ಕುಲಕಸುಬು ಧಿಕ್ಕರಿಸಿದ ದಲಿತರಿಗೆ ಬಹಿಷ್ಕಾರ ಕ್ಷೌರ ಮಾಡಿಸಿಕೊಳ್ಳಲು ಹೋದ ದಲಿತನಿಗೆ ಮೂಗಿಗೆ ಕತ್ತರಿ ಎಂಬ ಕನ್ನಡದ ಪ್ರಮುಖ ಪತ್ರಿಕೆಯೊಂದಲ್ಲಿ ಪ್ರಕಟವಾದ ಸುದ್ದಿ ಇದು ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತ ವಿಚಾರವಾಗಿದೆ. ಸ್ವತಂತ್ರ ಭಾರತ ಆರು ದಶಕಳೇ ಕಳೆದರೂ ಸ್ವತಂತ್ರವಾಗಿ ಬದುಕಲು ಬೀಡದ ಹೇಯ ಮನಸ್ಸುಗಳು ಭಾರತ ಮಾತೆಯ ಮಡಿಲಲ್ಲಿ ಇದ್ದ್ದಾರೆ ಎಂಬುವುದು ದುರಂತದ ವಿಷಯವಾಗಿದೆ. ಶತಶತಮಾನಗಳಿಂದ ನಂಬಿ ಮಾಡಿಕೊಂಡು ಬಂದ ಕುಲ ಕಸಬುಗಳನ್ನು ಪ್ರಜ್ಞಾವಂತ ದಲಿತ ಯುವಕರಿಗೆ ಕೀಳರಿಮೆಯಾಗಿ ಕಾಣುವುದು ಸಹಜ. ಹಿರಿಯರು ಮಾಡಿಕೊಂಡು ಬಂದ ಈ ಕೇಲಸವು ಇಂದಿನ ಯುವಕರು ನಿರಾಕರಿಸುವ ಧೈರ್ಯ ತೋರಿದ್ದಕ್ಕೆ ಸಾಮಾಜೀಕ ಬಹಿಷ್ಕಾರಕ್ಕೆ ಒಳಗಾಗಬೇಕಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆರೆಗೋಡು ಗ್ರಾಮದವರು ಬಹಿಷ್ಕಾರಕ್ಕೆ ಒಳಗಾದ ನತದೃಷ್ಠ ಕುಟುಂಬಗಳು. ಸತ್ತ ದನಕರುಗಳನ್ನು ಸತ್ತಾಗ, ಮುಂಜಿವೆ, ಉತ್ಸವಗಳ ಸಂದರ್ಭದಲ್ಲಿ ತಮಟೆ ಬಾರಿಸುವುದು ಗ್ರಾಮದ ನಾನಾ ಕೆಲಸಗಳನ್ನು ಮಾಡಲು ನೀರಾಕರಿಸದ ಏಳು ದಲಿತ ಕುಟುಂಬUಳಿಗೆ ಸಾಮಾಜೀಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೆ ಒಳಗಾಗಿರುವವರ ಬಗ್ಗೆ ಸಾಮಾಜೀಕ ಕಳಕಳಿ ಹೊಂದಿದ ವ್ಯಕ್ತಿ ಇವರ ಪರ ಮಾತನಾಡಿದರೆ ಅವನ ಪರಿಸ್ಥಿತಿ ಇನ್ನೂ ನಿಕೃಷ್ಠ ಅಂತಹ ವ್ಯಕ್ತಿಗೆ ದಂಡವಿದಿಸಿದ್ದು ಉಂಟು ತಮ್ಮ ಸಮಾಜದ ದೃಷ್ಠಿಯಲ್ಲಿ ಅವನು ಕಳನಾಯಕ. ಈ ಬಹಿಷ್ಕಾರ ಎಂಬುದು