ಗುಜರಾತಿನಲ್ಲಿ ಮಾಡಿದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಸಂಘ ಪರಿವಾರದವರು, ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ಘೋಷಣೆ ಮಾಡಲಾಗಿದೆ. ಬಿಜೆಪಿಯ ಹಿರಿಯ ನಾಯಕರ ಹತಾಶೆಯಿಂದ ಬೇಸತ್ತ ಸಂಘಪರಿವಾರ ಮೋದಿಗೆ ಬಹುಪರಾಕ್ ಎನ್ನುತ್ತಿದ್ದಾರೆ. ಅಂದಹಾಗೇ ನರೇಂದ್ರ ಮೋದಿ ಅಭಿವೃದ್ಧಿ ಹರಿಕಾರನೇ? ಈ ದೇಶದ ಪ್ರಧಾನಿಯಾಗಲು ಅರ್ಹನೇ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.
ಸಾಮಾಜಿಕ ಜಾಲತಾಣಗಳು ಅದರಲ್ಲೂ ಈ ಜಾಲ ತಾಣಗಳಲ್ಲಿ ಉಸಿರಾಡುವ ಕಾರ್ಪೋ ರೇಟ್ ವಲಯದ ಜನ ನರೇಂದ್ರ ಮೋದಿ ಯವರನ್ನು ಹೆಚ್ಚಿನ ರೀತಿಯಲ್ಲಿ ವೈಭವೀಕರಿಸಿ ಪ್ರಚಾರ ಕೊಡುತ್ತಿವೆ. ಕೊಡುತ್ತಲೇ ಇವೆ. ಇದರಿಂದಾಗಿ ಮೋದಿ ಎಂಬ ನರಹಂತಕನ ಹೆಸರು ಎಲ್ಲೆಡೆ ಪಸರಿಸುತ್ತಿದೆ.
ಅಭಿವೃದ್ಧಿ ಎಂದರೆ ಏನು ಎಂಬುದೇ ಅರ್ಥವಿಲ್ಲದೆ, ಈ ಮಹಾಶಯರು ಗುಜರಾತಿನಲ್ಲಿ ನಿರ್ಮಾಣವಾದ ಚತುಷ್ಪುಥ ರಸ್ತೆ ನಾಲ್ಕಾರು ಮೇಲ್ಸೇತುವೆಗಳನ್ನೇ ಮುಂದಿಟ್ಟುಕೊಂಡು ಅದನ್ನೇ ಅಭಿವೃದ್ಧಿಯೆಂದು ಅಪಾರ್ಥ ಮಾಡಿಕೊಂಡಿರುವ ಕಾರ್ಪೋ ರೇಟ್ ವಲಯ ಮತ್ತು ಸಂಘಪರಿವಾರ ವಿಧಿ ಯಿಲ್ಲದೆ ಅಪ್ಪಿಕೊಂಡಿದೆ.
ಆದರೆ ಈ ದೇಶದ ಜನ ಪ್ರಧಾನಿ ಎಂದು ಒಪ್ಪಿಕೊಳ್ಳು ತ್ತಾರೆಯೇ? ರಾಷ್ಟ್ರಕ್ಕೆ ಮೋದಿಯವರು ಅನಿವಾರ್ಯ ಎಂಬ ವಾತಾವರಣವನ್ನು ಸೃಷ್ಟಿಸುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಯಾವ ನಿಟ್ಟಿನಲ್ಲಿ ಯೋಚಿಸುತ್ತಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಪ್ರಾಣ ಬಲಿದಾನಗಳಿಂದ ಪಡೆದ ಪ್ರಜಾಸತ್ತೆಯನ್ನು ಬುಡ ಮೇಲುಗೊಳಿಸುವ ಶಕ್ತಿಗಳಿಗೆ ಪ್ರಬುದ್ಧ ಮತದಾರರು ತಿರಸ್ಕರಿಸಬೇಕಾಗಿದೆ.
ಇಂದು ಮೋದಿತ್ವದ ರೂಪದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳು ಅಂತಿಮವಾಗಿ ಸರ್ವಾಧಿಕಾರ ಸ್ಥಾಪಿಸಲಿವೆ ಎಂಬ ಸತ್ಯವನ್ನು ಜನರಿಗೆ ಮನದಟ್ಟು ಮಾಡಿಸುವುದು ಪ್ರಜಾಪ್ರಭುತ್ವ ವಾದಿಗಳ ಕರ್ತವ್ಯವಾಗಿದೆ.
