ಆಗ ತಾನೇ ಜನಿಸಿ ಮಾಂಸದ ಮುದ್ದೆಯಂತಿರುವ ಮಗು ತಂದೆಯಿಂದಲೇ ಹತ್ಯೆಯಾಗುತ್ತೇನೆ ಎಂದು ಭಾವಿಸಿರಲಿಕ್ಕಿಲ್ಲ. ಮಾನವೀಯತೆ ಇಲ್ಲದ ಮನಷ್ಯರಿಂದ ಏನೆಲ್ಲಾ ಆಗುತ್ತವೆ ಎನ್ನುವುದಕ್ಕೆ ತನ್ನ ಕರುಳ ಕುಡಿಯನ್ನೇ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿ ಸಾಯಿಸಿದ್ದೇ ಸಾಕ್ಷಿ.ಅಷ್ಟಕ್ಕೂ ಕಾರಣ ಏನು ? ಮಗುವಿನ ಜನ್ಮಜಾತಕ ದೋಷದಿಂದ ತಂದೆಗೆ ಆಪತ್ತು ಕಾದಿದೆ ಎಂದು ಹೇಳಿದ ಜ್ಯೋತಿಷ್ಯಿಯೊಬ್ಬರ ಮಾತು ಕೇಳಿದ ತಂದೆಯೊಬ್ಬ ತನ್ನ ಕರುಳ ಕುಡಿಯನ್ನೇ ಕತ್ತರಿಸಿ ಹಾಕಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ರಾಜ್ಯಧಾನಿಯ ಸಮೀಪವಿರುವ ನೆಲಮಂಗಲದಲ್ಲಿ. ಮೂಢನಂಬಿಕೆ ಎಷ್ಟೊಂದು ಹಾಸುಹೊಕ್ಕಾಗಿದೆ ಎಂದರೆ ಹುಟ್ಟಿದ ಮಗುವನ್ನೇ ದೂರ ಮಾಡುತ್ತೇವೆ ಹೊರತು ಈ ಅನಿಷ್ಠ ಪದ್ಧತಿಗಳಿಂದ ದೂರವಾಗುವುದಿಲ್ಲ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ.
ಈ ಅಪಾಯದಿಂದ ಪಾರಾಗಬೇಕಾದರೆ ಕತ್ತೆಯ ಹಾಲನ್ನು ಮಗುವಿಗೆ ಹಾಕಿದರೆ ಮಗು ಸದೃಢವಾಗಿ ಬೆಳೆಯುತ್ತದೆ ಎಂದು ತನ್ನ ಹೆಂಡತಿಯನ್ನು ನಂಬಿಸಿ ಹಾಲಿನಲ್ಲಿ ವಿಷ ಬೆರಸಿ ಕುಡಿಸಿದಲ್ಲದೆ ಹೆಂಡತಿಗೂ ಕುಡಿಯುವಂತೆ ಒತ್ತಾಯಿಸಿದ್ದಾನೆ. ಆದರೆ ಹೆಂಡತಿ ಗಂಡನ ವಿಚಿತ್ರ ನಡುವಳಿಕೆ ನೋಡಿ ಸಂಶಯಗೊಂಡು ನಂತರ ಕುಡಿಯುತ್ತೇನೆ ಎಂದು ತಪ್ಪಿಸಿಕೊಂಡಿದ್ದಾಳೆ.
ವಿಷದ ಹಾಲು ಕುಡಿಸಿದ ಕೆಲವೇ ಕ್ಷಣಗಳಲ್ಲಿ ಮಗು ಅಸ್ವಸ್ಥವಾಗಿದೆ. ಇದರಿಂದ ಕಂಗಾಲಾದ ತಾಯಿ ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಹಸುಗೂಸಿನ ಪ್ರಾಣಪಕ್ಷಿ ಹಾರಿಹೋಗಿತ್ತು.
ಹೇಳಿ ಇಲ್ಲಿ ತಪ್ಪುಗಾರರು ಯಾರು? ಸಾವಿಗೆ ಕಾರಣರಾದ ತಂದೆಯೇ ಅಥವಾ ಅದಕ್ಕೆ ಪ್ರೋತ್ಸಾಹ ನೀಡಿದ ಜ್ಯೋತಿಷಿಯೇ ? ಜ್ಯೋತಿಷಿಗಳೇ ಇನ್ನೊಬ್ಬರ ಜೀವ ತೆಗೆಯುವಂತ ಜ್ಯೋತಿಷ್ಯ ನಿಮಗೇ ಬೇಕಾ? ಜ್ಯೋತಿಷ್ಯ ಎಂದರೆ ವಿಜ್ಞಾನ ಎಂದು ಜಂಭ ಕೊಚ್ಚಿಕೊಳ್ಳುತ್ತಿರುವ ತಾವುಗಳು ಇಲ್ಲಿ ಮಾಡಿರುವುದು ಏನು? ನಿಮ್ಮ ಹೊಟ್ಟೆ ಪಾಡಿಗಾಗಿ ಮಾಡುವ ಕೆಲಸಕ್ಕೆ ಇನ್ನೊಬ್ಬರ ಜೀವ ಬೇಕಾ? ತಪ್ಪು ಮಾಡಿದವರು ಮಗುವಿನ ತಂದೆಯೇ ಆಗಲಿ ಅದಕ್ಕೆ ಪರೋಕ್ಷವಾಗಿ ಬೆಂಬಲಿಸಿದ ಜ್ಯೋತಿಷಿಯೇ ಆಗಲಿ ಇಬ್ಬರಿಗೂ ಕಠಿಣ ಶಿಕ್ಷೆಯಾಗಲಿ. ಮುಂದೆ ಇಂತ ಅನಿಷ್ಠ ಘಟನೆಗಳು ಸಮಾಜದಲ್ಲಿ ಮರುಕಳಿಸಿದಂತೆ ಎಚ್ಚರವಹಿಸುವುದು ಅಗತ್ಯವಿದೆ.

No comments:
Post a Comment