ರಾಜಕೀಯ ಮತ್ತು ಧರ್ಮ ಮೊದಲಿನಂದ ನಡೆದು ಬಂದ ಪರಂಪರೆ ಅಧಿಕಾರದಲ್ಲಿದ್ದವರು ಅಧಿಕಾರಕ್ಕಾಗಿ ಯಾರು ಕಾಲನ್ನಾದರೂ ಹಿಡಿಯುತ್ತಾರೆ ಸಿದ್ದರಿರುತ್ತಾರೆ ಎಂಬುವುದಕ್ಕೆ ಹಲವು ಉದಾ ಹಣೆಗಳನ್ನು ಕೊಡಬಹುದಾಗಿದೆ. ಕಾಲು ಹಿಡಿದ ಮಾತ್ರಕ್ಕೆ ಆಶೀರ್ವ ದಿಸಬೇಕೆ ವಿನಹ ಬೆಂಬಲಕ್ಕೆ ನಿಲ್ಲಬೆಕೆಂದಿಲ್ಲ ಅದು ಅವರ ಕರ್ತವ್ಯವು ಅಲ್ಲ. ಮತ್ತು ಧರ್ಮ ಮೊದಲಿನಂದ ನಡೆದು ಬಂದ ಪರಂಪರೆ ಅಧಿಕಾ ರದಲ್ಲಿದ್ದವರು ಅಧಿಕಾರಕ್ಕಾಗಿ ಯಾರು ಕಾಲನ್ನಾದರೂ ಹಡಿಯುತ್ತಾರೆ. ಸಿದ್ದರಿರುತ್ತಾರೆ ಎಂಬುವುದಕ್ಕೆ ಹಲವು ಉದಾಹಣೆಗಳನ್ನು ಕೊಡಬಹುದಾಗಿದೆ. ಕಾಲು ಹಿಡಿದ ಮಾತ್ರಕ್ಕೆ ಆಶೀರ್ವದಿಸಬೇಕೆ ವಿನಹ ಬೆಂಬಲಕ್ಕೆ ನಿಲ್ಲಬೆಕೆಂದಿಲ್ಲ ಅದು ಅವರ ಕರ್ತವ್ಯವು ಅಲ್ಲ. iiವುದೇ ಧರ್ಮಗುರುಗಳು ಒಂದು ಜಾತಿ ಸಮುದಾಯಕ್ಕೆ ಸಿಮೀತವಾಗದೆ ಇಡಿ ಮಾನವ ಕುಲಕೋಟೆಗೆ ಗುರುಗಳಾಗಿ ಸೇವೆ ಮಾಡುತ್ತಿದ್ದರೆ ಅವರನ್ನು ಸಮಾಜ ಗೌರವಿಸುತ್ತದೆ ಆಧರಿಸುತ್ತದೆ ಸತ್ಕರಿಸುತ್ತದೆ. ಆದರೆ ತಮ್ಮ ಮೂಲ ಕರ್ತವ್ಯವನ್ನು ಮರೆತ ಕೆಲವು ಮಠಾಧೀಶರು ಕೇವಲ ಪ್ರಚಾರಕ್ಕಾಗಿ ಮಿಂಚುತ್ತಿದ್ದಾರೆ. ರಾಜಕೀಯ ನಾಯಕರನ್ನು ಕಟ್ಟಿಕೊಂಡು ತಮ್ಮ ಮಠಗಳಿಗೆ ಸರ್ಕಾರದಿಂದ ಅನುದಾನ ಪಡೆದುಕೊಂಡು ಐಷಾರಮಿ ಜೀವನ ನಡೆಸುತ್ತಿದ್ದಾರೆ. ಮಠಾಧೀಶರಿಗೆ ಈ ಭೋಗಪೂರಿತ ಸನ್ಯಾಸ ಬೇಕೆ? ಭ್ರಷ್ಟಾಚಾರ ರಾಜಕೀಯ ನಾಯಕರು ಆಶೀರ್ವಾದದ ನೆಪದಲ್ಲಿ ತಮ್ಮ ಪರ ನಿಲ್ಲುವಂತೆ ಈ ಸ್ವಾಮಿಗಳನ್ನು ಕೇಳಿ ಕೊಳ್ಳುತ್ತಾರೆಯೇ ಅಥವಾ ಇವರೊಂದಿಗೆ ಕಾಣಿಸಿಕೊಳ್ಳಬೇಕೆಂಬ ಚಪಲವಿರುತ್ತದೆಯೇ ಎನ್ನುವುದು ತಾರ್ಕಿಕವಾದ ವಿಷಯವಾಗಿದೆ.