ಆದರೆ ಬಂಡವಾಳಶಾಹಿ ಮಾಧ್ಯಮಗಳು ದೇಶಕ್ಕೆ ಮೋದಿಯೇ ಅನಿವಾರ್ಯ ಎಂಬಂತ ವಾತಾವರಣ ಸೃಷ್ಟಿಸಿರುವುದರಿಂದ ಜನರೂ ಕೂಡ ಮಾಧ್ಯಮಗಳ ವರದಿಗಳಿಗೆ ಮಾರು ಹೋಗಿದ್ದಾರೆ.
ಅಂದ ಹಾಗೇ ಈ ಮೋದಿಯವರ ನೈಜ ಅಭಿವೃದ್ಧಿ ಏನು ಎಂಬುದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅದೇ ಗೋದ್ರಾ ‘ನರ ಬಲಿ ಹಾಗೂ ಅದಕ್ಕೆ ಪ್ರತಿಕಾರವಾಗಿ ನಡೆದ ಗೋದ್ರೋತ್ತರ ಕೋಮುಗಲಭೆಗಳು, ನರೇಂದ್ರ ಮೋದಿಯವರು ಈ ಹಿಂಸಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದು ಅಭಿವೃದ್ಧಿಯೇ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದಮನ ಮಾಡಿ ಎರಡು ಸಾವಿರ ಜನರನ್ನು ಕೊಂದು ಹಾಕಲು ಪ್ರೇರಣೆಯಾದದ್ದು ಅಭಿವೃದ್ಧಿಯೇ? ಎಂಬುದು ಚರ್ಚೆಯ ವಿಷಯ.
ಇವೆಲ್ಲ ಟೀಕೆಗಳಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯವರ ಬಳಿ ಉತ್ತರವಿಲ್ಲ. ಆದರೆ ದೇಶದ ಪ್ರಧಾನಿಯಾಗಬೇಕು ಎಂಬ ಮಹತ್ತರ ಹಂಬಲದಿಂದ ಮುಸ್ಲಿಂರ ಓಲೈಕೆಯಲ್ಲಿ ತೊಡಗಿರುವುದು ನರಹಂತಕರಿಗೆ ನಾಚಿಕೆಯಿಲ್ಲ. ಹಿಂದುತ್ವದ ಬಗ್ಗೆ ಬುರುಡೆ ಬಿಡುತ್ತಿದ್ದ ಮೋದಿಯವರು, ಅಪ್ಪಿತಪ್ಪಿಯೂ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿಲ್ಲ. ರಾಮಮಂದಿರದ ಬಗ್ಗೆ ಮಾತನಾಡುತ್ತ ಹೋದರೆ ಈ ದೇಶದ ಮತದಾರ ‘ಮಣೆ ಹಾಕುವುದಿಲ್ಲ ಎಂಬುದು ಘೋಷಿತ ಪ್ರಧಾನಿ ಅಭ್ಯರ್ಥಿಗೆ ಅರ್ಥವಾಗಿ ಹೋಗಿದೆ.
ಯಾವುದೇ ಸಭೆ ಸಮಾರಂಭಗಳಲ್ಲಿ ರಾಮಮಂದಿರವೇ ಅಸ್ತ್ರ ಮಾಡಿಕೊಳ್ಳುತ್ತಿದ್ದ ಮೋದಿ ಇತ್ತೀಚಿನ ದಿನಗಳಲ್ಲಿ ಆ ರಾಮನನ್ನು ಮತ್ತೇ ಕಾಡಿಗೆ ಕಳಿಸಿದ್ದಾರೆ. ದೇವರು ಮತ್ತು ಧರ್ಮಾಧಾರಿತ ರಾಜಕೀಯ ದೇಶದ ಜನ ಇಂದಿನ ಸಂದರ್ಭದಲ್ಲಿ ಒಪ್ಪಿ ಕೊಳ್ಳುವುದಿಲ್ಲ ಎಂದು ಮನವರಿಕೆಯಾದಾಗ ಮೊದಲು ‘ಶೌಚಾಲಯ ನಂತರ ‘ದೇವಾಲಯ ಎಂದು ವರಸೆ ಬದಲಿಸಿ ಪಕ್ಷ ಮತ್ತು ಸಂಘಪರಿವಾರಕ್ಕೆ ಮುಜುಗರ ತಂದಿದ್ದಲ್ಲದೆ ಅವರ ಕಂಗೆಣ್ಣಿಗೆ ಗುರಿಯಾದರು.
