Wednesday, 22 August 2012

ಶೆಟ್ಟರ್ ಮತ್ತೊಬ್ಬ ಡಿವಿ ಆಗುವುವರೇ?

ಕಳಂಕ ರಹಿತ ಆಡಳಿತ ನೀಡುವ, ದಕ್ಷ ನಾಯಕತ್ವಕ್ಕೆ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರ ಪದಚ್ಯುತಿಯಿಂದ ಋಜುವಾತಾಗಿದೆ. ಶಿಸ್ತಿನ ಪಕ್ಷ ಎಂದು ಬಾಯಿಬಿಡುತ್ತಿದ್ದ ಬಿಜೆಪಿಯಲ್ಲಿ ಜಾತಿರಾಜಕಾರಣ ಮಿತಿ ಮೀರಿದೆ. ಹಿಂದುತ್ವ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮಂದಿಯ ಮುಖವಾಡ ಕಳಚಿ ಬಿದ್ದಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಸದಾನಂದಗೌಡರನ್ನು ಏಕೆ ಬದಲಾಯಿಸಲಾಗುತ್ತದೆ ಎಂದು ಸಾರಿ ಹೇಳುವ ನೈತಿಕತೆ ಪಕ್ಷ ಮತ್ತು ಸಂಘ ಪರಿವಾರಕ್ಕೆಲ್ಲಿದೆ. 
ಹನ್ನೊಂದು ತಿಂಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡು ಅಧಿಕಾರ ನಡೆಸಿದ ಡಿ.ವಿ.ಸದಾನಂದಗೌಡರ ಕಾರ್ಯವೈಖರಿಯಿಂದ ಯಡಿಯೂರಪ್ಪನವರಿಗೆ ಸಹಿಸಲು ಸಾಧ್ಯವಾಗಿರಲಿಲ್ಲ ತಾನಂದುಕೊಂಡ ಕೆಲಸ ಆಗದೆ ಹೋದಾಗ ಕೆಟ್ಟ ವಿಚಾರಗಳಿಂದ ಪಟ್ಟದಿಂದ ಕೆಳಗಿಳಿಸಬೇಕು ಎಂದು ಹಟ ತೊಟ್ಟರು. ಇದರ ಭಾಗವಾಗಿ ತಮ್ಮ ವೈಯಕ್ತಿಕ ವಕ್ತಾರರಾದ ಬಿಪಿ ಹರೀಶ್ ಮತ್ತು ರೇಣುಕಾಚಾರ್‍ಯ ಎಂಬ ಬಾಯಿ ಬಡುಕರನ್ನು ಮುಂದೆ ಬಿಟ್ಟು ನಿಕಟಪೂರ್ವ ಸಿಎಂ ಸದಾನಂದಗೌಡರನ್ನು ಹಿಗ್ಗಾಮುಗ್ಗಾ ಹಿಯಾಳಿಸಲು ಮುಂದಾದರು.

ಇಲ್ಲಿಂದಲೇ ಶುರುವಾಯಿತು ಗುರು ಶಿಷ್ಯರ ರಾಜಕೀಯ ಚದುರಂಗದಾಟ. ಹಿಯಾಳಿಕೆ ಎದೆಗುಂದದ ಸದಾನಂದಗೌಡರು ಎದುರೇಟು ನೀಡಲು ಮುಂದಾದರು ಇವೆಲ್ಲ ಕಾರಣಗಳಿಂದ ವ್ಯಘ್ರರಾದ ಯಡಿಯೂರಪ್ಪ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಹಟ ಹಿಡಿದು ಪಟ್ಟ ಕಟ್ಟಿದರೋ ಅದೇ ವ್ಯಕ್ತಿಯನ್ನು ಪಟ್ಟದಿಂದ ಕೆಳಗಿಳಿಸಲು ವಾಮಮಾರ್ಗ ಅನುಸರಿಸಬೇಕಾಯಿತು. ಬೆಂಬಲಿಗ ಶಾಸಕರಿಂದ ರಾಜೀನಾಮೆ ಕೊಡಿಸಬೇಕಾಯಿತು. ಹೈಕಮಾಂಡ್ ಹಿರಿಯಣ್ಣ ಅಡ್ವಾಣಿಯವರ ಕೆಂಗೆಣ್ಣೆಗೆ ಗುರಿಯಾಗಬೇಕಾಯಿತು. ಕರ್ನಾಟಕ ರಾಜಕೀಯ ಬೆಳವಣಿಗೆಯಿಂದ ಬೇಸತ್ತ ಅಡ್ವಾಣಿ ಯಾವುದೇ ಕಾರಣಕ್ಕೂ ಸದಾನಂದಗೌಡರ ಬದಲಾವಣೆ ಸಾಧ್ಯವಿಲ್ಲ ಎಂದು ಘೋಷಿಸಬೇಕಾಯಿತು.
