Saturday, 15 October 2011

ಭಗವದ್ಗೀತೆ ವಿರೋಧಿಸುವವರು ದೇಶ ಬಿಟ್ಟು ತೊಲಗಬೇಕೇ...?

ಭಗವದ್ಗೀತೆ ವಿರೋಧಿಸುವವರು ದೇಶ ಬಿಟ್ಟು ತೋಲಗಿ  ಎಂಬ ಶಿಕ್ಷಣ ಸಚಿವರ ಬೆಜಾವಬ್ದಾರಿ ಹೇಳಿಕೆ ನೋಡಿದರೆ ಆಶ್ಚರ್ಯವಾಗುತ್ತದೆ.  ಏಕೆಂದರೆ ಉದ್ದಟತನದ ಮಾತನಾಡಿರುವುದು ಅವರಿಗಿರುವ ದೇಶದ ಇತಿಹಾಸ ಪ್ರಜ್ಞೆ ಶೂನ್ಯತೆ ಎದ್ದು ಕಾಣುತ್ತದೆ ಇಂಥಹ ಬಾಲಿಶತನದ ಹೇಳಿಕೆಯಿಂದ ಕೋಮು ಮನೋಭಾವನೆಯ ಸಂಕುಚಿತ ಅಧಿಕಾರವನ್ನಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ ಅಖಂಡ ಭಾರತ ದೇಶದಲ್ಲಿ ಜಾತ್ಯತೀತ ಮನೋಭಾವನೆಯ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಿ ಶಿಕ್ಷಣದ ಪಾವಿತ್ರತೆಗೆ ಭಂಗ ಮಾಡುವುದು ಅರ್‌ಎಸ್‌ಎಸ್‌ನ ಒಪನ್ ಅಜೆಂಡಾವಾಗಿದೆ. ಭಗದ್ಗೀತೆ ವಿರೋಧಿಸುವವರು ರಾಷ್ಟ್ರೀಯತೆ ವಿರೋಧಿಸಿದಂತೆ ಎಂಬ ಹೇಳಿಕೆ ಒಪ್ಪುವುದಾದರೆ ಕುರಾನ್, ಬೈಬಲ್‌ನ್ನು ವಿರೋಧಿಸುವವರು ಈ ದೇಶದ ಸಂವಿಧಾನ ವಿರೋಧಿಸಿದಂತೆ ಎಂಬುವುದು ಅಷ್ಟೆ ಸತ್ಯವಾಗಿದೆ. ಜವಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಣ ಸಚಿವರು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ವಿಚಾರಿಸಿ ಪ್ರಸ್ತುತ ಸಂದರ್ಭಕ್ಕೆ ಅದು ಅವಶ್ಯವೇ ಎಂದು ಪರಿಶೀಲಿಸಬೇಕು ಈಗೀರುವ ಪಠ್ಯಪುಸ್ತಕಗಳಲ್ಲಿ ಆಗಿ ಹೋದ ಇತಿಹಾಸವನ್ನು ಬೋಧಿಸುತ್ತಲೇ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಇದೊಂದು ಗೊಡ್ಡು ಸಂಪ್ರದಾಯ ಹೆಚ್ಚಾಗಿ ಸೇರಿಸುತ್ತಿದ್ದಾರೆ. ಪೂರ್ವಾಗ್ರಹ ಪೀಡಿತರಾಗಿ ನಿರ್ಧಾರ ತೆಗೆದುಕೊಂಡು ಅದಕ್ಕೆ ಸಮರ್ಥನೆ ನೀಡುತ್ತಿರುವದು ಎಷ್ಟು ಸರಿ.
