ಕಾಡ್ಗಿಚ್ಚಿನಂತೆ ಹರಡುತ್ತಿರುವ ಗಾಳಿಸುದ್ದಿಯಿಂದಾಗಿ ಇಶಾನ್ಯ ರಾಜ್ಯದ ಜನತೆ ಜೀವ ಭಯದಿಂದ ರಾಜ್ಯ ತೊರೆಯುತ್ತಿದ್ದಾರೆ. ಮೂಲ ಸ್ಥಾನಕ್ಕೆ ಹೋಗುತ್ತಿರುವ ಜನತೆಯನ್ನು ಒಲೈಸುವಲ್ಲಿ ನಿರತವಾಗಿರುವ ಸರ್ಕಾರ ಇಂತ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಆತಂಕದ ಮಡುವಿನಲ್ಲಿ ಜೀವ ಕಳೆಯುವಂತೆ ಮಾಡಿದೆ. ಇಂತ ವದಂತಿಗಳಿಗೆಲ್ಲ ಸಂಯಮ ಜೀವಿಗಳಾದ ಆಸ್ಸಾಮಿಗರು ಭಾವಾವೇಶದಿಂದ ಪ್ರತಿಕ್ರಿಯಿಸುವ ಸಂದರ್ಭ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಹತೋಟಿಯಲ್ಲಿ ಇಲ್ಲದಿರುವುದು ಅವರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಇತ್ತೀಚೆಗೆ ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಮಣಿಪುರದ ವಿದ್ಯಾರ್ಥಿಯೊಬ್ಬ ಸಂಶಯಾಸ್ಪ ಸಾವಿಗಿಡಾಗಿರುವುದು ಇಂತ ವದಂತಿಗಳಿಗೆ ಪುಷ್ಟಿ ನೀಡಿದೆ. ಆ ಸಾವಿನ ತನಿಖೆ ನಡೆಸುತ್ತಿರುವ ನಮ್ಮ ಪೊಲೀಸರಿಗೆ ರಹಸ್ಯೆ ಭೇದಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ನಮಗೇನು ರಕ್ಷಣೆ ನೀಡುತ್ತಾರೆ ಎಂಬುದು ಕೂಡ ಅವರ ಆತಂಕಕ್ಕೆ ಕಾರಣವಾಗಿರಬಹುದು.
ಬೆಂಕಿ ಇದ್ದಲ್ಲಿ ಮಾತ್ರ ಹೊಗೆ ಬರಲು ಸಾಧ್ಯ ಅಂಥ ಕೆಲಸ ನಗರದಲ್ಲಿ ಕೆಲವು ಕಿಡಿಗೆಡಿಗಳಿಂದ ಆಗಿದೆ. ಇಂಥ ಗಾಳಿ ಸುದ್ದಿ ಹಬ್ಬಿಸಿ ವಲಸಿಗರ ನೆಮ್ಮದಿಗೆ ಭಂಗ ಮಾಡುತ್ತಿರುವ ಇಂತಹ ಕಿಡಿಗೆಡಿಗಳನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕ್ಷಮಿಸಬಾರದು.