ಆದರೆ,
ಪರೋಕ್ಷವಾಗಿ ಯಡಿಯೂರಪ್ಪ ಅವರ ಒತ್ತಡದ ತಂತ್ರಕ್ಕೆ ಮಣಿದರು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಷ್ಟ್ರೀಯ ನಾಯಕತ್ವ ಈವರೆಗೂ ಸಮರ್ಥ ಕಾರಣ ಸಹ ನೀಡಿಲ್ಲವಾದರೂ ಅವರ ಪದಚ್ಯುತಿ ಕರ್ನಾಟಕದಲ್ಲಿ ಒಕ್ಕಲಿಗರು ಮತ್ತು ಲಿಂಗಾಯಿತರ ನಡುವೆ ವರ್ಗ ಸಂಘರ್ಷ ಹುಟ್ಟು ಹಾಕುವುದಂತು ಕಟುಸತ್ಯ   
ಧರ್ಮ ಪ್ರಚಾರಕ್ಕಷ್ಠೇ ಸಿಮಿತವಾಗಿದ್ದ ಮಠಾಧೀಶರನ್ನು ಸ್ವಾರ್ಥ ರಾಜಕೀಯಕ್ಕಾಗಿ ಬಳಸಿಕೊಂಡು ಸಮುದಾಯಗಳ ನಡುವೆ ವೈಮನಸ್ಯ ಹುಟ್ಟುಹಾಕಿ  ಜಾತೀಕರಣ ಮಾಡಿ ಕೆಟ್ಟ ಪ್ರಸಂಗಕ್ಕೆ ಕಾರಣರಾಗಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಪಟ್ಟ ವೀರಶೈವ ಸಮಾಜಕ್ಕೆ ಸಿಗಲೇಬೆಕೆಂದು ಹಟತೊಟ್ಟು ನಾಯಕತ್ಚ ಬದಲಾವಣೆ ಮುಂದಾಗಿರುವುದು ಜಾತಿ ವ್ಯಾಮೋಹವಲ್ಲದೆ ಮತ್ತೇನು? ಇಂತಹ ನಿರ್ಧಾರವನ್ನು ಖಂಡಿಸಿ ಒಕ್ಕಲಿಗ ಸಮುದಾಯ ಶಕ್ತಿ ಪ್ರದರ್ಶನ ಕೂಡ ನಡೆಸಿದೆ. ಸದಾನಂದ ಗೌಡ ಅವರ ಕುಮ್ಮಕ್ಕು ಇಲ್ಲದೆ ಇರಬಹುದು ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು ವ್ಯಕ್ತಿಗತ ಪ್ರತಿಷ್ಠೆಗೆ ಬಲಿಯಾಗುವುದು ಮಾತ್ರ ಗ್ಯಾರಂಟಿ.
