ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಪರಮಶ್ರೇಷ್ಠ. ಸಂವಿಧಾನದ ಆಶಯಗಳ ಮುಂದೆ ಪುರಾತನ ಮತ್ತು ಅರ್ಥಹೀನ ಆಚರಣೆಗಳು ಮೌಲ್ಯ ಕಳೆದುಕೊಳ್ಳುತ್ತವೆ. ಆದರೆ, ಪ್ರಸ್ತುತ ದಿನಗಳಲ್ಲಿ ಅಮಾನವೀಯ ಆಚರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸವಾರಿ ಮಾಡುತ್ತಿವೆ. ಇಂಥ ಆಚರಣೆಗಳನ್ನು ಸಮರ್ಥಿಸಿಕೊಳ್ಳಲು ಹುಟ್ಟಿ ಕೊಂಡಿರುವ ಕೆಲವು ದುಷ್ಠ ಶಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕಾಗಿದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಮಡೆಸ್ನಾನ ಮತ್ತು ಪಂಕ್ತಿಭೇದ ದೇವದಾಸಿ ಪದ್ದತಿ ನಿಷೇಧವಾಗಬೇಕು. ಈ ಅನಿಷ್ಠ ಪದ್ದತಿಗಳು ನಿಷೇಧವಾಗಬೇಕಾದರೆ ವಿದ್ಯಾರ್ಥಿ ದಿಸೆಯಲ್ಲಿಯೇ ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ಪ್ರಾಥಮಿಕ ಹಂತದಿಂದ ಸ್ನಾತಕೊತ್ತರ ಶಿಕ್ಷಣದವರೆಗಿನ ಪಠ್ಯಕ್ರಮದಲ್ಲಿ ವಿಷಯ ಅಳವಡಿಸಬೇಕು ಎಂಬ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇತ್ತಿಚೇಗೆ ಪ್ರಗತಿಪರ ಮಠಾಧೀಶರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನಾ ಧರಣಿಗೆ ಸರ್ಕಾರದ ಉತ್ತಮ ಸ್ಪಂದನೆ ಸಿಕ್ಕಿದೆ. ಸಿಎಂ ಸದಾನಂದಗೌಡರು ಎರಡು ತಿಂಗಳಲ್ಲಿ ಅನಿಷ್ಠ ಪದ್ಧತಿಗಳನ್ನು ನಿಷೇಧ ಮಾಡಲು ಪರ ಮತ್ತು ವಿರೋಧ ವ್ಯಕ್ತಪಡಿಸುವ ಎಲ್ಲಾ ಮಠಾಧೀಶರನ್ನು ಒಂದುಗೂಡಿಸಿ ಕಾನೂನು ರೂಪಿಸುವ ಭರವಸೆ ನೀಡಿದ್ದಾರೆ. ಇದು ಪ್ರಗತಿಪರ ಮಠಾಧೀಶರಿಗೆ ಸಿಕ್ಕ ಗೆಲವು ಎಂದು ಭಾವಿಸಿಕೊಂಡರು ತಪ್ಪಾಗಲಾರದು ಆದರೆ ಈ ಮೇಲಿನ ಎಲ್ಲಾ ಅನಿಷ್ಠ ಪದ್ಧತಿಗಳನ್ನು ನಿಷೇಧಿಸಲು ಸರ್ಕಾರ ಮುಂದಾದರೆ ಜೇನುಗೂಡಿಗೆ ಕೈಹಾಕಿದಂತೆ ! ಒಂದು ಕಡೆ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇನ್ನೊಂದು ಕಡೆ ವ್ಯಕ್ತಿಯ ವೈಯಕ್ತಿಕ ನಂಬಿಕೆಯ ಮೇಲೆ ಕಾನೂನು ಎಂಬ ಅಸ್ತ್ರ ಎಂಬ ಝಳಪಿಸಿದ್ದಂತಾಗುತ್ತದೆ ಇದು ಭಕ್ತಾದಿಗಳ ಕೆಂಗಣ್ಣೆಗೆ ಗುರಿಯಾಗಬೇಕಾಗುತ್ತದೆ. ಭಕ್ತರ ಹಿತಕಾಯಲು ಸರ್ಕಾರ ಮುಂದಾದರೆ ಅರ್ಥವಿಲ್ಲದ ಆಚರಣೆಗಳು ವಿಜೃಂಭಿಸುತ್ತವೆ. ಸಂವಿಧಾನದ ಮೇಲೆ ಸಂಪ್ರಾದಾಯಗಳ ಸವಾರಿ ಹೆಚ್ಚುತ್ತದೆ. ಧರ್ಮಗಳ ಸಾಂಪ್ರದಾಯಿಕ ಶಕ್ತಿಗಳ ಅಟ್ಟಹಾಸ ಮೆರೆಮಿರುತ್ತದೆ. ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸ ಮುಂದುವರಿಯುತ್ತದೆ. ಬೆಳಕಿನ ಸಂಕೇತವಾದ ದೇವಸ್ಥಾನಗಳು ಕತ್ತಲ ಕೇಂದ್ರವಾಗುತ್ತವೆ.
