ಕೇಂದ್ರ ಸರ್ಕಾರದ ಯುಪಿಎ ಅವಧಿ ಕೇವಲ ಒಂಭತ್ತು ತಿಂಗಳು ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಿದೆ. ಒಲ್ಲದ ಮನಸ್ಸಿನಿಂದ ಚುನಾವಣಾ ಸಮರಕ್ಕೆ ಸಿದ್ಧವಾಗುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಇದು ಅಗ್ನಿ ಪರೀಕ್ಷೆಯೇ. ಯಾಕೆಂದರೆ ಈ ಉಪ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ.
ಕಳೆದ ಮೇನಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಅಭೂತಪೂರ್ವ ಗೆಲುವಿನಲ್ಲಿ ಮೈ ಮರೆಯುತ್ತಿ ರುವಾಗಲೇ ಧೂತ್ತನೆ ಚುನಾವಣೆ ಎದುರಾಗಿರುವುದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಾಲಿಗೆ ಅಗ್ನಿ ಪರೀಕ್ಷೆ.
ಯಾವುದೇ ಚುನಾವಣೆ ನಡೆದರೂ ಕೂಡ ಆ ಪಕ್ಷದ ಅಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವುದರಿಂದ ಚುನಾವಣೆಯ ಹೊಣೆಗಾರಿಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಇದೆ. ಈಗಾಗಲೇ ಸಚಿವ ಸ್ಥಾನ ಸಿಗದೆ ಇರುವ ಪಕ್ಷ ನಿಷ್ಠ ಮುಖಂಡರು ಒಳಗೊಳಗೆ ಸಿದ್ದು ಮೇಲೆ ಸಿಟ್ಟಿದೆ.
ಹಲವು ನಾಯಕರು ಒಳಗೊಳಗೆ ಬುಸು ಗುಟ್ಟು ತ್ತಿದ್ದರೆ ಇನ್ನೂ ಕೆಲವರು ಬಹಿರಂಗವಾಗಿ ಕೋಪ ಪ್ರದರ್ಶಿಸುತ್ತಿದ್ದಾರೆ. ಇದು ಆಡಳಿತ ಪಕ್ಷದ ಆಂತರಿಕ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಒಕ್ಕಲಿಗ ಜಾತಿಯ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಆ ಜನಾಂಗದ ಸಮಾವೇಶವೊಂದರಲ್ಲಿ ಗುಡುಗುತ್ತಾರೆ.
ಕುಮಾರಸ್ವಾಮಿಯವರ ಆರೋಪ ಮೇಲ್ನೋಟಕ್ಕೆ ಟೀಕೆ ಎನಿಸಿದರೂ ಕೂಡ ಆ ಜನಾಂಗದ ವಿಷಯದಲ್ಲಿ ಸಿಎಂ ನಡೆದುಕೊಂಡ ರೀತಿಯೂ ಸಂಶಯ ಹುಟ್ಟಿಸುತ್ತದೆ. ಕುಮಾರಸ್ವಾಮಿಯವರ ಹೇಳಿಕೆ ಒಕ್ಕಲಿಗ ಜನಾಂಗಕ್ಕೆ ಪುಷ್ಠಿ ನೀಡಿದಂತಾಗಿ ಮುಖ್ಯಮಂತ್ರಿಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಗಳು ತಣ್ಣಗಾಗುತ್ತಿರುವಂತೆಯೇ ಆದಿ ಚುಂಚನಗಿರಿ ಮಠಕ್ಕೆ ಸೇರಿದ ಶೈಕ್ಷಣಿಕ ಸಂಸ್ಥೆ ಮೇಲೆ ನಡೆದ ಐಟಿ ದಾಳಿಯಿಂದ ಆ ಜನಾಂಗ ರೊಚ್ಚಿಗೆಳುವಂತೆ ಮಾಡಿದೆ. ಹಲವು ನಾಯಕರು ಒಳಗೊಳಗೆ ಬುಸು ಗುಟ್ಟು ತ್ತಿದ್ದರೆ ಇನ್ನೂ ಕೆಲವರು ಬಹಿರಂಗವಾಗಿ ಕೋಪ ಪ್ರದರ್ಶಿಸುತ್ತಿದ್ದಾರೆ. ಇದು ಆಡಳಿತ ಪಕ್ಷದ ಆಂತರಿಕ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಒಕ್ಕಲಿಗ ಜಾತಿಯ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಆ ಜನಾಂಗದ ಸಮಾವೇಶವೊಂದರಲ್ಲಿ ಗುಡುಗುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಕ್ಕಲಿಗ ಜನಾಂಗದ ನಾಯಕರು ಮತ್ತು ಸಂಘ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ಮಾಡಿದ್ದಾರೆ ಎಂಬ ವಿಶ್ಲೇಷಣಿಗಳು ಕೂಡ ನಡೆಯುತ್ತಿವೆ. ವಿಧಾನಸೌಧದಲ್ಲಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೇಗೌಡರ ಭಾವಚಿತ್ರ ತೆರವು, ಡಿಕೆಶಿಯಂತಹ ಒಕ್ಕಲಿಗ ನಾಯಕನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಬೆಳವಣಿಗೆ ಇವೆಲ್ಲವನ್ನು ಗಮನಿಸಿದಾಗ ಸಿದ್ದುರ ನಡೆ ದ್ವೇಷದ ರಾಜಕಾರಣವೇ ಎಂದು ಭಾಸವಾಗುತ್ತದೆ.