ಧರ್ಮ ಗ್ರಂಥಗಳನ್ನು ಬೋಧನೆ ಮಾಡುವುದಕ್ಕೆ ಸರ್ಕಾರಿ ಶಾಲೆಗಳೇ ಬೇಕೆ ಸೇವೆಯ ಹೆಸರಿನಲ್ಲಿ ಬೇಕಾದಷ್ಟು ಮಠ ಮಂದಿರಗಳನ್ನು ಸಾಕಿದ್ದೀರಲ್ಲ ಅಲ್ಲಿ ನಿಮ್ಮ ವಿಚಾರಗಳನ್ನು ತುಂಬಲು ಪ್ರಯತ್ನಿಸಿ ಮಠ ಮಂದಿರಗಳಿಗೆ ಕೆಲಸವಾದರೂ ಸಿಗುತ್ತೆ. ಭಾರತ ದೇಶ ಜಾತ್ಯಾತೀತ ರಾಷ್ಟ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮಂತ್ರವನ್ನು ಜಪಿಸುತ್ತಿರುವ ನಾವುಗಳು ಈ ತತ್ವಕ್ಕೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿಲ್ಲವೇ? ಭಾರತ ಸರ್ವ ಧರ್ಮಗಳ ತವರು ಸಾಮರಸ್ಯದ ನಾಡಿನಲ್ಲಿ ಧರ್ಮಕ್ಕೆ ಸಂಬಂಧಿಸಿದ ವಸ್ತು ವಿಷಯಗಳನ್ನು ಭೋಧನೆ ಮಾಡಲು ತಯಾರಿ ನಡೆಸಿದ್ದೀರಿ ಎಂದರೆ ಕೋಮು ದಳ್ಳುರಿಗೆ ಆಹ್ವಾನ ನೀಡಿದಂತೆ ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥ, ದೇಶದ ಸಂವಿಧಾನ ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವ ಮಹಾನ್  ಅಲ್ಬರ್‍ಟ್ ಐನ್‌ಸ್ಟನ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರೆ ಭಗವದ್ಗೀತಾ ಮಂತ್ರಗಳನ್ನು ದಿನಾಲೂ ಪಠಿಸುತ್ತಾರೆ ಅಂಥವರೇ ಒಪ್ಪಿಕೊಂಡಿರುವಾಗ ನೀವೇಕೆ ವಿರೋಧಿಸುತ್ತಿರಿ ಎಂಬ ಮಾತು ಕೇಳಿ ಬರುತ್ತಿದೆ ಭಗವದ್ಗೀತೆಯನ್ನು ಓದುವವರಿಗೆ ಮತ್ತು ಅನುಸರಿಸುವವರಿಗೆ ಅದು ಖಾಸಗಿ ವಿಚಾರ ಅದನ್ನು ಅವರು ವೈಯಕ್ತಿಕವಾಗಿ ಅನುಸರಿಸಬಹುದು ಹೊರತು ನಿವು ಪಠಿಸಿ ಎಂದು ಹೇಳಲು ಅವರು ಯಾರು.?
ಭಗವದ್ಗೀತೆಯ ಕೇಲವು ಮಂತ್ರಗಳು ಬ್ರಾಹ್ಮಣರೆ ಶ್ರೆಷ್ಠರೆಂದು ಹೇಳುವ ಮೂಲಕ ತಾರತಮ್ಯದಿಂದ ಕೂಡಿರುವ ಚಾತುರ್ವರ್ಣ ಪದ್ದತಿಯನ್ನು ಪೋಷಿಸುತ್ತದೆ ಪಾಳೆಗಾರಿ ಮತ್ತು ಗುಲಾಮಗಿರಿ ಸಂಸ್ಕೃತಿಯನ್ನು ಸಮರ್ಥಿಸುತ್ತವೆ  ರಾಜ್ಯ ಸರ್ಕಾರ ಭಗವದ್ಗೀತೆಯನ್ನು ಕಂಠಪಾಠ ಮಾಡಿಸುವುದರ ಮೂಲಕ ಈ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸರ್ಕಾರವೇ ಬದ್ಧವಾಗಿ ನಿಂತಿದೆಯೇ? ನಿಮಗೆ ಬದ್ಧತೆ ಎನ್ನುವುದಿದ್ದರೆ ಈ ಸಮಾಜದಲ್ಲಿ ಜ್ವಲಂತವಾಗಿ ಕಾಡುತ್ತಿರುವ ಜಾತಿಯನ್ನು ಕಿತ್ತು ಹಾಕುತ್ತೇವೆ ಎಂದು ಪಣ ತೋಡಿ ಅದನ್ನು ಬುಡ ಸಮೇತ ಕಿತ್ತು ಹಾಕುವವರೆಗೂ ವಿಶ್ರಮಿಸಲಾರೆವು ಎಂದು ಅಭಿಯಾನ ಮಾಡಿ ಏಕೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ?