ಮಾನವ ವಿಕಸನದ ನಂತರ ಅನೇಕ ಪದ್ದತಿ ಮತ್ತು ಸಂಪ್ರದಾಯಗಳು ಸೃಷ್ಟಿಯಾಗಿವೆ, ಅದು ಬದಲಾವಣೆಯ ಕಾಲಘಟ್ಟವಾಗಿತ್ತು. ಆ ಸಂದರ್ಭಕ್ಕೆ ಅದನ್ನು ರೂಪಿಸಿಕೊಂಡಿದ್ದಾರೆ ಎಂದು ಮುಂದುವರಿಸಿಕೊಂಡು ಹೋಗಬೇಕು ಎಂದೇನೂ ಇಲ್ಲ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಬದಲಾವಣೆ ವಿಕಸನದ ಸಂಕೇತ ಆದರೆ ಪ್ರಶ್ನೆ ಅದೂ ಅಲ್ಲ ಹಿರಿಯರು ಮಾಡಿದ್ದಾರೆ ಎಂದು ಅನುಸರಿಸಿಕೊಂಡು ಬರುವುದು ಮಹಾ ತಪ್ಪು. ಎಲ್ಲವೂ ಮೂಢನಂಬಿಕೆ ಎಂದು ಜರಿಯುವುದು ಕೂಡ ತಪ್ಪಾಗಬಹದು ಈ ನಂಬಿಕೆ ಹುಟ್ಟಿಕೊಳ್ಳಬೇಕಾದರೆ ಒಂದಿ ಲ್ಲೊಂದು ಆಧಾರ ಇರಬಹುದು. ಆ ಸಂದರ್ಭಕ್ಕೆ ಅವೂ ನಿಜವೂ ಆಗಿರಬಹದು ಆದರೆ ಪ್ರತಿಯೊಂದು ಸಂಪ್ರದಾಯಗಳನ್ನು ಆಚರಿಸುವಾಗ ಅದರ ಹಿನ್ನಲೆ ಮತ್ತು ಈಗಿನ ಸಂದರ್ಭಕ್ಕೆ ಅದು ಸೂಕ್ತವೇ ಎಂದು ನಿರ್ಧರಿಸುವ ಜಾಣ್ಮೆ ನಮ್ಮದಾಗಬೇಕು ಅದು ಆಗುತ್ತಿಲ್ಲ ನಮ್ಮ ಹಿರಿಯರು ಆಚರಿಸುತ್ತಿದ್ದರು ಎಂದು ಅದನ್ನೆ ನಾವೂ ಪಾಲನೆ ಮಾಡುತ್ತಿದ್ದೇವೆ.
ಹಿರಿಯರು ಹಾಕಿದ ಸಂಪ್ರದಾಯಗಳನ್ನು ಮುರಿಯಲು ಸಮಾಜ ಸರ್ವತ್ರ ಒಪ್ಪಲಾರದು ಹಾಗಂತ ಅಜ್ಜ ಹಾಕಿದ ಆಲದ ಮರಕ್ಕೆ ಶರಣಾಗಬಾರದು ನಮಗೆ ಹಿನ್ನಲೆ ಮತ್ತು ಉಪಯೋಗ ತಿಳಿಸದೆ, ಸಂಪ್ರದಾಯಗಳನ್ನು ಬೋಧಿಸಿದ ಅವರಿಗೆ ಇಂದಿನವರೂ ಗುಲಾಮರಾಗುತ್ತಿದ್ದದ್ದು ಮಾತ್ರ ವಿಪರ್ಯಾಸ. ಅರ್ಥವಿಲ್ಲದ ಆಚರಣೆಗಳಿಗೆ ಹೇಗೆ ಹುಟ್ಟಿಕೊಂಡವು ಎಂಬುದಕ್ಕೆ ಹಲವಾರು ದೃಷ್ಟಾಂತಗಳನ್ನು ಕೊಡಬಹುದು ಸುಬ್ರಮಣ್ಯ ಮಲೆ ಕುಡಿಯರ ದೇವರು ಕೆಳವರ್ಗದವರಿಗೆ ಕೊಡಲಾಗುತ್ತಿದ್ದ ಶಿಕ್ಷೆಯ ಸಂದರ್ಭ ಅವರು ಉರುಳಾಡುತ್ತಿದ್ದರು. ಆ ಶಿಕ್ಷೆಯನ್ನು ಆಚರಣೆ ನಂಬಿಕೆಯ ಹೆಸರಿನಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ ಕೆಲವೂ ವಿತಂಡವಾದಿಗಳು ನಂಬಿಕೆ ಲೇಪನ ಕೊಟ್ಟು ಮುಂದುವರಿಸುತ್ತಿದ್ದಾರೆ. ದೇವರ ಹೆಸರಿನಲ್ಲಿ ಮಾಡುವ ಅನೇಕ ಆಚರಣೆಗಳು ಸಿಡಿ ಉತ್ಸವ ಮಾರಿ ಹಬ್ಬ ಎಲ್ಲವೂ ಕೆಳವರ್ಗದ ಜನರಿಗೆ ಕೊಡುತ್ತಿದ್ದ ಶಿಕ್ಷೆಯ ರೂಪಗಳು. ಆದರೆ ಅವುಗಳನ್ನು ಪ್ರಶ್ನಿಸದಂತೆ ನಂಬಿಕೆ ರೂಪಕೊಟ್ಟು ಮುಂದುವರಿಸಿದ್ದಾರೆ.
