ಶಾಲೆ ಕಾಲೇಜುಗಳು ಯಾವುದೇ ಧರ್ಮದ ಪ್ರಚಾರ ಕೇಂದ್ರಗಳಲ್ಲ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಪಿಸುವ ಸೌಹಾರ್ಧ ಕೇಂದ್ರಗಳು. ನೈತಿಕ ಮೌಲ್ಯಗಳಿಗೆ ಗೌರವ ಪರಸ್ಪರರಿಗೆ ಸಹಕಾರ ಸಾರಯುತ ಸಮಾಜದ ನಿರ್ಮಾಣ ನೀತಿವಂತ ಯುವಜನತೆ ನಿರ್ಮಾಣ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಆದರೆ ಈ ಬುನಾದಿಯಲ್ಲಿಯೇ ಕೇಸರಿಕರಣದ ಅಜೆಂಡಾ ಗಟ್ಟಿಗೊಳಿಸಲು ಹೊರಟಿದ್ದಾರೆಯೇ? ಯಾವುದೇ ಒಂದು ಸುತ್ತೋಲೆ ಜಾರಿಗೆ ತರಬೇಕಾದರೆ ಸರ್ಕಾರ ಕೂಲಂಕುಶವಾಗಿ ಯೋಚಿಸಬೇಕು, ಮತ್ತು ಜಾರಿಗೆ ತರುವ ಸುತ್ತೋಲೆ ಜನರಿಗೆ ಯಾವ ರೀತಿ ಪರಿಣಾಮ ಬಿರಬಹುದು ಸಮಾಜದ ಹಿತ ಅಡಗಿರುವ ಮತ್ತು ಯಾರ ಭಾವನೆಗಳಿಗೂ ತೊಂದರೆಯಾಗದ ಹಾಗೇ ಸರ್ಕಾರ ಆದೇಶಗಳನ್ನು ಜಾರಿಗೆ ತರಬೇಕು ಇದು ಅದರ ಕರ್ತವ್ಯ. ಭಾರತ ದೇಶ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಬದ್ದವಾಗಿ ಒಪ್ಪಿಕೊಂಡೊದ್ದೇವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳೂ ಸಮಾನ ವಿವಿಧತೆಯಲ್ಲಿ ಏಕತೆ ಎನ್ನುವ ಮಂತ್ರವೇ ದೇಶವನ್ನು ಒಟ್ಟಾಗಿ ಹಿಡಿದಿಟ್ಟುಕೊಂಡಿದೆ. ಈ ಉದಾತ್ ತತ್ವಕ್ಕೆ ಧಕ್ಕೆಯಾಗುವಂತೆ ಬಿಜೆಪಿ ಸರ್ಕಾರ ಶಿರಸಿಯ ಸೋಂಧ ಸ್ವರ್ಣವಲ್ಲಿ ಮಠಕ್ಕೆ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸಂವಿಧಾನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ.
ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ಪ್ರಗತಿಪರ, ಜಾತ್ಯಾತೀತ ಮತ್ತು ದೇಶದ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಬದಲು ಧರ್ಮದ ಅಂಧಕಾರಕ್ಕೆ ತಳ್ಳುವ ಮತ್ತು ಹಿಂದು ರಾಷ್ಟ್ರ ಎಂದು ಘೋಷಿಸಿಕೊಳ್ಳುವ ಮತ್ತು ಬೇರೆ ಧರ್ಮಗಳ ಬಗ್ಗೆ ತಾತ್ಸಾರ ವಾತಾವರಣ ಸೃಷ್ಠಿಸಲು ಮಠಾಧೀಶರ ಪ್ರಾಯೋಜಕತ್ವದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಪಿತೂರಿ ನಡೆಸಿ ತನ್ನ ಕೆಲಸವನ್ನು ಪರೋಕ್ಷವಾಗಿ ಮಾಡಿ ಮುಗಿಸಿದೆ. ಈ ಅಭಿಯಾನಕ್ಕೆ ೪೦ಕೋಟಿ ರೂಪಾಯಿ ಬಿಡುಗಡೆ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಭಗವದ್ಗೀತೆ ಬೋಧಿಸುವುದು ತಪ್ಪಲ್ಲ ಧಾರ್ಮಿಕ ಗ್ರಂಥಗಳು ಎಂದ ಕೂಡಲೆ ಪ್ರಶ್ನಾತೀತ ಎಂದು ಅರ್ಥಮಾಡಿಕೊಳ್ಳಬೇಕಾಗಿಲ್ಲ ಭಗವದ್ಗೀತೆಯು ಅನಿಷ್ಠ ಜಾತಿ ವ್ಯವಸ್ಥೆಯನ್ನು ಸಮರ್ಥಿಸುತ್ತದೆ. ಮೌಡ್ಯತೆ ಪುನರ್‌ಜನ್ಮ ಪಾಪ ಪುಣ್ಯಗಳನ್ನು ಬೋಧಿಸುವ ಈ ಪಠಣ ಅಭಿಯಾನಕ್ಕೆ ೪೦ಕೋಟಿ ಬೇಕೆ?