ಕೇವಲ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಇಡಿ ದೇಶಕ್ಕೆ ಮಾರಕವಾದಂತ ಜ್ವಲಂತ ಸಮಸ್ಯೆಯಾಗಿದೆ. ಇಂತಹ ಘಟನೆಗಳು ಹಲವಾರು ನಡೆದರು ಮೇಲ್ವರ್ಗದ ಜನರಿಗೆ ಹೆದರಿ (ಅಂಜಿ) ಪ್ರಕರಣ ದಾಖಲಾಗದೆ, ದಾಖಲಾದರೂ ಅದಕ್ಕೆ ಯಾವುದೇ ಫಲಿತಾಂಶ ಸಿಗದೆ ರಾಜೀ ಮಾಡಿಕೊಂಡು ಬದುಕು ದುಡುವ ದಲಿತ ಕುಟುಂಬಗಳು ಸಾಕಷ್ಟಿವೆ. ಆಧುನಿಕ ಸಮಾಜ ಎಷ್ಟೆ ಮುಂದುವರಿದಿದೆ ಎಂದು ಜಂಬಕೊಚ್ಚಿಕೊಂಡರು ಅಸ್ಪೃಶ್ಯತೆ, ಜಾತಿಯತೆ ಎಂಬ ಭೂತ ನಮ್ಮ ಸಮಾಜದ ಜನರಿಂದ ದೂರವಾಗುತ್ತಿಲ್ಲ ಎಂದರೆ ನಮ್ಮ ಸಂಸ್ಕೃತಿ ಮಹಿಮೆಯೇ ಅಥವ ಸಂಸ್ಕೃತಿಯೇ ಜಾತಿಯತೆಯೇ ಎಂಬುವುದು ತೋಚದ ವಿಚಾರವಾಗಿದೆ. ಭಾರತಿಯ ಸಂಸ್ಕೃತಿಯ ಬಗ್ಗೆ ಘಂಟಾಗೋಷವಾಗಿ ಭಾಷಣ ಬೀಗಿಯುತ್ತಿರುವ ಜನತೆ ಭಾಷಣದಲ್ಲಿಯೇ ಸಂಸ್ಕೃತಿ ಉಳಿಸಿಕೊಂಡಿದ್ದಾರೆಯೆ ಹೋರತು ಕೃತಿಯಲ್ಲಿ ಅಲ್ಲ. ಸಂಸ್ಕೃತಿ ಎಂದರೆ ಸ್ತ್ರೀಯರಿಗೆ ಹಣಿಯಲ್ಲಿ ಕುಂಕುಮ, ಕಿವಿಯಲ್ಲಿ ಓಲೆ, ಕೈಯಲ್ಲಿ ಬಳೆ ಇಲಕಲ್ ಸೀರೆ ಉಟ್ಟು ಹಳ್ಳಿ ಗೌರಮ್ಮನಂತೆ ನಾಲ್ಕು ಗೋಡೆಗಳ ಮಧ್ಯೆದಲ್ಲಿ ಇರಬೇಕು ಎಂದು ಕಟ್ಟು ಪಡು ಹಾಕಿದ್ದೆ ಸಂಸ್ಕೃತಿ ಎಂದು ನಂಬಿದ್ದ ಹೇಯ ಮನಸ್ಸುಗಳಿಗೆ ಸಂಸ್ಕೃತಿಯ ಆಳ ಅರಿವಾದರೂ ಹೇಗೆ ಆದಿತು. ಅಸ್ಪೃಶ್ಯತೆ ಹೋಗಲಾಡಿಸುವುದೇ ನನ್ನ ಗುರಿ ಎಂದು ಪಾದಯಾತ್ರೆ ಕೈಗೊಂಡ ಪೇಜಾವರ ಸ್ವಾಮಿಜೀಯನ್ನು ತುಂಬು ಹೃದಯದಿಂದ ಪಾದ ಪೂಜೆ ಮಾಡಿ ಸ್ವಾಗತಿಸಿದ ದಲಿತರು ಧನ್ಯರೊ ಅಥವ ಸಮಾಜದಿಂದ ಬಹಿಷ್ಕಾರ ಹಾಕಿ ಹೋರದೂಡಲ್ಪಟ್ಟ ಮೇಲ್ವರ್ಗ ಧನ್ಯವೋ ಎಂಬುವುದನ್ನು ಪ್ರಜ್ಞಾವಂತ ಧಾರ್ಮಿಕ ನಾಯಕರು ಹೇಳಬೇಕಾಗಿದೆ.
