ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಕೃತ್ಯದಲ್ಲಿ ತೊಡಗಿರುವ ನಮ್ಮ ಜನಪ್ರತಿನಿಧಿಗಳಿಗೆ ಏನ್ನನ್ನಬೇಕೋ ಗೊತ್ತಾಗುತ್ತಿಲ್ಲ. ಇವರ ರಾಜಕೀಯ ಹೈಡ್ರಾ ಮದಿಂದ ಜನರು ರೋಸಿ ಹೋಗಿದ್ದಾರೆ. ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದ ಜನರಿಗೆ ಭ್ರಮನಿರಸವಾಗಿದೆ. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ತಮ್ಮ ಕೈ ತಾವೇ ಹಿಸುಕಿಕೊಳ್ಳುತ್ತಿದ್ದಾರೆ. ಹಾದಿ ಬೀದಿಯ ಬಸವಣ್ಣರಾಗಿರುವ ನಮ್ಮ ರಾಜ ಕಾರಣಿಗಳನ್ನು ಮನಸ್ಸಿಗೆ ಬಂದಂತೆ ಬೈಯ್ದು ತಮ್ಮ ಕೆಲಸದಲ್ಲಿ ಮಗ್ನರಾಗಿ ಬಿಡುತ್ತಾರೆ. ಯಾರು ಬಂದರೇನು ನಮ್ಮ ಕಷ್ಟಗಳೇನು ಪರಿಹರಿಸುತ್ತಾರಾ ಎಂಬ ಉದಾಸೀನ ಭಾವನೆಯೂ ಕೂಡ ಇದಕ್ಕೆ ಕಾರಣವಾಗಿರಬಹುದು. ಪ್ರಸ್ತುತ ರಾಜಕೀಯದ ಬಗ್ಗೆ ರಾಜಕಾರಣಿಗಳನ್ನು ಏಕೆ ಟೀಕಿಸಬೇಕು? ಈ ಸ್ಥಿತಿಗೆ ನಾವೆಲ್ಲಾ ಹೊಣೆಗಾರರು ಎನ್ನುವುದನ್ನು ಕೂಡ ಒಪ್ಪಿಕೊಳ್ಳಲೇಬೇಕು? ಒಪ್ಪಿಕೊಂಡರೆ ಸಾಲದು ಬದಲಾವಣೆಗೆ ಮುಂದಾಗಬೇಕು. ರಾಜಕೀಯ ಕುಲಗೆಟ್ಟು ಹೋಗಿದೆ ಎಂದು ಕೈಕಟ್ಟಿ ಕುಳಿತರೆ ಏನೂ ಸರಿ ಹೋಗದು.
ಜನರ ನೋವು ನಲಿವುಗಳಿಗೆ ಅಡಿಯಾಳಾಗಿ ಕೆಲಸ ಮಾಡಬೇಕಾದ ಶಾಸಕರು ಪ್ರಬಲ ಜಾತಿ ನಾಯಕನ ಚೇಲಾಗಳಾಗಿದ್ದಾರೆ. ಜಾತಿ ಅಸ್ತ್ರವನ್ನು ಮುಂದಿಟ್ಟುಕೊಂಡು ನಾಯಕನಿಗೆ ಪಟ್ಟ ಕಟ್ಟಬೇಕು ಎಂದು ಬೀದಿ ಬೀದಿಯಲ್ಲಿ ಅಲೆಯುತ್ತಿದ್ದಾರೆ. ಒತ್ತಡದ ತಂತ್ರವಾಗಿ ರಾಜೀನಾಮೆ ನೀಡಿ ಹೈಕಮಾಂಡ್‌ನಿಂದ ಛೀಮಾರಿ ಹಾಕಿಸಿಕೊಂಡ ಸಚಿವರು ತೆಪ್ಪಗಾಗಿ ಮತ್ತೆ ರಾಜೀನಾಮೆ ವಾಪಸು ಪಡೆದಿದ್ದಾರೆ. ಯಾವುದೇ ಒತ್ತಡಗಳಿಗೆ ಮಣಿಯದೇ ಹಸನ್ಮುಖಿ ಸದಾನಂದಗೌಡರು ಪೂರ್ಣಾವಧಿ ನಾನೇ ಸಿಎಂ ಎಂದು ಮೈಮರೆಯುತ್ತಿದ್ದಾರೆ. ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಟ್ಟಂಗಿತನ, ಗುಂಪುಗಾರಿಕೆ ಲಜ್ಜಗೆಟ್ಟ ರಾಜಕೀಯಕ್ಕೆ ಬೆಲೆ ಕೊಡದೆ ತೆರೆಮರೆಯ ಸೂತ್ರಧಾರಿ ಬಿಎಎಸ್‌ವೈ ಮತ್ತು ಅವರ ಎಡಬಲ ಬಂಟರ ಅಧಿಕಾರ ದಾಹದಿಂದ ನೆಮ್ಮದಿಯ ಆಡಳಿತ ನೀಡಲು ಬಿಡುತ್ತಿಲ್ಲ. ಹೇಗಾದರೂ ಮಾಡಿ ಡಿವಿಎಸ್ ಅವರನ್ನು ಮಟ್ಟ ಹಾಕಬೇಕಾದರೆ ಸಿಎಂ ಪಟ್ಟದಿಂದ ಕೆಳಗಿಳಿಸಬೇಕು ತಮ್ಮ ನಿರ್ದೇಶನದಂತೆ ನಡೆಯುವ, ಸಮುದಾಯದವರೇ ಆದ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸೂಪರ್ ಸಿಎಂ ನಾನೇ ಎಂದು ಯಡಿಯೂರಪ್ಪನವರ ದೂರಾಲೋಚನೆ ಆದರೆ ಸಾರ್ವಜನಿಕರಿಗೆ ಸ್ಪಂದಿಸದ ಇವರು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಮತಬಾಂಧವರು (ಸಾರ್ವಜನಿಕರು) ನೋಡಿ ನೋಡದಂತೆ ಸುಮ್ಮನೆ ಕುಳಿತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸದೇ ಜಾತಿಗೊಬ್ಬ ನಾಯಕನನ್ನು ಬಿಂಬಿಸಿ ಜಾತಿಯ ಹೆಸರಿನಲ್ಲಿ ಒಟ್ಟಾಗುತ್ತಿರುವುದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮಾಡುತ್ತಿರುವ ದೊಡ್ಡ ಕಳಂಕವಾಗಿದೆ. ನಮ್ಮ ನಾಯಕರು ಕೇವಲ ನಾಯಕತ್ವ ಬದಲಾವಣೆ ಎಂಬ ವಿಷಯ ಮುಂದಿಟ್ಟುಕೊಂಡು ಆಂತರಿಕ ಕಚ್ಚಾಟದಲ್ಲೇ ಮುಳುಗಿದ್ದಾರೆ. ರಾಜಕೀಯದ ಮಲೀನತೆಗೆ ಯಾರು ಕಾರಣ ಎಂದು ಹೇಳಬೇಕಾಗಿಲ್ಲ ಅವರ ಚೆಲ್ಲಾಟವನ್ನು ಸಹಿಸಿಕೊಂಡು ಕುಳಿತಿದ್ದೇವೆಯೇ ವಿನಃ ಕುಲಗೆಟ್ಟು ಹೋಗಿರುವ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಬೇಕು ಎಂದು ಮುಂದಾಗುತ್ತಿಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾದರೆ ರಾಜ್ಯದ ಮತದಾರರ ಆಶೀರ್ವಾದವೇನು ಆಗಿರಲಿಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಭಟ್ಟಂಗಿಗಳ ಸ್ವಾರ್ಥರಾಜಕಾರಣ ಬಿಜೆಪಿಯನ್ನು ಅಧಿಕಾರದ ಅಂಗಳಕ್ಕೆ ತಂದು ನಿಲ್ಲಿಸಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಚನಭ್ರಷ್ಟತೆ ಆರು ದಶಕಗಳ ಕಾಲ ರಾಜಕೀಯ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಗೆ ಬೇಸತ್ತ ಜನತೆ ಹೊಸಬರಿಗೆ ಅವಕಾಶ ನೀಡಿದರೆ ಅಭಿವೃದ್ಧಿ ಕೆಲಸಗಳು ಆದಾವು ಎಂಬ ಮುಂದಾಲೋಚನೆಯಿಂದ ಪ್ರಬುದ್ಧ ಮತದಾರರು ಬಿಜೆಪಿಯನ್ನು ಬೆಂಬಲಿಸಿದರು. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದಿಂದ ಆಡುತ್ತಿದ್ದ ಮಾತುಗಳು, ಕೊಡುತ್ತಿದ್ದ ಭರವಸೆಗಳು, ಜ್ಯಾತ್ಯತೀತ ಸಮಾವೇಶಗಳು, ವಿಭಾಗವಾರು ಸಮಾವೇಶಗಳಲ್ಲಿ ಬಿಡುತ್ತಿದ್ದ ರೀಲುಗಳು, ಇವೆಲ್ಲವುಗಳಿಗೆ ಮಾರುಹೋದ ಮತದಾರರು ರಾಮರಾಜ್ಯದ ಕನಸುಗಳಿಗೆ ಹಂಬಲಿಸಿದ್ದ.