ಸದಾನಂದಗೌಡ ಬದಲಾವಣೆಗೆ ಆಗ್ರಹಿಸಿ ಭಿನ್ನಮತೀಯ ಚಟುವಟಿಕೆ ನಡೆಸಿದ್ದಲ್ಲದೇ ಮುಖ್ಯಮಂತ್ರಿಗೆ ಅಸಹಕಾರ ನೀಡಿ ಇನ್ನಿಲ್ಲದಂತೆ ಕಾಡಿದ ಮಂತ್ರಿಗಳು ಹಾಗೂ ಶಾಸಕರ ಪೈಕಿ ಬೆರಳೆಣಿಕೆಯಷ್ಟು ಮಂದಿಯನ್ನು ಬಿಟ್ಟರೆ ಉಳಿದಂತೆ ಎಲ್ಲರೂ ಲಿಂಗಾಯುತ ಸಮುದಾಯಕ್ಕೆ ಸೇರಿದವರು ಎಂಬುದು ಕಟು ಸತ್ಯ.  ಸದಾನಂದಗೌಡ ಅವರನ್ನು ಕೆಳಗಿಳಿಸಿ ಜಗದೀಶ ಶೆಟ್ಟರ್ ಅವರಿಗೆ ಪಟ್ಟಾಭಿಷೇಕ ಮಾಡ ಬೇಕೆಂಬ ಒತ್ತಾಸೆಗೆ ಯಡಿಯೂರಪ್ಪ ಬೆನ್ನೆಲುಬಾಗಿ ನಿಂತಾಗ ಅದನ್ನು ಬಹಿರಂಗವಾಗಿ ಖಂಡಿಸಿ ಸ್ಪಷ್ಟವಾಗಿ ತಿರಸ್ಕರಿಸುವ ದಾಷ್ಟ್ರ್ಯವನ್ನು ಅಡ್ವಾಣಿಯವರನ್ನು ಹೊರತುಪಡಿಸಿ ಉಳಿದ ಬಿಜೆಪಿ ವರಿಷ್ಠರು ತೋರದೆ ಇರುವುದರ ಹಿಂದೆ ಪ್ರಬಲ ಕಾರಣವಿದೆ. ಯಡಿಯೂರಪ್ಪ ಅವರಿಂದ ಕಾಲಾನುಕಾಲಕ್ಕೆ ಉಪಕೃತರಾದವರು ಅದಕ್ಕಾಗಿಯೇ ಸದಾನಂದಗೌಡರಪರ ಸೊಲ್ಲೆತ್ತಲಿಲ್ಲ. ಭ್ರಷ್ಟಾಚಾರಕ್ಕೆ ಆಸದ್ಪ ನೀಡದೆ ಪಾರದರ್ಶಕ ಆಡಳಿತ ನೀಡಿದ ಮುಖ್ಯಮಂತ್ರಿಗಳ ಬೆಂಬಲಕ್ಕೆ ಸಂಘ ಪರಿವಾರವೂ ಬರಲಿಲ್ಲ ಏಕೆ?  
ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿಯಾಗಲು ಸಮ್ಮತಿಸುವಾಗ ಬಿಜೆಪಿ ವರಿಷ್ಠರು ಹಾಕಿರುವ ಷರತ್ತುಗಳು ಪಾಲನೆಯಾಗುತ್ತವೆಯೆ? ಮುಖ್ಯವಾಗಿ ಶೆಟ್ಟರ್ ಅವರು ಯಡಿಯೂರಪ್ಪ ಕೃಪಕಟಾಕ್ಷದಿಂದ  ಹೊರಬಂದು ಸ್ವತಂತ್ರ ಮತ್ತು ಸಮರ್ಥವಾಗಿ ಆಡಳಿತ ನಡೆಸಬಲ್ಲರೆ?
ಶೆಟ್ಟರ್ ಮುಖ್ಯಮಂತ್ರಿಯಾಗಿರುವುದರಿಂದ ಇಡೀ ಲಿಂಗಾಯುತ ಸಮುದಾಯದ ಬೆಂಬಲ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಸಿಗುವುದೆಂಬ ನಿರೀಕ್ಷೆ ಬಾಲಿಶತನದ್ದು. ಸದಾನಂದಗೌಡ ಪದಚ್ಯುತಿಯಿಂದ ಉಂಟಾಗಿರುವ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯಲು ಈಗಾಗಲೇ ಜೆಡಿಎಸ್ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.