ನೀವು ಪಾದಯತ್ರೆ ಕೈಗೊಂಡು ಮೂರು ತಿಂಗಳಲ್ಲಿ ಫಲಶೃತಿ ಎಂಬಂತೆ ಮೇಲ್ವರ್ಗ ಕೊಟ್ಟ ದೊಡ್ಡ ಕಾಣಿಕೆ ? ಪಾದಯಾತ್ರಯಿಂದ ಅಸ್ಪೃಶ್ಯತೆ ಅಳಿಸಿ ಹಾಕುತ್ತೆವೆ ಎಂದು ನಂಬಿದ ಧಾರ್ಮಿಕ ನಾಯಕರಿಗೆ ಒಂದು ಮಾತನ್ನು ಹೇಳ ಬಯಸುವೆ ಅಸ್ಪೃಶ್ಯತೆ ಅಳಿಸಿ ಹಾಕುವುದಲ್ಲ ಅದರ ಬುಡ ಸಹ ನಡಿಗಿಸಲು ಸಾಧ್ಯವಿಲ್ಲ. ಹಿಂದೆ ಹಲವಾರು ಸಮಾಜ ಸುಧಾರಕರು ಮತ್ತು ಧಾರ್ಮಿಕ ನಾಯಕರು ಈ ಕೆಲಸಕ್ಕೆ ಕೈ ಹಾಕಿ ವಿಫಲರಾಗಿದ್ದೆ ಹೆಚ್ಚು..
ಸಮಾಜದಲ್ಲಿರುವ ಅಸ್ಪೃಶ್ಯತೆ , ಜಾತಿಯತೆ ಹೋಗಲಾಡಿಸಬೇಕಾದರೆ ಶಿಕ್ಷಣವೊಂದೆ ಪ್ರಮುಖ ಅಸ್ತ್ರ ಎಂದು ನಂಬಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಕನಸು ಇಂದು ಭಗ್ನವಾಗಿದೆ. ಸುಶಿಕ್ಷಿತ ನಾಗರಿಕರೆ ಇಂತಹ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂಬುವುದು ದುರದೃಷ್ಟಕರ ಸಂಗತಿಯಾಗಿದೆ ಜತೆಗೆ ಜಾತಿ ಸಂಘಟನೆ ಕಟ್ಟಿ ಬೇಳೆಸಲಾಗುತ್ತದೆ ಇದಕ್ಕೆ ಹಲವು ರಾಜಕೀಯ ನಾಯಕರು ಮತ್ತು ಧಾರ್ಮಿಕ ನಾಯಕರು ನೀರು ಹಾಕಿ ಪೋಸಿಸುತ್ತಿದ್ದಾರೆ.
ಹೀಗಾಗಿ ಶಿಕ್ಷಣದಿಂದ ನಾಶವಾಗಬೇಕಾಗಿದ್ದ ಅಸ್ಪೃಶ್ಯತೆ ಮರುಜೀವ ಪಡೆಯುತ್ತಿದೆ. ಅದರ ಬೇರು ಇನ್ನಷ್ಟು ಗಟ್ಟಿಯಾಗುತ್ತಿವೆಯೇ ಹೋರತು ಕೊಳೆಯುತ್ತಿಲ್ಲ. ಆಧುನಿಕ ಸಮಾಜದ ಮುಂದೆ ಇರುವ ಇನ್ನೊಂದು ಅಸ್ತ್ರ ಎಂದರೆ ಕಾನೂನು, ಈ ಖಡ್ಗದ ಮೂಲಕ ಅಸ್ಪೃಶ್ಯತೆ ಅಳಿಸಿ ಹಾಕಲು ಸಾಧ್ಯವಿದೆಯಾದರೂ ಅಂತಹ ಕಾನೂನುಗಳು ಸಂವಿಧಾನದಲ್ಲಿದ್ದರು ಜಾರಿ ಮಾಡುವವರು ಯಾರು? ಜಾರಿ ಮಾಡಿದ ಕಾನೂನುಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವವರು ಯಾರು?

No comments:
Post a Comment