Monday, 23 April 2012

ಆಡಿದ ಮಾತುಗಳು ಮಾತ್ರ ಮನಸ್ಸಿನಲ್ಲಿ ಹಾಗೆ ಉಳಿದು ಬಿಡುತ್ತವೆ


ಜಗಳ ಕೆಲವೇ ಹೊತ್ತಿನಲ್ಲಿ ಮುಗಿದು ಹೋಗುತ್ತದೆ ಆದರೆ ಆಡಿದ ಮಾತುಗಳು ಮನಸಿನಲ್ಲಿ ಹಾಗೇ ಉಳಿದು ಬಿಡುತ್ತವೆ. ಕೋಪದಲ್ಲಿ ಆಡಿದ ಮಾತು ನಮ್ಮನ್ನು ಶಾಶ್ವತ ತಪ್ಪಿತಸ್ಥರನ್ನಾಗಿ ಮಾಡಿಬಿಡುತ್ತದೆ ಎಂದು ಎಲ್ಲೋ ಓದಿದ ನೆನಪು.

ಸಹಿಸದ ಸಿಲ್ಲಿ ವಿಚಾರಗಳಿಗೆ ಮನಸ್ತಾಪ ಮಾಡಿಕೊಂಡು ಬಿಟ್ಟ ಮಾತು ಪರಿ ನೋವು ಮಾಡುತ್ತೆ ಅಂತ ಅಂದುಕೊಂಡಿರಲಿಲ್ಲ. ವ್ಯಕ್ತಿಯ ಮೌಲ್ಯ ಗೊತ್ತಾಗುವುದು ನಮ್ಮಿಂದ ದೂರಾದಗಲೇ ತಾನೇ!
ನಾನು ಹೇಳುತ್ತಿರುವುದು ನಿಜವಾಗಿಯೂ ಕಳೆದುಕೊಂಡ ಸ್ನೇಹಕ್ಕಾ ಅಥವಾ ಅವಳಾಡಿದ ಮಾತುಗಳಿಗಾ! ಮತ್ತೆ ಮತ್ತೆ ಅದೆ ವಿಷಯದ ಮೇಲೆ ಗಮನ ಹರಿಸಿದಾಗ ನಿಜಕ್ಕೂ ಆಶ್ಚರ್ಯ ಕಾದಿತ್ತು. ಮೊದಲಿದ್ದ ಸಲುಗೆ ಇಂದಿಗೂ ಇದೆಯಾ ಸಂದೇಹ ಬೇಡ  ಎಲ್ಲವನ್ನು ಮರೆತು ಮಾತನಾಡಿದಳು ನಿರವ ಮೌನಿ. ಅಂದು ಕೊನೆಯದಾಗಿ ಹೇಳಿದ ಹಾಗೆ ನಡೆದುಕೊಂಡಳು ಕೂಡ, ಯಾರ ಮಾತು ಯಾರಿಗೂ ಅನಿವಾರ್ಯ ಅಲ್ಲ ಆದ್ರೆ ಅದು ನನಗೆ ಅನಿವಾರ್ಯವಾಗಿ ಕಾಡಿತ್ತು.
ನೀನು ಇಲ್ಲಿ?’ ಮಾತುಗಳ ಪ್ರಶ್ನೆಗಳಿಗಿಂತ ಮುಖದ ಪ್ರಶ್ನೆಗಳೇ ಎದ್ದು ತೋರಿದವು. ಫೆಸ್‌ಬುಕ್‌ನಲ್ಲಿ ಬಂದ ಒಂದು ಸಂದೇಶ ನಿಮ್ಮ ಮೇಲಿನ ಕೋಪವೆಲ್ಲ ಅಳಿಸಿ ಹಾಕಿತು ಒಂದು ಸಂದೇಶದಿಂದ ನನಗೆ ಏನು ಉತ್ತರಿಸಬೇಕೆಂದೇ ಗೊತ್ತಾಗಲಿಲ್ಲ.
ಏನಾಯ್ತೋ ನಿಂಗೆ, ಓಕೆ, ಕಣ್ತುಂಬಾ ನೋಡೋ ಆಸೆ ನಾ! ನೋಡು ನೋಡು! ಮುಗಿದ ನಂತರ ಹೇಳು  ಎಂದು ಪುನಃ ನಕ್ಕಳು. ಎಷ್ಟೆಂದರೂ ನಗಲೆಂದೇ ಹುಟ್ಟಿದವಳಲ್ಲವೇ? ಆದರೆ ಮತ್ತೆ ಅದೆ ಸಲುಗೆಯಲ್ಲಿ ಮಾತನಾಡಿದ್ದು ನೋಡಿದರೆ ತಾರ್ಕಿಕ ಅಂತ್ಯ ಕಂಡಿದ್ದ ಸ್ನೇಹಕ್ಕೆ ಕಥೆಯನ್ನು ಪುನಃ ಬರೆಯಲು ಪುಷ್ಟಿ ನೀಡಿದಳು.
ಇಲ್ಲ ಹಾಗೇನಿಲ್ಲ ಮಾತನಾಡಿದಳು ಎಂದು ಹಿಗ್ಗಬೇಡ, ಯಾರ ಮಾತು ಯಾರಿಗೂ ಅನಿವಾರ್ಯ ಅಲ್ಲ ಮತ್ತೆ ಬರುತ್ತೇನೆ ನಿನ್ನ ಜೊತೆ ಕಳೆದ ಸವಿ ನೆನಪಿಗಾಗಿ. ಸತ್ಯವಾಗುತ್ತದೆ ಎಂದೆನಿಸಲಿಲ್ಲ. ಮಾತನಾಡುತ್ತಿರುವಾಗ ಅದೆ ಮಂದಸ್ಮಿತ ನಗು, ಸ್ವಲ್ಪವೂ ಸಿಟ್ಟಿಲ್ಲದ ಸ್ನೇಹದ ಸಲುಗೆ ಅದು ಅಮೃತದ ಗಳಿಗೆ.