ಇದನ್ನು ಯಾಕೆ ವಿರೋಧಿಸಬೇಕು
ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥ ಇರಬಹುದು ಆದರೆ ಆ ಧರ್ಮದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಎಲ್ಲ ಧರ್ಮದ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಠಿಸಬೇಕು ಎಂಬ ಸುತ್ತೋಲೆ ಒಂದು ಕಡೆಯಾದರೆ ಇದರ ಆಳಕ್ಕೆ ಇಳಿದಾಗ ಭಗವದ್ಗೀತೆ ಪಾಳೇಗಾರಿ ಮತ್ತು ಗುಲಾಮಗಿರಿ ಸಂಸ್ಕೃತಿಯನ್ನು ಸಮರ್ಥಿಸುತ್ತದೆ. ಭಗವದ್ಗೀತೆಯ ೧೪ಮತ್ತು ೧೫ನೇ ಅಧ್ಯಾಯಗಳು ಬ್ರಾಹ್ಮಣರೆ ಶ್ರೆಷ್ಠರೆಂದು ಹೇಳುವ ಮೂಲಕ ತಾರತಮ್ಯದಿಂದ ಕೂಡಿರುವ ಚಾತುರ್ವರ್ಣ ಪದ್ದತಿಯನ್ನು ಪೋಷಿಸುತ್ತದೆ. ಹೀಗೆ ಭಗವದ್ಗೀತೆ ಕುರಿತು ಟೀಕೆಗಳಿವೆ ಭಗವದ್ಗೀತೆಯನ್ನು ಓದುವವರಿಗೆ ಮತ್ತು ಅನುಸರಿಸುವವರಿಗೆ ಅದು ಖಾಸಗಿ ವಿಚಾರ ಅದನ್ನು ಅವರು ವೈಯಕ್ತಿಕವಾಗಿ ಅನುಸರಿಸಬಹುದು ಬದಲಾಗಿ ರಾಜ್ಯ ಸರ್ಕಾರ ಭಗವದ್ಗೀತೆಯನ್ನು ಕಂಠಪಾಠ ಮಾಡಿಸುವುದಕ್ಕೆ ಶಾಲೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಯಾಕೆ?
ಈ ಭಗವದ್ಗೀತೆ ಕಂಠಪಾಠ ಅಭಿಯಾನ ವಿದ್ಯಾರ್ಥಿಗಳಲ್ಲಿ ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಿದೆ. ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ವೈಜ್ಞಾನಿಕ ಪ್ರಗತಿಪರ ಶಿಕ್ಷಣ ಪದ್ದತಿಗೆ ವಿರುದ್ಧವಾಗಿ ಪುರೋಹಿತಶಾಹಿ ಪದ್ದತಿಯನ್ನು ಪ್ರತಿಷ್ಠಾಪಿಸಲು ಹೋರಟಿರುವುದನ್ನು ನೋಡಿದರೆ ಏನೋ ಹುನ್ನಾರು ಮಾಡಿದಂತಿದೆ.ಶಿಕ್ಷಣ ಮೌಲ್ಯವನ್ನು ಕೇಸರಿಕರಣಗೊಳಿಸುವ ಹುನ್ನಾರು ನಡೆಸಿದೆ. ಶಾಲಾ ಕಾಲೇಜುಗಳಲ್ಲಿ ಭಗವದ್ಗೀತಾ ಪಠಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ಧ ಹಾಳು ಮಾಡಲು ಹೊರಟಿದೆ. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಹಾಗೂ ಇಂದಿನ ವ್ಯವಸ್ಥೆಯ ಬಗ್ಗೆ ಯೋಚಿಸಿ ಪರಿಹಾರ ದೊರಕಿಸಿ ಕೊಡುವ ಬದಲು ಧರ್ಮದ ಹೆಸರಿನಲ್ಲಿ ಮುಗ್ದ ಮಕ್ಕಳನ್ನು ಪ್ರಚೋದಿಸುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೊರಿಸುತ್ತದೆ. ಭಾರತ ಸಂವಿಧಾನದಲ್ಲಿ ಧರ್ಮ ನಿರಪೇಕ್ಷೆತೆಯ ಪ್ರತಿನಿದಿಸುತ್ತಿದ್ದೆವೆಂದು ತಿಳಿದಿರುವ ಸಂಘದ ಬಳಗವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಘರ್ಷಣೆ ಹಿಂಸಾಚಾರಕ್ಕಿಳಿಯುವುದು ದೇಶಕ್ಕೆ ಒಳ್ಳೆಯದಲ್ಲ ಜನರ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಅವರಿಗೆ ಬೇಕಾದ ಧರ್ಮವನ್ನು ಅನುಸರಿಸಲು ಸ್ವತಂತ್ರರು ಅವರ ಧಾರ್ಮಿಕ ವಿಷಯಗಳಲ್ಲಿ ಜನತೆ ಕೆರಳದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ಅದಕ್ಕಾಗಿ, ನಮ್ಮ ಸರ್ಕಾರಗಳು ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸರಿಸದೆ. ಧರ್ಮದೊಳಗಿನ ಅಸಮಾನತೆಗಳನ್ನು ತೊಡೆದು ಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸುವತ್ತ ಗಮನಹರಿಸಬೇಕು ಧಾರ್ಮಿಕ ನಂಬಿಕೆಗಳನ್ನು ಬಲವಂತವಾಗಿ ಹೆರುವ ಬದಲು ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸಲು ಮತ್ತು ಪೂಜಿಸಲು ಅವನಿಗೆ ಸಂಪೂರ್ಣ ಅಧಿಕಾರವಿದೆ.ಸಂವಿಧಾನವು ಇದನ್ನೆ ಹೇಳುತ್ತದೆ.
ಆಳುವ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತಮ್ಮ ಅಜೆಂಡಾವನ್ನು ಒತ್ತಾಯವಾಗಿ ಹೆರುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ಹೋಮ ಹವನ ವೈಯಕ್ತಿಕ ವಿಷಯಕ್ಕೆ ಸಂಬಂಧಪಟ್ಟ ಮತ್ತು ನಂಬಿಕೆಗಳ ಆಧಾರದ ಮೇಲೆ ನಿರ್ಧರಿತವಾಗುವ ವಿಷಯಗಳು ಆದರೆ ಸರ್ಕಾರ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಬೋಧಿಸಲು ಹೋರಟಿರುವುದು ನೋಡಿದರೆ ಕೇವಲ ಹಿಂದೂಗಳೆ ಇದ್ದೇವೆ ಎನ್ನುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ.