ಶಾಲೆ ಕಾಲೇಜುಗಳು ಯಾವುದೇ ಧರ್ಮದ ಪ್ರಚಾರ ಕೇಂದ್ರಗಳಲ್ಲ ಧರ್ಮದ ಪ್ರಚಾರಕ್ಕಾಗಿ ಕಟ್ಟಲಾದ ಧಾರ್ಮಿಕ ಸ್ಥಳವಂತು ಅಲ್ಲವೇ ಅಲ್ಲ ಶಾಲೆಗಳು ಎಂದರೆ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಪಿಸುವ ಸೌಹಾದ ಕೇಂದ್ರಗಳು ಅಂಥಹ ಕೇಂದ್ರಗಳಲ್ಲಿ ಧರ್ಮದ ಪ್ರಚಾರ ಮಾಡಿ ಸಂಕುಚಿತ ಮನೊಭಾವನೆಗೆ ತಳ್ಳುತ್ತಿಲ್ಲವೆ? ಇನ್ನಿತರ ಧರ್ಮ ಗ್ರಂಥಗಳಾದ ಕುರಾನ್ ಬೈಬಲ್ ತ್ರಿಪಿಟಕ ಮತ್ತು ಜೈನ ಧರ್ಮಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ಪಠಿಸಲು ಅವಕಾಶ ಮಾಡಿಕೊಡಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಇಂದಿನ ವ್ಯವಸ್ಥೆಯ ಬಗ್ಗೆ ಯೋಚಿಸಿ ಪರಿಹಾರ ದೊರಕಿಸಿ ಕೊಡಬೇಕೆ ವಿನಹ ಧರ್ಮದ ಹೆಸರಿನಲ್ಲಿ ಮುಗ್ದ ಮಕ್ಕಳನ್ನು ಪ್ರಚೋದಿಸುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ. ವೈಜ್ಞಾನಿಕ, ಪ್ರಗತಿಪರ, ಜಾತ್ಯಾತೀತ ಮತ್ತು ಕೋಮು ಸೌಹಾರ್ಧತೆಯ ಬಗ್ಗೆ ಅರಿವು ಮೂಡಿಸುವ ಬದಲು ಧರ್ಮದ ಅಂಧಕಾರಕ್ಕೆ ತಳ್ಳುವ ಮತ್ತು ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವ ಮತ್ತು ಬೇರೆ ಧರ್ಮಗಳ ಬಗ್ಗೆ ತಾತ್ಸಾರ ವಾತಾವರಣ ಸೃಷ್ಠಿಸಲು ಮಠಾಧೀಶರ ಪ್ರಾಯೋಜಕತ್ವದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಿತೂರಿ ನಡೆಸಿ ತನ್ನ ಕೆಲಸವನ್ನು ಪರೋಕ್ಷವಾಗಿ ಮಾಡಿ ಮುಗಿಸಿದೆಯಲ್ಲ ಇದಕ್ಕೆ ಏನು ಹೇಳುತ್ತಿರಾ? ಈ ಅಭಿಯಾನ ವಿದ್ಯಾರ್ಥಿಗಳಲ್ಲಿ ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಿದೆ. ಸರ್ವ ಜನಾಂಗದ ಶಾಂತಿಯ ಕ್ಷೇತ್ರವಾದ ಕರ್ನಾಟಕದಲ್ಲಿ ವೈಜ್ಞಾನಿಕ ಪ್ರಗತಿಪರ ಶಿಕ್ಷಣ ಪದ್ದತಿಗೆ ವಿರುದ್ಧವಾಗಿ ಪುರೋಹಿತಶಾಹಿ ಪದ್ದತಿಯನ್ನು ಪ್ರತಿಷ್ಠಾಪಿಸಲು ಹೋರಟಿರುವುದನ್ನು ನೋಡಿದರೆ ಏನೋ ಹುನ್ನಾರು ಮಾಡಿದಂತಿದೆ. ಶಿಕ್ಷಣ ಮೌಲ್ಯವನ್ನು ಕೇಸರಿಕರಣಗೊಳಿಸುವ ಹುನ್ನಾರು ನಡೆಸಿದೆ. ಶಾಲಾ ಕಾಲೇಜುಗಳಲ್ಲಿ ಭಗವದ್ಗೀತಾ ಪಠಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ತರುತ್ತದೆ. ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಕೆಲಸ ಮಾಡುವ ಎಬಿವಿಪಿ ಈ ವಿಷಯ ಕುರಿತು ಒಂದು ಹೇಳಿಕೆ ನೀಡುತ್ತಿಲ್ಲ ಏಕೆ? ವಿದ್ಯಾರ್ಥಿ ಸಂಘಟನೆಗಳು ಕೂಡ ಒಂದು ಪಕ್ಷದ ಚೇಲಾಗಳಂತೆ ವರ್ತಿಸುತ್ತಿರುವುದು ನೋಡಿದರೆ ತಾಳಕ್ಕೆ ತಕ್ಕಂತೆ ಕುಣಿಯುವ ಕೋತಿಗಳಾಗಿದ್ದಾರೆ.

No comments:

Post a Comment