ಅವತ್ತು ತುಂಬಾ ನೊಂದಿದ್ದೆ ನೊಂದಿದ್ದೆ ಅನ್ನುವುದಕ್ಕಿಂತ ಅವರನ್ನು ತುಂಬಾ ಪೀಡಿಸಿದ್ದೇ, ಕಾಡಿಸಿದ್ದೇ ಸ್ನೇಹಕ್ಕಿದ್ದ ಗೌರವೂ ಕೂಡ ಒಂದು ಮಾತಿನಿಂದ ಕಳಚಿಹೋಗಿತ್ತು. ಮತ್ತೆ ಯಾಕೋ ಗೊತ್ತಿಲ್ಲ, ನೀನು ನೆನಪಾಗತೋಡಗಿದೆ. ನಾನು ಸುಮ್ಮನಿದ್ದೆ, ನಿನ್ನ ಜೊತೆ ಯಾವುದೇ ಹಂಗು ಇರಲಿಲ್ಲ. ಸುಮ್ನಿರೋ? ಹಳೆ ಕಥೆಯೆಲ್ಲಾ ನೆನಪಿಸಬೇಡ. ಈಗ ಎಲ್ಲಾ ಮರೀಬೇಕು. ಮರಿಬೇಕಾ? ಎಂದೆ. ನಕ್ಕಳು. ಅವಳನ್ನು ನಗಿಸುವುದು ಅಷ್ಟೇನೂ ಕಷ್ಟದ ಕೆಲಸ ವಾಗಿರಲಿಲ್ಲ. ಏಕೆಂದರೆ ನಗಲು ಅವಳಿಗೆ ಕಾರಣ ಬೇಕಿರಲಿಲ್ಲ. ‘ಯಾಕೆ ಗೊತ್ತಾ ನಾ ಬಂದಿದ್ದು. ನೀನು ಒಳ್ಳೆಯವನಂತ ಅಲ್ಲ ಎಂದು ಚುಚ್ಚಿದಳು. ಮನಸ್ಸಲ್ಲಿ ಏನೇ ಇರ್ಲಿ, ನಗಿಸ್ತೀಯಾ. ಇಷ್ಟು ದಿನಗಳ ನಂತರ ಭೇಟಿಯಾದ್ರೂ ಇನ್ನೂ ನಿಂಗೆ ಗೊತ್ತಿದೆ ನನ್ನ ಹೇಗೆ ನಗಿಸ್ಬೇಕು ಅಂತ. ನಿನ್ನ ನೋಡಿದ್ರೆ ಮನಸ್ಸು ಖುಷಿಯಾಗತ್ತೆನಾನ್ಯಾವತ್ತೂ ನಿನ್ನಿಂದ ದೂರ ಆಗಿದ್ದೆ ಅಂತ ಅನಿಸಲೇ ಇಲ್ಲ. ನೀನು ಬರ್ತಿ ಅಂತ ಮನಸ್ಸು ಹೇಳ್ತಾ ಇತ್ತು  ಹೇಳ್ಬಾರದಿತ್ತೇನೋ..
ಆದ್ರೆ ನಿನ್ನ ಗೆಳಯನಾಗಿ ಮೊದಲಿನಂತೆ ಹೊಡೆದಾಟ ಬಡಿದಾಟ ಮಾಡ್ಬೇಕು ಅಂತ ಆಸೆ. ನಿನ್ನ ದೂರ ಮಾಡಿದ್ದು ಒಟ್ಟಿಗೆ ಕೆಲಸ ಮಾಡಿದ ನಮ್ಮ ಮಧ್ಯೆ ಇಲ್ಲದ ಸಲ್ಲದ ಗೋಡೆಗಳನ್ನು ಬೆಳೆಸಿಕೊಂಡದ್ದು ಛೇ    ಎಂದು ಬೇಸರ ವ್ಯಕ್ತಪಡಿಸಿದೆ.
ಅವಳು ಉತ್ತರಿಸಲಿಲ್ಲ. ಪುನಃ ಅದೇ ಮನೆಗೆ ಬಂದ್ಯಾ?’ ಎಂದು ಕೇಳಿದಂತಾಯಿತು.
ಹೌದು ಅದು ಬಿಟ್ಟರೆ ನನ್ನ ಬಳಿ ಹೆಚ್ಚು ಮಾತುಗಳು ಇರಲಿಲ್ಲ. ಸರಿ ನಾ ಬರ್ಲಾಏನನ್ನೋ ಯೋಚಿಸುತ್ತಾ ಅಂದಳುಹೃದಯದಲ್ಲಿ ನೀನು ಟಾಟಾ ನಾನು ಬಿರ್ಲಾ ಸದ್ಯಕ್ಕೆ ಲೇಟಾಯ್ತು ಗೆಳೆಯ ನಾ ಬರ್ಲಾ ಇನ್ನೊಮ್ಮೆ ಸಿಗುತ್ತೇನೆ, ಇನ್ನು ಭೇಟಿ ಇದ್ದಿದ್ದೇಎಂದು ತಿರುಗಿ ಹೊರಟಳು.
ಪರಿಸ್ಥಿತಿಗೆ ಸಿಲುಕಿ ಮರೆತು ಮರೆಯಾದ ಸ್ನೇಹದ ಭಾವನೆಗಳನ್ನು ಪುನಃ ಕೆದಕಿ ಭಾವುಕನಾದೆ. ಭಾವುಕತೆಯಲ್ಲಿ ಕವಿ ಹೇಳಿದ ಒಂದು ಮಾತು ನೆನಪಿಗೆ ಬಂತು.
 