ಗುಜರಾತ್ನಲ್ಲಿ ಪಟೇಲರ ವೋಟ್ಗಳನ್ನು ಕಬಳಿಸಬೇಕಾದರೆ ಏನು ಮಾಡಬಹುದು ಎಂದು ಯೋಚಿಸುತ್ತಿದ್ದ ಮೋದಿಗೆ ಹೊಳೆ ದದ್ದೇ ಕೇಂದ್ರದ ಮಾಜಿ ಗೃಹ ಸಚಿವರಾಗಿದ್ದ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಹಣೆಯಲು ಪರ್ಯಾಯ ದಾರಿಯನ್ನು ಹುಡುಕಿಕೊಂಡರು. ಸುಮಾರು ೨೫೦೦ ಕೋಟಿ ರೂ. ವೆಚ್ಚದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅತ್ಯಂತ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವುದರ ಮೂಲಕ ಪಟೇಲ್ ಮತ್ತು ಠಾಕೂರ್ ಸಮುದಾಯದ ಮತ ಬ್ಯಾಂಕ್ನ್ನು ಗಟ್ಟಿ ಮಾಡಿಕೊಳ್ಳಲು ಕೈಹಾಕಿದರು.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಮೋದಿಯನ್ನು ಬೆಂಬಲಿಸುವವರು ಪುರೋಹಿತಶಾಹಿ ವ್ಯವಸ್ಥೆಯ ಮೇಲೆ ಒಲ ವನ್ನು ಹೊಂದಿದವರೇ ಹೊರತು ಬಹುಸಂಖ್ಯಾತ ಮುಸ್ಲಿಂ ಮತ್ತು ದಲಿತ ಮತಬಾಂಧವರಲ್ಲ. ಪುರೋಹಿತಶಾಹಿ ಮೌಲ್ಯಗಳಿಗಾಗಿ ಸಂಘ ಪರಿವಾರ ವಿಚಾರ ಶಕ್ತಿಯನ್ನು ಕೊಂದು ಗುಲಾಮರನ್ನಾಗಿಸುವುದು ಹಿಂದಿರುವ ಉದ್ದೇಶವಿರಬಹುದು.
ಎಲ್ಲಿ ಪುರೊಹಿತಶಾಹೀ ವ್ಯವಸ್ಥೆ ಇರುತ್ತದೋ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವೇ ಇಲ್ಲ.
ಪುರೋಹಿತಶಾಹಿ ವ್ಯವಸ್ಥೆಯ ಕಬಂಧ ಬಾಹುಗಳಿಂದ ಜನಸಾಮಾನ್ಯರನ್ನು ಬಿಡಿಸದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವಿರುವುದಿಲ್ಲ.
ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತನ್ನದೆಯಾದ ಸಂವಿಧಾನವಿದೆ ಆ ಸಂವಿಧಾನ ಎಲ್ಲಾ ಜಾತಿ, ಧರ್ಮಕ್ಕೆ ಮಹಾಗ್ರಂಥ ಅದನ್ನು ಜಾರಿ ಮಾಡಬೇಕಾದವರು ಪ್ರಗತಿಪರ ಮನಸ್ಸು. ಆದರೆ ಕೇವಲ ಒಂದು ಧರ್ಮದ ಆಧಾರದ ಮೇಲೆ ಆಡಳಿತ ನಡೆಸಲು ಮುಂದಾದ ಬಿಜೆಪಿಯವರಿಂದ ಹೇಗೆ ಸಾಧ್ಯ? ಅಭಿವೃದ್ಧಿ ಬಗ್ಗೆ ಮಾತನಾಡುವವರು ಇದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ದೇಶದ ಒಟ್ಟು ರಾಜ್ಯಗಳ ತಲಾ ವರಮಾನದ ಪ್ರಕಾರ ಗುಜರಾತ್ ೧೧ನೇ ಸ್ಥಾನದಲ್ಲಿದೆ ಎಂಬುದು ಈ ಮೋದಿಯನ್ನು ಸಮರ್ಥಿ ಸಿಕೊಳ್ಳುತ್ತಿರುವ ಭಟ್ಟಂಗಿಗಳಿಗೆ ಕಾಣಿಸುವುದೇ ಇಲ್ಲ. ಮೋದಿಯನ್ನು ವೈಭವೀಕರಿಸುವ ಜನರಿಗೆ ಮೊದಲನೇ ಸ್ಥಾನದ ಪಟ್ಟಿ ಯಲ್ಲಿರುವ ತಮಿಳುನಾಡು ಏಕೆ ಕಾಣಿಸುವುದಿಲ್ಲ ಎಂಬುದು ವಿಪರ್ಯಾಸವಲ್ಲವೇ?

Modi is best pm for india
ReplyDelete