ತವರು ನೆಲಕ್ಕೆ ಮರಳುತ್ತಿರುವ ವಲಸಿಗರನ್ನು ರೇಲ್ವೇ ಸ್ಟೇಶನ್‌ಗೆ ಹೋಗಿ ತಡೆದರೆ ಸಾಲದು ಅವರ ರಕ್ಷಣೆ ಜವಾಬ್ದಾರಿ ಸರ್ಕಾರದ ಆದ್ಯ ಕರ್ತವ್ಯ ಎಂಬುದು ಮೊದಲು ತಿಳಿದುಕೊಳ್ಳಲಿ. ಈಶಾನ್ಯ ರಾಜ್ಯದ ವಲಸಿಗರನ್ನು ಉಳಿಸಿಕೊಳ್ಳುವಲ್ಲಿಯೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಷಯವಾಗಿದೆ. ರಾಜಕೀಯ ವಕಾಲತ್ತು ವಹಿಸುವ ಕೆಲವು ಸಂಘಟನೆಗಳು ತಮ್ಮ ಸಂಘಟನೆಯ ನಾಮಫಲಕ ಹಾಕಿಕೊಂಡು ಸಾಂತ್ವನ ಹೇಳುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಈಶಾನ್ಯ ರಾಜ್ಯದ ಜನರ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ಭಾವೈಕ್ಯತೆ ಭಂಗ ತರುತ್ತಿರುವುದರ ಹಿಂದೆ ಏನೋ ಷಡ್ಯಂತ್ರ ಅಡಗಿದೆ ಎಂದು ಬೇರೇನೂ ಹೇಳಬೇಕಾಗಿಲ್ಲ.
ಬೆಂಗಳೂರಿನಲ್ಲಿ ನೆಲೆಸಿರುವ ಹೆಚ್ಚು ಜನರು ಬುಡಕಟ್ಟು ಜನಾಂಗಕ್ಕೆ ಸೇರದವರು ಶ್ರಮಜೀವಿಗಳು ಬಸವಣ್ಣನವರ ಮೂಲಮಂತ್ರವಾದ ಕಾಯಕವೇ ಕೈಲಾಸ ಎಂಬುದು ಈ ಸಮುದಾಯದಲ್ಲಿ ಕಾಣಬಹದು ಯಾರಿಗೂ ತೊಂದರೆ ಮಾಡದೆ ತಮ್ಮ ಕೆಲಸವಾಯಿತು ತಾವಾಯಿತು ಎಂದು ಇದ್ದ ಸೌಮ್ಯವಾದಿಗಳಿಗೆ ಭಯ ಹುಟ್ಟಿಸುತ್ತಿರುವುದು ಏಕೆ? ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹರಸಿ ಬಂದ ಅಸ್ಸಾಂ, ಮಣಿಪುರ ರಾಜ್ಯಗಳಿಂದ ಬಂದು ನೆಲೆಸಿದ್ದ ಲಕ್ಷಾಂತರ ಜನರಿಗೆ ಬೆಂಗಳೂರು ತ್ಯಜಿಸಲು ಹಬ್ಬಿಸಿದ ವದಂತಿಗಳಲ್ಲದೆ ಬೇರೆ ಕಾರಣಳಿದ್ದರೆ ತನಿಖೆಗೊಳಪಡಿಸಬೇಕು.
ಭಾವೈಕ್ಯತೆಗೆ ಹೆಸರಾದ ಕರ್ನಾಟಕದಲ್ಲಿ ವಿಭಿನ್ನ ಸಂಸ್ಕೃತಿ. ಕನ್ನಡಿಗರ ಹೃದಯ ಶ್ರೀಮಂತಿಕೆ, ಹಂಚಿ ತಿನ್ನುವ ದೊಡ್ಡ ಭಾವನೆಗೆ ಇಂತ ಘಟನೆಗಳಿಂದ ಕಪ್ಪುಚುಕ್ಕೆ ಬರುವುದು ಗ್ಯಾರಂಟಿ. ಸಾಂಸ್ಕೃತಿಕ ಅನನ್ಯತೆಯ ತಾಣವಾಗಿರುವ ನಗರ ಇಂದು ಕಿಡಿಗೆಡಿಗಳ ತಾಣವಾಗುತ್ತಿದೆ. ಇದಕ್ಕೆ ಆಸ್ಪದ ಮಾಡಿಕೊಡದೆ ಎಲ್ಲರಿಗೂ ರಕ್ಷಣೆ ನೀಡುವತ್ತ ಸರ್ಕಾರ ದಿಟ್ಟ ಕ್ರಮಕೈಗೊಳ್ಳಲಿ.

No comments:
Post a Comment