ಒಕ್ಕಲಿಗರ ಭದ್ರಕೋಟೆಯ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಮೊದಲಿನಿಂದಲೂ ಹೋರಾಟ ನಡೆಸುತ್ತಲೇ ಬಂದಿದೆ. ಈಗ ಮುಖ್ಯಮಂತ್ರಿ ಬದಲಾವಣೆಯಿಂದ ಉಂಟಾಗಿರುವ ಪರಿಸ್ಥಿತಿಯ ಲಾಭ ಆ ಪಕ್ಷಕ್ಕೆ ವಿನ ಬಿಜೆಪಿಗಲ್ಲ. ಹಾಗೆಯೇ ಜಗದೀಶ್ ಶೆಟ್ಟರ್ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಲಿಂಗಾಯುತರ ಮತಗಳನ್ನು ಬಿಜೆಪಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಯಕ್ಷ ಪ್ರಶ್ನೆ

ಯಾಕೆಂದರೆ ಈಗ ಅವರನ್ನು ಮುಖ್ಯಮಂತ್ರಿ ಮಾಡಲೇಬೆಕೆಂದು ಹಠ ಹಿಡಿದು ಭಿನ್ನಮತೀಯ ಚಟುವಟಿಕೆ ನಡೆಸಿದ ಸಚಿವರೆಲ್ಲ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಪಕ್ಷಗಳನ್ನು ಬದಲಾಯಿಸಿ ಬಂದವರು.  ಅವರಿಗೆ ತತ್ವ ಸಿದ್ಧಾಂತ ಗೊತ್ತೇ ಇಲ್ಲ ಅಧಿಕಾರಕ್ಕಾಗಿ ಅವರೆಲ್ಲ ಯಾವುದೇ ಹಾದಿ ತುಳಿಯಲು ಸಿದ್ಧ. ಇಂತಹವರನ್ನು ಜತೆ ಇಟ್ಟುಕೊಂಡು ಬ್ಯಾಟಿಂಗ್ ಮಾಡಲು ಮುಂದಾದರೆ ಶೆಟ್ಟರ್ ಪಕ್ಷ ನಿಷ್ಠರ ವಿರೋಧ ಕಟ್ಟಿಕೊಳ್ಳುವುದು ಶತಃಸಿದ್ಧ.
ಸದ್ಯದ ಸ್ಥಿತಿಯಲ್ಲಿ ಅಡ ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗುತ್ತಾರೆ  ಶೆಟ್ಟರ್, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಸಿಎಂ ಸದಾನಂದಗೌಡರು ಪ್ರಜೆಗಳ ಹೊಗಳಿಕೆಗೆ ಪಾತ್ರರಾಗಿದ್ದರು ಭ್ರಷ್ಟಾಚಾರ ನಿಷ್ಪಕ್ಷಪಾತ ರಹಿತ ಆಡಳಿತ ನೀಡಿ ಆಡಳಿತದ ವೇಗ ಹೆಚ್ಚಿಸಿದ್ದರು ಆದರೆ ಬಿಜೆಪಿ ಹೈಕಮಾಂಡ್ ರಾಜ್ಯದ ಅಧಿಕಾರದಾಹಿ ಅಸಹ್ಯ ಜಾತಿ ರಾಜಕೀಯಕ್ಕೆ ಮಣಿದಿದೆ. ಹೈಕಮಾಂಡ್ ಲೋಕಮಾಂಡ್ ಎನ್ನವುದು ಮತ್ತೊಮ್ಮೆ ಸಾಬೀತಾಗಿದೆ.
