Saturday, 5 May 2012

ಅಮ್ಮಾ ನಿನಗೆ ಕೊಟ್ಟ ಕಷ್ಟಗಳೆಷ್ಟು

ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ, ಗೌರವವಿದೆ. ಪ್ರತಿ ದಿನಗಳು ಅಮ್ಮನನ್ನು ನೆನೆಯದ ಕ್ಷಣಗಳಿಲ್ಲ ಅವಳು ದಿವ್ಯ ವ್ಯಕ್ತಿ ವರ್ಣನೆಗೆ ಸಿಗದ ಶಕ್ತಿ.
ಪಾಶ್ಚಿಮಾತ್ಯ ರಾಷ್ಟ್ರಗಳು ವರ್ಷದಲ್ಲಿ ಒಂದು ಬಾರಿ ಅಮ್ಮನ ಹೆಸರಿನಲ್ಲಿ ಆಚರಣೆ ಮಾಡುತ್ತಾರೆ. ನಾವು ದಿನನಿತ್ಯವೂ ಪೂಜಿಸುತ್ತೇವೆ ಗೌರವಿಸಿಸುತ್ತೇವೆ ಆಧರಿಸುತ್ತೇವೆ ಆದರೂ ಅವರ ಆಚರಣೆಗೆ ನಾವು ತಲೆಬಾಗಿದ್ದೇವೆ ಎಂಬುದು ಅತಿಶೋಕ್ತಿಯ ವಿಷಯ. ತಲೆಬಾಗಿರುವುದು ಪಾಶ್ಚಿಮಾತ್ಯ ಸಂಸ್ಕೃತಿಗಲ್ಲ ತಾಯಿ ಎಂಬ ದಿವ್ಯ ಶಕ್ತಿಗೆ.
ಏನೇ ಇರಲಿ ಶಕ್ತಿಯ ಬಗ್ಗೆ ಒಂದೇ ದಿನದಲ್ಲಿ ಅವಳು ಮಾಡಿದ ಎಲ್ಲಾ ಋಣವನ್ನು ತಿರಿಸಲು ಹೇಗೆ  ಸಾಧ್ಯ ?
ಪ್ರಪಂಚದ ಅರಿವೆಯೇ ಇಲ್ಲದೆ ಅಂಧಕಾರದಲ್ಲಿದ್ದ ನಮಗೆ ಜನವಿತ್ತ ದೇವತೆ! ಒಂಬತ್ತು ತಿಂಗಳು ಹೊಟ್ಟೆಯೊಳಗಿಟ್ಟುಕೊಂಡು, ಅದೇ ಉಸಿರನ್ನಿತ್ತ ಅಮ್ಮನ ಬಗ್ಗೆ ಪದಗಳಲ್ಲಿ ಹಿಡಿದಿಡಲು ಹೋಗುತ್ತೇವೆ ಎಂದರೆ ನಮ್ಮಂಥ ಮೂರ್ಖರು ಯಾರು   ಇಲ್ಲವೆಂದು ಅರ್ಥ.
ಕೆಟ್ಟ ಸಂಸ್ಕೃತಿ ಇರಬಹುದು, ಕೆಟ್ಟ ಸಮಾಜ ಇರಬಹುದು ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ತಾಯಿ ಬರೇ ತಾಯಿಯಲ್ಲ ತ್ಯಾಗಮಯಿ, ನಿಸ್ವಾರ್ಥಿ, ಕಷ್ಟಕಾರ್ಪಣ್ಯಗಳನ್ನು ಹೃದಯದಲ್ಲಿ ಹದುಮಿಟ್ಟುಕೊಂಡು ಒಳಿತನ್ನೆ ಬಯಸುವ, ನಗುಮೊಗದಿಂದಲೇ ಮಾತನಾಡುವ ಸಹೃದಯಿ, ಅಮ್ಮ ಸೂಚಿಸುವ ಮಾರ್ಗ ಹೂವಿನ ಹಾದಿ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಅಮ್ಮನೆಂಬ ತ್ಯಾಗಮಯಿಯ ಚಿಲುಮೆ ಅಚ್ಚೊತ್ತಿದಂತಿರುತ್ತದೆ.
 ಇಂಥ ತ್ಯಾಗಮಯಿಯ ಮುಂದೆ ಪ್ರತಿಯೊಂದು ಕ್ಷಣದ ಸವಿಯನ್ನು ಹೇಳಿಕೊಳ್ಳಬೇಕು ಎನಿಸುತ್ತದೆ. ಅದು ಅಮ್ಮನ ಹತ್ತಿರ ಮಾತ್ರ. ಯಾಕಂದ್ರೆ ಆಕೆ ಅಮ್ಮ ಅಲ್ವಾ ಅದಕ್ಕೆ ಬದುಕಿನ ತಲ್ಲಣಗಳ ನಡುವೆ ಪ್ರತಿಯೊಂದು ಕ್ಷಣದಲ್ಲೂ ತನ್ನ ಪಾತ್ರ ಬದಲಾಯಿಸುತ್ತಾ ಪ್ರೀತಿಯ ಬಾಳಸಂಗಾತಿಯಾಗಿ ಸ್ನೇಹಿತೆಯಾಗಿ ಜೀವ ತುಂಬುವವಳಾಗಿರುತ್ತಾಳೆ.