ಇತ್ತೀಚಿಗೆ ಸುತ್ತೂರಿನಲ್ಲಿ ನಡೆದ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದ ಕೆಲವು ಮಠಾಧೀಶರು ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನೆ ದುರ್ಬಲಗೊಳಿಸುವ ನಿಲುವುಗಳಿಗೆ ಕೈಹಾಕಿದ್ದಾರೆ. ನಾಡು ಕಂಡ ಅತ್ಯಂತ ಭ್ರಷ್ಟ ಸ್ವಜನಪಕ್ಷಪಾತ ಮುಖ್ಯಮಂತ್ರಿ ಯಡಿಯುರಪ್ಪ ಸ್ವತಃ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದಲ್ಲದೆ, ಆತ್ಮಸಾಕ್ಷಿಯಾಗಿ ಭೂಹಗರಣವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ. ಹಿಂದಿನ ಎಲ್ಲಾ ಸರ್ಕಾರಗಳು ಮಾಡಿದ್ದೆ ನಾನು ಮಾಡಿದ್ದೇನೆ ಎಂದು ಪ್ರಜ್ಞಾವಂತ ನಾಗರಿಕರನ್ನು ನಾಚಿಸುವಂತೆ ಮಾತನಾಡಿದ್ದಾರೆ. ಇದೆಲ್ಲವನ್ನು ಮರೆತು ಹಗರಣ ವಿರೋಧಿಸಬೇಕಾದ ಧರ್ಮಗುರುಗಳು, ಮುಖ್ಯಮಂತ್ರಿ ಪರ ನಿರ್ಣಯ ಕೈಗೊಂಡು ಪರೋಕ್ಷವಾಗಿ ಭ್ರಷ್ಟಾಚಾರ ಬೆಂಬಲಿಸಿದ್ದು ನೋಡಿದರೆ ಮಠಾಧೀಶರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸಂಶಯ ಕಾಡದೆ ಇರಲಾರದು.
ಆಧುನಿಕ ಭಾರತದ ಅಭಿವೃದ್ಧಿಗೆ ಮಾರಕವಾಗಿ ಕಾಡುತ್ತಿರುವ ಮೂಡನಂಬಿಕೆ, ಜಾತೀಯತೆ ಸ್ತ್ರೀ ಶೋಷಣೆ, ಬಡತನ, ನಿರುದ್ಯೋಗ, ಅಂಧಾನುಕರುಣೆ, ಸಾಮಾಜಿಕ ಬಹಿಷ್ಕಾರದಂಥಹ ಪಿಡುಗನ್ನು ಕಿತ್ತು ಹಾಕಲು ಇಂಥಹ ಮಹಾಸಮಾವೇಶಗಳಲ್ಲಿ ಸ್ವಾಮಿಗಳು ಏಕೆ ನಿರ್ಣಯ ಕೈಗೊಳ್ಳಬಾರದು? ಇವೆಲ್ಲ ಸಮಸ್ಯೆಗಳಿಗಿಂತ ಮುಖ್ಯಮಂತ್ರಿಯ ಅಧಿಕಾರ ಉಳಿಸುವ ನಿರ್ಣಯವೇ ಮುಖ್ಯವಾಯಿತೆ?
ಸಮಾಜದ ಸರ್ವತೋಮುಖ ಏಳಿಗೆಯನ್ನು ಬಯಸುವವರು ಮಠಾಧೀಶರು, ಕೇವಲ ಲಿಂಗಾಯಿತ ಸಮಾಜವನ್ನು ಗುತ್ತಿಗೆ ಪಡೆದವರಂತೆ ಒಂದು ಪಕ್ಷದ ವ್ಯಕ್ತಿಯ ಪರ ನಿರ್ಣಯ ಕೈಗೊಂಡಿರುವುದು ಪ್ರಜಾಪ್ರಭುತ್ವ ವಿರೋಧಿಯಲ್ಲದೆ ಮತ್ತೇನು? ಸಂವಿಧಾನ ವಿರೋಧಿಯಲ್ಲವೆ? ಜಾತ್ಯಾತೀತ ಭಾರತದಲ್ಲಿ ಜಾತಿಯ ವಿಷಬೀಜ ಬಿತ್ತಲು ಹೊರಟಿರುವ ಈ ಮಠಾಧೀಶರು ಭಾವೈಕ್ಯತೆಗೆ ಭಂಗ ಉಂಟು ಮಾಡುತ್ತಿಲ್ಲವೇ? ಸಮಾಜಕ್ಕೆ ಸಾಮರಸ್ಯದ, ಕೋಮು ಸೌಹಾರ್ದತೆಯ ಬಿಜ ಬಿತ್ತಬೇಕಾದ ಇವರು ಜಾತಿಯ ಸಮಾವೇಶಗಳನ್ನು ಮಾಡಿ ಸಂಕುಚಿತ ಮನೋಭಾವನೆಗೆ ತಳ್ಳುತ್ತಿಲ್ಲವೇ? ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಇವರಿಂದ ನಿರೀಕ್ಷಿಸಬಹುದು. ಜವಬ್ದಾರಿಯುತ ಸ್ಥಾನದಲ್ಲಿದ್ದವರೆ ಜಾತಿ ಸಮಾವೇಶಗಳಿಗೆ ಅಂಟಿಕೊಂಡರೆ ಭವ್ಯ ಭಾರತದ ಯುವ ಪೀಳಿಗೆ ಅದನ್ನು ಪೋಷಿಸುತ್ತದೆ ಅದೇ ಆದರ್ಶ ಮಾರ್ಗವಾಗಿ ಕಾಣಿಸುತ್ತದೆ. ಈಗಾಗಲೇ ಹಲವು ಸಮುದಾಯದ ಆದರ್ಶವಾದಿಗಳ ಜಯಂತಿಯ ಹೆಸರಿನಲ್ಲಿ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ರಾಜಕೀಯ ಫಲ ನೀಡಿದರೂ ಇದು ದೊಡ್ಡ ಸಮುದಾಯಗಳಿಗೆ ಸಿಮೀತವಾಗಿವೆ ಹೊರತು ಸಣ್ಣ ಸಮುದಾಯದಲ್ಲಿ ಇದ್ದುಕೊಂಡು ತೆರೆಮೆರೆಯಲ್ಲಿ ಸಮಾಜ ಸೇವೆ ಮಾಡಿದವರು ಅದೆಷ್ಟು ಜನದ್ದಾದ್ದರೋ ಅವರನ್ನು ಗುರಿತಿಸಬೇಕು. ಆದರೆ ಕೇವಲ ರಾಜ್ಯದಲ್ಲಿ ವೋಟ್ ಬ್ಯಾಂಕ್ ಹೆಚ್ಚು ಇದ್ದವರಿಗೆ ಪ್ರಾತಿನಿಧ್ಯ ನೀಡುತ್ತಿವೆ.
ಸಂವಿಧಾನದ ತತ್ವಗಳಿಗೆ ಬದ್ದನಾಗಿ ಆಡಳಿತ ನಡೆಸುತ್ತೇನೆ ಎಂದು ಪ್ರಮಾಣ ಮಾಡಿದ ಮುಖ್ಯಮಂತ್ರಿ, ಮೊದಲಿನಿಂದಲು ವಿರುದ್ಧವಾಗಿಯೇ ನಡೆದುಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡುವ ಪೂರ್ವದಲ್ಲಿ ವಿಧಾನ ಸೌಧದಲ್ಲಿ ಹೋಮ, ಹವನ, ಹಿಂದೂ ಧರ್ಮದ ವಿಧಿವಿಧಾನ ಮಾಡುವುದರ ಮೂಲಕ ಜಾತ್ಯಾತೀತ ತತ್ವಕ್ಕೆ ತಿಲಾಂಜಲಿ ಇಟ್ಟರು. ಸಂವಿಧಾನದ ಆಶಯಗಳಲ್ಲಿ ನಡೆಯುತ್ತೇನೆ ಎಂದು ವಿರೋಧಿ ನೀತಿ ಅನುಸರಿಸುತ್ತ ಬಂದರು. ಸೂತೂರಿನಲ್ಲಿ ವಿರಶೈವ ಮಹಾಧೀವೇಶನದಲ್ಲಿ ಮಠಾಧೀಶರ ಮಾರ್ಗದರ್ಶನದಂತೆ ನಡೆಯುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ ಹಾಗಾದರೆ ಸಾರ್ವತ್ರಿಕ ಚುನಾವಣಿಯಾದರೂ ಯಾಕೆಬೇಕು? ಅವರ ಮಾರ್ಗದರ್ಶನದಂತೆ ಅವರ ಸೇವೆ ಮಾಡುತ್ತ ಮಠದಲ್ಲಿ ಮರಿ ಸ್ವಾಮಿಯಾಗಿ ಕುಳಿತುಕೊಳ್ಳಬಹುದಲ್ಲವೆ?