ಇದಕ್ಕೆ ಪ್ರತಿರೋಧವೆಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಅಧಿವೇಶನದಲ್ಲಿ ಕುಮಾರಸ್ವಾಮಿಯವರನ್ನೇ ಗುರಿಯಾಗಿಟ್ಟುಕೊಂಡು ಜೆಡಿಎಸ್‌ನಲ್ಲಿದ್ದಾಗ ಸಿಎಂ ಸ್ಥಾನ ತಪ್ಪಿಸಿದ್ದೀರಿ ಎಂಬ ಚುಚ್ಚು ಮಾತುಗಳು ಬೇಕಿತ್ತೇ? ಸಿಎಂ ಮಾತಿನಿಂದ ಸಹಜವಾಗಿ ಕೆರಳಿದ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಅಧಿವೇಶನದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಾದ ಮುಖ್ಯಮಂತ್ರಿಗಳು ಕಳೆದು ಹೋದ ವಿಚಾರಗಳನ್ನು ಕೆದಕಿ ಸಾಧಿಸುವುದಾದರೂ ಏನು? ಇವೆಲ್ಲವನ್ನು ಗಮನಿಸಿದಾಗ ಕೇವಲ ಗೌಡರ ಕುಟುಂಬವನ್ನು ಮಾತ್ರ ಮುಖ್ಯಮಂತ್ರಿಗಳು ಟಾರ್ಗೆಟ್ ಮಾಡುತ್ತಿರುವುದು ಏಕೆ ಎಂಬ ಸಂಶಯ ಬರದೇ ಇರದು.
ಇದೇ ವಿಷಯವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಸಿದ್ದ ವಾಗುತ್ತಿರುವ ಜೆಡಿಎಸ್, ಸಿದ್ದು ನೇತೃತ್ವದ ಸರ್ಕಾರ ಒಕ್ಕಲಿಗ ವಿರೋಧಿ ಎಂಬ ಭಾವನೆ ವ್ಯಾಪಕವಾಗಿ ಹರಡಿಸುವ ಹುನ್ನಾರು ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಅವ್ಯವಹತವಾಗಿ ನಡೆದಿದೆ.
ಒಟ್ಟಿನಲ್ಲಿ ಹಲವಾರು ವಿಷಯಗಳು ಸೇರಿ ಕಾಂಗ್ರೆಸ್ ಪಕ್ಷ ಒಕ್ಕಲಿಗರ ವಿರೋಧಿ ಎಂಬ ಭಾವನೆ ದಟ್ಟವಾಗಿ ಹರಡುವ ಎಲ್ಲಾ ಸಂಚು ರಾಜ್ಯ ಒಕ್ಕಲಿಗರ ನಾಯಕರಿಂದ ನಡೆದಿದೆ. ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಕೂಡ ಜಾತ್ಯತೀತ ಪಕ್ಷ ಎಂದು ಹೇಳಿಕೊಂಡರೂ ಸಹಜವಾಗಿಯೇ ಅಹಿಂದ ಮತಗಳನ್ನು ಕ್ರೋಢೀಕರಿಸುವ ಯತ್ನಕ್ಕೆ ಇಳಿದಿದೆ.
ಪ್ರಸ್ತುತ ಮುಂಗಡ ಪತ್ರದಲ್ಲಿ ಆ ವರ್ಗವನ್ನು ಓಲೈಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಆದರೆ ದಲಿತ ನಾಯಕರಿಗೆ ಸಿಎಂ ಪಟ್ಟ ತಪ್ಪಿಸಲಾಗಿದೆ ಎಂಬ ಆಕ್ರೋಶ ರಾಜ್ಯದ ಪ್ರಬಲ ಕೋಮುವಾದ ಬಲಗೈ ಸಮುದಾಯದಲ್ಲಿ ಬೇರೂರಿದೆ.
ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದ ಕೇಂದ್ರ ರೈಲ್ವೆ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆಯವರು ಸತತ ಹತ್ತು ಬಾರಿ ವಿಧಾನಸಭೆ ಪ್ರವೇಶಿಸಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ, ಪಕ್ಷ ನಿಷ್ಠೆಗೆ ಇನ್ನೊಂದು ಹೆಸರು. ಆದರೆ ಕಾಂಗ್ರೆಸ್ ವಲಸಿಗರಿಗೆ ಮಣೆ ಹಾಕಿ ಪಕ್ಷ ನಿಷ್ಠರಿಗೆ ಮೋಸ ಮಾಡಿದೆ ಎಂಬ ಮಾತು ಕೇಳಿ ಬರುತ್ತಿವೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಹೈಕಮಾಂಡ್ ರಾಜ್ಯದ ಪ್ರಭಾವಿ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆಯವರಿಗೆ ರೈಲ್ವೆಯಂತಹ ಖಾತೆಯನ್ನು ನೀಡುವುದರ ಮೂಲಕ ಆ ಸಮುದಾಯದ ಬೆಂಬಲ ಗಿಟ್ಟಿಸಲು ಮುಂದಾಗಿದೆ. ಆದರೆ ಹೈಕಮಾಂಡ್‌ನ ಈ ತಂತ್ರ ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದು ಕಾದು ನೋಡಬೇಕಾದ ವಿಷಯ. ಏನೇ ಆದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಸಮರಕ್ಕೆ ಇಳಿಯಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ. ಒಂದು ವೇಳೆ ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅದು ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.


No comments:
Post a Comment