ಡಿವಿ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ ಅಪಾರ ನಂಬಿಕೆಗೆ ಹಾಗೂ ದೀರ್ಘಕಾಲದ ಒಡನಾಡಿಯಾದ ತನ್ನ ನಿರ್ದೇಶನದಂತೆ ನಡೆಯುವ ಸೌಮ್ಯ ಸ್ವಭಾವದ ಸದಾನಂದಗೌಡರನ್ನೇ ನಂಬಲಿಲ್ಲ ಎಂದ ಮೇಲೆ ಉತ್ತರ ಕರ್ನಾಟಕದ ವೀರಶೈವ ಸಮಾಜದ ಪ್ರಶ್ನಾತೀತ ನಾಯಕ ಎಂದೇ ಗುರುತಿಸಿಕೊಂಡಿರುವ, ತಮಗೆ ಪರ್ಯಾಯವಾಗಿ ಬೆಳೆಯುವ ಶೆಟ್ಟರ್ ಅವರನ್ನು ಸಹಿಸಿಕೊಳ್ಳುತ್ತಾರಾ?
ಒಂದು ವೇಳೆ ಸಮುದಾಯದ ನಾಯಕ ಎಂದು ಸಹಿಸಿಕೊಂಡರು ಶೆಟ್ಟರ್ ಬಿಡ್ತರಾ, ಯಡ್ಡಿ ಹಿಂದೆ ಮಾಡಿದ್ದ ಕಿತಾಪತಿಗಳಿಗೆ ಮುಲಾಮು ಹಚ್ಚಲು ರೆಡಿಯಾಗುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ತಮ್ಮನ್ನು ಯಾವ ರೀತಿ ನಡೆಸಿಕೊಂಡರು ಎಂಬುದನ್ನು ಶೆಟ್ಟರ್ ನೆನಪಲ್ಲಿ ಇನ್ನೂ ಮಾಸಿಲ್ಲ ಆ ಸೇಡು ಮರುಕಳಿಸಿದರೆ ಯಡಿಯೂರಪ್ಪ ಢಮಾರ್.
ಇಂತಹ ಸಂದರ್ಭ ಸೃಷ್ಟಿಯಾದರೆ ಯಡಿಯೂರಪ್ಪ ಬೇರೆನೇ ಖ್ಯಾತೆ ತೆಗೆಯುತ್ತಾರೆ. ತಮ್ಮ ಬೆಂಬಲಿಗ ಸಚಿವರಿಂದ ಎಲ್ಲಾ ಕಡತಗಳಿಗೆ ಸಹಿ ಹಾಕಿಸಲು ಒತ್ತಡ ಹಾಕಿಸುತ್ತಾರೆ. ಕಣ್ಣುಮುಚ್ಚಿ ಈ ಕೆಲಸ ಮಾಡದೆ ಇದ್ದರೆ ಮತ್ತೇ ಶುರುವಾಗುತ್ತದೆ ಡಿವಿಗೆ ಕೊಟ್ಟ ಕೆಲಸ. ಇದೆಲ್ಲವನ್ನು ಪೂರ್ವಾಪರ ಆಲೋಚಿದ ಯಡಿಯೂರಪ್ಪವರು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಬೇಕಾದರೆ ಅವರಿಂದ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರ ನಿರ್ದೇಶನದಂತೆ ನಡೆಯಕೂಡದು ನನ್ನ ಬೆಂಬಲಿಗರ ಯಾವುದೇ ಕೆಲಸವನ್ನು ವಿಳಂಬ ಮಾಡದೆ ಮುಗಿಸಬೇಕು ಎಂಬುದು ಸೇರಿವೆ.
ಆದರೆ ಅನಂತಕುಮಾರ್ ಆಶೀರ್ವಾದ ಇರದಿದ್ದರೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುವುದು ಕಷ್ಟಸಾಧ್ಯ ಎಂಬುದು ಸ್ವತ: ಶೆಟ್ಟರ್‌ಗೆ ಮನವರಿಕೆಯಾಗಿದೆ. ಹಾಗಾದರೆ ಬಿಜೆಪಿ ಒಳ ಜಗಳದಲ್ಲಿ ಗೆದ್ದವರು ಯಾರು ಸೋತವರು ಮಾತ್ರ ಯಡಿಯೂರಪ್ಪ.

  •  

No comments:

Post a Comment