ಅರಳದ ಕನಸಿಗೆ ಭಾವವು ನೊಂದಿದೆ ..
ಸಿಗದ ಸ್ನೇಹಕ್ಕೆ  ಹೃದಯವು ಹೊಡೆದಿದೆ..
ಕಂಡ ಕನಸಿಗೆ ಮತ್ತೆ ಜೀವ ತುಂಬಬೇಕಿದೆ..
ಕದವು ತೆರೆದಿದೆ..
ಮರಳಿ ಬರುವೆಯಾ ನೀನು ಹೋದ ದಾರಿಯಲ್ಲಿ?
  ಬಚ್ಚಿಟ್ಟ ಭಾವನೆಯಲಿ.. ಸುತ್ತಿಟ್ಟ ಕನಸಲಿ,

                     ಮೈ ಮರೆತು ಯೋಚಿಸಿದಾಗ ಮಿಂಚಂತೆ
                     ನೆನಪಾಗುವ ಸ್ನೇಹಿತೆ  ಮರೆಯಲೇನು ನಿನ್ನ ?
                     ಹೃದಯದಲಿ ನೀನಿದ್ದರೆ ಮರೆಯಬಹುದಿತ್ತೇನೋ..
                     ಆದರೆ..!
                     ಹೃದಯವೇ ನೀನಾದರೆ ಹೇಗೆ ತಾನೆ ಮರೆಯಲಿ?


No comments:

Post a Comment