ದೇಶದಲ್ಲಿ ಜಾತಿಯೆಂಬ ಭೂತ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿ ಆಧುನಿಕ ಸಮಾಜದಲ್ಲಿಯು ಕೂಡ ತನ್ನ ಕಬಂಧ ಬಾಹು ವಿಸ್ತರಿಸಿಕೊಂಡು ಹೊಸ ರೂಪ ಪಡೆಯುತ್ತಿದೆ ಇದರ ವಿರುದ್ಧ ಜಾಗೃತಿ ಅಭಿಯಾನ ಯಾಕೆ ಹಮ್ಮಿಕೊಳ್ಳುತ್ತಿಲ್ಲ? ಇದು ಸರ್ಕಾರಗಳಿಗೆ ಕಾಣಿಸುವುದಿಲ್ಲವೇ ಕೇವಲ ಭಗವದ್ಗೀತೆ ಮಾತ್ರ ಬೋಧಿಸಬೇಕು ಎಂಬ ಚಪಲ ಇವರಲ್ಲೇಕೆ ಬಂತು. ಉತ್ತಮ ಶಿಕ್ಷಣವನ್ನು ನೀಡಿ ವೈಜ್ಞಾನಿಕ ತಳಹದಿಯ ಮೇಲೆ ಕರೆದೊಯ್ಯಬೇಕಾದ ಯುವ ಜನಾಂಗವನ್ನು ಧಾರ್ಮಿಕ ಮಂತ್ರಗಳನ್ನು ಪಠಣ ಮಾಡಿಸುವುದರ ಮೂಲಕ ಅಂಧಕಾರದ ಸ್ಥಿತಿಯಲ್ಲಿ ಇರುವಂತೆ ಮಾಡುತ್ತಿಲ್ಲವೇ? ಧರ್ಮ ಮತ್ತು ವಿಜ್ಞಾನಕ್ಕೆ ತಾತ್ವಿಕ ಸಂಬಂಧ ಇದ್ದರು ಕೂಡ ಭಗವದ್ಗೀತೆ ಎಂದು ವಿಜ್ಞಾನವಾಗಲಾರದು ಅದು ಮೂಡನಂಬಿಕೆಯ ಮತ್ತು ಅನೇಕ ಕಟ್ಟುಪಾಡುಗಳನ್ನು ವಿಧಿಸುವ ಗಡಿರೇಖೆಯೇ ಹೊರತು ಅದರಿಂದ ಕಲಿತಕ್ಕಂತ ವಿಷಯ ಮತ್ತು ಇಂದಿನ ಸಮಾಜಕ್ಕೆ ಅದರ ಉಪಯೋಗವೇನು ಇಲ್ಲ ಅದು ತಂತ್ರಜ್ಞಾನವು ಅಲ್ಲ ಶಿಕ್ಷಣದಲ್ಲಿ ಭಗವದ್ಗೀತಾ ಬೋಧನೆ ಮಾಡುವುದರಿಂದ ಧಾರ್ಮಿಕ ಮತ್ತು ಸಾಮಾಜಿಕ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಮೊದಲೇ ಇಲ್ಲ?
ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬೋಧನೆಯಾಗಬೇಕು ವಿನಹ ಮಂತ್ರ ಪಠಣ ಅಲ್ಲ ಸ್ವಾರ್ಥ ಮತ್ತು ಆ ಕ್ಷಣದ ಲಾಭವನ್ನಷ್ಟೇ ಗುರಿಯಾಗಿಟ್ಟುಕೊಂಡು ಸಾಗುವ ನಮ್ಮ ರಾಜಕೀಯ ಪಕ್ಷಗಳಿಂದ ಆದರ್ಶದ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ?
ರಾಜ್ಯದ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿದ್ದು ಶಿಕ್ಷಕರು ಪಠ್ಯ ಪುಸ್ತಕಗಳು ಗ್ರಂಥಾಲಯ ಕೊಠಡಿ ಕುಡಿಯುವ ನೀರು ಶೌಚಾಲಯ ಆಟದ ಮೈದಾನಗಳಿಲ್ಲದೆ ವಿದ್ಯಾರ್ಥಿಗಳು ಕ್ರಿಯಾಶಿಲವಾಗಿ ಬೇಳವಣಿಗೆಯಾಗುತ್ತಿಲ್ಲ ವಿಪರಿತ ಶುಲ್ಕ ಏರಿಕೆ ಡೋನೇಶನ್ ಹಾವಳಿ ಶಿಕ್ಷಣದ ವ್ಯಾಪಾರಿಕರಣದಂತಹ ಸಮಸ್ಯೆಗಳು ಉಲ್ಬಣಗೊಂಡಿರುವಾಗ ಇವುಗಳನ್ನು ಬಗೆಹರಿಸಲು ಕಿಂಚಿತ್ತೂ ಗಮನ ನಿಡದ ರಾಜ್ಯ ಬಿಜೆಪಿ ಸರ್ಕಾರ ಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಮಾಡಲು ಅಭಿಯಾನಕ್ಕೆ ಅವಕಾಶ ಕಲ್ಪಿಸಿಕೊಡುವ ಮೂಲಕ ಕ್ಷೇತ್ರವನ್ನು ಸಂಪೂರ್ಣವಾಗಿ ಕೋಮುವಾದಿಕರಣಗೊಳಿಸಲು ಹೊರಟಿದೆಯಲ್ಲವೇ?

No comments:
Post a Comment