ಅಮ್ಮ ಅಕ್ಕನಾಗಿಯೂ, ಮಗಳಾಗಿ ತಂಗಿಯಾಗಿಯೂ ಗಂಡನಿಗೆ ಪ್ರೀತಿಯ ಬಾಳಸಂಗಾತಿಯಾಗಿಯೂ ಎಲ್ಲಾ ಪಾತ್ರಗಳಿಗೂ ಮಾನವೀಯ ಗುಣ ತುಂಬುತ್ತಾಳೆ. ಸಮಾಜದಲ್ಲಿ ಮಗು ಗೌರವಯುತವಾಗಿ ಬಾಳುವಂತಾಗಬೇಕು ಎಂಬ ಅದಮ್ಯ ತುಡಿತವಿರುತ್ತದೆ. ನಮ್ಮ ಸಾಧನೆಯ ಹಿಂದೆ ಎರಡಕ್ಷರದ ತಾಯಿಯ ಚೈತನ್ಯವಿರುತ್ತದೆ. ನಮ್ಮ ಶ್ರೇಯಸ್ಸು ಬಯಸುವ ತಾಯಿ ಕೇವಲ ಸಂಬಂಧದ ಸೃಷ್ಟಿಕರ್ತಳಲ್ಲ ಅವಳು ನಮ್ಮ ಪಾಲಿನ ಜೀವಂತ ದೇವರು.
ಮಕ್ಕಳ ನೋವುಗಳಿಗೆ ಕಿವಿಯಾಗುವ ನಲಿವುಗಳಿಗೆ ದನಿಯಾಗುವ ಅತ್ತರೆ ಅಕ್ಕರೆಯಿಂದ ಕೈತುತ್ತು ತಿನ್ನಿಸುತ್ತ ಚಂದಮಾಮನ ಕಥೆ, ಅಮ್ಮನ ಲಾಲಿ ಹೇಳುತ್ತ ರಮಿಸುವ ದಿನಗಗಳು ನೆನಪಿಸಿಕೊಂಡರೆ ಅಮ್ಮಾ ನಾವು ಎಷ್ಟು ತೊಂದರೆ ಕೊಟ್ಟಿದ್ದೇವೆ ಅನಿಸುತ್ತೇ. ಆದ್ರೂ  ಮತ್ತೇ  ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಪ್ರೀತಿ ಮಮತೆ, ಬಯಸುವ ನಿನ್ನ ಹೃದಯದಲ್ಲಿ ಅಡಗಿ ಕುಳಿತುಕೊಳ್ಳಬೇಕು ಎಂಬ ಮಹದಾಸೆ.
ಅಂದು ಜೋರಾಗಿ ಬರುವ ಮಳೆಗೆ ಸಿಕ್ಕು ನೆನದು ಮನೆಗೆ ಬಂದಾಗ ಮನೆಯವರೆಲ್ಲ್ಲರೂ ಬೈದರೂ ಆದ್ರೆ ನೀನು ಬಾ ಮಗಾ ಎಂದು ಸೆರಗಿನಿಂದ ತಲೆ ಒರಸಿ ಬೈದೇ ನನಗಲ್ಲ ಮಳೆಗೆ.
ಅಂದು ಅಮ್ಮನ ತೋಳಿನಲ್ಲಿ ಬಂದಿಯಾಗಿ ಬೆಳೆದ ಕ್ಷಣಗಳು ಇಂದು ನೆನಪಿನ ಬುತ್ತಿಯಲ್ಲಿ ತೇಲುತ್ತಿವೆದುಡ್ಡೊಂದಿದ್ದರೆ ಏನೆಲ್ಲಾ ಪಡೆಯಬಹದು ಎಂಬ ಅಹಂಕಾರಿಗಳಿಗೆ ಅಮ್ಮನ ಶಕ್ತಿ ಅರ್ಥವಾದರೆ ಸಾಕು ಅದುವೇ ಅವರು ಸಲ್ಲಿಸುವ ಮಾತೃಪೂಜೆಹತ್ತು ತಿಂಗಳು ಹೆತ್ತು ಹೊತ್ತು ಸಾಕಿ ಬೆಳೆಸಿದ ಅಮ್ಮನಿಗೆ ನಾವು ಏನೇ ಕೊಟ್ಟರು ಅವಳ ವಾತ್ಸಲ್ಯದ ಮುಂದೆ ಕೇವಲ ಒಂದು ಹುಲ್ಲು ಕಡ್ದಿಯತರ ಅಲ್ವ !




1 comment:

  1. ya Malagatti's really your article is very true, because in this present world man forgot the all relationship and living with selfish, Now man giving importance to money, not humanities. so, i think your article is touching in madness,kindness,heartless, selfish heart. you wrote well about mother, mother love and how is condition mother and son relationship? in modern, electrical, world. i am very happy
    Thank you,

    ReplyDelete