J¸ïJ¥sïL ¸ÀAWÀl£ÉUÉÆAzÀÄ §»gÀAUÀ ¥ÀvÀæ JA§ ²¶ðPÉAiÉÆA¢UÉ ¥ÀæPÀlªÁzÀ ¯ÉÃR£À N¢ D±ÀÑAiÀÄð ªÀÄvÀÄÛ £ÉÆÃªÀÅ KPÉAzÀgÉ ¥ÀæeÁ¥Àæ¨sÀÄvÀé gÁµÀÖçzÀ°è C©üªÀåQÛ ¸ÁévÀAvÀæöå J£ÀÄߪÀÅ¢zÉ JA§ÄzÀ£ÀÄß ¸ÉßûvÀ ªÀÄgÉvÀAvÉ PÁt¸ÀÄvÀÛzÉ.
ಭಾರತ ದೇಶ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಬದ್ದವಾಗಿ ಒಪ್ಪಿಕೊಂಡಿದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮಂತ್ರವನ್ನು ಜಪಿಸುತ್ತಿರುವ ನಾವುಗಳು ಈ ತತ್ವಕ್ಕೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿರುವ ಶಂಕೆ ನಾಡಿನ ಜಾತ್ಯಾತೀತ ಮನಸ್ಕರನ್ನು ಕಾಡುತ್ತಿದೆ. ಭಾರತ ಸರ್ವ ಧರ್ಮಗಳ ತವರು ಸಾಮರಸ್ಯದ ನಾಡಿನಲ್ಲಿ ಒಂದು ಧರ್ಮಕ್ಕೆ ಸಂಬಂಧಿಸಿದ ವಸ್ತು ವಿಷಯಗಳನ್ನು ಭೋಧನೆ ಮಾಡುವುದೆಂದರೆ ಕೋಮು ದಳ್ಳುರಿಗೆ ಆಹ್ವಾನ ನೀಡಿದಂತೆ ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥ, ದೇಶದ ಸಂವಿಧಾನ ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವ ಮಹಾನ್ ಗ್ರಂಥ ಭಗವದ್ಗೀತೆ ಒಳ್ಳೆಯ ಅಂಶಗಳನ್ನು ಬೇರೆ ಯಾವುದೇ ಧರ್ಮಗ್ರಂಥಗಳಲ್ಲಿ ಕಾಣಲು ಸಾಧ್ಯವಿಲ್ಲ ಆಚಾರ ವಿಚಾರ ಜೀವನ ಶೈಲಿಗಳು ಗೀತೆಯಲ್ಲಿ ಅಡಕವಾಗಿವೆ ಎಂಬ ಅಂಶವನ್ನು ಪ್ರಸ್ಥಾಪಿಸಿದ್ದಾರೆ ಜಾತಿಯತೆ, ಮೂಡನಂಬಿಕೆ, ಮೇಲು ಕೀಳು ಉಚ್ಚ ನಿಚ ಬಡವ ಬಲ್ಲಿದ ಎಂಬ ಪದಗಳು ಯಾವ ಧರ್ಮದ ಆಚರಣೆಗಳು ಎಂಬುದನ್ನು ಕಣ್ಣಾಡಿಸಲಿ ಹಾಗಂತ ಎಲ್ಲಾ ಧರ್ಮಗಳು ಶ್ರೇಷ್ಠ ಎಂದು ಅಲ್ಲ. ಬುದ್ದನ ಪರಮ ತತ್ವವಾದ ಸತ್ಯ ಧರ್ಮಗಳನ್ನು ಅರಿತು ನಡೆಯುತ್ತಾನೋ ಅವನೇ ಜಾತ ಎಂದು ನಂಬಿ ನಡೆಯುವ ಬುದ್ದಾಭಿಮಾನಿಗಳ ಮನಸನ್ನು ನೋಯಿಸಿ ಬುದ್ದನನ್ನು ಹಿಂದೂ ಧರ್ಮದ ಹನ್ನೊಂದನೇ ಅವತಾರ ಪುರುಷ ಎಂದು ಪೂಜಿಸಿದ್ದು ನೀವು? ಅಲ್ಲದೆ ಬುದ್ದ ಈ ನಾಡಿನ ಮೂಲ ನಿವಾಸಿ ಅವನ ತತ್ವ ಸಿದ್ದಾಂತಗಳನ್ನು ಒಪ್ಪಿಕೊಳ್ಳದ ಹೇಯ ಮನಸುಗಳು ಬೌದ್ಧ ಧರ್ಮವನ್ನೆ ಈ ನಾಡಿನಿಂದ ಅವಸಾನವಾಗಲು ಹಿಂದೂ ಧರ್ಮದ ಕೊಡುಗೆ ಇದೆ ಎಂಬುದನ್ನು ಮರೆತಂತೆ ಕಾಣಿಸುತ್ತದೆ. ಅಲ್ಬರ್‍ಟ್ ಐನ್‌ಸ್ಟನ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರೆ ಭಗವದೀತಾ ಮಂತ್ರಗಳನ್ನು ದಿನಾಲೂ ಪಠಿಸುತ್ತಾರೆ ಅಂಥವರೇ ಒಪ್ಪಿಕೊಂಡಿರುವಾಗ ನೀವೇಕೆ ವಿರೋಧಿಸುತ್ತಿರಿ ಎಂಬ ಮಾತು ಕೇಳಿ ಬರುತ್ತಿದೆ ಭಗವದ್ಗೀತೆಯನ್ನು ಓದುವವರಿಗೆ ಮತ್ತು ಅನುಸರಿಸುವವರಿಗೆ ಅದು ಖಾಸಗಿ ವಿಚಾರ ಅದನ್ನು ಅವರು ವೈಯಕ್ತಿಕವಾಗಿ ಅನುಸರಿಸಬಹುದು. ಭಗವದ್ಗೀತೆಯ ಕೇಲವು ಮಂತ್ರಗಳು ಬ್ರಾಹ್ಮಣರೆ ಶ್ರೆಷ್ಠರೆಂದು ಹೇಳುವ ಮೂಲಕ ತಾರತಮ್ಯದಿಂದ ಕೂಡಿರುವ ಚಾತುರ್ವರ್ಣ ಪದ್ದತಿಯನ್ನು ಪೋಷಿಸುತ್ತದೆ ಪಾಳೇಗಾರಿ ಮತ್ತು ಗುಲಾಮಗಿರಿ ಸಂಸ್ಕೃತಿಯನ್ನು ಸಮರ್ಥಿಸುತ್ತದೆ ರಾಜ್ಯ ಸರ್ಕಾರ ಭಗವದ್ಗೀತೆಯನ್ನು ಕಂಠಪಾಠ ಮಾಡಿಸುವುದರ ಮೂಲಕ ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸರ್ಕಾರವೇ ಬದ್ಧವಾಗಿ ನಿಂತಿದೆ. ನಿಮಗೆ ಬದ್ಧತೆ ಎನ್ನುವುದಿದ್ದರೆ ಈ ಸಮಾಜದಲ್ಲಿ ಜ್ವಲಂತವಾಗಿ ಕಾಡುತ್ತಿರುವ ಜಾತಿಯನ್ನು ಕಿತ್ತು ಹಾಕುತ್ತೇವೆ ಎಂದು ಪಣ ತೋಡಿ ಅದನ್ನು ಬುಡ ಸಮೇತ ಕಿತ್ತು ಹಾಕುವವರೆಗೂ ವಿಶ್ರಮಿಸಲಾರೆವು ಎಂದು ಅಭಿಯಾನ ಮಾಡಿ ಏಕೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ? ಮಠ ಮಂದಿರಗಳಿಗೆ ಹಣ ನೀಡುವ ಸರ್ಕಾರಗಳು ಜನರ ಶ್ರೇಯೋಭಿವೃದ್ಧಿಗಾಗಿ ಖರ್ಚು ಮಾಡಬಹುದಲ್ಲ ಅಥವ ಈ ಮಠಗಳ ಮೂಲಕವೇ ಭಗವದ್ಗೀತೆ ಪಠಣ ಮಾಡಿಸಬಹುದಲ್ಲ ಸರ್ಕಾರಿ ಶಾಲೆಗಳೇ ಬೇಕೆ? ಶಾಲೆ ಕಾಲೇಜುಗಳು ಯಾವುದೇ ಧರ್ಮದ ಪ್ರಚಾರ ಕೇಂದ್ರಗಳಲ್ಲ ಧರ್ಮದ ಪ್ರಚಾರಕ್ಕಾಗಿ ಶಾಲೆಗಳನ್ನು ಕಟ್ಟಲಾಗಿಲ್ಲ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಪಿಸುವ ಸೌಹಾರ್ಧ ಕೇಂದ್ರಗಳು ಅಂಥಹ ಕೇಂದ್ರಗಳಲಿ ಧರ್ಮದ ಪ್ರಚಾರ ಕೈಗೊಳ್ಳಲು ಸನ್ನದ್ಧವಾಗುತಿರುವಂತಿದೆ. ಸರ್ಕಾರ ಶಿರಸಿಯ ಸೋಂಧ ಸ್ವರ್ಣವಲ್ಲಿ ಮಠಕ್ಕೆ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಂತೆ ಇನ್ನಿತರ ಧರ್ಮ ಗ್ರಂಥಗಳಾದ ಕುರಾನ್ ಬೈಬಲ್ ತ್ರಿಪಿಟಕ ಮತ್ತು ಜೈನ ಧರ್ಮಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಪಠಿಸಲು ಅವಕಾಶ ಮಾಡಿಕೊಡಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಇಂದಿನ ವ್ಯವಸ್ಥೆಯ ಬಗ್ಗೆ ಯೋಚಿಸಿ ಪರಿಹಾರ ದೊರಕಿಸಿ ಕೊಡಬೇಕೆ ವಿನಹ ಧರ್ಮದ ಹೆಸರಿನಲ್ಲಿ ಮುಗ್ದ ಮಕ್ಕಳನ್ನು ಪ್ರಚೋದಿಸುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ.
ವೈಜ್ಞಾನಿಕ, ಪ್ರಗತಿಪರ, ಜಾತ್ಯಾತೀತ ಮತ್ತು ಕೋಮು ಸೌಹಾರ್ಧತೆಯ ಬಗ್ಗೆ ಅರಿವು ಮೂಡಿಸುವ ಬದಲು ಧರ್ಮದ ಅಂಧಕಾರಕ್ಕೆ ತಳ್ಳುವ ಮತ್ತು ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವ ಮತ್ತು ಬೇರೆ ಧರ್ಮಗಳ ಬಗ್ಗೆ ತಾತ್ಸಾರ ವಾತಾವರಣ ಸೃಷ್ಠಿಸಲು ಮಠಾಧೀಶರ ಪ್ರಾಯೋಜಕತ್ವದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಿತೂರಿ ನಡೆಸಿ ತನ್ನ ಕೆಲಸವನ್ನು ಪರೋಕ್ಷವಾಗಿ ಮಾಡಿ ಮುಗಿಸಿದೆಯಲ್ಲ ಇದಕ್ಕೆ ಏನು ಹೇಳುತ್ತಿರಾ? ಈ ಅಭಿಯಾನ ವಿದ್ಯಾರ್ಥಿಗಳಲ್ಲಿ ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಿದೆ. ಸರ್ವ ಜನಾಂಗದ ಶಾಂತಿಯ ಕ್ಷೇತ್ರವಾದ ಕರ್ನಾಟಕದಲ್ಲಿ ವೈಜ್ಞಾನಿಕ ಪ್ರಗತಿಪರ ಶಿಕ್ಷಣ ಪದ್ದತಿಗೆ ವಿರುದ್ಧವಾಗಿ ಪುರೋಹಿತಶಾಹಿ ಪದ್ದತಿಯನ್ನು ಪ್ರತಿಷ್ಠಾಪಿಸಲು ಹೋರಟಿರುವುದನ್ನು ನೋಡಿದರೆ ಏನೋ ಹುನ್ನಾರು ಮಾಡಿದಂತಿದೆ. ಶಿಕ್ಷಣ ಮೌಲ್ಯವನ್ನು ಕೇಸರಿಕರಣಗೊಳಿಸುವ ಹುನ್ನಾರು ನಡೆಸಿದೆ. ಶಾಲಾ ಕಾಲೇಜುಗಳಲ್ಲಿ ಭಗವದ್ಗೀತಾ ಪಠಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರುತ್ತದೆ.

No comments:
Post a Comment