ಅನೀತಿ ಕೆಲಸ ಮಾಡಿದಾಗ ಅವರ ಕಿವಿ ಹಿಂಡಬೇಕಾದ ಕರ್ತವ್ಯ ಧರ್ಮಗುರುಗಳದು, ತಾವು ಮಾಡಬೇಕಾದ ಕೆಲಸವನ್ನು ಬಿಟ್ಟು ಭ್ರಷ್ಟಾಚಾರ ಹೊತ್ತ ಮುಖ್ಯಮಂತ್ರಿಯನ್ನು ಬೆಂಬಲಿಸಿದ್ದು ನೋಡಿದರೆ ನಡೆದಾಡುವ ದೇವರೆ ಎಡವಿ ಬಿದ್ದಾಗ ಉಳಿದವರು ಏನು ಮಾಡಲು ಸಾಧ್ಯ? ಮೇಲ್ಜಾತಿಯ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಹಿಂದುತ್ವ, ಜಾತಿಗಾಗಿ ಅಧಿಕಾರ ಹಾಗೂ ಅಧಿಕಾರಕ್ಕಾಗಿ ಜಾತಿ ಎಂಬ ಅಪಾಯಕಾರಿ ವಾತಾವರಣ ಸೃಷ್ಟಿಸುವ ಕೆಟ್ಟ ಪ್ರಯತ್ನದಲ್ಲಿ ನಿರತವಾಗಿದೆಯೇ ಎನ್ನುವ ಆತಂಕ ಕಾಡುತ್ತಿದೆ. ಇಂತಹ ಪ್ರಯತ್ನಕ್ಕೆ ಕೈಹಾಕದೆ ಸರ್ವಜನ ಸುಖಿನೊ ಭವಂತು ಮಂತ್ರಕ್ಕೆ ಹೆಚ್ಚಿನ ಒತ್ತು ನೀಡಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ತತ್ವದ ಆಧಾರದ ಮೇಲೆ ನಡೆಯಬೇಕಾದ ರಾಜ್ಯದ ಮುಖ್ಯಮಂತ್ರಿಯ ಅಧಿಕಾರವು ತಮ್ಮ ಮರ್ಜಿಗೊಳಪಟ್ಟಿದೆ ಎನ್ನುವಂತೆ ಮಠಾಧಿಶರು ನಡೆದುಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ರಾಜ್ಯದ ಜನರ ಮುಖ್ಯಮಂತ್ರಿ ಎನ್ನುವುದನ್ನು ಕಡೆಗಣೆಸಿ ಲಿಂಗಾಯಿತ ಮಠಾಧೀಶರ ಆಜ್ಞಾಧಾರಕನಂತೆ ವರ್ತಿಸುತ್ತಿರುವುದು ಖಂಡನಾರ್ಹವಾಗಿz. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯದಂತೆ ಇರಬೇಕೆ ಹೊರತು ಸ್ವಾಮಿಗಳ ಪರವಾಗಿ ಅಲ್ಲ ಮುಖ್ಯಮಂತ್ರಿಯನ್ನು ಕೇವಲ ಲಿಂಗಾಯಿತ ಸಮುದಾಯಕ್ಕೆ ಸಿಮೀತ ಮಾಡುತ್ತಿರುವುದು ಸ್ವಾಮಿಗಳಿಗೆ ತಕ್ಕುದಲ್ಲ ಅವರನ್ನು ಆಯ್ಕೆ ಮಾಡಿರುವುದು ಮತದಾರರ ವರ್ಗ ಇದನ್ನು ಯಡಿಯೂರಪ್ಪ ಮರೆತ್ತಿದ್ದಾರೆ. ಚುನಾವಣಿಯಲ್ಲಿ ಮತದಾರರೆ ನನ್ನ ದೇವರು ಎಂದು ಬಾಯಿ ಬಿಡುತ್ತಿದ್ದ ಯಡಿಯೂರಪ್ಪ, ಮತದಾರರ ಆಶೀರ್ವಾದ ಇರುವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ವಿರೋಧಪಕ್ಷಗಳಿಗೆ ಟಿಕಿಸುತ್ತಿದ್ದ ಇವರು ಅದೆಲ್ಲವನ್ನು ಮರೆತು ಅಧಿಕಾರದಲ್ಲಿರುವುದೇ ಸ್ವಾಮಿಗಳ ಆಶೀರ್ವಾದದಿಂದ ಎನ್ನುವಂತೆ ನಂಬಿದ್ದಾರೆ. ಜನರ ಆಸೆ, ನಿರೀಕ್ಷೆ ಎಲ್ಲವನ್ನು ಭಂಗಗೊಳಿಸಿ ಇವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ಸಂವಿಧಾನ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ಬೆಳವಣೆಗೆಯನ್ನು ಪ್ರಜ್ಞಾವಂತ ಜನತೆ ಹಾಗೂ ಬಸವ ತತ್ವದಲ್ಲಿ ನಂಬಿಕೆ ಹೊಂದಿರುವ ಪ್ರಗತಿಪರ ವಿಚಾರವಂತ ಲಿಂಗಾಯಿತರು ವಿರೋಧಿಸಬೇಕಾಗಿದೆ.
No comments:
Post a Comment