Tuesday, 13 March 2012

ಪುಂಡ ವಕೀಳರ ವರ್ತನೆಗೆ ದಂಡನೆ ಇಲ್ಲವೇ?

ಗೂಂಡಾ ವಕೀಲರಿಂದ ಮಾಧ್ಯಮ ಮಿತ್ರರಿಗೆ ಥಳಿತ
ಪ್ರಜಾಪ್ರಭುತ್ವದ ಮೂರನೆ ಅಂಗ ಎಂದು ಕರೆಯಲಾಗುವ ನ್ಯಾಯಾಂಗಕ್ಕೆ ತನ್ನದೆಯಾದ ಮಹತ್ವದ ಸ್ಥಾನಮಾನವಿದೆ.  ವಕೀಲ ವೃತ್ತಿಯನ್ನು ಪವಿತ್ರ ಎಂದು ಕರೆಯಲು ಒಂದು ಪ್ರಬಲ ಕಾರಣವಿದೆ. ಪಾಶ್ಚಾತ್ಯ ಅದರಲ್ಲೂ ಇಂಗ್ಲೆಂಡ್ ಪ್ರಾನ್ಸ್ ಮುಂತಾದ ದೇಶಗಳಲ್ಲಿ ನ್ಯಾಯವಾದಿಗಳೆಂದರೆ ಹೆಚ್ಚಿನ     ಗೌರವಾದರದಿಂದ ಕಾಣಲಾಗುತ್ತದೆ. ಹಾಗೇಯೆ ಭಾರತದಲ್ಲಿಯೂ ನ್ಯಾಯ ವಾದಿಗಳನ್ನು ಕರಿಕಪನಿಯ ಸನ್ಯಾಸಿಗಳು, ಸಂಕಷ್ಟ ನಿವಾರಣೆಗಾಗಿ ಇರುವ ಸಾಕ್ಷಾತ ದೇವರು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಜನರ ದುಃಖವನ್ನೆ ಪರಿಹರಿಸುವ ಅವರಿಗೆ ಪರಿಹಾರ ಕೊಡಿಸುವುದರಲ್ಲೇ  ಜೀವನದ ಸಾರ್ಥಕತೆ ಕಾಣುವ ಪ್ರಬುದ್ಧ ಚಿಂತಕರು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಇಂದು ಕೆಲವು ನಾಲಾಯಕ್ ವಕೀಳರಿಂದ ಆ ಪವಿತ್ರ ವೃತ್ತಿಗೆ ಧಕ್ಕೆ ತರಲಾಗುತ್ತಿದೆ ಅಲ್ಲದೆ ಸಮಾಜದ ನೆಮ್ಮದಿಗೆ ಭಂಗ ಉಂಟು ಮಾಡಿ, ಆ ವೃತ್ತಿ ಸಮೂಹವನ್ನೆ  ತಾತ್ಸಾರ ಮನೋಭಾವದಿಂದ ನೋಡುವಂತಾಗಿದೆ. ಕಳೆದ ಜನೆವರಿ ೧೭ರಂದು ಮೈಸೂರು ಬ್ಯಾಂಕ್ ಆವರಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಮಾಡಿದ ವಕೀಲರ ವಿರುದ್ಧ ನಾಡಿನ ಎಲ್ಲಾ ಪತ್ರಿಕಾ ಮಾಧ್ಯಮಗಳು ವಕೀಳರ ವರ್ತನೆಯನ್ನು ಖಂಡಿಸಿದ್ದವು. ಕೇಲವು ಪತ್ರಿಕೆಗಳು ಸರಣಿ ಲೇಖನಗಳು ಪ್ರಕಟಿಸಿದ್ದವು ಇದರಿಂದ ಸಿಟ್ಟಾದ ಕೆಲವು ಗೂಂಡಾ ಲಾಯರ್‍ಗಳು ಸಿಟಿ ಸಿವಿಲ್ ಕೋರ್ಟ್‌ಗೆ ನೀವು ಹೇಗೆ ಬರುತ್ತಿರಿ ನಾವು ನೋಡಿಕೊಳ್ಳುತ್ತೇವೆ ಎಂದು ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಬಹಿರಂಗ ಸವಾಲು ಹಾಕಿದ್ದರು. ಆ ಸೇಡನ್ನು ತೀರಿಸಿಕೊಳ್ಳಲು ಪೂರ್ವ ಸಂಚು ರೂಪಿಸಿ ಕಾದು ಕುಳಿತ ಕೆಲವು ಬ್ಲ್ಯಾಕ್ ಟೆರೆರಿಸ್ಟ್‌ಗಳು ಮೊದಲೆ ಕಲ್ಲು ಇನ್ನಿತರ ವಸ್ತುಗಳನ್ನು ಸಿದ್ಧ ಮಾಡಿ ಇಟ್ಟಂತೆ ತೋರುತ್ತದೆ. ಮಾಧ್ಯಮ ಪ್ರತಿನಿಧಿಗಳು ಕೋರ್ಟ್ ಆವರಣಕ್ಕೆ ಹೋಗುತ್ತಿದ್ದಂತೆ ಏಕಾಏಕಿ ದಾಳಿ ಮಾಡಿದ್ದಾರೆ ಇದಕ್ಕೆ ಕಾರಣ ಮೊದಲ ಘಟನೆಯಿಂದ ಪಾಠ ಕಲಿಯದ ಮತ್ತು ಕಲಿಸದ ಸರ್ಕಾರದ ಮೃದು ಧೋರಣೆ ಅಲ್ಲದೆ ಮತ್ತೇನು? ವಕೀಲರ ದುಂಡಾವರ್ತನೆ ಮರೆಮಾಚುತ್ತಿದೆ ಎನ್ನುವ ಸಂದರ್ಭದಲ್ಲಿ ಮತ್ತೆ ತಮ್ಮ ಹೀನ ಕಾರ್ಯಕ್ಕೆ ಕೈಹಾಕಿದ ಮತ್ತು ವೃತ್ತಿ ಗೌರವ ಗೊತ್ತಿರದ ಇಂಥ ವಕೀಳರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ?  ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್ ಅವರು ವಕೀಲರ ಕ್ರಮ ಸರಿಯಲ್ಲ ಎಂದು ಹೇಳಿಕೆ ನೀಡಿದ್ದ ಕಾರಣಕ್ಕೆ ಹಿಗ್ಗಾಮುಗಾ ಬಾಯಿಗೆ ಬಂದಂತೆ ಬೈಯ್ದು ಕೋರ್ಟ್ ಆವರಣಕ್ಕೆ ಕಾಲೀಡಿ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಪುಂಡ ವಕೀಲರ ಗುಂಪು ಬೇದರಿಕೆ ಹಾಕಿತ್ತು. ಈ ಬೇದರಿಕೆ ವಕೀಲರ ಸಂಘದ ಅಧ್ಯಕ್ಷರಿಗೆ ತಿಳಿದಿತ್ತು. ಎಲ್ಲಾ ಪತ್ರಿಕೆಗಳಲ್ಲಿ ಈ ಕುರಿತು ವರದಿ ಮಾಡಲಾಗಿತ್ತು ಆದರೂ ಈ ಸರ್ಕಾರ ಯಾಕೆ ಮೂಕ ಪ್ರೇಕ್ಷಕನಾಗಿ ಕೂಳಿತ್ತಿತ್ತು. ವಿಧಾನಸೌಧ ಪಕ್ಕದಲ್ಲೇ ರಕ್ಷಣೆಯಿಲ್ಲ ಎಂದರೆ  ಜನಸಾಮಾನ್ಯರ ರಕ್ಷಣೆ ಸಾಧ್ಯವೇ ಎಂಬ ಶಂಕೆ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.  ಇನ್ನೊಂದು ಕಡೆ ವಕೀಲರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ವಕೀಳರ ಪರವಾಗಿ ವಕಾಲತ್ತು ವಹಿಸುತ್ತಾರೆ ಇಲ್ಲಿ ಸರಿ ತಪ್ಪು ಮತ್ತು ಕಾನೂನು ಕೈಗೆತ್ತಿಕೊಂಡ ವಕೀಳರ ದುರ್ವರ್ತನೆ ಬಗ್ಗೆ ಮಾತನಾಡದೆ ಪೊಲೀಸ್ ವ್ಯವಸ್ಥೆ ಮತ್ತು ಆವರಣ ಪ್ರವೇಶಿಸಿದ್ದಾರೆ ಎಂಬುದು ಮಾತ್ರ ಇವರ ಕಣ್ಣಿಗೆ ರಾಚುತ್ತದೆ. ಆದರೆ ನಾಲಾಯಕ್ ವಕೀಲರ ವರ್ತನೆಯನ್ನು ಖಂಡಿಸಬೇಕಾದ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದು ಮಾತ್ರ ದುರಂತ. ಕಾನೂನು ರಕ್ಷಣೆ ಮಾಡಬೇಕಾದ ನ್ಯಾಯಾಂಗದ ವಕ್ತಾರರು ಭಕ್ಷಣೆಗೆ ಇಳಿದಿದ್ದಾರೆ ಇಂಥವರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ? ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವರ್ತನೆಯಂತೆ ನಡೆದುಕೊಳ್ಳುತ್ತಿರುವ ಈ ಗುಂಡ ವಕೀಳರ ಪುಂಡ ವರ್ತನೆಗೆ ನಿಯಂತ್ರಣ ಸಾಧವಿಲ್ಲವೆ? ವಕೀಲರು ಎಂದರೆ ಪ್ರಶ್ನಾತೀತರೇ ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರೇ ಆದರೆ ಈ ವಕೀಲರು ನಡೆದುಕೊಳ್ಳುತ್ತಿರುವ ರೀತಿ, ಕಾನೂನು ಎಂದರೆ ತಮ್ಮ ಮನೆಯಲ್ಲಿ ಹುಟ್ಟಿದೆ ಎಂಬಂತೆ ವರ್ತಿಸಿದ್ದು ನೋಡಿದರೆ ಈಡೀ ನ್ಯಾಯಾಂಗ ವ್ಯವಸ್ಥೆಯನ್ನು ಸಂಶಯದ ದೃಷ್ಟಿಯಿಂದ ನೋಡುವಂತ ವಾತವರಣ ನಿರ್ಮಾಣವಾಗಿದೆ.
