Monday, 17 October 2011

ಬಿಜೆಪಿಗೆ ಭೂಎಸ್ ವ್ಯೆ ಅನಿವಾರ್ಯವೇ?

ಭೂ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಾನು ಸಲ್ಲಿಸಿದ ನಿರೀಕ್ಷಣಾ ಜಾಮೀನು ಕೊರ್ಟ್ ತಿರಸ್ಕರಿಸಿದ ಮೇಲೆ ಅವರ ಬಂಧನ ಖಾತ್ರಿಯಾಗಿತ್ತು. ಆದರೆ ಯಡಿಯೂರಪ್ಪ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ತಪ್ಪಿಸಿಕೊಳ್ಳಲು ಹೊಂಚು ಹಾಕಿದರು. ನಾನು ಮಾಡುತ್ತಿರುವುದು ತಪ್ಪು ಎಂದು ತಿಳಿದರು. ಆ ತಪ್ಪನ್ನೆ ಮತ್ತೆ ಮಾಡಲು ಹೋದರು.
ಕೋರ್ಟ್‌ಗೆ ಸ್ವತಹ ಹಾಜರಾಗುವಂತೆ ಸೂಚಿಸಿದರೂ ಕೋರ್ಟ್ ಆದೇಶವನ್ನು ಕಡೆಗಣೆಸಿ, ಹಾಜರಾಗದಿದ್ದರೆ ಪ್ರಕರಣವನ್ನು ಮುದೂಡಬಹುದು ತಾತ್ಕಾ ಲಿಕವಾಗಿಯಾದರೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಯಡಿಯೂರಪ್ಪನವರ ಮನದಲ್ಲಿದ್ದಂತೆ ಕಾಣಿಸುತ್ತದೆ.
ಲೋಕಾಯುಕ್ತ ಕೋರ್ಟ್ ಆದೇಶದಿಂದ ಪಾರಾಗುತ್ತೇನೆ ಎಂದು ನಂಬಿದ್ದ ಯಡಿಯೂರಪ್ಪಗೆ ಅಘಾತವೇ ಕಾದಿತ್ತು. ಪ್ರತಿಯೊಂದಕ್ಕು ದೇವರು ಮತ್ತು ಮಠಾಧೀಶರನ್ನು ನೆನೆದು ಹೆಜ್ಜೆ ಮುಂದಿಡುವ ಯಡಿಯುರಪ್ಪನ ಬೆಂಬಲಕ್ಕೆ ಯಾವ ಮಠಾಧೀಶರು ಬರಲಿಲ್ಲ ದೇವರು ಕಣ್ಣು ತೆರೆಯಲಿಲ್ಲ ಅವರ ಪಾಲಿಗೆ ಕರಾಳ ಶನಿವಾರವಾಗಿ ಗೋಚರಿಸಿತು.
ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತಂದ ಯಡ್ಡಿ ಅಷ್ಟೆ ವೇಗವಾಗಿ ಜೈಲು ಸೇರುವುದರ ಮೂಲಕ ರಾಜ್ಯದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು  ಜೈಲು ಕಂಬಿ ಎಣಿಸಲು ಹೊರಟಿದ್ದು ದುರ್ದೈದ ಸಂಗತಿ. ಸಾಮಾನ್ಯ ಕಾರ್ಯಕರ್ತನಾಗಿ ತಾಲುಕಾ ಅಧ್ಯಕ್ಷನಾಗಿ, ಪುರಸಭೆ ಅದ್ಯಕ್ಷನಾಗಿ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಾರೆ ಎಂದು ಯಾರು ಊಹಿಸಿರಲಿಲ್ಲ.
೧೯೭೦ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ಯಡಿಯೂರಪ್ಪ ಸೋಲಿಗೆ ಕುಗ್ಗದೆ ಮರಳಿ ಯತ್ನವ ಮಾಡು ಎಂಬ ನಾಣ್ನುಡಿಯಂತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಭೆ ಪ್ರವೇಶಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸೋಲು ಎಂಬ ಪದವೇ ಅವರ ಹತ್ತಿರ ಸುಳಿಯಲಿಲ್ಲ ಯಡಿಯೂರಪ್ಪ ಮಾಡಿದ್ದೆ ಮಾರ್ಗವಾಯಿತು ಅವರ ದಕ್ಷ ನಾಯಕತ್ವದಿಂದ ಪಕ್ಷದ ವರ್ಚಸು ದಿನದಿಂದ ದಿನ್ಕೆ ಹೆಚ್ಚುತ್ತಾ ಹೊಯಿತು.
ಅಂದಿನಿಂದ ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಅನಿವಾರ್ಯವಾದರು ಕೇವಲ ಎಳೆಂಟು ಸ್ಥಾನಗಳನ್ನು ಗಳಿಸಲು ಸಾಮಾರ್ಥ್ಯವಿಲ್ಲದ ಪಕ್ಷ ಇವರ ನಾಯಕತ್ವದಿಂದ ೨೫ರಿಂದ ೩೦ಶಾಸಕರನ್ನು ಆಯ್ಕೆ ಮಾಡಲು ಸಾಧ್ಯವಾಯಿತು ಎಂದರೆ ಯಡಿಯೂರಪ್ಪನ ಪಕ್ಷ ನಿಷ್ಠೆ ಅರ್ಥವಾಗುತ್ತದೆ.