ಈ ಕನಸುಗಳ ಲೋಕದಲ್ಲಿ ತೇಲಾಡುತ್ತಿದ್ದ ಮತಬಾಂಧವರು ಬಿಜೆಪಿ ಆಡಳಿತ ವೈಖರಿಯಿಂದ ಭ್ರಮನಿರಸನಗೊಂಡಿದ್ದಾರೆ.
ಹಾವೇರಿ ಗೋಲಿಬಾರ್‌ನಿಂದ ಹಿಡಿದು ಇಲ್ಲಿಯವರೆಗೆ ಒಂದಿಲ್ಲೊಂದು ಸಮಸ್ಯೆ ಸುಳಿಯಲ್ಲಿ ಸಿಲುಕುತ್ತಲೆ ಬರುತ್ತಿರುವ ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗಿಂತ ಆಡಳಿತ ಪಕ್ಷದ ಶಾಸಕರ ಸಮಸ್ಯೆ, ಗದ್ದುಗೆ ಗುದ್ದಾಟವೇ ಜೋರಾಗಿದೆ. ಶಾಸಕರ ಬೆದರಿಕೆಗೆ ಅಂಜಿದ ಸರ್ಕಾರ ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿಯೇ ನಾಲ್ಕು ವರ್ಷ ಕಳೆದಿದೆ. ಚುನಾವಣೆಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೇ ಆಂತರಿಕ ಕಲಹದಲ್ಲಿಯೇ ಕಾಲ ದೂಡುತ್ತಾ ಬಂದಿದೆ.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸರಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸದೆ ಫಲವತ್ತಾದ ಕೃಷಿ ಭೂಮಿಯನ್ನು ಅಭಿವೃದ್ಧಿ ಎಂಬ ಅಸ್ತ್ರಕ್ಕೆ ಬಳಸಿಕೊಳ್ಳುತ್ತ ರೈತನ್ನು ಬೀದಿಪಾಲು ಮಾಡಿದೆ. ಇವು ಹಿಂದೆ ಆಡಳಿತ ನಡೆಸಿದ ಸರಕಾರಗಳು ಮಾಡಿರದ ಸಾಧನೆ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ಆಂತರಿಕ ಕಲಹದಲ್ಲೇ ಮುಳುಗಿರುವುದೇ ಬಿಜೆಪಿಯ ದೊಡ್ಡ ಸಾಧನೆಯಾಗಿದೆ.
ಇವೆಲ್ಲವುಗಳ ಹೊರತಾಗಿ ಹಿಂದಿನ ಸರ್ಕಾರಗಳಿಗಿಂತ ವಿಭಿನ್ನ ಆಡಳಿತದ ಪರಿಕಲ್ಪನೆ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಈ ಸರ್ಕಾರ, ನಾಡಿನಲ್ಲಿ ಹಿಂದೆಂದೂ ಕಂಡು ಕೇಳದಷ್ಟು ಅವ್ಯವಹಾರ ಇಂದಿನ ಸರ್ಕಾರದಲ್ಲಿ ನಡೆಯುತ್ತಿದೆ.
