಂದಿರ ಊಟದ ಮನೆ ಮೋದಲಾದವುಗಳಳೂ ನೀರ್ಮಿಸಲಾಗಿದೆ. ವಿಶಾಲವಾದ ರಂಗ ಮಂದಿರವಿದ್ದು ಅದರಲ್ಲಿ ೨೫೦೦ ಜನರು ಕುಳಿತು ನೋಡಲು ವ್ಯವಸ್ಥೆ ಇದೆ. ಆಧುನಿಕತೆಯ ಭರಾಟೆಯಲ್ಲಿ ತಡಕಾಡುವ ನಾವು ಮಾನವ ಶಾಂತಿಗಾಗಿ ಬಯಸಿದಲ್ಲೆಲ್ಲಾ  ಸಂಚರಿಸುತ್ತೇವೆ.
ಬೇಸರ ದುಗುಡ ದೂರ ಮಾಡಲು ಮೋಜಿನತ್ತ ದಾರಿ ಹುಡುಕುತ್ತೆವೆ ಶಾಂತಿಗಾಗಿ ಹಂಬಲಿಸುವ ಜೀವಿಗಳಿಗೆ ಇದೊಂದು ಹೇಳಿ ಮಾಡಿಸಿದ ತಾಣ. ಸುಖ ಸಮೃದ್ದ ಬದುಕಿಗೆ ಶಾಂತಿ ಮಾರ್ಗ ತೋರುವ ಈ ತಾಣ ವೈಜ್ಞಾನಿಕವಾಗಿ ಆಧ್ಯಾತ್ಮಿಕ ಚಿಂತನೆಗೆ ಹಾಗೂ ಅಧ್ಯಯನಕ್ಕೆ ಕೇಂದ್ರವಾಗುವುದೇ?


No comments:

Post a Comment