ರಾಜ್ಯದಲ್ಲಿ ಪಕ್ಷದ ಅಸ್ಥಿತ್ವವೇ ಇಲ್ಲದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಚುಕ್ಕಣೆ ಹಿಡಿದು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಿದ ಕಟ್ಟಾಳು ಅವರ ಶ್ರಮದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂತು ಮೊದಲು ಉಪ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪನವರ ಮೇಲೆ ಪ್ರತಿಯೊಬ್ಬ ನಾಗರಿಕ ಭರವಸೆಯ ನಾಯಕ ಆಡಿದ್ದನ್ನು ಮಾಡಿ ತೋರಿಸಬಹುದು ಎಂದು ನಂಬಿದ್ದರು.
ವಿಭಿನ್ನ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸ್ವಲ್ಪ ದಿನಗಳಲ್ಲೆ ಜನರ ನಿರೀಕ್ಷೆ ಹುಸಿ ಮಾಡಿದರು ಜನರಿಗೆ ವಿರುದ್ಧವಾದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡರು. ನಾನು ಅಧಿಕಾರಕ್ಕೆ ಬಂದಿರುವುದು ಈ ನಾಡಿನ ಮಠಾಧೀಶರಿಂದ ಎಂಬ ಭಾವನೆ ಅವರಲ್ಲಿ ಗಟ್ಟಿಯಾಗಿ ನೆಲೆಯೂರಿತು. ಅಭಿವೃದ್ಧಿಯನ್ನು ಕಡೆಗಣೆಸಿ ಮಠಗಳಿಗೆ ಕೋಟಿಗಟ್ಟಲೆ ಸರ್ಕಾರದಿಂದ ಅನುಧಾನ ಬೀಡುಗಡೆ ಮಾಡಲು ಪ್ರಾರಂಭಿಸಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಇದರ ವಿರುದ್ಧ ಮಾತನಾಡಿದರೆ ಮಠಗಳು ಸಮಾಜ ಸೇವೆಯಲ್ಲಿ ತೊಡಗಿವೆ ಸರ್ಕಾರದಿಂದ ಅನುದಾನ ನೀಡಿದರೆ ತಪ್ಪೇನು ಎಂದು ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದರು.
ಇಷ್ಟಕ್ಕೆ ನಿಲ್ಲಲಿಲ್ಲ ಯಡಿಯೂರಪ್ಪನ ಅಭಿವೃದ್ಧಿಯ ಹೆಸರಿನ ಕಾರ್ಯ ಅದು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಯಡಿಯೂರಪ್ಪ ಅವರನ್ನೆ ಮಣ್ಣು ಪಾಲು ಮಾಡಲು ಹೊರಟರು ಹೋರಾಟ ನಿರತ ರೈತರ ಮೇಲೆ ಗುಂಡು ಹಾರಿಸುವುದರ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದರು. ಇದರ ವಿರುದ್ಧ ಹೋರಾಟ ಮಾಡಿದವರನ್ನು ಲಾಠಿ ಎಂಬ ಎಟಿನಿಂದ ಬಗ್ಗು ಬಡಿಸಿದರು ಇವೆಲ್ಲ ಕಾರಗಳಿಂದ ರೈತರಿಗೆ ಯಡಿಯೂರಪ್ಪ ದುಸ್ವಪ್ನವಾಗಿ ಕಂಡರು. ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಿದ ಯಡಿಯೂರಪ್ಪ ಅಧಿಕಾರದ ಅಮಲಿನಲ್ಲಿ ಎನು ಮಾಡಿದರೂ ನಡೆಯುತ್ತದೆ ಎಂಬಂತೆ ವರ್ತಿಸಿದರು ಈ ವರ್ತನೆಯಿಂದ ರಾಜ್ಯದ ಜನತೆಗೆ ಮತ್ತು ಬೂಜೆಪಿ ಪಕ್ಷದ ಅಭಿಮಾನಿಗಳಿಗೆ ಅಘಾತವಾಯಿತು. ಸರ್ಕಾರವನ್ನು ಭದ್ರ ಪಡಿಸಿಕೊಳ್ಳುವಲ್ಲಿಯೇ ಮೂರು ವರ್ಷ ಕಾಲ ಹರಣ ಮಾಡಿದ ಯಡಿಯೂರಪ್ಪ ಆಂತರಿಕ ಕಲಹಗಳನ್ನು ಮೆಟ್ಟಿ ನಿಂತು ಅಧಿಕಾರ ನಡೆಸುವಷ್ಟರಲ್ಲಿಯೆ ಲೋಕಾಯುಕ್ತ ವರದಿಯ ಬಿರುಗಾಳಿ ಅವರ ಪಾಲಿಗೆ ಕಂಟಕವಾಗಿ ಪರಿಣಮಿಸಿತು ಇದರ ಫಲವಾಗಿ ಅಧಿಕಾರದಿಂದ ಕೇಳಗಿಳಿಯಬೇಕಾಯಿತು ಆದರೂ ಅವರ ಬೆನ್ನಿಗೆ ಅಂಟಿದ ಕಳಂಕದ ಫಲವೇ ಪರಪ್ಪನ ಅಗ್ರಹಾರಕ್ಕೆ ಹೋಗಬೇಕಾಯಿತು.


No comments:

Post a Comment