ಭ್ರಷ್ಟಚಾರ, ಸ್ವಜನಪಕ್ಷಪಾತ ಮಿತಿ ಮೀರಿದೆ. ಬಂಡೆದ್ದ ಶಾಸಕರು ಸಚಿವರ ನಾಯಕನೆಂದು ಕರೆಸಿಕೊಳ್ಳುತ್ತಿರುವ ತೆರೆ ಮರೆಯ ನಾಯಕ ಬಿಎಸ್ ಯಡಿಯೂರಪ್ಪನವರೇ ನಾನಾ ಹಗರಣಗಳಲ್ಲಿ ಸಿಕ್ಕುಕೊಂಡಿದ್ದಾರೆ. ಸರ್ಕಾರದಲ್ಲಿ ಕಳ್ಳರು, ಸುಳ್ಳರು, ಬ್ಯಾಂಕ್ ವಂಚಕರು, ಭೂಗಳ್ಳರು, ಅತ್ಯಾಚಾರಿಗಳು, ಲಂಚಕೋರರು, ಕಳ್ಳಸಾಗಣೆದಾರರು ತುಂಬಿ ತುಳುಕುತ್ತಿದ್ದಾರೆ ಇವರೆಲ್ಲರು ವಿಭಿನ್ನ ಸರ್ಕಾರದ ಮಂತ್ರಿ ಮಹೋದಯರು ಇಂತಹ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕೆಲವು ಡೋಂಗಿ ಮಠಾಧೀಶರು ತಮ್ಮ ಕೈಚಳಕ ತೋರಿಸುತಿದ್ದದ್ದು ಒಂದು ಕಡೆಯಾದರೆ ಸರ್ಕಾರದಿಂದ ಉದಾರ ಅನುದಾನ ಪಡೆದು ರಾಜಕೀಯ ಮಿಶ್ರಿತ ಧಾರ್ಮಿಕ ನಾಯಕರಾಗಿ ಪೋಸು ಕೊಡುತ್ತಿರುವುದು ಇನ್ನೊಂದು ಕಡೆ.
ಸರ್ಕಾರವನ್ನು ಗಟ್ಟಿಗೊಳಿಸಲು ಹೋಗಿ ಹಲವರ ಕೆಂಗಣ್ಣಿಗೆ ಗುರಿಯಾಗಿ ಬಂಡಾಯದ ಬಿಸಿಯನ್ನು ಎದುರಿಸಿ ಅಸ್ಥಿರತೆಯಲ್ಲಿಯೆ ಕಾಲ ಕಳೆದು ಅಭಿವೃದ್ಧಿಯೇ ಆಡಳಿತದ ಮಂತ್ರ ಎಂದು ಜಪ ಮಾಡಿ, ಹಗರಣಗಳ ಸುಳಿಗೆ ಸಿಲುಕಿದ ಮಾಜಿ ಮುಖ್ಯಮಂತ್ರಿ ತನ್ನ ನಿರ್ದೇಶನದಂತೆ ನಡೆಯುವ ಆಪ್ತರಲ್ಲಿ ಒಬ್ಬರಾಗಿದ್ದ ಡಿವಿಎಸ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಪಟ್ಟುಹಿಡಿದು ಕುರ್ಚಿಗೆ ಕೂರಿಸಿದ್ದ ಯಡಿಯೂರಪ್ಪ ಅದೇ ಕುರ್ಚಿಯಿಂದ ತೊಲಗಿಸಲು ಎಲ್ಲ ವಾಮಮಾರ್ಗಗಳನ್ನು ಪ್ರಯೋಗಿಸುತ್ತಿದ್ದಾರೆ.
ಆದರೂ ಪ್ರಯೋಜನವಾಗುತ್ತಿಲ್ಲ ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬ ಗಾದೆ ಯಡಿಯೂರಪ್ಪನಂತವರನ್ನು ನೋಡಿಯೇ ಹುಟ್ಟಿಕೊಂಡಿರಬಹುದು. ಆದರೂ ಯಡಿಯೂರಪ್ಪ ಅಂತ ಕೆಲಸಕ್ಕೆ ಮತ್ತೇ ಕೈಹಾಕಿದ್ದಾರೆ. ಡಿವಿಎಸ್ ಮಾಡಿದ ರೀತಿ ಜಗದೀಶ್ ಶೆಟ್ಟರ್ ಅವರಿಂದ ಮರುಕಳಿಸದಿರಲಿ, ಭ್ರಷ್ಟಾಚಾರದ ಕಳಂಕಗಳ ಕಿಂಚಿತ್ ಅವಮಾನವೂ ಇಲ್ಲದಂತೆ, ಈ ಗುಂಪುಗಾರಿಕೆಯಲ್ಲಿ ಮುಳುಗಿರುವ ಜನಪ್ರತಿನಿಧಿಗಳಿಗೆ ಯಾವುದೇ ಅವಮಾನ ಕಾಡುತ್ತಿಲ್ಲ, ಆದರೆ ಕುರ್ಚಿ ವ್ಯಾಮೋಹವೇ ಅಂತಹದ್ದಲ್ಲವೇ?

No comments:
Post a Comment