ವಕೀಳರ ಕೀಳತನ ಪ್ರದರ್ಶಿಸಿದ್ದು ಇದೆ ಮೊದಲೇನಲ್ಲ.
೨೦೦೯ರಲ್ಲಿ ಭೂಕಬಳಿಕೆ ಪ್ರಕರಣದ ಆರೋಪ ಎದುರಿಸುತ್ತಿದ್ದ ನ್ಯಾ. ಪಿ.ಡಿ ದಿನಕರನ್ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಬಾರದು ಎಂದು ವಕೀಲರ ಗುಂಪುಗಳ ನಡೆವೆಯೇ ಮಾರಾಮಾರಿ ನಡೆದು ನ್ಯಾ ಗೋಪಾಲಗೌಡ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಅವಾಗಲೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸಂಚಾರಿ ನಿಯಮ ಉಲಂಘನೆ ವಿಷಯಕ್ಕೆ ಸಂಬಂ ಧಿಸಿದಂತೆ ವಕೀಲರು ಮತ್ತು ಸಂಚಾರಿ ಪೊಲೀಸರ ನಡುವೆ ಪ್ರತಿನಿತ್ಯ ಒಂದಿಲ್ಲೊಂದು ಘಟನೆ ನಡೆಯುತ್ತಲೇ ಇರುತ್ತವೆ ಆದರೂ ಕಾನೂನು ಎಂದರೆ ಏನು ಎಂಬುದು ನಿಮ್ಮಿಂದ ಕಲಿಯಬೇಕಾಗಿಲ್ಲ ಎಂಬ ಪುಂಡ ಪ್ರವೃತ್ತಿ. ಎರಡು ತಿಂಗಳ ಹಿಂದೆ ಸಂಚಾರಿ ನಿಯಮ ಉಲಂಘಿಸಿದ ವಕೀಲರ ವಾಹನಕ್ಕೆ ಸಂಚಾರಿ ಪೊಲೀಸರು ಕ್ಯಾಪ್ ಹಾಕಿದ್ದರಿಂದ ಸಿಟ್ಟಾದ ವಕೀಲ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದ ಇವೆಲ್ಲ ಸಣ್ಣ ಪುಟ್ಟ ಘಟನೆಗಳಿಂದ ಬಚಾವಾದ   ವಕೀಲರು ದೊಡ್ಡ ತಪ್ಪುಗಳಿಗೆ ಕೈಹಾಕಿದ್ದಾರೆ. ಮೊದಲ ಗಲಭೆಯನ್ನು ಆಕಸ್ಮಿಕ ಎಂದು ಪರಿಗಣಿಸಿದ್ದ ಸರ್ಕಾರದ ಮೃದು ಧೊರಣೆಯೇ ಈ ಘಟನೆಗೆ ಕಾರಣ ಎಂದು ಬಿಡಿಸಿ ಹೇಳ ಬೇಕಾಗಿಲ್ಲ ಸರ್ಕಾರದ ಈ ಮೃದು ಧೋರಣಿ ಪೊಲೀಸ್ ವ್ಯವಸ್ಥೆಯ ಕೈಕಟ್ಟಿ ಹಾಕಿತು. ಇದರಿಂದ ಉತ್ತೇಜಿತರಾದ ಪುಂಡ ವಕೀಲರು ರೌದ್ರಾವತಾರ ತಾಳಿದರು. ಮಾಧ್ಯಮ ಮತ್ತು ಪೊಲೀಸರ  ಮೇಲೆ ಮಾರಾಣಾಂತಿಕ ಹಲ್ಲೆ   ನಡೆಸಿದರು. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿದ್ದ ಸರ್ಕಾದ ಕ್ರಮ ಸರಿಯೇ? ತನ್ನನ್ನೇ ಪದೇ ಪದೇ  ಟೀಕಿಸುತ್ತಿದ್ದ ಮಾಧ್ಯಮದವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಒಳಗೊಳಗೆ ಮುಗಳ್ನಗೆ ಬೀರಿತು. ಇಷ್ಟೆಲ್ಲ ನಡೆದರೂ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಹೇಳಿಕೆ ನೀಡಲಿಲ್ಲ ಗುಂಡಾವರ್ತನೆ ತೋರಿದವರನ್ನು ಬಂಧಿಸಬೇಕಾದ ಸರ್ಕಾರ ತನಿಖೆ ಎಂಬ ಅಸ್ತ್ರ ಪ್ರಯೋಗಿಸುವ ಮೂಲಕ ಕಣ್ಣೋರೆಸುವ ತಂತ್ರ ಅನುಸರಿಸಿದೆ. 
ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರಲಿದೆಯೇ?
ಇಡೀ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ ಇದಕ್ಕೆ ಮುಖ್ಯಸ್ಥರನ್ನಾಗಿ ನಿವೃತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಸರ್ಕಾರ ತನಿಖೆ ಎಂಬ ಅಸ್ತ್ರ ಪ್ರಯೋಗಿಸಿದರೆ ಸಾಲದು ನಿಜಾಂಶ ಹೊರಗೆ ಬರಬೇಕಾದರೆ ಸಿಬಿಐ ತನಿಖೆಯಾಗಬೇಕು. ಆ ತನಿಖೆಗೆ ಸರ್ಕಾರ ಒಪ್ಪಿಸಿದರೆ ಮಾತ್ರ ಘಟನೆಯಲ್ಲಿ ಹಲ್ಲೆಗೊಳಗಾದವರಿಗೆ ನ್ಯಾಯ ಸಿಗುತ್ತದೆ ಮತ್ತು ಪುಂಡ ವಕೀಲರು ಎಷ್ಟೇ ಪುಂಡರಾಗಿದ್ದರು ಕಾನೂನಿನಡಿಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ತನಿಖೆ ಮಾಡುವ ಮೊದಲು ಇದ್ದ ಆಧಾರಗಳನ್ನು ಪರಿಗಣಿಸಿ ಗೂಂಡಾ ವಕೀಲರನ್ನು ಬಂಧಿಸಬೇಕು ಸಮಾಜದಲ್ಲಿ ಯಾರೇ ಆಗಲಿ ವಿಶೇಷವಾಗಿ ಕರಿ ಕೋಟು ತೊಟ್ಟವರು ಮತ್ತು ಕಾನೂನನ್ನು ಪಾಲಿಸಬೇಕಾದವರು ಮುರಿದರೆ ಅವರಿಗೆ ಎಲ್ಲರಿಗಿಂತಲೂ ಹೆಚ್ಚಿನ ಶಿಕ್ಷೆಯಾಗಬೇಕು ನ್ಯಾಯ ನಿರ್ಣಯಿಸಬೇಕಾದ ವಕ್ತಾರರು ಕಾನೂನನ್ನು ಕೈಗೆತ್ತಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ರಕ್ತ ದೋಕುಳಿಯೇ ಉದಾಹರಣೆ.
 ಪೂರ್ವ ನಿಯೋಜಿತ ಸಂಚು: ಈ ವಕೀಲರಿಂದ ನಿರೀಕ್ಷಿಸಲಾಗದ ಕೇಲವು ಘಟನೆಗಳನ್ನು ನೋಡಿದರೆ ಇದು ಪೂರ್ವ ನಿಯೋಜನಾ ಕೃತ್ಯ  ಎಂಬ ಸಂಶಯ ಬರದೆ ಇರದು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಕಾನೂನು ಎಂಬ ಅಸ್ತ್ರ ಬಳಸಿ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶವನ್ನು ಈ ಕ್ರಿಮಿನಲ್ ಲಾಯರ್‌ಗಳು ತಮಗೆ ತೋಚಿದ  ರೀತಿಯಲ್ಲಿ ಬಳಸಿಕೊಂಡು ಇಡೀ ಪೊಲೀಸ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದು, ಇಷ್ಟೆಲ್ಲಾ ಸಂಚು ರೂಪಿಸಿ ಕಾಯುತ್ತ ಕುಳಿತಿದ್ದ ಪುಂಡ ವಕೀಲರ ಗುಂಪಿನ ಬಗ್ಗೆ ಗುಪ್ತಚರ ಸಂಸ್ಥೆಗೆ ಮಾಹಿತಿ ಇರಲಿಲ್ಲವೇ ಇದ್ದರು ವಿಫಲವಾಗಲೂ ಬಲವಾದ ಕಾರಣವೇನಾದರೂ ಇದೆಯೇ ಎಂಬುದಕ್ಕೆ ಸೂಕ್ತ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.

No comments:

Post a Comment