ಸಂಪ್ರದಾಯಗಳು ಕಾಲಾನುಕ್ರಮೇಣ ನಶಿಸಬೇಕಾಗಿತ್ತು ಆದರೆ ಹೊಸ ರೂಪ ಪಡೆಯುತ್ತಿವೆ. ನಮ್ಮ ಕಲ್ಪನೆಯಲ್ಲಿ ಇಲ್ಲದಷ್ಟು, ನಂಬಿಕೆಗಳು ಇಂದು ಮೆಳೈಸಿಬಿಟ್ಟವೆ. ಹಿರಿಯರ ವಿರುದ್ಧ ಮಾತನಾಡಿದರೆ ಅವುಗಳನ್ನು ಸಮರ್ಥನೆ ಮಾಡಿಕೊಳ್ಳಲು ಅವುಗಳಿಗೆ ಹೊಂದಿಕೆಯಾಗುವ ಹಾಗೆ ಕತೆಗಳನ್ನು ಕಟ್ಟಿದ್ದಾರೆ. ಪ್ರಶ್ನೆ ಮಾಡಿದರೆ ನಮ್ಮ ಹಿರಿಯರಿಗೆ ಮಾಡುವ ಅವಮಾನ ಅಂತ ಭಾವಿಸಿ ಸುಮ್ಮನೆ ಅದನ್ನು ಕಾಟಚಾರಕ್ಕಾಗಿ ಆಚರಿಸುತ್ತಿದ್ದೆವೆ. ಅದಕ್ಕೆ ಸಂಸ್ಕೃತಿ ಅಂತ ಹೆಸರು ಬೇರೆ ಕೊಟ್ಟಿದ್ದಿವೆ. ಸಂಸ್ಕೃತಿಯಲ್ಲಿ ಮೆಳೈಸಿರುವ ಈ ಪದ್ದತಿಗಳನ್ನು ಕಾನೂನುಗಳ ಮೂಲಕ ನಿಷೇಧ ಮಾಡಲು ಸಾಧ್ಯವೆ? ದೇಶದಲ್ಲಿ ಪ್ರತಿಯೊಂದನ್ನು ನಿಷೇಧವಾಗಬೇಕಾದರೆ ಕಾನೂನನ್ನೆ ರೂಪಿಸಬೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಬವಾಗುತ್ತದೆ ಇಷ್ಟಕ್ಕೂ ಜಾರಿಗೆ ತಂದಿರುವ ಕಾನೂನುಗಳಿಂದ ಸಮಾಜದಲ್ಲಿರುವ ಪದ್ದತಿಗಳು ನಿಯಂತ್ರಣಕ್ಕೆ ಬಂದಿವೆಯೇ? ಎಂಬ ಪ್ರಶ್ನೆ ಮುಂದಿಡುತ್ತಾರೆ. ಎಲ್ಲಾ ಪ್ರಶ್ನೆಗಳು ಕೂಡ ಉತ್ತರವಾಗಲಾರವು. ಮಡೆಸ್ನಾನ ನಿಷೇಧಗೊಳ್ಳಬೇಕು ಎನ್ನುವುದು ಎಲ್ಲಾ ಮಠಾಧೀಶರ ಅಭಿಪ್ರಾಯವಾದರೂ ಇದು ಅನಾದಿ ಕಾಲದಿಂದ ಬಂದ ಆಚರಣೆ, ಎಂಜಲಲೆ ಮೇಲೆ ಉರುಳುವವರು ಉರುಳಲಿ ಅದು ಅವರವರ ನಂಬಿಕೆ ಎಂದು ಸಮರ್ಥಿಸಿಕೊಳ್ಳುತ್ತಾರೆಯೇ ವಿನಹ ನಿಷೇಧಿಸಿಬೇಕು ಎಂದು ಯಾವ ಧರ್ಮಗುರುಗಳು ಹೇಳುವುದಿಲ್ಲ ಯಾಕೆಂದರೆ ನಾವೆಲ್ಲ ಸಂಪ್ರದಾಯ ಮತ್ತು ಆಚಣೆಗಳ ದಾಸರಾಗಿದ್ದೇವೆ. ಬುದ್ದಿವಂತರು ಮತ್ತು ವಿದ್ಯಾವಂತರೂ ಎನಿಸಿಕೊಂಡಿರುವ ಸಮುದಾಯಗಳಲ್ಲಿಯೇ ಮೂಢನಂಬಿಕೆಗಳು ಹೆಚ್ಚು ಪ್ರಚಲಿತದಲ್ಲಿರುವುದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಂಶಯ ಮೂಡದೆ ಇರದು. ದೇವರು ಧರ್ಮ ಮತ್ತು ನಶಿಸಿ ಹೋಗಿರುವ ರಾಜರ ಇತಿಹಾಸವನ್ನು ವೈಭವಿಕರಿಸಿ ಬೋಧಿಸುತ್ತಿರುವುದರಿಂದ ಇಂದಿನ ಶಿಕ್ಷಣ, ನಿರುದ್ಯೋಗಿಗಳನ್ನು ಉತ್ಪಾದಿಸುವ ಕೇಂದ್ರಗಳಾಗಿ ಮಾರ್ಪಾಟ್ಟಿವೆ ಹೊರತು ಸ್ವಾವಲಂಬಿಯಾಗುವ ಶಿಕ್ಷಣ ಮರಿಚಿಕೆಯಾಗುತ್ತಿದೆ. ಇಂಥ ಶಿಕ್ಷಣ ಪಡೆದ ವಿದ್ಯಾವಂತರು ಸ್ವಾವಲಂಬಿಯಾಗದೆ ತನ್ನನ್ನು ತಾನು ನಂಬದೆ ಎಲ್ಲಾ ಭಾರವನ್ನು ದೇವರ ಮೇಲೆ ಹಾಕಿ ಕೂರುತ್ತಾನೆ. ಅದರಲ್ಲಿ ನೈತಿಕ ಶಿಕ್ಷಣ ಎನ್ನುವುದು ಕೇವಲ ಭಾಷಣದಲ್ಲಿ ಮಾತ್ರ ಕೇಳುತ್ತಿದ್ದೇವೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಶಿಕ್ಷಣ ವ್ಯವಸ್ಥೆ ಅಮೂಲಾಗ್ರ ಬದಲಾವಣೆಗೆ ನಿಡುಮಾಮಿಡಿ ಚನ್ನಮಲ್ಲಸ್ವಾಮಿಜಿ ನೇತೃತ್ವದ ಪ್ರಗತಿಶೀಲ ಮಠಾಧೀಶರು ಒತ್ತಾಯಿಸಿರುವುದು ಮೆಚ್ಚಲೇಬೇಕಾದ ವಿಷಯ. ಅನಿಷ್ಠ ಪದ್ಧತಿಗಳನ್ನು ಕಿತ್ತೊಗೆಯಲು ಪ್ರಜ್ಞಾವಂತರೆಲ್ಲರೂ ಒಂದಾಗಬೇಕಾಗಿದೆ. ಜಾತಿ, ಮತ, ಧರ್ಮಗಳನ್ನು ಲೆಕ್ಕಿಸದೇ ಮೂಢನಂಬಿಕೆಗಳ ವಿರುದ್ಧ ಬಂಡಾಯವೇಳುವುದನ್ನು ಕಲಿಯಬೇಕಿದೆ. ರಾಜ್ಯ ಸರ್ಕಾರದ ಮಂತ್ರಿ ಮಹೋದಯರೇ ಹೋಮ ಹವನ ಎಂಬ ಅರ್ಥವಿಲ್ಲದ ಆಚರಣೆ ಮಾಡುತ್ತಿರುವಾಗ ಇವರಿಂದ ನಿರೀಕ್ಷೆ ಮಾಡುವುದೇನಿದೆ. ಇದರ ವಿರುದ್ಧ ಪ್ರತಿಯೊಬ್ಬ ನಾಗರಿಕನು ತಿರುಗಿ ಬೆಳಬೇಕಾಗಿದೆ ಸರ್ಕಾರಕ್ಕೆ ತಿದ್ದಿ ಹೇಳಬೇಕಾಗಿದೆ.
£ÀvÀÄ UMzÀ ªgÀAiÀÄ §zÀ
ReplyDelete